'ಅಮೃತಧಾರೆ' ಧಾರಾವಾಹಿಯ ಪೂರ್ಣಿ ಮತ್ತು ದೀಪಿಕಾ ನಿಜಜೀವನದಲ್ಲಿ ಅಕ್ಕ-ತಂಗಿಯರು. ಲಾವಣ್ಯ ಮತ್ತು ದರ್ಶಿನಿ ಎಂಬ ನಿಜನಾಮಧಾರಿಗಳಾದ ಇವರು, ವೈರುಧ್ಯಮಯ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ದರ್ಶಿನಿ ನೃತ್ಯ ಸಂಯೋಜಕಿಯೂ ಹೌದು. ಲಾವಣ್ಯ ಪತಿ ಶಶಿ, ಧಾರಾವಾಹಿಯಲ್ಲಿ ಭೂಮಿಕಾ ಸಹೋದರನಾಗಿ ನಟಿಸುತ್ತಿದ್ದಾರೆ. ಜೋಡಿಯ ವಿವಾಹ, ಹನಿಮೂನ್ ಕನಸಿನ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

 ಒಂದೇ ಮನೆಯ ಸೊಸೆಯಂದಿರಾಗಿರುವವರು ಪೂರ್ಣಿ ಮತ್ತು ದೀಪಿಕಾ, ಅಕ್ಕ-ತಂಗಿ ಎನ್ನುವ ಸತ್ಯವೂ ತಿಳಿದಿದೆ. ಒಡಹುಟ್ಟಿದ್ದರೂ, ಅಣ್ಣ ತಮ್ಮಂದಿರ ಪತ್ನಿಯರಾಗಿದ್ದರೂ ಸೀರಿಯಲ್​ನಲ್ಲಿ ಭಿನ್ನ ಕ್ಯಾರೆಕ್ಟರ್​. ಒಬ್ಬಳು ಅತೀ ಒಳ್ಳೆಯವಳು, ಇನ್ನೊಬ್ಬಳು ಅಗತ್ಯಕ್ಕಿಂತ ಹೆಚ್ಚು ಕೆಟ್ಟವಳು ಅಂದ್ರೆ ವಿಲನ್​. ದೊಡ್ಡ ಸೊಸೆ ಪೂರ್ಣಿಗೆ ಇನ್ನಿಲ್ಲದ ಕಾಟ ಕೊಡುವುದು ಎಂದರೆ ದೀಪಿಕಾಗೆ ಇನ್ನಿಲ್ಲದ ಖುಷಿ. ಅದರಲ್ಲಿಯೂ ಪೂರ್ಣಿ ಅನಾಥೆ ಎನ್ನುವ ಕಾರಣಕ್ಕೆ, ಅವಳನ್ನು ಹೆಜ್ಜೆ ಹೆಜ್ಜೆಗೂ ಹಂಗಿಸಿ, ಟೀಕಿಸುತ್ತಿದ್ದ ದೀಪಿಕಾ, ಈಗ ಆಕೆ ತನ್ನ ಅಕ್ಕ ಎಂದು ಗೊತ್ತಾದ ಮೇಲೂ ಹಂಗಿಸುವುದನ್ನು ನಿಲ್ಲಿಸುತ್ತಿಲ್ಲ. ಅದೇ ಪೂರ್ಣಿ ತುಂಬಾ ಒಳ್ಳೆಯವಳು. ಎಲ್ಲವನ್ನೂ ಸಹಿಸಿಕೊಂಡು ಹೋಗುವವಳು. ಗಾಯಕ ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ‘ಛೂ ಮಂತರ್’ ಹಾಡಿಗೆ ಇದಾಗಲೇ ಹಲವಾರು ಮಂದಿ ಸೊಂಟ ಬಳುಕಿಸಿದ್ದು, ಇದೀಗ ಈ ಸಹೋದರಿಯೂ ಡಾನ್ಸ್​ ಮಾಡಿದ್ದಾರೆ. 

