Asianet Suvarna News Asianet Suvarna News

ಎಜೆ ಹೆಂಡ್ತಿ, ಚಿಕ್ಕಣ್ಣನ ಪ್ರೇಯಸಿ ಮಲೈಕಾಗೆ ಹುಟ್ಟುಹಬ್ಬ ಸಂಭ್ರಮ: ವಿಶೇಷ ವಿಡಿಯೋ- ಇಂಟರೆಸ್ಟಿಂಗ್‌ ಮಾಹಿತಿ

ಹಿಟ್ಲರ್‌ ಕಲ್ಯಾಣದ ಲೀಲಾ ಹಾಗೂ ಉಪಾಧ್ಯಕ್ಷ ಚಿತ್ರದ ನಾಯಕಿ ಮಲೈಕಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜೀ ಕನ್ನಡ ವಾಹಿನಿಯಿಂದ ವಿಶೇಷ ವಿಡಿಯೋ ರಿಲೀಸ್ ಮಾಡಲಾಗಿದೆ. 
 

Leela of Hitler Kalyana and heroine of Upadhyaksha Malaika celebrating birthday suc
Author
First Published Feb 12, 2024, 1:20 PM IST

ಎಡವಟ್ಟು ಲೀಲಾ ಎಂದಾಕ್ಷಣ ನೆನಪಾಗುವವಳು  ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ ಹಿಟ್ಲರ್​ ಕಲ್ಯಾಣ (Hitler Kalyana) ಧಾರಾವಾಹಿಯ ಲೀಲಾ. ಈಕೆಯನ್ನು ಲೀಲಾ ಎನ್ನುವ ಬದಲು ಎಡವಟ್ಟು ಲೀಲಾ ಎಂದೇ ಫೇಮಸ್ಸು. ಅಭಿರಾಮ್‌ ಜಯಶಂಕರ್‌ ಅರ್ಥಾತ್‌ ಎಜಿಯ ಪತ್ನಿಯಾಗಿರೋ ಈ ಲೀಲಾ, ಇದೀಗ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟಿದ್ದು, ಚಿಕ್ಕಣ್ಣನವರ ಪ್ರೇಯಸಿಯಾಗಿದ್ದಾರೆ. ಚಿಕ್ಕಣ್ಣ ಹೀರೋ ಆಗಿರುವ 'ಉಪಾಧ್ಯಕ್ಷ' (Upadhyaksha)ಸಿನಿಮಾಕ್ಕೆ ಈಕೆಯೇ ಹೀರೋಯಿನ್‌. ಶರಣ್‌ ನಟನೆಯ 'ಅಧ್ಯಕ್ಷ'(Adhyaksha) ಚಿತ್ರ ಸೂಪರ್ ಹಿಟ್ ಆಗಿತ್ತು. ಅದರಲ್ಲಿ ಉಪಾಧ್ಯಕ್ಷನ ಪಾತ್ರ ಮಾಡಿದವರು ಚಿಕ್ಕಣ್ಣ. ಇದೀಗ ಅದೇ ಉಪಾಧ್ಯಕ್ಷನ ಕಥೆಯಲ್ಲೇ ಈ ಸಿನಿಮಾ ಇದೆ. ಕಿರುತೆರೆ ಹಾಗೂ ಬೆಳ್ಳಿತೆರೆಯ ಮೇಲೆ ಜಾದೂ ಮಾಡುತ್ತಿರುವ ಲೀಲಾ ನಿಜವಾದ ಹೆಸರು ಮಲೈಕಾ ಟಿ ವಸುಪಾಲ್. ಇಂದು ಅಂದರೆ ಫೆಬ್ರುವರಿ 12 ಮಲೈಕಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 

