ಮೊನ್ನೆ ತಾನೇ ಬಿಗ್‌ಬಾಸ್ ಮನೆಯಿಂದ ಹೊರಬಂದ ಲಾಯರ್ ಜಗದೀಶ್ ಆಡಿದ ಒಂದು ಮಾತು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಮದುವೆ ಆಗಿ ಒಂದು ವರ್ಷ ಆದರೂ ಆ ವಿಷಯವೇ ತಿಳಿದಿರಲಿಲ್ಲ ಎಂಬ ಅವರ ಮಾತಿಗೆ ನಾನಾ ಪ್ರತಿಕ್ರಿಯೆ ಬರುತ್ತಿದೆ.
ಬಿಗ್ ಬಾಸ್ (Bigg Boss) ಫೇಮ್‌ನ ಲಾಯರ್ ಜಗದೀಶ್ (Lawer Jagadish) ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಒಂದಿಲ್ಲೊಂದು ಸ್ಟೇಟ್‌ಮೆಂಟ್ ನೀಡಿ ಸೋಷಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ರಚಿತಾ ರಾಮ್ ಬಗ್ಗೆ ಅವರು ಆಡಿರುವ ಮಾತು ಸುದ್ದಿ ಮಾಡಿತ್ತು. ಜಗದೀಶ್ ಒಂದೆಡೆ ಮಾತನಾಡುತ್ತ, ನಟಿ ರಚಿತಾ ರಾಮ್ ಓಡಾಡಲು ಬಳಸುವ ಕಾರು ಕೋಟಿ ಬೆಲೆ, ರಾಜರಾಜೇಶ್ವರಿ ನಗರದಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ಎಲ್ಲಿಂದ ಹಣ ಬರುತ್ತಿದೆ. ರಚಿತಾ ರಾಮ್ ಅವರಿಗೆ ರಾಜಕಾರಣಿಗಳ ಜೊತೆ ಒಡನಾಟ ಇದೆ. ರಾಜಕಾರಣಿಗಳ ಜೊತೆ ವ್ಯವಹಾರ ಮಾಡುತ್ತಾರೆ. ರಾಜಕಾರಣಿಗಳ ಕೃಪಾಕಟಾಕ್ಷದಿಂದ ಬೆಳೆಯುತ್ತಿದ್ದಾರೆ ಎಂಬ ಆರೋಪ ಇದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದರು. ಇವರ ಈ ಮಾತು ಎಲ್ಲೆಲ್ಲೂ ಟ್ರೋಲ್ ಆಗಿ ಕೊನೆಗೆ ಈ ಬಗ್ಗೆ ವೀಡಿಯಾ ಮಂದಿ ನೇರ ರಚಿತಾರಾಮ್ ಬಳಿಯೇ ಪ್ರತಿಕ್ರಿಯೆ ಕೇಳಿದ್ದರು. ಇದಕ್ಕೆ ಖಡಕ್ ಆಗಿ ರಚಿತಾ ಪ್ರತಿಕ್ರಿಯೆ ನೀಡಿದ್ದು ಕೂಡ ವೈರಲ್ ಆಗಿತ್ತು.
ಎಂಬ ಪ್ರಶ್ನೆ ಶುರುವಾಗಿತ್ತು. ಅದಕ್ಕೆ ನಟಿ ರಚಿತಾ ರಾಮ್ ಮಾಧ್ಯಮಗಳ ಮೂಲಕ ಖಡಕ್ ಉತ್ತರ ಕೂಡ ನೀಡಿದ್ದರು. ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಹಾಗೂ ನಟಿ ರಚಿತಾ ರಾಮ್ ತಿಕ್ಕಾಟ ಮತ್ತೆ ತಾರಕಕ್ಕೇರಿದ್ದು, ಈ ಎಲ್ಲಾ ಆರೋಪಗಳಿಗೆ ತಿರುಗೇಟು ನೀಡಿದ್ದರು. ನಾನು ಇಂಡಸ್ಟ್ರಿಯಲ್ಲಿ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಪ್ರತಿ ಸಿನಿಮಾಗೂ ಸಂಭಾವನೆ ಪಡೆಯುತ್ತಿದ್ದೇನೆ. ಚಿತ್ರರಂಗದಲ್ಲಿ ಸತತವಾಗಿ ಕೆಲಸ ಮಾಡಿಕೊಂಡು ಬಂದು, ಅವಶ್ಯಕತೆ ಇದ್ದಲ್ಲಿ ಮಾತ್ರ ಮಾತನಾಡುತ್ತೇನೆ. ನಾನು ಶೂಟಿಂಗ್ನಲ್ಲಿ ಬ್ಯುಸಿ ಇರುತ್ತೇನೆ. ಶೂಟ್ ಇಲ್ಲ ಎಂದರೆ ಕುಟುಂಬದವರ ಜೊತೆ ಸಮಯ ಕಳೆಯುತ್ತೇನೆ. ಸ್ಪಾನ್ಸರ್ಸ್ ಇದ್ದಿದ್ದರೆ ಹಾಯಾಗಿ ವಿದೇಶಿ ಪ್ರವಾಸ ಮಾಡುತ್ತಿದ್ದೆ. ನನಗೆ ಕಷ್ಟ ಬಂದು ಎಲ್ಲಾ ಕಳೆದುಕೊಂಡರೂ ದೇವಸ್ಥಾನದಲ್ಲಿನ ಪ್ರಸಾದ ತಿಂದುಕೊಂಡು ಇರುತ್ತೇನೆ ಹೊರತು, ಯಾರ ಜೊತೆಯೂ ಹೋಗಿ ಇರೋದಿಲ್ಲ ಎಂದು ರಚಿತಾ ಉತ್ತರಿಸಿದ್ದರು.
