Lakshmi Nivasa Serial: ಜಾನು ತವರಿನಲ್ಲಿಯೂ ಜಯಂತ್ ತನ್ನ ಕಿತಾಪತಿ ಮುಂದುವರೆಸಿದ್ದಾನೆ. ಮತ್ತೊಂದೆಡೆ ವಿಶ್ವ ಜಾನು ಭೇಟಿಗೆ ಹೊರಟಿದ್ದು, ತನು ಹಿಂಬಾಲಿಸುತ್ತಿದ್ದಾಳೆ.
Psycho Jayanth: ಗಂಡ ಜಯಂತ್‌ನಿಂದ ಅಜ್ಜಿ ಜೀವಕ್ಕೆ ಅಪಾಯವಿದೆ ಎಂದು ಅರಿತ ಜಾಹ್ನವಿ ಉಪಾಯವಾಗಿ ತಂದೆಯನ್ನು ಕರೆಸಿಕೊಂಡಿದ್ದಳು. ನಂತರ ತಂದೆಗೆ ಅನುಮಾನ ಬರದಂತೆ ಅಜ್ಜಿಯನ್ನು ತವರಿಗೆ ಕಳುಹಿಸಿದ್ದಳು. ಆದ್ರೆ ತನ್ನ ರಹಸ್ಯ ತಿಳಿದಿರುವ ಅಜ್ಜಿ, ಪ್ರಜ್ಞೆ ಬಂದ ಕೂಡಲೇ ವಿಷಯವನ್ನು ಎಲ್ಲರಿಗೂ ಹೇಳ್ತಾಳೆ ಅನ್ನೋ ಆತಂಕ ಜಯಂತ್‌ನಲ್ಲಿದೆ. ಅಜ್ಜಿ ಹೋದ ದಿನದಿಂದಲೂ ಜಯಂತ್ ಚಡಪಡಿಸುತ್ತಿದ್ದಾನೆ. ಹಾಗಾಗಿ ಅಜ್ಜಿ ಮೇಲೆ ಕಣ್ಣಿಡಲು ಜಯಂತ್ ಮತ್ತೆ ಹಳೆ ಚಾಳಿಯನ್ನು ಮುಂದುವರಿಸಿದ್ದಾನೆ. ಜಾನು ತವರಿಗೆ ಬಂದಿರುವ ಜಯಂತ್, ಅಜ್ಜಿ ವಿಶ್ರಾಂತಿ ಪಡೆಯುತ್ತಿರುವ ಕೋಣೆಯಲ್ಲಿ ಕ್ಯಾಮೆರಾ ಇರಿಸಿದ್ದಾನೆ.
ಹೌದು, ಅತ್ತೆ-ಮಾವನ ಮನೆಗೆ ಬಂದಿರುವ ಜಯಂತ್, ಇಷ್ಟು ದಿನ ಅಜ್ಜಿ ಮನೆಯಲ್ಲಿಯೇ ಇದ್ರು. ಪ್ರತಿದಿನ ಅವರನ್ನು ನೋಡುತ್ತಿದೆ. ಈಗ ಅವರ ನೆನಪಾಯ್ತು. ಹಾಗಾಗಿ ನೋಡಲು ಬಂದೆ. ಇದಕ್ಕೆ ನಿಮ್ಮಿಂದ ಯಾವುದೇ ಅಭ್ಯಂತರ ಇಲ್ಲವಲ್ಲಾ ಎಂದು ಜಯಂತ್ ಮತ್ತೆ ನಾಟಕ ಆಡಿದ್ದಾನೆ. ಜಯಂತ್‌ನ ಅಸಲಿ ಮುಖ ತಿಳಿಯದ ಶ್ರೀನಿವಾಸ್ ಮತ್ತು ಲಕ್ಷ್ಮೀ, ಸಂಬಂಧಗಳಿಗೆ ಬೆಲೆ ಕೊಡುತ್ತಿರೋದನ್ನು ಕಂಡು ಖುಷಿಯಾಗುತ್ತೆ ಎಂದು ಹೇಳಿದ್ದಾರೆ. ಈ ವೇಳೆ ಆಸ್ಪತ್ರೆಯಿಂದ ತಂದಿರುವ ರಿಪೋರ್ಟ್ ತೋರಿಸುತ್ತೀರಾ ಎಂದು ಜಯಂತ್ ಕೇಳಿದ್ದಾನೆ.
