Asianet Suvarna News Asianet Suvarna News

ಪುಟ್ಟಕ್ಕನ ಮಕ್ಕಳು: ಮೇಷ್ಟ್ರು - ಸಹನಾ ನಡುವೆ ಪ್ರೇಮದ ಹೊಸ ಅಧ್ಯಾಯ

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಮೇಷ್ಟ್ರು ಮುರಳಿ ಹಾಗೂ ಸಹನಾ ನಡುವೆ ಪ್ರೇಮದ ಹೊಸ ಅಧ್ಯಾಯ ಶುರುವಾದ ಹಾಗಿದೆ. ಕೊನೆಗೂ ಮೇಷ್ಟ್ರು ತಮ್ಮ ಪ್ರೀತಿಯನ್ನು ಸಹನಾ ಮುಂದೆ ಹೇಳ್ತಾರೆ. ಆದರೆ ಇಷ್ಟೊತ್ತು ನಗುತ್ತಿದ್ದ ಸಹನಾ ಗಂಭೀರವಾಗ್ತಿದ್ದಾಳೆ. ಅವಳು ಮೇಷ್ಟ್ರ ಪ್ರೀತಿಯನ್ನು ಒಪ್ಪಿಕೊಳ್ತಾಳಾ?

Love story started between Teacher and Sahana in Puttakkana Makkalu serial
Author
Bengaluru, First Published Jul 30, 2022, 5:00 PM IST

'ಪುಟ್ಟಕ್ಕನ ಮಕ್ಕಳು' ಸೀರಿಯಲ್‌ನಲ್ಲಿ ಮೇಷ್ಟ್ರು ಮತ್ತು ಸಹನಾ ನಡುವಿನ ಆಕರ್ಷಣೆಗೆ ಹೊಸ ಅರ್ಥ ಬಂದಿದೆ. ಆದರೆ ಸಹನಾ ವರ್ತನೆ ಯಾಕೋ ಅನುಮಾನ ತರಿಸುವ ಹಾಗಿದೆ. ದೇವಸ್ಥಾನದಲ್ಲಿ ಸಹನಾ, ದೀಪ ಇಡುವ ಬಳಿ ಜಾರಿ ಬೀಳುತ್ತಿರುವಾಗ ಅವಳನ್ನು ಬೀಳದಂತೆ ತಬ್ಬಿ ಹಿಡಿದು ರಕ್ಷಣೆ ಮಾಡುತ್ತಾರೆ ಮೇಷ್ಟ್ರು. ಇದನ್ನು ಕಂಡ ಸಹನಾ ನಾಚಿ ನೀರಾಗುತ್ತಾಳೆ. ಬಳಿಕ ಅಲ್ಲಿಂದ ಹೊರಡಲು ಅನುವಾಗುತ್ತಾಳೆ, ಆಗ ಮುರಳಿ ಮೇಷ್ಟ್ರು ಹೇಳುತ್ತಾರೆ 'ಏನ್ರೀ ನೀವು? ಕಾಲು ಜಾರಿ ಬಿಳೋರನ್ನು ಕೈ ಹಿಡಿದು ಕಾಪಾಡಿದ್ದೀನಿ. ಅಲ್ಲಾ ಒಂದು ಸಣ್ಣ ಥಾಂಕ್ಸ್ ಹೇಳದೆ ಹೋಗುತ್ತಿದ್ದೀರಿ' ಎಂದಾಗ ಸಹನಾ ಅಲ್ಲಿಯೇ ಪಕ್ಕ ದೀಪಗಳನ್ನು ಇಡುತ್ತಾಳೆ. ಬಳಿಕ ಮುರಳಿ ಮಾತು ಮುಂದುವರೆಸುತ್ತಾನೆ, 'ನೀವು ಥಾಂಕ್ಸ್ ಹೇಳೋದಿರಲಿ ನಾನು ಹೇಳೊ ಥಾಂಕ್ಸ್ ಅನ್ನು ಕೇಳಿಸಿಕೊಳ್ಳದೆ ಹೋಗೋರಲ್ವಾ ನೀವು, ಹೂ ನೀವೆ ನಾನು ಊರಿಗೆ ಬರೋ ಸಂದರ್ಭದಲ್ಲಿ ನೀವು ನಿಮಗೋಸ್ಕರ ಇಟ್ಟುಕೊಂಡಿರೋ ತಿಂಡಿನ ನಂಗೆ ಕೊಟ್ರಿ. ಹಸಿವೆಗೆ ಕಣ್ಣಿಲ್ಲ ಎಂದು ಕೊಂಡು ಅದನ್ನು ಗಬ ಗಬ ಅಂತ ತಿಂದು ಬಿಟ್ಟೆ ಬಳಿಕ ಕೈ ತೊಳೆದು ರೂಮ್ ಗೆ ಹೋದಾಗ ರೂಮ್ ಪ್ರೆಶ್ ನರ್ ಹೊಡೆದ ಹಾಗೆ ರೂಮ್ ತುಂಬಾ ನಿಮ್ಮದೇ ಘಮ' ಮೇಷ್ಟ್ರು ಹೀಗಂದಾಗ ಅವರ ಮಾತಿನಲ್ಲೊಂದು ಪ್ರೀತಿಯ ಝಲಕ್ ಇದೆ. ಅದು ಸಹನಾಗೂ ತಟ್ಟುವಂತಿದೆ.

