ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆ ನಟಿ ರಜಿನಿ ಅವರ ಪತಿ ಅರುಣ್ ಗೌಡ ಅವರ ಕಾಲಿನ ಬೆರಳಿನಲ್ಲಿ ಕಾಲುಂಗುರ ನೋಡಿ ಅಭಿಮಾನಿಗಳಲ್ಲಿ ಅಚ್ಚರಿಯಾಗಿದೆ. ಈ ಕುರಿತು ಪ್ರಶ್ನೆ ಮಾಡಿದ್ರೆ, ಅರುಣ್ ಗೌಡ ಏನಂದ್ರು ನೋಡಿ.

ನಟಿ ರಜಿನಿ
ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಜಿನಿ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಬಹುಕಾಲದ ಗೆಳೆಯ ಜಿಮ್ ಟ್ರೈನರ್ ಅರುಣ್ ಗೌಡ ಜೊತೆ ಸದ್ದಿಲ್ಲದೇ ಮದುವೆಯಾಗಿದ್ದರು. ಮದುವೆಯಾಗುವ ಬಗ್ಗೆ ಕೂಡ ಏನೂ ಕ್ಲೂ ಬಿಟ್ಟು ಕೊಟ್ಟಿರಲಿಲ್ಲ ನಟಿ.
ರೀಲ್ಸ್ ಮಾಡಿ ನಗಿಸುವ ಜೋಡಿ
ರಜಿನಿ ಮತ್ತು ಅರುಣ್ ಗೌಡ ಹೆಚ್ಚಾಗಿ ಜೊತೆಯಾಗಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು. ಇವರ ವಿಡಿಯೋಗಳು ಸಖತ್ ಕಾಮಿಡಿಯಾಗಿದ್ದು, ಜನರನ್ನು ರಂಜಿಸುತ್ತಿತ್ತು. ಇದೀಗ ವಿಡೀಯೋದಲ್ಲಿ ಅರುಣ್ ಗೌಡ ಲುಕ್ ವೈರಲ್ ಆಗಿದೆ.
ಅರುಣ್ ಗೌಡ ಕಾಲಲ್ಲಿ ಕಾಲುಂಗುರ
ಅರುಣ್ ಗೌಡ ಅವರ ವಿಡಿಯೋದಲ್ಲಿ ಕಾಲಿನ ಬೆರಳಿನಲ್ಲಿ ಹಾಕಿರುವ ಕಾಲುಂಗುರ ಅಭಿಮಾನಿಗಳ ಗಮನ ಸೆಳೆದಿದೆ. ಜನರು ಯಾಕೆ ನೀವು ಸಹ ಕಾಲುಂಗುರ ಹಾಕಿದ್ದೀರಿ? ಇದೇನು ಸಂಪ್ರದಾಯವೇ? ಎಂದು ಪ್ರಶ್ನಿಸಿದ್ದಾರೆ.
ಅರುಣ್ ಗೌಡ ಹೇಳಿದ್ದೇನು?
ರಜಿನಿಯವರು ಮದುವೆ ಬಳಿಕ ಎರಡೂ ಕಾಲು ಬೆರಳಲ್ಲೂ ಕಾಲುಂಗುರ ಧರಿಸಿದ್ದಾರೆ. ಅಂತೆಯೇ ಅರುಣ್ ಗೌಡ ಅವರು ಕೂಡ ಎರಡೂ ಕಾಲಿಗೆ ಕಾಲುಂಗುರ ಧರಿಸಿದ್ದು, ನನ್ನ ಹೆಂಡ್ತಿ ಹಾಕ್ಕೊಂಡಿದ್ದಾರೆ ಅಂತ ನಾನು ಹಾಕಿದ್ದೀನಿ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಹೆಂಡತಿಗೆ ಮಾತ್ರ ಮೀಸಲು
ಕಾಲುಂಗುರ ಧರಿಸೋದರಿಂದ, ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ವೃದ್ಧಿಸುತ್ತೆ, ನಾನು ನನ್ನ ಹೆಂಡತಿಗೆ ಮಾತ್ರ ಮೀಸಲು ಆಗಿರುತ್ತೆನೆ, ಆರೋಗ್ಯ ವೃದ್ಧಿಸುತ್ತೆ . ಇದೆಲ್ಲ ಕಾಲಲ್ಲಿ ಉಂಗುರ ಹಾಕುವುದರಿಂದ ಆಗುವ ಅನುಕೂಲಗಳು ಎಂದು ಕಾಲುಂಗುರದ ಪ್ರಯೋಜನಗಳನ್ನು ಸಹ ತಿಳಿಸಿದ್ದಾರೆ.
ನವಂಬರ್ 10ರಂದು ವಿವಾಹ
ರಜಿನಿ ಅವರು ತಮ್ಮ ಗೆಳೆಯ ಅರುಣ್ ಗೌಡ ಎನ್ನುವವರ ಜೊತೆ ನವೆಂಬರ್ 10 ರಂದು ಸದ್ದಿಲ್ಲದೆ ಸಪ್ತಪದಿ ತುಳಿದಿದ್ದರು. ಬೆಂಗಳೂರಿನಲ್ಲೇ ಆಪ್ತರ ಸಮ್ಮುಖದಲ್ಲಿ ಈ ಜೋಡಿಯ ಮದುವೆ ನಡೆದಿತ್ತು
ಅಮೃತವರ್ಷಿಣಿ ಮೂಲಕ ಖ್ಯಾತಿ
ರಜಿನಿ ಅವರು ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿ ಅಮೃತ ಆಗಿ ನಟಿಸಿದ್ದರು. ಆ ಮೂಲಕ ಖ್ಯಾತಿ ಕೂಡ ಗಳಿಸಿದ್ದರು. ನಂತರ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು ರಜಿನಿ. ಇದೀಗ ‘ನೀ ಇರಲು ಜೊತೆಯಲಿ’ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

