'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಜಾನು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದಾಳೆ. ನರಸಿಂಹಯ್ಯನ ಪ್ರಾಣ ಉಳಿಸಿದ್ದಾಳೆ. ಆಕೆ ಕುಂದಾಪುರದ ಚಂದನಾ ಎಂದು ತಿಳಿದು, ನರಸಿಂಹಯ್ಯ ಆಕೆಗೆ ತಮ್ಮ ಮನೆಯಲ್ಲಿ ಕೆಲಸ ಮಾಡಲು ಆಹ್ವಾನಿಸಿದ್ದಾರೆ. ವಿಶ್ವನಿಗೆ ಜಾನು ಕಾಲೇಜಿನಲ್ಲಿ ಪ್ರಿಯತಮೆಯಾಗಿದ್ದಳು. ಸದ್ಯಕ್ಕೆ ಜಾನು ತನ್ನ ಗಂಡ ಜಯಂತ್‌ನಿಂದ ದೂರವಿರಲು ಬಯಸುತ್ತಾಳೆ. ವಿಶ್ವ ಮತ್ತು ಜಾನು ಮುಖಾಮುಖಿಯಾಗುವ ಸಾಧ್ಯತೆ ಇದೆ. ಜಯಂತ್ ಸೈಕೋ ಆಗಿದ್ದು, ಪ್ರೀತಿಯಲ್ಲಿ ಕಟ್ಟಿಹಾಕುತ್ತಾನೆ. ವಿಶ್ವ ಮತ್ತು ಜಾನು ಒಂದಾಗಬೇಕೆಂದು ವೀಕ್ಷಕರು ಬಯಸುತ್ತಿದ್ದಾರೆ.

ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಾನು ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದರೂ ಕೂಡ ಬದುಕಿಬಂದಿದ್ದಾಳೆ. ಅಷ್ಟೇ ಅಲ್ಲದೆ ಇನ್ನೇನು ಅಪಘಾತ ಆಗಬೇಕಿದ್ದ ನರಸಿಂಹಯ್ಯನನ್ನು ಅವಳು ಬಚಾವ್‌ ಮಾಡಿದ್ದಾಳೆ. ಈಗ ಅವಳು ನರಸಿಂಹಯ್ಯ ಮನೆ ಸೇರುವ ಟೈಮ್‌ ಬಂದಿದೆ. 

ವಿಶ್ವನ ಮನೆಗೆ ಜಾನು ಬಂದ್ರೆ ಏನಾಗಬಹುದು?
ತನ್ನ ಪ್ರಾಣ ಕಾಪಾಡಿದಳು ಅಂತ ಜಾನುಗೆ ನರಸಿಂಹ ಹಣ ಕೊಡಲು ಮುಂದಾಗುತ್ತಾನೆ. ಆಗ ಅವಳು “ನನಗೆ ಹಣ ಬೇಡ” ಎನ್ನುತ್ತಾಳೆ. “ನಾನು ಚಂದನಾ, ಕುಂದಾಪುರದವಳು, ಅಪ್ಪ-ಅಮ್ಮ ಇಲ್ಲ ಅಂತ” ಜಾನು ಹೇಳುತ್ತಾಳೆ. ಆಗ ನರಸಿಂಹಯ್ಯ “ನನ್ನ ಮನೆಗೆ ಬಾ. ಕೆಲಸ ಮಾಡಿಕೊಂಡಿರು” ಎಂದು ಹೇಳುತ್ತಾನೆ. ಇದಕ್ಕೆ ಜಾನು ಒಪ್ಪಿಗೆ ಕೊಡುತ್ತಾಳೆ. ತಾನು ಕಾಲೇಜಿನಲ್ಲಿದ್ದಾಗ ಪ್ರೀತಿಸಿದ್ದ ಜಾನು ಮದುವೆಯಾಗಿದ್ದರೂ ಕೂಡ ವಿಶ್ವನಿಗೆ ಮಾತ್ರ ಅವಳದ್ದೇ ನೆನಪು. ಈಗ ವಿಶ್ವನ ಮನೆಗೆ ಜಾನು ಬಂದ್ರೆ ಏನಾಗಬಹುದು?

