ದಿನವೂ ಸಪ್ತಸಾಗರ ದಾಟಿ ಭಾವಿ ಪತ್ನಿಯನ್ನು ಮೀಟ್ ಆಗಲು ಹೋಗ್ತಿದ್ರಂತೆ ‘ತಾಂಡವ್‘! ಅವರ ಬಾಯಿಂದ್ಲೇ ವಿಷ್ಯ ಕೇಳಿ...
ಭಾಗ್ಯಲಕ್ಷ್ಮಿ ಸೀರಿಯಲ್ ತಾಂಡವ್, ತಮ್ಮ ರಿಯಲ್ ಲೈಫ್ ಪತ್ನಿ ಸಂಗೀತಾರನ್ನು ಮದುವೆಗೂ ಮುನ್ನ ಹೇಗೆ ಭೇಟಿಯಾಗುತ್ತಿದ್ದೆ ಎನ್ನುವ ಕುತೂಹಲದ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.
ತಾಂಡವ್ ಎಂದರೆ ಸಾಕು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗೋ ಭಾಗ್ಯಲಕ್ಷ್ಮಿ ಸೀರಿಯಲ್ ಧಾರಾವಾಹಿ ಪ್ರಿಯರ ಕಣ್ಮುಂದೆ ಬರುತ್ತದೆ. ಸೀರಿಯಲ್ ನಾಯಕನಾಗಿದ್ದರೂ ಧಾರಾವಾಹಿಯಲ್ಲಿ ತಾಂಡವ್ ಖಳನಾಯಕ. ಪತ್ನಿ, ಮುದ್ದಾದ ಮಕ್ಕಳು ಇದ್ದರೂ ಇನ್ನೊಬ್ಬಳ ಸಹವಾಸ ಮಾಡಿದ್ದಾನೆ. ಈಗಂತೂ ಮನೆ ಬಿಟ್ಟು ಹೋಗಿ ಲವರ್ ಜೊತೆ ಬೇರೆ ಮನೆ ಮಾಡಿ ಸಂಸಾರ ಶುರುವಿಟ್ಟುಕೊಂಡಿದ್ದಾನೆ. ಇದೇ ಕಾರಣಕ್ಕೆ ತಾಂಡವ್ನನ್ನು ಕಂಡ್ರೆ ಸೀರಿಯಲ್ ಪ್ರಿಯರು ಉಗಿಯುತ್ತಿದ್ದಾರೆ. ಸಾಮಾನ್ಯವಾಗಿ ಖಳನಾಯಕ ಎಂದರೆ ಹೊರಗಡೆಯಲ್ಲಿಯೂ ಅವರನ್ನು ಬೈಯುವವರೇ ಹೆಚ್ಚು. ತಾವು ನೋಡುತ್ತಿರುವುದು ಧಾರಾವಾಹಿ, ಅದರಲ್ಲಿ ಇರುವುದು ಕಾಲ್ಪನಿಕ ಪಾತ್ರಗಳು ಎನ್ನುವುದನ್ನು ಮರೆತು, ಖಳನಾಯಕರನ್ನು ಚೆನ್ನಾಗಿ ಉಗಿಯುವುದೂ ಇದೆ. ಅದೇ ರೀತಿ ತಾಂಡವ್ ಪಾತ್ರಧಾರಿಯೂ ಅನುಭವಿಸುತ್ತಿದ್ದಾರೆ. ಅಂದಹಾಗೆ, ಖಳನಾಯಕನಾಗಿ ಮಿಂಚುತ್ತಿರುವ ತಾಂಡವ್ ಪಾತ್ರಧಾರಿಯ ನಿಜವಾದ ಹೆಸರು ಸುದರ್ಶನ್ ರಂಗಪ್ರಸಾದ್.
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಏನೂ ಗೊತ್ತಿಲ್ಲದ, ಹೆಚ್ಚು ಕಲಿಯದ, ಈಗಷ್ಟೇ ವಿದ್ಯಾಭ್ಯಾಸ ಶುರು ಮಾಡಿರುವ ಭಾಗ್ಯ ತಾಂಡವ್ ಪತ್ನಿಯಾದರೆ, ಅಸಲಿ ಜೀವನದಲ್ಲಿ ನಟಿ ಸಂಗೀತಾ ಭಟ್, ತಾಂಡವ್ ಅರ್ಥಾತ್ ಸುದರ್ಶನ ರಂಗಪ್ರಸಾದ್ ಅವರ ಪತ್ನಿ. ಸಂಗೀತಾ ಭಟ್ ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾ ಮೂಲಕ ಸಂಗೀತ ಭಟ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು 2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು. ಇವರು ತುಂಬಾ ಸುದ್ದಿ ಮಾಡಿದ್ದು, ಮೀ ಟೂ ಅಭಿಯಾನ ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ. 2018 ರಲ್ಲಿ ನಡೆದ ಮಿ ಟೂ ಅಭಿಯಾನದ ವೇಳೆ ಸಂಗೀತಾ ಭಟ್, ತಾವೂ ಕೂಡಾ ಚಿತ್ರರಂಗದಲ್ಲಿ ಕಿರುಕುಳ ಅನುಭವಿಸಿರುವ ಬಗ್ಗೆ ತಿಳಿಸಿದ್ದರು.