 ಅಷ್ಟಕ್ಕೂ ಪೂರ್ಣಿಯ ರಿಯಲ್​ ಹೆಸರು ಲಾವಣ್ಯ ಭಾರಧ್ವಾಜ್​ ಹಾಗೂ ದೀಪಿಕಾ ನಿಜವಾದ ಹೆಸರು ದರ್ಶಿನಿ ಡೆಲ್ಟಾ. ದರ್ಶಿನಿ ಕುರಿತು ಹೇಳುವುದಾದರೆ, ಇವರು ನಟಿಯಾಗೋ ಮೊದಲು ಮಾಡೆಲ್ (Model), ಜೊತೆಗೆ ಕೊರಿಯೋಗ್ರಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

ಹೊಸ ಅವತಾರದಲ್ಲಿ ಭೂಮಿಕಾ: ಸುಂಟರಗಾಳಿ ಸುಂಟರಗಾಳಿ ಹಾಡಿಗೆ ಸೊಂಟ ಬಳುಕಿಸಿದ ಅಮೃತಧಾರೆ ಚೆಲುವೆ

 ಪೂರ್ಣಿಯ ನಿಜವಾದ ಹೆಸರು ಲಾವಣ್ಯ. ಇವರ ರಿಯಲ್‌ ಪತಿಯ ಹೆಸರು ಶಶಿ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಶಶಿ ಅವರು ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾ ಸಹೋದರನ ಪಾತ್ರ ಮಾಡುತ್ತಿದ್ದಾರೆ. ರಿಯಾಲಿಟಿ ಷೋ ಒಂದರಲ್ಲಿ ಲಾವಣ್ಯ ಅವರ ಹುಟ್ಟಿನ ಬಗ್ಗೆ ಅಪ್ಪ ಹೇಳಿಕೊಂಡಿದ್ದರು. ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್‌ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು!

ಇದೇ ವೇಳೆ, ಶಶಿ-ಲಾವಣ್ಯ ಜೋಡಿ ತಮ್ಮ ಹಲವು ಪರ್ಸನಲ್‌ ವಿಷಯಗಳನ್ನು ಶೇರ್‌ ಮಾಡಿಕೊಂಡಿತ್ತು. ಮದುವೆ ಮತ್ತು ಫಸ್ಟ್​ನೈಟ್​ ಬಗ್ಗೆ ಶಶಿ ಅವರು ಮಾತನಾಡಿದ್ದರು. ಫಸ್ಟ್ ನೈಟ್‌ನಲ್ಲಿ ಈಕೆಯ ಕಸಿನ್ಸ್ ನನ್ನನ್ನು ಅಡ್ಡಗಟ್ಟಿ ಒಳಗೆ ಹೆಂಡತಿಯನ್ನ ಬಿಡಬೇಕೆಂದರೆ ಒಬ್ಬೊಬ್ಬರಿಗೆ 4 ಸಾವಿರ ಕೊಡಬೇಕು ಅಂತ ಕೇಳಿದ್ದರು, ಆಮೇಲೆ ಸೆಟಲ್‌ಮೆಂಟ್ ಮಾಡಿಕೊಂಡಿದ್ದರು. ನಾನು ಒಳಗೆ ಹೋದ್ಮೇಲೆ ಅಲ್ಲಿ ಬೆಡ್‌ ಬದಲು ಥರ್ಮೊಕಾಲ್ ಬಬಲ್ಸ್ ಹಾಕಿದ್ದರು. ಕೂತಾಗ ಬಬಲ್ಸ್ ಹಾರಿಬಿಡ್ತು. ಮಧ್ಯರಾತ್ರಿ 3 ಗಂಟೆವರೆಗೂ ಅದನ್ನೆಲ್ಲಾ ಕ್ಲೀನ್ ಮಾಡ್ತಿದ್ವಿ ಎಂದು ನೆನಪಿಸಿಕೊಂಡಿದ್ದರು. ಅದೇ ರೀತಿ ಹನಿಮೂನ್‌ಗೆ ಮಾಲ್ದೀವ್ಸ್‌ ಹೋಗುವ ಕನಸನ್ನು ಇನ್ನೂ ಪತಿ ನೆರವೇರಿಸಿಲ್ಲ ಎಂದು ಲಾವಣ್ಯ ವೇದಿಕೆಯ ಮೇಲೆ ಬೇಸರ ವ್ಯಕ್ತಪಡಿಸಿದ್ದರು.

ಗಂಡನ ಜೊತೆ ವರ್ಷದಲ್ಲಿ 10 ದಿನ ಇರೋದೇ ಕಷ್ಟವಾಗಿದೆ: ಸಂಸಾರದ ಸುಖ-ದುಃಖ ಬಿಚ್ಚಿಟ್ಟ ನಟಿ ಛಾಯಾ ಸಿಂಗ್​

Shrirastu Shubamastu serial actresses new instagram reels