ನಟಿ ಭೂಮಿಕಾ ರಮೇಶ್, 'ಲಕ್ಷ್ಮೀ ಬಾರಮ್ಮ' ಶೂಟಿಂಗ್ ವೇಳೆ ಕಣ್ಣಿನ ಸೋಂಕಿನಿಂದ ತೊಂದರೆ ಅನುಭವಿಸಿದರು. ರಕ್ತಸ್ರಾವವಾದಾಗ ಆಸ್ಪತ್ರೆಗೆ ದಾಖಲಾದರು. ವಿಶ್ರಾಂತಿಯ ನಂತರ ಸೀರಿಯಲ್‌ನಲ್ಲಿ ಕನ್ನಡಕ ಧರಿಸಿ ಕಾಣಿಸಿಕೊಂಡರು. ತೆಲುಗು ಸೀರಿಯಲ್‌ನಲ್ಲಿ ನಟಿಸಿದರೂ, ಕನ್ನಡವೇ ತನ್ನ ಮೊದಲ ಆದ್ಯತೆ ಎಂದು ಭೂಮಿಕಾ ಸ್ಪಷ್ಟಪಡಿಸಿದ್ದಾರೆ. ಸದ್ಯ ಅವರು ಕನ್ನಡ ಮತ್ತು ತೆಲುಗು ಸೀರಿಯಲ್ ಹಾಗೂ ಕನ್ನಡ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.

'ಲಕ್ಷ್ಮೀ ಬಾರಮ್ಮ ಶೂಟಿಂಗ್​ ವೇಳೆ ಕಣ್ಣಲ್ಲಿ ಉರಿ ಶುರುವಾಯ್ತು. ಐ ಇನ್​ಫೆಕ್ಷನ್​ ಆಗಿದೆ ಎಂದಷ್ಟೇ ಎಂದುಕೊಂಡಿದ್ದೆ. ಅದೇ ಸಮಯದಲ್ಲಿ ದೃಷ್ಟಿ ಬೊಟ್ಟು ಸೀರಿಯಲ್​ ಶುರುವಾಗುತ್ತಿತ್ತು. ಅದರ ಪ್ರಮೋಷನ್​ಗೆ ಎಂದು ಹೋದವಳಿಗೆ ಕಣ್ಣಲ್ಲಿ ಉರಿ ಶುರುವಾಯ್ತು. ಐ ಡ್ರಾಪ್ಸ್​ ಹಾಕಿಕೊಂಡು ಹತ್ತಿ ಹಾಕಿಕೊಂಡು ಮಲಗಿದ್ರೆ, ಹತ್ತಿಯೆಲ್ಲಾ ಕೆಂಪಗೆ ಆಗೋಯ್ತು. ಅದು ರಕ್ತ ಎಂದು ನನಗೆ ಗೊತ್ತೇ ಆಗಲಿಲ್ಲ. ಕಣ್ಣಿಗೆ ನೀರು ಹಾಕಿಕೊಂಡು ಬರೋಣ ಎಂದು ಹೋದಾಗಲೇ ಗೊತ್ತಾಯ್ತು ಕಣ್ಣಲ್ಲಿ ರಕ್ತ ಬರುತ್ತಿದೆ ಎಂದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು...'

- ಹೀಗೆಂದು ಶಾಕಿಂಗ್​ ಘಟನೆಯನ್ನು ರಿವೀಲ್​ ಮಾಡಿದ್ದಾರೆ ನಟಿ ಭೂಮಿಕಾ ರಮೇಶ್​. ಲಕ್ಷ್ಮೀ ಬಾರಮ್ಮ ಸೀರಿಯಲ್​ ಲಕ್ಷ್ಮೀ ಪಾತ್ರಧಾರಿಯಾಗಿರುವ ಭೂಮಿಕಾ ರಮೇಶ್ ಅವರು ಮಾಧ್ಯಮವೊಂದರಲ್ಲಿ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ರಿವೀಲ್​ ಮಾಡಿದ್ದಾರೆ. ನಡುವೆ ಒಂದಿಷ್ಟು ದಿನ ಸೀರಿಯಲ್​ನಲ್ಲಿ ಭೂಮಿಕಾ ಕಾಣಿಸಿಕೊಂಡಿರಲಿಲ್ಲ. ಆದ್ದರಿಂದ ನಟಿ, ಸೀರಿಯಲ್​ ಬಿಡುತ್ತಾರೆ ಎಂದೇ ಸುದ್ದಿಯಾಗಿತ್ತು. ಆಗ ಅವರು ತೆಲಗು ಸೀರಿಯಲ್​ನಲ್ಲಿ ಕಾಣಿಸಿಕೊಂಡಿದ್ದರು. ತೆಲಗುವಿಗಾಗಿ ಭೂಮಿಕಾ ಕನ್ನಡ ಸೀರಿಯಲ್​ ಬಿಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಅಸಲಿಗೆ ಒಂದಷ್ಟು ದಿನ ಸೀರಿಯಲ್​ನಲ್ಲಿ ಕಾಣಿಸಿಕೊಳ್ಳದೇ ಇರುವುದಕ್ಕೆ ಹಾಗೂ ವಾಪಸ್​ ಸೀರಿಯಲ್​ಗೆ ಬಂದ ಮೇಲೆ ಕನ್ನಡಕ ಹಾಕಿರುವುದಕ್ಕೆ ಕಾರಣವನ್ನು ತಿಳಿಸುತ್ತಾ ಭೂಮಿಕಾ ರಮೇಶ್​ ಅಂದು ನಡೆದ ಘಟನೆಯನ್ನು ಹೇಳಿದ್ದಾರೆ. ಅದೊಂದು ಭಯಾನಕ ಘಟನೆ. ವೈದ್ಯರು ಕೊನೆಯ ಪಕ್ಷ 10 ದಿನವಾದರೂ ಸ್ವಲ್ಪವೇ ಸ್ವಲ್ಪ ಲೈಟಿಂಗ್​ ಮುಂದೆಯೂ ಕಣ್ಣು ಒಡ್ಡಬಾರದು. ಬ್ಲಡ್​ ಲೀಕ್​ ಆಗುವ ಸಾಧ್ಯತೆ ಇದೆ ಎಂದರು. ಆ ಸಮಯದಲ್ಲಿ ಸೀರಿಯಲ್​ನಲ್ಲಿ ನಾನು ಸಾಯುವ ಸಂದರ್ಭವಿತ್ತು. ಆದ್ದರಿಂದ ಸ್ವಲ್ಪ ರಿಲೀಫ್​ ಸಿಕ್ಕಿತು. ಸಂಪೂರ್ಣ ವಿಶ್ರಾಂತಿ ಪಡೆದುಕೊಂಡಿದ್ದರಿಂದ ಸೀರಿಯಲ್​ನಲ್ಲಿ ಕಾಣಿಸಲಿಲ್ಲ. ಆದರೆ ವೀಕ್ಷಕರು ಅದನ್ನು ಬೇರೆಯದ್ದೇ ರೀತಿ ಅಂದುಕೊಂಡರು ಎಂದಿದ್ದಾರೆ.

