ಲಕ್ಷ್ಮೀ ನಿವಾಸ ಸೀರಿಯಲ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯನ್ನು ಸರ್ದಾರ್ ಸತ್ಯ ಹಾಗೂ ನಿರ್ಮಲಾ ಚೆನ್ನಪ್ಪ ನಿರ್ಮಾಣ ಮಾಡುತ್ತಿದ್ದಾರೆ, ಮತ್ತು ಇದು 500 ಎಪಿಸೋಡ್‌ಗಳನ್ನು ಪೂರೈಸಿದೆ.

ಚಿನ್ನುಮರಿ, ಮುದ್ದುಮರಿ ಹೆಸರು ಕಿರುತೆರೆಯಲ್ಲಿ ಎಷ್ಟು ಫೇಮಸ್‌ ಆಗಿದೆ ಎಂದರೆ, ನಿದ್ದೆಗಣ್ಣಿನಲ್ಲಿ ಇದು ಯಾವ ಸೀರಿಯಲ್‌ನ ಪಾತ್ರ ಎಂದರೆ ಲಕ್ಷ್ಮೀ ನಿವಾಸ ಎನ್ನುವಷ್ಟು. ಸದ್ಯದ ಮಟ್ಟಿಗೆ ಲಕ್ಷ್ಮೀ ನಿವಾಸ ಸೀರಿಯಲ್‌ ಕನ್ನಡದ ಅತ್ಯಂತ ಜನಪ್ರಿಯ ಸೀರಿಯಲ್‌ಗಳಲ್ಲಿ ಒಂದು. ಜಯಂತ್‌ ಪಾತ್ರದಲ್ಲಿ ನಟಿಸಿರುವ ದೀಪಕ್ ಸುಬ್ರಹ್ಮಣ್ಯ ಹಾಗೂ ಚಿನ್ನುಮರಿ 'ಜಾಹ್ನವಿ' ಪಾತ್ರದಲ್ಲಿ ನಟಿಸಿರುವ ಚಂದನಾ ಅನಂತಕೃಷ್ಣ ನಟನೆ ಅದೆಷ್ಟು ಮನೋಜ್ಞವಾಗಿದೆಯೆಂದರೆ, ಇತ್ತೀಚೆಗೆ ಈ ಸೀರಿಯಲ್‌ 500 ಎಪಿಸೋಡ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಜೀ ಕನ್ನಡದಲ್ಲಿ ಪ್ರಸಾರವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಈ ಧಾರವಾಹಿಯ ಬಗ್ಗೆ ಇನ್ನೂ ಗೊತ್ತಿಲ್ಲದ ಹಲವು ಅಂಶಗಳಿವೆ.

ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿರುವುದು ಕನ್ನಡದ ಪ್ರಸಿದ್ದ ನಟ-ನಟಿ ಜೋಡಿ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆ ದಿನಗಳು ಸಿನಿಮಾದಲ್ಲಿ ನಟಿಸಿದ್ದ ನಟನ ಪ್ರೊಡಕ್ಷನ್‌ ಹೌಸ್‌ ಈ ಸೀರಿಯಲ್‌ನ ನಿರ್ಮಾಣ ಮಾಡುತ್ತಿದೆ.

ಹೌದು, ಆ ದಿನಗಳು ಸಿನಿಮಾದಲ್ಲಿ ಸರ್ದಾರ್‌ ಪಾತ್ರದಿಂದ ಫೇಮಸ್‌ ಆಗಿದ್ದ ಸತ್ಯ, ನಂತರ ತಮ್ಮ ಹೆಸರ ಮುಂದೆ 'ಸರ್ದಾರ್‌' ಎಂದು ಸೇರಿಸಿಕೊಂಡರು. ಸರ್ದಾರ್‌ ಸತ್ಯ ಹಾಗೂ ಅವರ ಪತ್ನಿ ನಟಿ, ರಂಗಭೂಮಿ ಕಲಾವಿದೆ, ಬಿಗ್‌ಬಾಸ್‌ 8ರ ಸ್ಪರ್ಧಿ ನಿರ್ಮಲಾ ಚೆನ್ನಪ್ಪ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. 