ನರಸಿಂಹಯ್ಯನ ಪ್ರಾಣ ಉಳಿಸಿ ವಿಶ್ವನ ಮನೆಗೆ ಜಾನು ಎಂಟ್ರಿ? ಬಯಲಾಗುತ್ತಾ ಒನ್ ಸೈಡ್ ಲವ್‌ಸ್ಟೋರಿ?

ಗಂಡನ ಬಳಿ ಹೋಗಲು ಜಾನುಗೆ ಇಷ್ಟ ಇಲ್ಲ! 
ವಿಶ್ವನ ಬಳಿ ಜಾನು ಎಲ್ಲ ವಿಷಯವನ್ನು ಹೇಳಿಕೊಳ್ಳಬಹುದು. ಮತ್ತೆ ಅವಳು ನಾರ್ಮಲ್‌ ಸ್ಥಿತಿಗೆ ಬರಲೂಬಹುದು. ಜಾನುಗೆ ಮತ್ತೆ ಗಂಡ ಜಯಂತ್‌ ಬಳಿ ಹೋಗಲು ಇಷ್ಟ ಇಲ್ಲ. ನನ್ನ ಸಾವಿನ ವಿಷಯ ತಿಳಿದು ಮನೆಯವರೆಲ್ಲ ಹೇಗಿದ್ದಾರೋ ಅಂತ ಅವಳು ಅಷ್ಟಾಗಿ ಯೋಚನೆ ಮಾಡಿದಂತಿಲ್ಲ. 

ವಿಶ್ವ ಹಾಗೂ ಜಾನು ಮುಖಾಮುಖಿ? 
ಜಾನುಗೆ ಏನಾಗಿದೆ? ಅವಳು ಯಾಕೆ ಫೋನ್‌ ರಿಸೀವ್‌ ಮಾಡ್ತಿಲ್ಲ ಅಂತ ವಿಶ್ವ ತಲೆಕೆಡಿಸಿಕೊಂಡಿದ್ದಾನೆ. ಚೆನ್ನೈಗೆ ಹೋಗಿರೋ ಅಪ್ಪನ ಜೊತೆ ಜಾನು ಕೂಡ ಮನೆಗೆ ಬರುತ್ತಾಳೆ ಅಂತ ಅವನಿಗೆ ಕಲ್ಪನೆ ಕೂಡ ಇರೋದಿಲ್ಲ. ವಿಶ್ವ ಹಾಗೂ ಜಾನು ಮುಖಾಮುಖಿಯಾದ್ರೆ ಏನಾಗಬಹುದು ಎಂದು ವೀಕ್ಷಕರಲ್ಲಿ ಕುತೂಹಲ ಜಾಸ್ತಿ ಆಗಿದೆ. ಆದರೆ ಇವರಿಬ್ಬರು ಮದುವೆ ಆಗುವ ಸಾಧ್ಯತೆ ಜಾಸ್ತಿ ಇದೆ.

ತಂಗಿಗಾಗಿ ಕಣ್ಣೀರು ಹಾಕ್ತಿದ್ದ ಜಿಪುಣ ಗಂಡ ಸಂತೋಷ್‌ಗೆ ಮಾತಿನಲ್ಲಿಯೇ ತಿವಿದ ವೀಣಾ!

ಪ್ರೀತಿಯಲ್ಲಿ ಕಟ್ಟಿಹಾಕುವ ಜಯಂತ್!‌ 
ಜಯಂತ್‌ ಸೈಕೋ. ತಾನು ಪ್ರೀತಿಸಿದವರನ್ನು ಕಳೆದುಕೊಳ್ಳಬಾರದು ಎಂದು ಬೇಲಿ ಹಾಕಿ ಇಟ್ಟುಕೊಳ್ತಾನೆ, ಪ್ರೀತಿಯಲ್ಲಿ ಕಟ್ಟಿಹಾಕ್ತಾನೆ. ಆರಂಭದಲ್ಲಿ ಜಾನುಗೆ ಇದು ಅರ್ಥ ಆಗಲಿಲ್ಲ. ಈಗ ಅವಳು ತನ್ನ ಗಂಡ ತನ್ನ ಸಲುವಾಗಿ ಯಾರನ್ನು ಬೇಕಿದ್ರೂ ಕೊಲ್ಲೋಕೆ ರೆಡಿ ಆಗ್ತಾನೆ ಎನ್ನೋದು ಅರ್ಥ ಮಾಡಿಕೊಂಡಿದ್ದಾಳೆ. ಜಯಂತ್‌ ಸರಿ ಹೋಗೋದು ಕಷ್ಟ ಇದೆ. ಇದಕ್ಕೆ ಒಂದಷ್ಟು ಚಿಕಿತ್ಸೆ ಇದ್ದರೂ ಕೂಡ ಅಷ್ಟು ಸರಿಹೋಗೋದು ಕಷ್ಟ ಇದೆ. 