ಭಾವಿ ಪತಿಯ ಬಗ್ಗೆ ಲಕ್ಷ್ಮೀ ಬಾರಮ್ಮ ನಟಿಯ ಕನಸು ಕೇಳಿ ಫ್ಯಾನ್ಸ್​ ಶಾಕ್​! ಈಗಿನ ಕಾಲದವ್ರು ಹೀಗೂ ಯೋಚಿಸ್ತಾರಾ?

ಇದೇ ವೇಳೆ ತೆಲಗುವಿನಲ್ಲಿಯೂ ಸಕ್ರಿಯವಾಗಿರುವ ನಟಿ ಕನ್ನಡಕ್ಕಿಂತಲೂ ಅಲ್ಲಿಯೇ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎಂದು ಕೆಲವರು ಕಮೆಂಟ್​ ಮಾಡುತ್ತಿದ್ದುದು ಇದೆ. ಅದಕ್ಕೂ ಉತ್ತರಿಸಿರುವ ಭೂಮಿಕಾ, ನಾನು ಕನ್ನಡದ ಹುಡುಗಿ. ಆರಂಭದಲ್ಲಿ ತೆಲಗು ರಿಯಾಲಿಟಿ ಷೋಗೆ ಹೋಗಿದ್ದೆ ಅಷ್ಟೇ. ಆದರೆ ಕನ್ನಡವೇ ನನ್ನ ಮೊದಲ ಆದ್ಯತೆ. ನಮ್ಮ ಬೇರು ನಾವು ಬಿಡಬಾರದು. ತೆಲಗುವಿನಲ್ಲಿ ಒಳ್ಳೆಯ ಅವಕಾಶ ಸಿಗುತ್ತಿದೆಯಾದರೂ ಕನ್ನಡವೇ ನನಗೆ ಸರ್ವಸ್ವ ಎಂದು ನಟಿ ಕನ್ನಡದ ಮೇಲಿನ ಪ್ರೀತಿಯನ್ನು ಹೇಳಿದ್ದಾರೆ. 

ಇನ್ನು ನಟಿ ಭೂಮಿಕಾ ಕುರಿತು ಹೇಳುವುದಾದರೆ, ಅವರು ಕನ್ನಡ ಸೀರಿಯಲ್, ತೆಲುಗು ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ಬ್ಯುಸಿ. ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಿನ ಈ ಪ್ರತಿಭಾವಂತ ನಟಿ ಭರತನಾಟ್ಯದಲ್ಲೂ ಎಕ್ಸ್‌ಪರ್ಟ್‌. 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಈಕೆ ಸದ್ಯ ಕೈತುಂಬ ಅವಕಾಶಗಳನ್ನು ಹಿಡಿದು ನಿಂತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭೂಮಿಕಾ ರಮೇಶ್ ಕಳೆದ ವರ್ಷದ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟಿಸಬೇಕು ಎಂಬುದು ಈಕೆಯ ಬಹುದಿನದ ಕನಸಾಗಿತ್ತು. ಆಕೆಯ ಕನಸು ಕೂಡಾ ಇದೀಗ ನನಸಾಗಿದೆ. ನಾಗರಾಜ್‌ ಎಂ. ಜಿ ಗೌಡ ನಿರ್ದೇಶನದ 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದಾರೆ ಭೂಮಿಕಾ ರಮೇಶ್. 

ಮಾತು ಬಾರದ ಅರ್ಚಕ ನನಗೆ ನಾಣ್ಯ ತೋರಿಸಿದ್ರು, ಕಾರಣ ತಿಳಿದು ಶಾಕ್​ ಆಯ್ತು; ಘಟನೆ ನೆನೆದ ಲಕ್ಷ್ಮೀ ಬಾರಮ್ಮ ನಟಿ