ಒಂದು ಹಂತದಲ್ಲಿ ಸಹನಾ ಸ್ವಲ್ಪ ಮುಂದೆ ಹೋಗಿ ಜೋರಾಗಿ ನಗುತ್ತಾಳೆ. ಸಹನಾ ಮುಂದೆ ಹೋಗಿದ್ದನ್ನು ನೋಡಿ ಮುರಳಿ ಮೇಷ್ಟ್ರಿಗೆ ಏನು ಅಂತ ಅರ್ಥ ಆಗದೆ ವಾಪಸ್ ನೋಡಿದಾಗ ಸಹನಾ ನಗುತ್ತಿದ್ದಳು. ಇದನ್ನು ನೋಡಿದ ಮುರಳಿ ಹೇಳುತ್ತಾನೆ ಸಹನಾ ಅವರೇ ನೀವು ನಗುತ್ತಿದ್ದಿರಾ ಸಡನ್ ಆಗಿ ಐನೂರು ದೀಪ ಒಟ್ಟಿಗೆ ಬೆಳಗುತ್ತಲ್ಲಾ ಹಾಗೆ ಹೊಳೀತಿದೆ ರೀ.. ಎಲ್ಲಾ 'ಎಂದು ಹೊಗಳುತ್ತಾನೆ. ಸಹನಾ ಅವರೇ ನೀವು ನಿಜವಾಗಿಯೂ ನಗುತ್ತಿದ್ದಿರಾ ಎಂದಾಗ ಸಹನಾ ಮುಸಿ ಮುಸಿ ನಗುತ್ತಾಳೆ. ಅದಕ್ಕೆ ಮೇಷ್ಟ್ರು ಹೇಳುತ್ತಾರೆ, 'ನನಗೆ ತಮಾಷೆಯಾಗಿ ಅಷ್ಟೂ ನೀಟಾಗಿ ಮಾತನಾಡಲು ಬರುವುದಿಲ್ಲ. ಆದ್ರೂ ನಿಮ್ಮ ನಗೂನ ನನಗೆ ಪ್ರಶಸ್ತಿ ಆಗಿ ಕೊಟ್ಟಿದ್ದಕ್ಕೆ ಥಾಂಕ್ಸ್ ರಿ' ಅಂತ.

Ramachari serial: ಪ್ರಾಜೆಕ್ಟ್ ಮಾಡಕ್ಕಾಗಲ್ಲ ಅಂದ ಚಾರು ಈಗ ಆಫೀಸ್ ಅಟೆಂಡರಾ?