ದಾವಣಗೆರೆಯ ಈ ಬೆಡಗಿಗೆ ಮಲೈಕಾ ಅವರ ಹುಟ್ಟುಹಬ್ಬದ ನಿಮಿತ್ತ ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ಒಂದನ್ನು ರಿಲೀಸ್‌ ಮಾಡಿದೆ. ಇದರಲ್ಲಿ ಮಲೈಕಾ ಅವರ ಹಲವು ಮಜಲುಗಳನ್ನು ನೋಡಬಹುದಾಗಿದೆ. ವಿವಿಧ ಡ್ರೆಸ್‌ಗಳಲ್ಲಿ, ವಿವಿಧ ನಟನೆಯ ಕುರಿತು ಈ ವಿಡಿಯೋದಲ್ಲಿ ನೋಡಬಹುದಾಗಿದೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ಆಗಿರುವ ಮಲೈಕಾ,  ಪಟ ಪಟಾ ಅಂತ ಮಾತಾಡುತ್ತಾ, ನೇರವಾಗಿ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಡುತ್ತಾರೆ. ಧಾರಾವಾಹಿಯಲ್ಲಿ ಈಕೆ ಎಡವಟ್ಟು ಅನಿಸಿಕೊಂಡರೂ, ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ರೀಲ್ಸ್​ ಮಾಡುತ್ತಾ ಜನರಿಗೆ ಹತ್ತಿರವಾಗುತ್ತಿದ್ದಾರೆ.  ಇಂದು ಇವರ ಹುಟ್ಟುಹಬ್ಬಕ್ಕೆ ಹಲವಾರು ಮಂದಿ ವಿಷ್‌ ಮಾಡುತ್ತಿದ್ದಾರೆ. 

ಬಾಲಿವುಡ್‌ ಮಲೈಕಾಗೂ, ಹಿಟ್ಲರ್‌ ಕಲ್ಯಾಣದ ಎಡವಟ್ಟು ಲೀಲಾ ಮಲೈಕಾಗೂ ಇದೆಯಂತೆ ಭಾರಿ ನಂಟು!

ಅಷ್ಟಕ್ಕೂ ಮಲೈಕಾ ಕುರಿತು ಕೆಲವೊಂದು ಇಂಟರೆಸ್ಟಿಂಗ್‌ ವಿಷಯಗಳಿವೆ. ಅದೇನೆಂದರೆ, ಮೊದಲನೆಯದಾಗಿ ಲೀಲಾ ಪಾತ್ರಕ್ಕೆ ಮುಗ್ಧ ಹುಡುಗಿಯ ತಲಾಷ್‌ ಮಾಡಿತ್ತು ಸೀರಿಯಲ್‌ ತಂಡ.  ಏಕೆಂದರೆ ಇಲ್ಲಿರುವ ಇನ್ನೊಂದು ಪಾತ್ರ ಮಧ್ಯ ವಯಸ್ಸಿನದಾಗಿರುವ ಕಾರಣ  ಜೊತೆಗೆ ಮುಖ್ಯಪಾತ್ರವೇ ಆಕರ್ಷಣೆಯ ಕೇಂದ್ರಬಿಂದು ಆಗುತ್ತದೆ. ಹೀಗಿರುವಾಗ ಸುಂದರ  ಹುಡುಗಿಯನ್ನು ಆಯ್ಕೆ ಮಾಡಬೇಕಿತ್ತು. ಜೊತೆಗೆ ಡಬಲ್‌ ವಯಸ್ಸಿನ ನಾಯಕನಿಗೆ ನಾಯಕಿಯಾಗುವ ಪಾತ್ರವಿದು. ಆಗ ಸೀರಿಯಲ್‌ ತಂಡಕ್ಕೆ ಸಿಕ್ಕಿದ್ದು,  ದಾವಣಗೆರೆಯ ಮಲೈಕಾ. ಬಾಲ್ಯದಿಂದಲೂ ಆಕ್ಟಿಂಗ್ಅಂದ್ರೆ ಪ್ರಾಣ ಆಗಿರುವ ಮಲೈಕಾ ಅವರಿಗೆ ಈ ಪಾತ್ರ ಒಲಿದು ಬಂತು. 