ವಿಶ್ವ, ಜಾನು ಮದುವೆಯಾದ್ರೆ ಚೆಂದ!
ಜಾನುಳನ್ನು ವಿಶ್ವ ತುಂಬ ಪ್ರೀತಿ ಮಾಡ್ತಿದ್ದಾನೆ. ಜಯಂತ್‌ ಜೊತೆ ಜಾನು ಮದುವೆಯಾದಮೇಲೆ ಕೂಡ ಅವನು ಅವಳ ಒಳಿತನ್ನೇ ಬಯಸುತ್ತಿದ್ದಾನೆ. ವಿಶ್ವ ತನ್ನನ್ನು ಪ್ರೀತಿ ಮಾಡ್ತಿದ್ದಾನೆ ಎನ್ನೋದು ಜಾನುಗೆ ಗೊತ್ತೇ ಇಲ್ಲ. ಈಗ ಅವಳಿಗೆ ಈ ಸತ್ಯ ಗೊತ್ತಾದರೆ ಏನು ಮಾಡುತ್ತಾಳೋ ಏನೋ! ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ. 

ಮುಂದೆ ಏನಾಗಬಹುದು? 
ಜಾನು ಹಾಗೂ ವಿಶ್ವ ಒಂದಾಗಲಿ ಎಂದು ಅನೇಕರು ಬಯಸುತ್ತಿದ್ದಾರೆ. ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ ಇದೆ. ಜಾನುಳನ್ನು ವಿಶ್ವ ತುಂಬ ಗೌರವಿಸ್ತಾನೆ, ಪ್ರೀತಿಸ್ತಾನೆ. ಈಗ ಅವನು ಅವಳನ್ನು ಮದುವೆಯಾದರೆ ನಿಜಕ್ಕೂ ಇವರ ಬದುಕು ಸುಂದರ ಆಗಿರುತ್ತದೆ. ನರಸಿಂಹಯ್ಯನ ಸ್ವಂತ ತಂಗಿಯೇ ಜಾನು ತಾಯಿ. ತನ್ನ ತಂಗಿ ಲವ್‌ ಮ್ಯಾರೇಜ್‌ ಮಾಡಿಕೊಂಡಿರೋದು ನರಸಿಂಹಯ್ಯನಿಗೆ ಇಷ್ಟವೇ ಇಲ್ಲ. ಈಗಾಗಲೇ ಮದುವೆಯಾಗಿರೋ ಜಾನು, ಅಷ್ಟೇ ಅಲ್ಲದೆ ತನ್ನ ತಂಗಿ ಮಗಳು ನನ್ನ ಮನೆ ಸೊಸೆ ಆಗ್ತಾಳೆ ಅಂದ್ರೆ ಅವನು ಒಪ್ಪೋದು ಕಷ್ಟ ಇದೆ. ಇದಕ್ಕೆ ಕಾಲವೇ ಉತ್ತರ ಕೊಡಬೇಕು.

ಪಾತ್ರಧಾರಿಗಳು
ಜಾನು- ಚಂದನಾ ಅನಂತಕೃಷ್ಣ
ವಿಶ್ವ-ಭವಿಷ್‌ ಗೌಡ
ಜಯಂತ್-‌ ದೀಪಕ್‌ ಸುಬ್ರಹ್ಮಣ್ಯ


View post on Instagram