"ಲಕ್ಷ್ಮೀ ನಿವಾಸ" ಧಾರಾವಾಹಿಯ ತೆರೆಮರೆಯ ವಿಡಿಯೋ ವೈರಲ್‌ ಆಗಿದ್ದು, ನಟ-ನಟಿಯರ ಸವಾಲುಗಳನ್ನು ತೋರಿಸುತ್ತದೆ. ಕಥೆಯಲ್ಲಿ, ಜಾಹ್ನವಿ ವಿಶ್ವನ ಮನೆ ಸೇರಿದ್ದಾಳೆ. ಜಯಂತ್ ಪತ್ನಿಯನ್ನು ಹುಡುಕುತ್ತಿದ್ದಾನೆ. ಜಾಹ್ನವಿ ಮನೆ ಬಿಡಲು ಯತ್ನಿಸುತ್ತಾಳೆ. ಧಾರಾವಾಹಿ ರೋಚಕ ತಿರುವು ಪಡೆದಿದ್ದು, ಜಾಹ್ನವಿಯ ಭವಿಷ್ಯ ಏನೆಂಬುದು ಕುತೂಹಲ ಮೂಡಿಸಿದೆ.

ಸಿನಿಮಾ ಆಗಲಿ, ಸೀರಿಯಲ್​ ಆಗಲೀ... ಅಲ್ಲಿ ಶೂಟಿಂಗ್​ ನಡೆಯುವ ಸಂದರ್ಭದಲ್ಲಿ ಡೈಲಾಗ್​ ಹೇಳುವುದು ಅಷ್ಟು ಸುಲಭದ ಕೆಲಸವಲ್ಲ. ಉದ್ದುದ್ದ ಡೈಲಾಗ್​ಗಳನ್ನು ಬಾಯಿಪಾಠ ಮಾಡಿ ಹೇಳುವುದು ಬಲು ಕಷ್ಟದ ಕೆಲಸವೇ. ಇಂಥ ಡೈಲಾಗ್​ ಹೇಳಲು ಸೀರಿಯಲ್​ ತಾರೆಯರು ಎಷ್ಟು ಕಷ್ಟಪಡುತ್ತಾರೆ, ಅವರು ಹೇಗೆಲ್ಲಾ ರಿಯಾಕ್ಟ್​ ಮಾಡುತ್ತಾರೆ, ಶೂಟಿಂಗ್​ ಸಮಯದಲ್ಲಿ ಹೇಗೆಲ್ಲಾ ಎಂಜಾಯ್ ಮಾಡುತ್ತಾರೆ ಎನ್ನುವ ವಿಡಿಯೋ ವೈರಲ್​ ಆಗಿದೆ. ಲಕ್ಷ್ಮೀ ನಿವಾಸ ಸೀರಿಯಲ್​ನ ತೆರೆಮರೆಯ ಕಥೆಯ ವಿಡಿಯೋ ಇದಾಗಿದೆ. ಈ ಸೀರಿಯಲ್​ ಸಂಕಲನಕಾರ ಗುರುಮೂರ್ತಿ ಹೆಗಡೆ ಕಣ್ಣೀಪಾಲ ಅವರು ಈ ವಿಡಿಯೋ ಶೇರ್​ ಮಾಡಿದ್ದಾರೆ. ಇದರಲ್ಲಿ ನಟ-ನಟಿಯರು ಎಷ್ಟೆಲ್ಲಾ ಒದ್ದಾಡ್ತಾರೆ ಎನ್ನುವುದನ್ನು ನೋಡಬಹುದಾಗಿದೆ.

ಅದೇ ಇನ್ನೊಂದೆಡೆ, ಶೂಟಿಂಗ್​ ಸಮಯದಲ್ಲಿ ಏನೇನೋ ಅನಾಹುತ ಸಂಭವಿಸುವುದು ನಡೆದೇ ಇರುತ್ತದೆ. ಸಿನಿಮಾ ಆಗಲಿ, ಸಿರಿಯಲ್​ ಆಗಲೀ, ಶೂಟಿಂಗ್​ ಮಾಡುವ ಭರದಲ್ಲಿ ಅನಾಹುತ ಆಗುವುದು ಸಹಜ. ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಜಾಹ್ನವಿ ಶ್ರೀಲಂಕಾದ ಸಮುದ್ರದಲ್ಲಿ ಬಿದ್ದು, ಚೆನ್ನೈನಲ್ಲಿ ಎದ್ದು ಸದ್ಯ ಸೀರಿಯಲ್​ನಲ್ಲಿ ವಿಶ್ವನ ಮನೆ ತಲುಪಿದ್ದಾಳೆ. ವಿಶ್ವನ ಕಾರಿನ ಡಿಕ್ಕಿಯಲ್ಲಿ ಅಡಗಿ ಕುಳಿತಿದ್ದ ಜಾನು, ಅವನಿಗೂ ಅರಿವಿಲ್ಲದೇ ಮನೆಗೆ ಬಂದಿದ್ದಾಳೆ. ಅತ್ತ ತನ್ನ ಪತ್ನಿ ಸತ್ತೇ ಹೋದಳು ಎಂದು ಜಯಂತ್​ ಗೋಗರೆಯುತ್ತಿದ್ದಾನೆ. 

ಶೂಟಿಂಗ್​ ವೇಳೆ ಮುಗುಚಿ ಬಿದ್ದ ತೆಪ್ಪ: ನೀರಲ್ಲಿ ಮುಳುಗಿದ ನಟಿ ವೈಷ್ಣವಿ ಗೌಡ & ಟೀಮ್​!

ಅತ್ತ ಗಂಡ ಸಿದ್ದೇಗೌಡ್ರ ಜೊತೆ ಮೋಸದಿಂದ ಮದುವೆಯಾಗಿರುವ ಕಾರಣಕ್ಕೆ ಗಂಡನ ಕಂಡರೆ ಕೋಪಗೊಂಡಿದ್ದ ಜಾನು ಅಕ್ಕ ಭಾವನಂತೆ ಆತನ ಮೇಲೆ ಲವ್​ ಶುರುವಾಗಿದೆ. ಈ ಮೂಲಕ ಸದ್ಯ, ಲಕ್ಷ್ಮೀ ನಿವಾಸ ಸೀರಿಯಲ್​ ಇದೀಗ ಸಾಕಷ್ಟು ಕುತೂಹಲ ಹಂತ ತಲುಪಿದೆ. ಒಂದೆಡೆ ಜಾಹ್ನವಿ ಮತ್ತು ಜಯಂತ್​ ಸ್ಟೋರಿ. ಇನ್ನೊಂದೆಡೆ ಭಾವನಾ ಮತ್ತು ಸಿದ್ದೇಗೌಡ್ರು ಸ್ಟೋರಿ. ತಂಗಿ ಗಂಡನಿಂದ ಬೇರೆಯಾಗುತ್ತಿದ್ದರೆ, ಅಕ್ಕ ಗಂಡನ ಹತ್ತಿರ ಬರುತ್ತಿದ್ದಾಳೆ. ಅತ್ತ ದಾಂಪತ್ಯದಲ್ಲಿ ವಿರಸ, ಇತ್ತ ಸರಸ... 

ಇದೀಗ, ವಿಶ್ವನ ಮನೆ ಸೇರಿರೋ ಜಾಹ್ನವಿ ಅಲ್ಲಿಂದಲೂ ಹೊರಗೆ ಹೋಗುವ ಕಾಲ ಬಂದಿದೆ. ಏಕೆಂದರೆ ವಿಶ್ವನಿಗೆ ಜಾಹ್ನವಿ ತನ್ನದೇ ಮನೆಯಲ್ಲಿ ಇದ್ದಾಳೆ ಎನ್ನುವ ಗುಮಾನಿ ಶುರುವಾಗಿದೆ. ಆದ್ದರಿಂದ ಜಾಹ್ನವಿ ಮನೆಯಿಂದ ಹೋಗಲು ನೋಡಿದರೂ ಅದು ಸಾಧ್ಯವಾಗಲಿಲ್ಲ. ಅದೇ ಇನ್ನೊಂದೆಡೆ, ಸೈಕೋ ಜಯಂತ್​ಗೆ ತನ್ನ ಪತ್ನಿ ಬದುಕಿದ್ದಾಳೆ ಎಂದೇ ಎನ್ನಿಸುತ್ತಿದೆ. ಆದ್ದರಿಂದ ಅವಳನ್ನು ಹುಡುಕಲು ಡಿಟೆಕ್ಟಿವ್​ನ ಇಟ್ಟಿದ್ದಾನೆ. ಈಗ ಜಾಹ್ನವಿ ಬದುಕಿದ್ದಾಳೆ ಎನ್ನುವ ಸುಳಿವು ಅವನಿಗೆ ಸಿಕ್ಕಿದೆ. ಇನ್ನೇನು ಜಾಹ್ನವಿ ಏನಾದ್ರೂ ಅವನ ಕೈಗೆ ಸಿಕ್ಕರೆ ಮುಗೀತು ಕಥೆ. ಒಟ್ಟಿನಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್​ ರೋಚಕ ಹಂತಕ್ಕೆ ಬಂದು ನಿಂತಿದೆ. ಜಾಹ್ನವಿ ಮನೆಬಿಟ್ಟಾಗ ಜಯಂತ್​ ಪಡುವ ಕಷ್ಟ ನೋಡಿ ಅಯ್ಯೋ ವಾಪಸ್​ ಬಾಮ್ಮಾ ಎಂದು ಹಲವರು ಹೇಳಿದ್ದರೆ, ಅವನ ಕೈಗೆ ಸಿಗುವ ಬದಲು ವಿಶ್ವ ಮತ್ತು ಜಾಹ್ನವಿ ಒಂದಾಗಬೇಕು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.

ಮದ್ವೆಯಾದ ಖುಷಿಯಲ್ಲಿ ಕಾಲೆತ್ತಲು ಹೋದ ಶ್ರೇಷ್ಠಾಳಿಗೆ ಆಗಬಾರದ್ದು ಆಗೋಯ್ತು! ಛೇ... ವಿಡಿಯೋನೂ ವೈರಲ್​ ಆಯ್ತು

View post on Instagram