ಚಂದನ್ ಶೆಟ್ಟಿ ಹಾಡಿಗೆ ಸೊಂಟ ಬಳುಕಿಸಿದ ಶ್ರೀರಸ್ತು ಶುಭಮಸ್ತು ಅಕ್ಕ-ತಂಗಿ: ಫ್ಯಾನ್ಸ್ ಸುಸ್ತೋ ಸುಸ್ತು!
ಇದೀಗ ಲಾಯರ್ ಜಗದೀಶ್ ಗರ್ಲ್ಸ್ ವರ್ಸಸ್ ಬಾಯ್ಸ್ ಎಂಬ ರಿಯಾಲಿಟಿ ಶೋದಲ್ಲಿ ಭಾಗವಹಿಸುತ್ತಿದ್ದಾರೆ. ಇದರ ನಡುವೆಯೇ ಇವರದೊಂದು ಮಾತು ಎಲ್ಲೆಡೆ ಟ್ರೋಲ್ ಆಗುತ್ತಿದೆ. ಅದು ಇವರು ಸೆಕ್ಸ್ ಬಗ್ಗೆ ಆಡಿರುವ ಮಾತು. ಮದುವೆಗೂ ಮೊದಲು ನಂಗೆ ಕಿಸ್ ಮಾಡಲಿಕ್ಕೂ ಬರುತ್ತಿರಲಿಲ್ಲ. ಆಗ ನನ್ನ ಗರ್ಲ್ ಫ್ರೆಂಡ್ ಆಗಿದ್ದ ಹೆಂಡತಿ ಹೇಗೆ ಕಿಸ್ ಮಾಡೋದು ಅಂತ ತಿಳಿಸಿಕೊಟ್ಟಳು. ಮದುವೆ ಆದ್ಮೇಲೆ ಅದಾಗಲೇ ಇಲ್ಲ ಒಂದು ವರ್ಷ. ನಂಗೆ ಅದೂ ಕೂಡ ಗೊತ್ತಿರಲಿಲ್ಲ. ಅದನ್ನೂ ಕೂಡ ನಂಗೆ ಅವಳೇ ಹೇಳಿಕೊಟ್ಟದ್ದು. ನಂತರ ಅವಳು ಪ್ರೆಗ್ನೆಂಟ್ ಆದಳು. ಇದೇ ನನ್ನ ಲೈಫ್ ಸ್ಟೋರಿ. ಕೇಳಿದ್ರೆ ನಕ್ಕುಬಿಡ್ತಾರೆ. ಆದರೆ ಕೇಳಲೇಬೇಕು. ನಂಬಿದ್ರೆ ನಂಬಿ ಬಿಟ್ಟರೆ ಬಿಡಿ' ಅಂತ ಜಗದೀಶ್ ಹೇಳಿದ್ದಾರೆ. ಇದಕ್ಕೆ ಸಾವಿರಾರು ಮಂದಿ ನಾನಾ ಬಗೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು, ನಿಮ್ಮ ಮರ್ಯಾದೆ ನೀವೇ ಹರಾಜು ಹಾಕೋ ಜೊತೆಗೆ ಹೆಂಡತಿ ಮರ್ಯಾದೆಯನ್ನೂ ಯಾಕೆ ಕಳೀತೀರಿ ಲಾಯರ್ ಸಾಹೇಬ್ರೇ ಅಂತ ಗೌರವಾನ್ವಿತವಾಗಿ ಪ್ರಶ್ನಿಸಿದ್ದಾರೆ. ಇನ್ನೊಂದಷ್ಟು ಮಂದಿ ಥರಾವರಿ ಅಶ್ಲೀಲ ಕಾಮೆಂಟ್ ಮಾಡಿದ್ದಾರೆ.
ಮಂಚದಲ್ಲಿನ ನಿವೇದಿತಾ ಗೌಡ ಹಾಟ್ ವಿಡಿಯೋ ವೈರಲ್: ಹಾಕಲು ಬಟ್ಟೆ ಇಲ್ಲ ಎಂದ ನಟಿಯ ಎದುರಿಗೆ ಇರೋದ್ಯಾರು?
ಹೀಗೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಲಾಯರ್ ಜಗದೀಶ್ ಇದೀಗ ಕಲರ್ಸ್ ಕನ್ನಡದ ಹೊಸ ರಿಯಾಲಿಟಿ ಶೋದಲ್ಲೂ ಭಾಗವಹಿಸುತ್ತಿದ್ದಾರೆ. ಗರ್ಲ್ಸ್ ವರ್ಸಸ್ ಬಾಯ್ಸ್ ಎಂಬ ಈ ಶೋದಲ್ಲೂ ಜಗದೀಶ್ ನೀಡುವ ಭರ್ಜರಿ ಮನರಂಜನೆ ಸವಿಯಲು ವೀಕ್ಷಕರು ಎದುರು ನೋಡುತ್ತಿದ್ದಾರೆ.
