ಸೇರಿಗೆ ಸವಾಸೇರ್: ಒಂದೇ ತಾಯಿ ಹೊಟ್ಟೆ ಹುಟ್ಟಿದವರಲ್ಲಿ ಅದೆಷ್ಟು ವ್ಯತ್ಯಾಸ? ನಿಜ ಜೀವನದಲ್ಲೂ ಹೀಗೆ ಅಲ್ವಾ?
ಕನ್ನಿಕಾ ಮಿಸ್ ಮುಖವಾಡ ಕಳಚಲು ಖುದ್ದು ಅಕ್ಕನ ಎಂಟ್ರಿಯಾಗಿದೆ. ಭಾಗ್ಯ ಮತ್ತು ಕುಸುಮಗೆ ಜಯ ಸಿಕ್ಕಿದೆ. ಮುಂದೇನು?
ಒಂದೇ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿದರೂ ಹಲವು ಮನೆಗಳಲ್ಲಿ ಅಣ್ಣ-ತಮ್ಮ, ಅಕ್ಕ-ತಂಗಿಯರ ನಡುವೆ ಎಷ್ಟೊಂದು ವ್ಯತ್ಯಾಸ ಕಾಣುವುದು ಸಹಜ. ಅಷ್ಟೇ ಏಕೆ ಅವಳಿ-ಜವಳಿ ಮಕ್ಕಳಲ್ಲಿಯೂ ವಿಭಿನ್ನ ಗುಣ ಇರುತ್ತದೆ. ಇಷ್ಟಾ-ಅನಿಷ್ಟಗಳು, ಗುಣದಿಂದ ಹಿಡಿದು ಎಷ್ಟೋ ವಿಷಯಗಳಲ್ಲಿ ವ್ಯತ್ಯಾಸ ಇರುವುದು ವಿಚಿತ್ರವಾದರೂ ಇದು ನಿಜವೇ ಆಗಿದೆ. ಇದನ್ನೇ ಧಾರಾವಾಹಿಗಳಲ್ಲಿಯೂ ಅಳವಡಿಸಿಕೊಳ್ಳಲಾಗುತ್ತಿದೆ. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿಯೂ ಈ ವಿಭಿನ್ನ ಕ್ಯಾರೆಕ್ಟರ್ ನೋಡಬಹುದು.
ಭಾಗ್ಯ ಮತ್ತು ಕುಸುಮಳನ್ನು ಬೇರೆ ಬೇರೆ ಮಾಡಿ ವೇದಿಕೆ ಮೇಲೆ ಎಲ್ಲರ ಎದುರು ಅವಮಾನ ಮಾಡಲು ನೋಡಿದ ಕನ್ನಿಕಾ ಮೇಡಂ ಮುಖವಾಡ ಕಳಚಿಬಿದ್ದಿದೆ. ಅದೂ ಖುದ್ದು ಅಕ್ಕನಿಂದಲೇ. ಸದಾ ಅತ್ತೆ-ಸೊಸೆಯ ಮೇಲೆ ಕಿಡಿ ಕಾರುತ್ತಿರುವ ಕನ್ನಿಕಾ, ಮಹಿಳಾ ದಿನಾಚರಣೆಯಂದು ಅವರಿಬ್ಬರನ್ನು ಸನ್ಮಾನ ಮಾಡುವ ಸಮಯದಲ್ಲಿ ಬಹುಮಾನವನ್ನು ಕೆಳಕ್ಕೆ ಕೆಡವಿ ಇನ್ಸಲ್ಟ್ ಮಾಡಿದ್ದಳು. ಅಷ್ಟಕ್ಕೂ ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಭಾಗ್ಯಾ ಹಾಗೂ ಕುಸುಮಾಗೆ ಈ ಬಾರಿ ಮಹಿಳಾ ಸಾಧಕಿ ಪ್ರಶಸ್ತಿ ಬಂದಿರುವುದನ್ನು ಕನ್ನಿಕಾ ಸಹಿಸಲಿಲ್ಲ. ತನಗೆ ಬರಬೇಕಾಗಿದ್ದ ಪ್ರಶಸ್ತಿ ಕೈ ತಪ್ಪಿ ಹೋಯ್ತಲ್ಲಾ ಎಂಬ ಕೋಪದಿಂದ ಕನ್ನಿಕಾ, ಇಬ್ಬರಿಗೂ ವೇದಿಕೆ ಮೇಲೆ ಅವಮಾನ ಮಾಡಲು ಪ್ಲ್ಯಾನ್ ಮಾಡಿದ್ದಳು. ಅದಕ್ಕಾಗಿ ಪಿಎಗೆ ಹೇಳಿ ಭಾಗ್ಯಾ ವೈಯಕ್ತಿಕ ವಿವರಗಳನ್ನು ತರಿಸಿಕೊಂಡು ಇನ್ಸಲ್ಟ್ ಮಾಡಿದ್ದಳು.
ಪೂರ್ಣಿ v/s ದೀಪಿಕಾ: ಒಬ್ಬಳು ಸೊಸೆ ಎದ್ರು ಸಿಕ್ಕಿಬಿದ್ದ ಇನ್ನೋರ್ವ ಸೊಸೆ! ಬಟಾಬಯಲಾಗತ್ತಾ ಕುತಂತ್ರ?
