Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್‌ನ ಅಸಲಿ ಮುಖ ಬಯಲಾಗುತ್ತಿದ್ದಂತೆ, ಜಾನು ಆತನಿಗೆ ತಿರುಗೇಟು ನೀಡಿದ್ದಾಳೆ. ಚಿನ್ನುಮರಿಯ ಮಾತಿಗೆ ಜಯಂತ್ ಬೆಚ್ಚಿಬಿದ್ದಿದ್ದು, ವೀಕ್ಷಕರಿಗೆ ಖುಷಿ ನೀಡಿದೆ.
ಲಕ್ಷ್ಮೀ ನಿವಾಸ ಧಾರಾವಾಹಿಯ ಸೈಕೋ ಕ್ಯಾರೆಕ್ಟರ್ ಜಯಂತ್ ಅಸಲಿ ಮುಖ ತಿಳಿಯುತ್ತಲೇ ಜಾನು, ಅಜ್ಜಿಯನ್ನು ತವರುಮನೆಗೆ ಕಳುಹಿಸಿದ್ದಾಳೆ. ಇಷ್ಟು ದಿನ ಸುಳ್ಳಿಗೆ ಮತ್ತೊಂದು ಸುಳ್ಳು ಎಂಬಂತೆ ಮಾತನಾಡುತ್ತಿದ್ದಂತೆ ಜಯಂತ್ ಕಟ್ಟಿದ್ದ ನಾಟಕದ ಗೋಪುರ ಕಳಚಿ ಬಿದ್ದಿದೆ. ಇಷ್ಟು ದಿನ ಪೆದ್ದಿ ಅಂತ ಕರೆಸಿಕೊಳ್ಳುತ್ತಿದ್ದ ಜಾನು ಇದೀಗ ದುರ್ಗಿಯ ಅವತಾರ ತಾಳಿದ್ದು, ಸಮಯ ಸಿಕ್ಕಾಗೆಲ್ಲಾ ಗಂಡನಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾಳೆ. ಒಂದು ವೇಳೆ ಈ ರೀತಿ ಕೆಟ್ಟದಾಗಿ ಜಯಂತ್‌ನ ಮುಂದೆ ಮಾತಾಡಿದ್ರೆ ಅವರ ಪ್ರಾಣವನ್ನು ತೆಗೆದುಕೊಳ್ಳುತ್ತಿದ್ದನು. ಪತ್ನಿ ಚಿನ್ನುಮರಿ ಎಷ್ಟೇ ಬೈದರೂ, ಕೋಪ ಮಾಡಿಕೊಂಡರು ಜಾನು ಮೇಲಿನ ಪ್ರೀತಿಯಿಂದಾಗಿ ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದಾನೆ. ಇದೀಗ ಚಿನ್ನುಮರಿ ಹಾಕಿದ ಒಂದೇ ಅವಾಜ್‌ಗೆ ಜಯಂತ್ ಫುಲ್ ಥಂಡಾ ಹೊಡೆದಿದ್ದಾನೆ. ಈ ಸೀನ್ ನೋಡಿದ ವೀಕ್ಷಕರು ಈಗ ಮಜಾ ಬರ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಗಂಡನಿಂದ ಅಜ್ಜಿ ಜೀವಕ್ಕೆ ಅಪಾಯವಿರೋ ವಿಷಯವನ್ನು ಅರಿತ ಜಾನು, ತಂದೆ ಶ್ರೀನಿವಾಸ್ ಗೆ ಕರೆ ಮಾಡಿದ್ದಾಳೆ. ಕುಟುಂಬದ ಸದಸ್ಯರೊಂದಿಗೆ ಇದ್ರೆ ಅಜ್ಜಿ ಬೇಗ ಗುಣಮುಖವಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಹಾಗಾಗಿ ಅಜ್ಜಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾಳೆ. ಮಗಳ ಮಾತಿನ ಮೇಲೆ ಅನುಮಾನ ಬಂದರೂ, ತಾಯಿಯನ್ನು ಶ್ರೀನಿವಾಸ್ ಮನೆಗೆ ಕರೆದುಕೊಂಡು ಹೋಗಿದ್ದಾನೆ.
ಚಿನ್ನುಮರಿ ಅವಾಜ್!