ಶ್ರೀನಿವಾಸ್ ರಿಪೋರ್ಟ್ ತರಲು ಹೋಗುತ್ತಿದ್ದಂತೆ ಅಜ್ಜಿ ಮಲಗಿದ್ದ ಕೋಣೆಯಲ್ಲಿ ಫ್ಲವರ್ ಪಾಟ್‌ನಲ್ಲಿ ರಹಸ್ಯವಾಗಿ ಕ್ಯಾಮೆರಾ ಇರಿಸಿದ್ದಾನೆ. ಇನ್ಮುಂದೆ ನನ್ನ ಕಣ್ಗಾವಲಿನಲ್ಲಿಯೇ ನೀವು ಇರುತ್ತೀರಿ ಎಂದು ಜಯಂತ್ ನಕ್ಕಿದ್ದಾನೆ. ಈ ಪ್ರೋಮೋ ನೋಡಿದ ನೆಟ್ಟಿಗರು, ಜಯಂತ್ ಸೈಕೋ ಮಾತ್ರವಲ್ಲ ಮೆಂಟಲ್ ಆಗಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ತ್ರಿಕಾಲಜ್ಞಾನಿಗಳ ಭವಿಷ್ಯ: ಜಯಂತ್, ಸಿದ್ದೇಗೌಡ್ರಿಗೆ ಶುರುವಾಯ್ತು ನಡುಕ; ಇತ್ತ ಭಾವನಾ, ವೀಣಾ ಫುಲ್ ಹ್ಯಾಪಿ ಹ್ಯಾಪಿ!
ಇದು ನಿಜಕ್ಕೂ ಜಾಸ್ತಿ ಆಯ್ತು.....ಜಯಂತ್, ನೋಡೋ ವೀಕ್ಷಕರಿಗೆ ಯಾವ್ ಯಾವ್ ರೀತಿ ಮಾಡಬೋದು ಎಂದು ನಿರ್ದೇಶಕರು ಐಡಿಯಾ ಚೆನ್ನಾಗಿ ತೋರಿಸುತ್ತಿದ್ದಾರೆ. ಪ್ರತಿಯೊಬ್ಬರು ಅವರ ಅವರ ಫ್ಯಾಮಿಲಿಗಳಲ್ಲಿ ಈ ರೀತಿ ಕ್ಯಾಮೆರಾ ಹಾಕಬಹುದು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಜಾನು ಭೇಟಿಗೆ ಬಂದ ವಿಶ್ವ
ಮತ್ತೊಂದೆಡೆ ಗೆಳತಿ ಜಾನು ಭೇಟಿಗೆ ವಿಶ್ವ ಹೊರಟಿದ್ದಾನೆ. ಆಸ್ಪತ್ರೆಯಲ್ಲಿ ಜಾನು ಕಣ್ಣೀರು ನೋಡಿ ವಿಶ್ವನ ಹೃದಯ ಕರಗಿತ್ತು. ಇನ್ನು ಸ್ವಲ್ಪ ಮಾತಾಡೋಣ ಅಂದ್ರೆ ಜಯಂತ್ ಬಂದಿದ್ದನು. ಹಾಗಾಗಿ ವಿಶ್ವ ಅಲ್ಲಿಂದ ಹೊರ ಬಂದಿದ್ದನು. ಇದೀಗ ಜಾನುನ ಭೇಟಿಯಾಗಿ ಏನು ಮಾತನಾಡಬೇಕು ಅನ್ನೋದನ್ನು ಸಹ ವಿಶ್ವ ಪ್ರಾಕ್ಟಿಸ್ ಮಾಡಿದ್ದಾನೆ. ಇತ್ತ ವಿಶ್ವ ಎಲ್ಲಿಗೆ ಹೊರಟಿದ್ದಾಳೆ ಎಂದು ತಿಳಿದುಕೊಳ್ಳಲು ತನು ಫಾಲೋ ಮಾಡುತ್ತಿದ್ದಾಳೆ. ತನು ತನ್ನನ್ನು ಹಿಂಬಾಲಿಸುತ್ತಿರೋ ವಿಷಯ ವಿಶ್ವನಿಗೆ ಗೊತ್ತಿಲ್ಲ. ಮತ್ತೊಂದೆಡೆ ಜಾನು ಸಹ ಮನೆಯಿಂದ ಹೊರಗೆ ಬಂದಿದ್ದಾಳೆ. ಇಷ್ಟು ದಿನ ವಿಶ್ವನ ಮಾಜಿ ಪ್ರೇಯಸಿಯನ್ನು ನೋಡಬೇಕೆಂದು ಕಾಯುತ್ತಿರೋ ತನುಗೆ ಜಾನು ಯಾರು ಅಂತ ಗೊತ್ತಾಗುತ್ತಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಯಲಿದೆ.
ಇದನ್ನೂ ಓದಿ: ಚಿನ್ನುಮರಿಯ ಒಂದೇ ಅವಾಜ್‌ಗೆ ಥಂಡಾ ಹೊಡೆದ ಸೈಕೋ ಜಯಂತ್; ಈಗ ಮಜಾ ಬರ್ತಿದೆ ಎಂದ ವೀಕ್ಷಕರು!