ಅಪ್ಪ ಅಮ್ಮನ ಬಲವಂತಕ್ಕೆ ಓದಿದರೂ ಜಾಣೆಯಾದ ಮಲೈಕಾ ಇಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ನಂತರ ನಟನೆಯ ಕನಸಿನ ಹಿಂದೆ ಬಿದ್ದಿದ್ದರು.  ಸಾಕಷ್ಟು ಸೀರಿಯಲ್ ತಂಡ ಸಂಪರ್ಕಿಸಿ ಅಡಿಷನ್‌ ಕೊಟ್ಟಿದ್ದರು.  ಅದಕ್ಕಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಸದಾ ಓಡಾಟ ಮಾಡಿದ್ದರು. ಕೊನೆಗೆ ಹಿಟ್ಲರ್‌ ಕಲ್ಯಾಣ ತಂಡದ ಕಣ್ಣಿಗೆ ಬಿದ್ದರು.  ಈ ಸೀರಿಯಲ್‌ಗೋಸ್ಕರ ಮಲೈಕಾ ದಾವಣಗೆರೆಯಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಬಳಿಕ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿ ಪಾತ್ರ ಗಿಟ್ಟಿಸಿಕೊಂಡು ಮನೆ ಮಾತಾಗಿದ್ದಾರೆ.

ದಿನವೂ ಸಪ್ತಸಾಗರ ದಾಟಿ ಭಾವಿ ಪತ್ನಿಯನ್ನು ಮೀಟ್‌ ಆಗಲು ಹೋಗ್ತಿದ್ರಂತೆ ‘ತಾಂಡವ್‌‘! ಅವರ ಬಾಯಿಂದ್ಲೇ ವಿಷ್ಯ ಕೇಳಿ...

 ಅಷ್ಟಕ್ಕೂ ಮಲೈಕಾ ಹೆಸರು ಇವರಿಗೆ ಬರುವ ಹಿಂದೆ ಒಂದು ಕಥೆಯೇ ಇದೆ. 1998ರಲ್ಲಿ ಬಿಡುಗಡೆಯಾಗಿದ್ದ ದಿಲ್‌ ಸೇ ಚಿತ್ರದ ಚೈಯ್ಯಾ ಚೈಯ್ಯಾ ಹಾಡು ಸಕತ್‌ ಹಿಟ್‌ ಆಗಿತ್ತು. ಆಗ ಮಲೈಕಾ ಅರೋರಾ ಅವರಿಗೆ ಬಹುದೊಡ್ಡ ಹೆಸರೇ ಬಂದಿತ್ತು. ಎಲ್ಲರ ಬಾಯಿಯಲ್ಲೂ ಮಲೈಕಾ ಅವರ ಹೆಸರು ಓಡಾಡುತ್ತಿತ್ತು. ಈ ಹಾಡಿಗೆ ಮಲೈಕಾ ಅರೋರಾ ಸೊಂಟ ಬಳುಕಿಸಿದ ರೀತಿಗೆ ಎಲ್ಲರೂ ಫಿದಾ ಆಗಿದ್ದರು. ಅದೇ ಟೈಂನಲ್ಲಿ ಹುಟ್ಟಿದ್ದೇ ದಾವಣಗೆರೆಯ ಮಲೈಕಾ. ಇವರ ಹುಟ್ಟು ಹೆಸರು ಕೂಡ ಮ ಅಕ್ಷರದಲ್ಲಿ ಬಂದ ಹಿನ್ನೆಲೆಯಲ್ಲಿ ಮ ಅಕ್ಷರದ ಹೆಸರಿಗಾಗಿ ಹುಡುಕಾಟ ನಡೆಸಿದ್ದರಂತೆ. ಆಗ ಮಲೈಕಾ ಅವರ ಹೆಸರು ಇಟ್ಟರಂತೆ. ಈ ಕುರಿತು ಮಲೈಕಾ ಹೇಳಿದ್ದರು. ಮಲೈಕಾಗೆ ಇರುವ ಕೆಲವು ಅರ್ಥಗಳ ಕುರಿತೂ ನಟಿ ಹೇಳಿದ್ದಾರೆ. ಒಂದು ದೇಶದಲ್ಲಿರುವ ಹೂವಿನ ಹೆಸರು, ಮಲೈ ಎಂದರೆ ಕೆನೆ ಹಾಗೂ ಮಲೈಕಾ ಎಂದರೆ ಬಾಲಿವುಡ್‌ ನಟಿ ಎಂದಿದ್ದರು. ಅಂದಹಾಗೆ ಮಲೈಕಾ ಅರೋರಾ ಅವರಿಗೆ 49 ವರ್ಷ ವಯಸ್ಸಾದರೆ ಕನ್ನಡದ ಮಲೈಕಾಗೆ 25 ವರ್ಷ ವಯಸ್ಸು.  
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios