ತಂಗಿಗಾಗಿ ಕಣ್ಣೀರು ಹಾಕ್ತಿದ್ದ ಜಿಪುಣ ಗಂಡ ಸಂತೋಷ್‌ಗೆ ಮಾತಿನಲ್ಲಿಯೇ ತಿವಿದ ವೀಣಾ!
Lakshmi Nivasa Serial: ಲಕ್ಷ್ಮೀ ನಿವಾಸದಲ್ಲಿ ಜಾಹ್ನವಿ ಸಾವಿನಿಂದ ದುಃಖ ಮನೆ ಮಾಡಿದೆ. ಸಂತೋಷ್ ಕಣ್ಣೀರಿಡುತ್ತಿದ್ದರೆ, ವೀಣಾ ಸಂಬಂಧಗಳ ಮಹತ್ವದ ಬಗ್ಗೆ ತಿಳಿ ಹೇಳುತ್ತಾಳೆ. ಚೆನ್ನೈನಲ್ಲಿ ಜಾನು ನರಸಿಂಹಯ್ಯ ಕಾರ್ ಡಿಕ್ಕಿಯಲ್ಲಿ ಅಡಗಿದ್ದಾಳೆ.
15

ಲಕ್ಷ್ಮೀ ನಿವಾಸದಲ್ಲಿ ಸೂತಕದ ಛಾಯೆ ಆವರಿಸಿದ್ದು, ಮನೆ ಮಗಳು ಜಾಹ್ನವಿ ಇನ್ನಿಲ್ಲ ಎಂಬ ವಿಷಯ ತಿಳಿದು ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಜಾಹ್ನವಿ ಫೋಟೋಗೆ ಹೂವಿನ ಹಾಕಿ, ಅಗರಬತ್ತಿ ಮತ್ತು ದೀಪ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
25
ಸಂತೋಷ್ ಮತ್ತು ಹರೀಶ್ ಮುದ್ದು ತಂಗಿ ಜಾನುಳನ್ನು ನೆನಪು ಮಾಡಿಕೊಂಡು ಕಣ್ಣೀರಿಡುತ್ತಿದ್ದಾರೆ. ಜಾನು ನೆನಪು ಮಾಡಿಕೊಂಡು ಈಗ ಕಣ್ಣೀರು ಹಾಕುತ್ತಿದ್ದ ಗಂಡ ಸಂತೋಷ್‌ಗೆ ವೀಣಾ ಮಾತಿನಲ್ಲಿಯೇ ತಿವಿದಿದ್ದಾರೆ. ಹಣಕ್ಕಿಂತ ಸಂಬಂಧವೇ ಮುಖ್ಯ ಎಂದು ಗಂಡನಿಗೆ ವೀಣಾ ತಿಳಿ ಹೇಳಿದ್ದಾರೆ.
35
ಜೀವನ ಅನ್ನೋದು ನೀರಿನ ಮೇಲೆ ಗುಳ್ಳೆ ರೀತಿ. ಇವತ್ತು ಇದ್ದವರು, ನಾಳೆ ಇರೋದಿಲ್ಲ. ಬದುಕಿದ್ದಾಗಲೇ ಒಳ್ಳೆಯ ಮಾತುಗಳನ್ನು ಮಾತಾಡಬೇಕು. ಪ್ರೀತಿ ಮತ್ತು ವಿಶ್ವಾಸ ತೋರಿಸಿ ಸಂಬಂಧಗಳನ್ನು ಉಳಿಸಿಕೊಳ್ಳಬೇಕು. ಅವರು ಹೋದ್ಮೇಲೆ ಹಾಗೆ-ಹೀಗೆ ಮಾಡಬೇಕಿತ್ತುಅಂದ್ರೆ ಏನು ಪ್ರಯೋಜನ ಎಂದು ವೀಣಾ ಪ್ರಶ್ನೆ ಮಾಡಿ ಸಂಬಂಧಗಳ ಮಹತ್ವದ ಬಗ್ಗೆ ಪಾಠ ಹೇಳಿದ್ದಾರೆ.
45
ಜಾನು ನಮ್ಮನ್ನೆಲ್ಲಾ ಬಿಟ್ಟು ಹೋಗ್ತಾಳೆ ಅಂತ ನಾನು ಅಂದುಕೊಂಡೇ ಇರಲಿಲ್ಲ. ಆವತ್ತು ಮತ್ತು ಇವತ್ತಿನ ಪರಿಸ್ಥಿತಿಯೇ ಬೇರೆಯಾಗಿತ್ತು. ಎಷ್ಟೇ ಆದ್ರೂ ಅವಳು ನನ್ನ ತಂಗಿ. ಅವಳು ಎಲ್ಲೇ ಇದ್ರೂ ಚೆನ್ನಾಗಿರಲಿ ಎಂದು ಆಶಿಸುತ್ತಿದ್ದೆ. ಆದರೆ ದೇವರು ತಂಗಿಯನ್ನ ನಮ್ಮಿಂದ ಇಷ್ಟು ಬೇಗ ಕರೆದುಕೊಳ್ಳುತ್ತಾನೆ ಅಂತ ಗೊತ್ತಿರಲಿಲಲ್ಲ ಎಂದು ಸಂತೋಷ್ ಕಣ್ಣೀರು ಹಾಕಿದ್ದಾನೆ.
55
ಇತ್ತ ಚೆನ್ನೈನ ಸಮುದ್ರದಡದಲ್ಲಿ ಪತ್ತೆಯಾಗಿದ್ದ ಜಾನು, ಅಲ್ಲಿಯ ಜನರು ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ, ಗೆಳೆಯ ವಿಶ್ವನ ತಂದೆ ನರಸಿಂಹಯ್ಯ ಕಾರ್ ಡಿಕ್ಕಿಯಲ್ಲಿ ಅಡಗಿ ಕುಳಿತಿದ್ದಾಳೆ. ವಿಶ್ವನ ಮನೆಗೆ ಹೋದ್ಮೇಲೆ ಜಾನು ಏನು ಮಾಡ್ತಾಳೆ ಎಂದು ನೋಡಲು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
Latest Videos