ಜೀ ಕನ್ನಡ ವಾಹಿನಿಯಿಂದ ನಡೆದ ಮಹಾನಟಿ ರಿಯಾಲಿಟಿ ಷೋ ಆಡಿಷನ್​ನಲ್ಲಿ ಯುವತಿಯೊಬ್ಬರ ನಟನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅದರ ಪ್ರೊಮೋ ರಿಲೀಸ್​ ಮಾಡಲಾಗಿದೆ. 

ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಹೌದು. ಸ್ಯಾಂಡಲ್​ವುಡ್​ನಲ್ಲಿ ನಟಿಸುವ ಅವಕಾಶ ಇದಾಗಿದ್ದು, ಹಲವು ಕಡೆಗಳಲ್ಲಿ ಆಡಿಷನ್​ ನಡೆದಿದೆ. 

ಈ ಆಡಿಷನ್​ನಲ್ಲಿ ಭಾಗವಹಿಸಿ ಹಲವಾರು ಮಂದಿ ಅದೃಷ್ಟ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ವಿಜೇತರಾಗಿ ಬಣ್ಣದ ಲೋಕಕ್ಕೆ ಎಂಟ್ರಿಯಾಗುವ ಅದೃಷ್ಟವಂತರು ಯಾರು ಎನ್ನುವುದು ಇನ್ನಷ್ಟೇ ಇರುವ ಕೌತುಕ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಕರ್ನಾಟಕದ 16 ಜಿಲ್ಲೆಗಳಲ್ಲಿ ಆಡಿಷನ್​ ನಡೆದಿದ್ದು, ಇಲ್ಲಿ ಸೆಲೆಕ್ಟ್​ ಆದವರಿಗೆ ರಿಯಾಲಿಟಿ ಷೋನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಅಲ್ಲಿ ಕೆಲವೊಂದು ಸ್ಪರ್ಧೆಗಳನ್ನು ಎದುರಿಸಿ, ಜಯಶೀಲರಾದರೆ ಸ್ಯಾಂಡಲ್​ವುಡ್​ ತಾರೆಯಾಗಲಿದ್ದೀರಿ ಎಂದು ಈ ಹಿಂದೆ ವಾಹಿನಿ ಹೇಳಿತ್ತು. 18ರಿಂದ 28 ವರ್ಷದ ಸಹಸ್ರಾರು ಯುವತಿಯರು ಇದರಲ್ಲಿ ಭಾಗವಹಿಸಿದ್ದರು.

ಸೇರಿಗೆ ಸವಾಸೇರ್: ಒಂದೇ ತಾಯಿ ಹೊಟ್ಟೆ ಹುಟ್ಟಿದವರಲ್ಲಿ ಅದೆಷ್ಟು ವ್ಯತ್ಯಾಸ? ನಿಜ ಜೀವನದಲ್ಲೂ ಹೀಗೆ ಅಲ್ವಾ?

View post on Instagram

ಇದೀಗ ಇದರ ಪ್ರೊಮೋ ಒಂದು ರಿಲೀಸ್​ ಆಗಿದೆ. ಇದರಲ್ಲಿ ಯುವತಿಯೊಬ್ಬ ಆ್ಯಕ್ಟಿಂಗ್​ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಬಹುತೇಕರಿಗೆ ಸಿನಿಮಾ ನಟಿಯಾಗಬೇಕು, ಕಿರುತೆರೆಯಲ್ಲಿ ಮಿಂಚಬೇಕು, ನನ್ನೊಳಗಿನ ನಟನೆಯನ್ನು ಹೊರಜಗತ್ತಿಗೆ ತೆರೆದಿಡಬೇಕು ಎಂದು ಎಷ್ಟೋ ಮಂದಿಯ ಆಸೆ. ಆದರೆ ಆ ಆಸೆಗೆ ತಕ್ಕ ವೇದಿಕೆ ಸಿಕ್ಕಿರುವುದಿಲ್ಲ. ಅಂಥ ಪ್ರತಿಭಾವಂತರಿಗಾಗಿಯೇ ಮಹಾನಟಿ ಷೋ ಆರಂಭಿಸಿರುವುದಾಗಿ ಜೀ ವಾಹಿನಿ ಹೇಳಿಕೊಂಡಿದ್ದು, ಈ ಷೋನ ಪ್ರೊಮೋ ಅನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ.

ಹೋಟೆಲ್​ ಒಂದರಲ್ಲಿ ಯುವತಿಯ ಆ್ಯಕ್ಟಿಂಗ್​ ನೋಡಿ ನೆಟ್ಟಿಗರು ಭಲೆ ಭಲೆ ಎನ್ನುತ್ತಿದ್ದಾರೆ. ರಿಹರ್ಸಲ್​ನಲ್ಲೇ ಇಷ್ಟೊಂದು ಟ್ಯಾಲೆಂಟ್ ತೋರಿದ್ರೆ, ಇನ್ನು ನಿಜವಾಗಿಯೂ ಚಾನ್ಸ್ ಸಿಕ್ಕರೆ ಹೇಗಪ್ಪಾ ಎನ್ನುತ್ತಿದ್ದಾರೆ ಜನರು. ಇಲ್ಲಿ ಎಲ್ಲವೂ ಸೆಟಪ್​ ಮಾಡಿಯೇ ಶೂಟಿಂಗ್​ ಮಾಡಲಾಗಿದೆ. ಆದರೆ ನೋಡುಗರಿಗೆ ಇದು ಆಕಸ್ಮಿಕ ಎನಿಸುವುದು ಸಹಜ. ಕ್ಷಣ ಮಾತ್ರದಲ್ಲಿ ಬೇರೆ ಬೇರೆ ರೀತಿಯ ಕ್ಯಾರೆಕ್ಟರ್​ಗೆ ಬದಲಾಗಿ ಆ ಕ್ಯಾರೆಕ್ಟರ್​ಗೆ ಹೊಂದಿಕೊಂಡು ನಟನೆ ಮಾಡುವುದು ಸುಲಭದ ಮಾತಲ್ಲ. ಆದರೆ ಈ ಯುವತಿ ಕ್ಷಣಕ್ಕೊಂದು ಕ್ಯಾರೆಕ್ಟರ್​ಗೆ ಬದಲಾಗಿ ಅದರೊಳಗೇ ಹೊಕ್ಕು ಆ್ಯಕ್ಟಿಂಗ್​ ಮಾಡಿರುವುದನ್ನು ನೋಡಿ ಜನರು ಭಲೇ ಭಲೇ ಎನ್ನುತ್ತಿದ್ದಾರೆ. ರಿಹರ್ಸಲ್ ಅಲ್ಲೇ ಟ್ಯಾಲೆಂಟ್ ತೋರ್ಸಿ, ರಿಯಾಲಿಟಿ ಶೋ ಗೆ ರೆಡಿ ಆಗ್ತಿದ್ದಾರೆ ಕರ್ನಾಟಕದ ಹೆಣ್ಣು ಮಕ್ಕಳು. ಮಹಾನಟಿ ಶೀಘ್ರದಲ್ಲಿ.. ಎನ್ನುವ ಶೀರ್ಷಿಕೆ ಜೊತೆ ಇದರ ಪ್ರೊಮೋ ರಿಲೀಸ್ ಆಗಿದೆ. 

ಸೀರಿಯಲ್​ ಫ್ಯಾನ್ಸ್​ಗೆ ನಿರಾಸೆ: ಈ ವಾರದಲ್ಲೇ ಮುಗಿಯಲಿವೆ ಎರಡು ಪ್ರಸಿದ್ಧ ಧಾರಾವಾಹಿಗಳು!