'ಈಗಲೂ ನೋಡಿ ನಾನು ನಿಮ್ಮನ್ನು ಕೈ ಹಿಡಿದು ಕಾಪಾಡಿದರು ನಾನೇ ನಿಮಗೆ ಥ್ಯಾಂಕ್ಸ್ ಹೇಳುತ್ತಿದ್ದೇನೆ. ಎಂದಾಗ ಮುರಳಿ ಬಳಿಗೆ ಸಹನಾ ಬರುತ್ತಾಳೆ ಬಳಿಕ ಥಾಂಕ್ಸ್ ಎಂದು ಹೇಳುತ್ತಾಳೆ. ಆಗ ಮುರಳಿ ಹೇಳುತ್ತಾನೆ ಸಹನಾ ಅವರೇ ನೀವೇನೋ ಅಂದ್ರಿ ಥಾಂಕ್ಸ್ ಹೇಳಿದ್ರಾ ಎಂದು ಆಶ್ಚರ್ಯದಿಂದ ಕೇಳುತ್ತಾನೆ. ಅದಕ್ಕೆ ಸಹನಾ ಹೌದು ಎಂದು ತಲೆಯಾಡಿಸುತ್ತಾಳೆ. ಅದಕ್ಕೆ ಮುರಳಿ ಪುನಃ ಹೇಳುತ್ತಾನೆ ಯಪ್ಪಾ ಥಾಂಕ್ಸ್ ಎಂದು ಬಿಟ್ರಾ ದೇವರು ನಿಜವಾಗಲೂ ಇದ್ದಾನೆ. ಈಗ 5೦೦ ಅಲ್ಲಾ ಸಾವಿರ ಎಂದಾಗ ಸಹನಾ ಕೇಳುತ್ತಾಳೆ ಎನು ಎಂದು ಅದಕ್ಕೆ ಮುರಳಿ ಹೇಳುತ್ತಾರೆ ಸಹನಾ ದೀಪಗಳು ಒಟ್ಟಿಗೆ ಸಾವಿರ ದೀಪಗಳು ಹಚ್ಚಿದ ಹಾಗೆ ಕಾಣುತ್ತದೆ ಎಂದು ಹೇಳುತ್ತಾನೆ.

Doresaan ಸೀರಿಯಲ್‌ನಲ್ಲಿ ದೊಡ್ಡ ಟ್ವಿಸ್ಟ್ : ಸತ್ಯವತಿ ಮಗನೇ ಆನಂದ್!

ಇವರಿಬ್ಬರ ಮಾತು ಹೀಗೇ ಮುಂದುವರಿದು ಕೊನೆಗೂ ಮೇಷ್ಟ್ರು ತಮ್ಮ ಪ್ರೀತಿಯನ್ನು ಸಹನಾ ಮುಂದೆ ನಿವೇದಿಸಿಕೊಳ್ತಾರೆ. ಸಹನಾ ಮನೆಗೆ ಯಾರ್ಯಾರೋ ಹೆಣ್ಣು ನೋಡೋಕೆ ಬಂದಾಗ ಮೇಷ್ಟ್ರ ಜೀವ ಒದ್ದಾಡಿ ಹೋಗಿರುತ್ತಂತೆ. ಹಾಗೆ ನೋಡಿದರೆ ಅವರದು ಇದು ಮೂರನೇ ಜನ್ಮವಂತೆ. ಈ ಜನ್ಮದಲ್ಲಾದರೂ ಪ್ರೇಮ ನಿವೇದನೆ ಮಾಡಿಕೊಳ್ಳದಿದ್ದರೆ ತನ್ನಂಥಾ ನತದೃಷ್ಟ ಇನ್ನೊಬ್ಬ ಇಲ್ಲ ಅನ್ನೋದು ಅವರ ಮಾತು. ಅವರ ತಮ್ಮ ಮಾತಲ್ಲಿ ಸಹನಾ ಪ್ರೀತಿಸುತ್ತಿರುವುದಾಗಿ ಹೇಳ್ತಾರೆ. ಆದರೆ ಕೊನೆಗೆ ಸಹನಾ ಮುಖದಲ್ಲಿ ಆವರಿಸಿರುವ ಆತಂಕ, ಗಾಂಭೀರ್ಯ ಅವಳು ಮೇಷ್ಟ್ರ ಪ್ರೇಮ ನಿವೇದನೆಗೆ ಒಪ್ಪುತ್ತಾಳೋ ಇಲ್ಲವೋ ಅನ್ನೋ ಅನುಮಾನ ಹುಟ್ಟು ಹಾಕಿದೆ.

Follow Us:
Download App:
  • android
  • ios