ನಿರ್ಮಲ ಚೆನ್ನಪ್ಪ ಹಾಗೂ ಸರ್ದಾರ್ ಸತ್ಯ ನಿರ್ಮಿಸುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿ ಇಂದು ಕನ್ನಡದ ಅತಿ ಹೆಚ್ಚು ಟಿಆರ್‌ಪಿ ಹೊಂದಿರುವ ಧಾರಾವಾಹಿಗಳಲ್ಲಿ ಒಂದಾಗಿದೆ. ಅದಲ್ಲದೆ 500 ಎಪಿಸೋಡ್‌ಗಳನ್ನು ಗಳನ್ನು ಪೂರೈಸಿದ ಹೆಗ್ಗಳಿಕೆ ಕೂಡ ಈ ಧಾರವಾಹಿಗೆ ಇದೆ. ಇವರಿಬ್ಬರ ಸಾಯಿ ನಿರ್ಮಲಾ ಪ್ರೊಡಕ್ಷನ್‌, ಲಕ್ಷ್ಮಿ ನಿವಾಸ ಧಾರವಾಹಿಯ ನಿರ್ಮಾಣ ಮಾಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಜೀ ಕನ್ನಡ ಕುಟುಂಬ ಅವಾರ್ಡ್ಸ್‌ನಲ್ಲಿ ಲಕ್ಷ್ಮೀ ನಿವಾಸ ಬೆಸ್ಟ್‌ ಧಾರವಾಹಿ ಪ್ರಶಸ್ತಿ ಪಡೆದುಕೊಂಡಾಗ ಸರ್ದಾರ್‌ ಸತ್ಯ ಹಾಗೂ ನಿರ್ಮಲಾ ಚೆನ್ನಪ್ಪ ವೇದಿಕೆ ಏರಿ ಪ್ರಶಸ್ತಿ ಪಡೆದುಕೊಂಡಿದ್ದರು.

ಇವರ ಸಾಯಿ ನಿರ್ಮಲಾ ಪ್ರೊಡಕ್ಷನ್‌ ಈಗಾಗಲೇ ಪದ್ಮಾವತಿ ಸೀರಿಯಲ್‌, ಕನ್ನಡ ಕೋಗಿಲೆ ಶೋಗಳನ್ನು ನಡೆಸಿಕೊಟ್ಟಿವೆ. ಇನ್ನು ನಿರ್ಮಲಾ ಚೆನ್ನಪ್ಪ ಅವರು ಫಿಕ್ಷನ್‌ ಹಾಗೂ ನಾನ್‌ ಫಿಕ್ಷನ್‌ ಎರಡೂ ವರ್ಗಗಳಲ್ಲಿ ನಿರ್ದೇಶನ ಮಾಡಿದ್ದಾರೆ. ಫಿಕ್ಷನ್‌ ಹಾಗೂ ನಾನ್‌ ಫಿಕ್ಷನ್‌ ಎರಡರಲ್ಲೂ ನಿರ್ದೇಶನ ಮಾಡಿ ಮೊದಲ ಮಹಿಳಾ ನಿರ್ದೇಶಕಿ ಅನ್ನೋ ಗೌರವ ಪಡೆದಿದ್ದಾರೆ.
ಇನ್ನು ಇವರ ಲಕ್ಷ್ಮಿ ನಿವಾಸ ಧಾರಾವಾಹಿ ಭಾರತದ ಟಿವಿ ಇತಿಹಾಸದಲ್ಲಿ 250 episode ಗಳನ್ನು 1 ಘಂಟೆ ಶೋ ಆಗಿ ಪೂರೈಸಿ ಮೈಲಿಗಲ್ಲು ಸೃಷ್ಟಿಸಿದೆ. ಹಾಗೆಯೇ ಇವರ ಕಾರ್ಯಕ್ರಮ ಹಲವಾರು ಭಾಷೆಗಳಿಗೆ ರೀಮೇಕ್ ಆಗಿವೆ ಎನ್ನುವುದು ವಿಶೇಷವಾಗಿದೆ.

ಜಾನು ತವರಿನಲ್ಲಿಯೂ ಜಯಂತ್‌ನ ಕಿತಾಪತಿ; ಚಿನ್ನುಮರಿಗೆ ವಿಷ್ಯ ಗೊತ್ತಾದ್ರೆ ಉಳಿಗಾಲವೇ ಇಲ್ಲ!

ನಿರ್ಮಲಾ ಚೆನ್ನಪ್ಪ ಬಿಗ್‌ಬಾಸ್‌-8ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು, 2017ರಿಂದ 2019ರವರೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಿದ್ದ ಪದ್ಮಾವತಿ ಸೀರಿಯಲ್‌ಗೆ ನಿರ್ದೇಶಕಿಯೂ ಆಗಿದ್ದರು. ಕಳೆದ ಬಿಗ್‌ಬಾಸ್‌ನಲ್ಲಿ ರನ್ನರ್‌ಅಪ್‌ ಆಗಿದ್ದ ತ್ರಿವಿಕ್ರಮ್‌ ಈ ಸೀರಿಯಲ್‌ನಲ್ಲಿ ಹೀರೋ ಪಾತ್ರ ಮಾಡಿದ್ದರು.

ಚಿನ್ನುಮರಿಯ ಒಂದೇ ಅವಾಜ್‌ಗೆ ಥಂಡಾ ಹೊಡೆದ ಸೈಕೋ ಜಯಂತ್; ಈಗ ಮಜಾ ಬರ್ತಿದೆ ಎಂದ ವೀಕ್ಷಕರು!