ನೆಲದ ಮೇಲೆಯೇ ಅನ್ನಪ್ರಸಾದ ಸ್ವೀಕರಿಸಿದ ಡ್ರೋನ್ ಪ್ರತಾಪ್: ಆಹಾ! ಎರಡು ಕಣ್ಣು ಸಾಲದು ಎಂದ ಫ್ಯಾನ್ಸ್
ನಟನೆಯಿಂದ ದೂರ ಉಳಿದ ನಂತರ ಸಂಗೀತಾ ಅವರು ಕೆಲವು ದಿನಗಳ ಕಾಲ ಜರ್ಮನಿಯಲ್ಲಿದ್ದರು. ಕಳೆದ ವರ್ಷ ಬಿಡುಗಡೆಯಾದ '48 ಅವರ್ಸ್' ಸಿನಿಮಾ ಅವರ ಕೊನೆಯ ಚಿತ್ರ. ಇದೀಗ ಸುದರ್ಶನ್ ಅವರು ಸಂಗೀತಾ ಅವರನ್ನು ಮದುವೆಯಾಗಲು ತಾವು ಪ್ರತಿನಿತ್ಯ ಸಪ್ತಸಾಗರವನ್ನು ದಾಟಿ ಹೋಗುತ್ತಿರುವ ಬಗ್ಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಅಷ್ಟಕ್ಕೂ ಇಬ್ಬರೂ ಬೆಂಗಳೂರಿನಲ್ಲಿಯೇ ಇದ್ದುದು. ಎಲ್ಲರಿಗೂ ತಿಳಿದಿರುವಂತೆ ಬೆಂಗಳೂರಿನಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಬೇಕು ಎಂದರೆ ಸಪ್ತಸಾಗರವನ್ನು ದಾಟಿ ಹೋದಂತೆ ಅನುಭವ ಆಗುವುದು ಸಹಜ. ಇದನ್ನೇ ತಮಾಷೆಯ ರೂಪದಲ್ಲಿ ಸುದರ್ಶನ್ ಹೇಳಿದ್ದಾರೆ.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಇರುವ ಹುಡುಗರು ಎರಡು ಕಿಲೋ ಮೀಟರ್ ಒಳಗೆ ಇರುವ ಹುಡುಗಿಯರನ್ನು ಲವ್ ಮಾಡುತ್ತಾರೆ. ಆದರೆ ನಾನು ಪ್ರತಿನಿತ್ಯ ಅವಳನ್ನು ಭೇಟಿಯಾಗಲು ಸಪ್ತಸಾಗರ ದಾಟಿ ಹೋಗುತ್ತಿದ್ದೆ. ಮತ್ತಿಕೆರೆಯಿಂದ ಬಿಟಿಎಂ ಲೇಔಟ್ ದಾಟಿ, ಕೆಆರ್‌ಪುರ ಮತ್ತು ಸಿಲ್ಕ್ ಬೋರ್ಡ್ ಎಂಬ ಟ್ರಾಫಿಕ್ ದಾಟಿ ಹೋಗುತ್ತಿದೆ. ಇದು ಟ್ರೂ ಲವ್ ಎಂದಿದ್ದಾರೆ. ಈ ಮಾತಿಗೆ ಹಲವರು ಕಾಲೆಳೆದಿದ್ದಾರೆ. ತಾವು ಪ್ರತಿನಿತ್ಯ ಲವರ್‌ಗೆ ನೋಡಲು ಬೇರೆ ಊರಿನಿಂದ ಹೋಗುತ್ತಿದ್ದುದಾಗಿ ಕೆಲವರು ಹೇಳಿದರೆ, ಸುದರ್ಶನ್ ಹೇಳಿರುವ ಈ ಮಾರ್ಗ ಒಂದಕ್ಕೊಂದು ಸಂಬಂಧವಿಲ್ಲ ಎಂದು ಇನ್ನು ಕೆಲವರು ಕಾಲೆಳೆಯುತ್ತಿದ್ದಾರೆ.
ಡ್ರೋನ್ ಪ್ರತಾಪ್ಗೆ ಕೊನೆಗೂ ಅಮ್ಮನ ಕೈತುತ್ತು: ದೃಷ್ಟಿ ತೆಗೆದು ಬರಮಾಡಿಕೊಂಡ ವಿಡಿಯೋಗೆ ನೆಟ್ಟಿಗರು ಏನಂದ್ರು?