ಅಜ್ಜಿಯನ್ನು ಕಳುಹಿಸಿದ್ದಕ್ಕೆ ಜಯಂತ್‌ಗೆ ಒಂದು ರೀತಿಯಲ್ಲಿ ಭಯ ಶುರುವಾಗಿದ್ರೆ, ಮತ್ತೊಂದೆಡೆ ತಂದೆ ಮುಂದೆ ಯಾವ ವಿಷಯವನ್ನು ಹೆಂಡತಿ ಹೇಳಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾನೆ. ಆದರೂ ಅಜ್ಜಿ ಹೋಗಿದ್ದಕ್ಕೆ ತನಗೆ ಬೇಸರವಾಗಿರುವ ರೀತಿಯಲ್ಲಿ ಜಾನು ಮುಂದೆ ಜಯಂತ್ ನಾಟಕ ಮಾಡಿದ್ದಾನೆ. ಆದ್ರೆ ಜಾನು ಮೊದಲಿನ ಪೆದ್ದಿ ಅಲ್ಲ ಎಂಬುದನ್ನು ಮರೆತಿರುವ ಜಯಂತ್ ಬೇಸರ ಹೊರ ಹಾಕಿದ್ದನು. ಇದಕ್ಕೆ ಕೋಪಗೊಂಡ ಜಾನು, ನಿಮ್ಮ ಪ್ಲಾನ್ ಎಲ್ಲಾ ಫೇಲ್ ಆಯ್ತು ಅಂತ ಬೇಸರ ಆಯ್ತಾ ಎಂದು ಪ್ರಶ್ನೆ ಮಾಡಿದ್ದಾಳೆ. ನನ್ನಿಂದ ಅಜ್ಜಿಗೆ ಹೀಗೆ ಆಯ್ತು ಅಲ್ಲವಾ ಎಂಬ ಬೇಸರ ನನಗಿದೆ. ಆಗಿದ್ದೆಲ್ಲಾ ಆಯ್ತು. ಮರೆತು ಬಿಡು ಎಂದು ಚಿನ್ನುಮರಿಗೆ ಕೇಳಿಕೊಂಡಿದ್ದಾನೆ ಜಯಂತ್.
ಇದನ್ನೂ ಓದಿ: ಕೊನೆಗೂ ಸಿಕ್ತು ಸೈಕೋ ಜಯಂತ್‌ನ ಜುಟ್ಟು; ಪ್ಲೀಸ್ ಡಮ್ಮಿ ಕ್ಯಾರೆಕ್ಟರ್ ಮಾಡ್ಬೇಡಿ ಫ್ಯಾನ್ಸ್ ಡಿಮ್ಯಾಂಡ್
ಇದಕ್ಕೆ ನಾನು ಬದುಕಿರೋದು ನನ್ನ ಕುಟುಂಬಸ್ಥರಿಗಾಗು ಮಾತ್ರ ಅಂತ ಜಾನು ಹೇಳಿದ್ದಕ್ಕೆ ಸಿಟ್ಟಾದ ಜಯಂತ್, ಹಾಗಾದ್ರೆ ನನ್ನ ಮೇಲೆ ನಿಮಗೆ ಪ್ರೀತಿ ಇಲ್ಲವೇ ಎಂದು ಕೇಳುತ್ತಾನೆ. ನೀವು ಹೀಗೆ ಮಾಡುತ್ತಿದ್ದರೆ ಮನೆಯವರೆಲ್ಲರನ್ನೂ ಕರೆಸಿ, ಎಲ್ಲಾ ವಿಷಯ ಹೇಳಿ ನಿಮ್ಮನ್ನು ಬಿಟ್ಟು ಹೊರಟು ಹೋಗುತ್ತೇನೆ ಎಂದು ಜಾನು ಖಡಕ್ ಆಗಿ ಹೇಳಿದ್ದಾನೆ. ತನ್ನನ್ನು ಬಿಟ್ಟು ಹೋಗ್ತೀನಿ ಅಂತ ಹೇಳುತ್ತಿದ್ದಂತೆ ಜಯಂತ್ ಫುಲ್ ಥಂಡಾ ಹೊಡೆದಿದ್ದಾನೆ. ಇನ್ನು ಹೆಚ್ಚು ಮಾತಾಡಿದ್ರೆ ಚಿನ್ನುಮರಿ ಕೋಪ ಹೆಚ್ಚಾಗುತ್ತೆ ಎಂದು ಜಯಂತ್ ಸುಮ್ಮನಾಗಿದ್ದಾನೆ.
ಅಜ್ಜಿಗೆ ಬಂದಿದ್ದಕ್ಕೆ ಲೆಕ್ಕ ಹಾಕಿದ ಸಂತೋಷ್ ಮತ್ತು ಹರೀಶ್
ಅಜ್ಜಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ತಿಂಗಳ ಖರ್ಚು ಹೆಚ್ಚಾಗುತ್ತೆ ಎಂದು ಸಂತೋಷ್ ಲೆಕ್ಕ ಹಾಕುತ್ತಿದ್ದೇನೆ. ಅಜ್ಜಿಯ ಔಷಧಿ, ಚಿಕಿತ್ಸೆ ಅಂತ ಹೆಚ್ಚು ಹಣ ಕೇಳಿದ್ರೆ ನಾನು ಕೊಡಲ್ಲ. ನೀನು ಸಹ ಕೊಡಬೇಡ ಎಂದು ತಮ್ಮ ಹರೀಶ್‌ಗೆ ಸಂತೋಷ್ ಹೇಳಿದ್ದಾನೆ. ಮತ್ತೊಂದೆಡೆ ಹರೀಶ್ ಹೆಂಡತಿ ಸಿಂಚನಾ ಸಹ ಅಜ್ಜಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಕೋಪಗೊಂಡಿದ್ದಾಳೆ.
ಇದನ್ನೂ ಓದಿ: ಹುಚ್ಚಿಯಾಗಿ ಜಯಂತ್‌ನ ಬಂಗಾರದ ಪಂಜರದಿಂದ ಹೊರ ಬಂದ ಜಾನು; ವಿಶ್ವನ ಬಳಿ ಹೋಗ್ತಾಳಾ ಚಿನ್ನುಮರಿ?