ಈಕೆಯ ಪ್ಲ್ಯಾನ್ ಅನ್ನು ಅತ್ತೆ- ಸೊಸೆ ಅರ್ಥ ಮಾಡಿಕೊಳ್ಳಲೇ ಇಲ್ಲ. ಎಲ್ಲರ ಎದುರು ಅವಮಾನ ಮಾಡುವ ಉದ್ದೇಶದಿಂದ ಕನ್ನಿಕಾ, ಇಬ್ಬರನ್ನೂ ಹೊಗಳಿದ್ದಳು. ನಿಮ್ಮಂಥ ಅತ್ತೆ-ಸೊಸೆ ಇಲ್ಲ ಎಂದಿದ್ದಳು. ಈ ವಯಸ್ಸಿನಲ್ಲೂ ಓದಬೇಕೆನ್ನುವ ಭಾಗ್ಯಾ ಛಲ, ಆಕೆಗೆ ಪ್ರೋತ್ಸಾಹ ನೀಡುತ್ತಿರುವ ಕುಸುಮಾ ಇಬ್ಬರನ್ನೂ ವೇದಿಕೆ ಮೇಲೆ ಬರಮಾಡಿಕೊಳ್ಳೋಣ ಎಂದು ಇಬ್ಬರನ್ನೂ ವೇದಿಕೆ ಮೇಲೆ ಆಹ್ವಾನಿಸಿದ್ದಳು. ಮೊದಲಿಗೆ ಕುಸುಮಾಗೆ ಇದು ಅನುಮಾನ ತರಿಸಿದರೂ ಇಬ್ಬರೂ ವೇದಿಕೆ ಮೇಲೆ ಹೋಗಿದ್ದರು. ಇಬ್ಬರಿಗೂ ಪ್ರಶಸ್ತಿ ನೀಡಲೆಂದು ಹೋಗುವ ಕನ್ನಿಕಾ ಅದನ್ನು ಭಾಗ್ಯಾ ಕೈಗೆ ಕೊಡದೆ ನೆಲದ ಮೇಲೆ ಬೀಳಿಸಿದ್ದಳು. ಪ್ರಶಸ್ತಿಗೆ ಒಂದು ಗೌರವ ಇದೆ ಅದನ್ನು ಏಕೆ ಈ ರೀತಿ ನೆಲದ ಮೇಲೆ ಬೀಳಿಸುತ್ತೀರ ಎಂದು ಭಾಗ್ಯಾ ಕೇಳಿದಾಗ, ಹೌದು ಪ್ರಶಸ್ತಿಗೆ ಗೌರವ ಇದೆ ನಿಮಗೆ ಇಲ್ಲವಲ್ಲಾ ಎಂದಿದ್ದಳು.
ಕುಸುಮಾ ಭಾಗ್ಯಾಳನ್ನು ಓದಿಸುತ್ತಿರುವುದು ಆಕೆ ಮುಂದೆ ಓದಿ ಆಫೀಸರ್ ಆಗಬೇಕು ಎಂದಲ್ಲ. ಕುಸುಮಾ ಅವರಂಥ ಹೆಂಗಸಿಗೆ ಸೊಸೆ ಹೊರಗೆ ಹೋಗಿ ದುಡಿಯುವುದು ಇಷ್ಟವಿಲ್ಲ, ಸೊಸೆಯನ್ನು ಓದಿಸುತ್ತಿರುವುದು ಅವಳ ಜೀವನ ಸರಿ ಹೋಗಲಿ ಎಂದು ಮಾತ್ರ ಎಂದು ಕುಸುಮಾ ಹೇಳಿದ್ದ ಮಾತನ್ನು ಎಲ್ಲರ ಎದುರು ರೆಕಾರ್ಡ್ ಮಾಡಿ ತೋರಿಸಿ ಕುಸುಮಾಳನ್ನು ಇನ್ಸಲ್ಟ್ ಮಾಡಿದ್ದಳು. ಆದರೆ ಭಾಗ್ಯ ಬಿಡಬೇಕಲ್ಲ. ಅವಳಿಗೆ ತನ್ನ ಅತ್ತೆ ಏನು ಎನ್ನುವುದು ತಿಳಿದಿದೆ. ಇದೇಕಾರಣಕ್ಕೆ ಇದರ ಪೂರ್ತಿ ವಿಡಿಯೋ ತೋರಿಸಿ. ಇದರಲ್ಲಿ ಅತ್ತೆ ಮಾತ್ರ ಮಾತನಾಡಿರುವುದು ಇದೆ ಎನ್ನುತ್ತಾಳೆ. ಅದರ ವಿಡಿಯೋ ತನ್ನ ಬಳಿ ಇಲ್ಲ ಎಂದು ಮಾತನಾಡುತ್ತಿರುವಾಗಲೇ ಕನ್ನಿಕಾ ಮಿಸ್ ಅಕ್ಕನ ಎಂಟ್ರಿಯಾಗುತ್ತದೆ. ಅಪ್ಪ ಕಟ್ಟಿ ಬೆಳೆಸಿದ ಶಾಲೆಯ ಮರ್ಯಾದೆ ತೆಗೆಯುತ್ತಿ ಎಂದು ತಂಗಿಗೆ ಬೈದು, ಪಿಎಯ ಕೈಯಲ್ಲಿ ತಂಗಿ ಮಾಡಿದ ರೆಕಾರ್ಡ್ ಅನ್ನು ಎಲ್ಲರಿಗೂ ತೋರಿಸಿ, ತಂಗಿಯ ಮರ್ಯಾದೆ ಕಳೆಯುತ್ತಾಳೆ. ಕುಸುಮಾ ಮತ್ತು ಭಾಗ್ಯಳಿಗೆ ಜಯ ಸಿಗುತ್ತದೆ.
ಲೈಂಗಿಕ ದೌರ್ಜನ್ಯ ಆರೋಪಿ ಜೊತೆ ಮಗು ಬಯಸಿದ್ದ ದೀಪಿಕಾ: ಹಳೆಯ ವಿಡಿಯೋದಲ್ಲಿ ನಟಿ ಹೇಳಿದ್ದೇನು?