ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ವೈಷ್ಣವ್‌ನನ್ನು ಮದುವೆ ಆಗಲು ಇನ್ನೊಂದು ಹುಡುಗಿ ಎಂಟ್ರಿ ಆಗಿದೆ. ಅವರು ಯಾರು? 

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವಿಧಿ ಸಂಸಾರ ಸರಿ ಮಾಡಬೇಕು, ವಿಧಿ ಗಂಡನ ಮನೆಯವರು ಈ ಮದುವೆಯನ್ನು ಒಪ್ಪಬೇಕು ಅಂತ ವೈಷ್ಣವ್‌, ಲಕ್ಷ್ಮೀ ಜೊತೆಯಾಗಿ ಪ್ರಯತ್ನಪಡುತ್ತಿದ್ದಾರೆ. ಹೀಗಿರುವಾಗ ವೈಷ್ಣವ್‌ಗೆ ಮದುವೆ ಮಾಡಲು ಕಾವೇರಿ ರೆಡಿಯಾಗಿದ್ದು, ಹುಡುಗಿಯನ್ನು ಕೂಡ ಕರೆಸಿದ್ದಾಳೆ.

ನಾಟಕ ಮಾಡ್ತಿರುವ ಕಾವೇರಿ! 
ವೈಷ್ಣವ್‌ ಇನ್ನೇನು ಮನೆಯಿಂದ ಹೊರಡಬೇಕಿತ್ತು. ಅತ್ತ ಲಕ್ಷ್ಮೀ ಕೂಡ ವಿಧಿ ಗಂಡನ ಮನೆ ಕಡೆ ಹೋಗಲು ರೆಡಿಯಾಗಿದ್ದಳು. ಮಗಳು ವಿಧಿ ಹೇಳದೆ ಕೇಳದೆ, ಗುಟ್ಟಾಗಿ ಮದುವೆಯಾದಳು ಅಂತ ಕಾವೇರಿ ನಿಗಿ ನಿಗಿ ಕೆಂಡವಾಗಿದ್ದಾಳೆ. ಅವಳು ನಿಜಕ್ಕೂ ವಿಧಿ ಮದುವೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ತಲೆಕೆಡಿಸಿಕೊಂಡಿರೋ ಥರ ನಾಟಕ ಮಾಡಿ ವೈಷ್ಣವ್‌ನನ್ನು ತನ್ನ ಕಂಟ್ರೋಲ್‌ನಲ್ಲಿ ಇಡಲು ಟ್ರೈ ಮಾಡುತ್ತಿದ್ದಾಳೆ.

ಅಬ್ಬಾ! 'ಲಕ್ಷ್ಮೀ ಬಾರಮ್ಮ' ಕೀರ್ತಿಯ ಅದ್ಭುತ ನೃತ್ಯಕ್ಕೆ ಬೆರಗಾದ ಫ್ಯಾನ್ಸ್​: ಬಿಗ್​ಬಾಸ್​​ ಕಿಶನ್​ ಜೊತೆ ಮೋಡಿ!

ವೈಷ್ಣವ್‌ಗೆ ಬುದ್ಧಿ ಇದ್ಯಾ?
ಇನ್ನು ಕಾವೇರಿ ಮನೆಗೆ ಹೊಸ ಪಾತ್ರದ ಎಂಟ್ರಿಯಾಗಿದೆ. ಈ ಹಿಂದೆ ʼಸೀತಾ ವಲ್ಲಭʼ ಹಾಗೂ ಇತ್ತೀಚೆಗೆ ʼಸೀತಾರಾಮʼ ಧಾರಾವಾಹಿಯಲ್ಲಿ ಶಾಲಿನಿ ಪಾತ್ರ ಮಾಡಿದ್ದ ನಟಿ ಕಾವ್ಯ ಮಹದೇವಯ್ಯ ಅವರು ಈ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಲಕ್ಷ್ಮೀಯಿಂದ ದೂರ ಆಗಿರೋ ವೈಷ್ಣವ್‌ ಸದಾ ಅವಳನ್ನು ರಕ್ಷಿಸುತ್ತಾನೆ, ಅವಳ ಬಗ್ಗೆ ಕೆಟ್ಟ ಮಾತಾಡಿದ್ರೆ ಸಹಿಸೋದಿಲ್ಲ. ಆದರೆ ತಾಯಿ ಇನ್ನೊಂದು ಮದುವೆ ಆಗು ಅಂದಾಗ ಅವನು ಒಪ್ಪಿದ್ದಾನೆ. ಹೀಗಾಗಿ ವೈಷ್ಣವ್‌ಗೆ ಸ್ವಂತ ಬುದ್ಧಿ ಇದ್ಯಾ? ತಲೆ ಸರಿ ಇದ್ಯಾ ಅಂತ ವೀಕ್ಷಕರು ಗೊಂದಲಕ್ಕೀಡಾಗಿದ್ದಾರೆ.

ಈಗ ಇರುವ ಪ್ರಶ್ನೆಗಳು ಏನು? 
ಇನ್ನೊಂದು ಕಡೆ ವೈಷ್ಣವ್‌ ತನ್ನ ಪತ್ನಿ ಲಕ್ಷ್ಮೀಗೆ ಡಿವೋರ್ಸ್‌ ಕೊಡದೆ ಹೇಗೆ ಮದುವೆ ಆಗ್ತಾನೆ? ಸ್ವಲ್ಪನಾದ್ರೂ ಲಾಜಿಕ್‌ ಬೇಡವಾ ಎಂದು ಕೂಡ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಈಗ ಬಂದಿರೋ ಹುಡುಗಿ ಯಾರು? ಅವಳ ಪಾತ್ರದ ಹೆಸರು ಏನು? ಕಾವೇರಿ ಹಾಗೂ ಅವಳ ಮಧ್ಯೆ ಏನು ಡೀಲ್‌ ಆಗಿದೆ ಹೀಗೆ ಸಾಕಷ್ಟು ಪ್ರಶ್ನೆಗಳಿವೆ. 

ಲಕ್ಷ್ಮೀ ಬಾರಮ್ಮ ಶೂಟಿಂಗ್​ ಸೆಟ್​ನಲ್ಲೇ ಕಣ್ಣಿನಿಂದ ರಕ್ತ ಸುರೀತು: ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ನಟಿ ಭೂಮಿಕಾ

ಇನ್ನು ವೈಷ್ಣವ್‌ ನಿಜಕ್ಕೂ ಮತ್ತೊಂದು ಹುಡುಗಿಯನ್ನು ಮದುವೆ ಆಗ್ತಾನಾ? ಲಕ್ಷ್ಮೀ ಏನು ಮಾಡ್ತಾಳೆ ಎಂಬ ಗೊಂದಲವೂ ಇದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ರೋಚಕತೆಯಿಂದ ಕೂಡಿವೆ. 

ಪಾತ್ರಧಾರಿಗಳು
ವೈಷ್ಣವ್‌ ಪಾತ್ರದಲ್ಲಿ ಶಮಂತ್‌ ಬ್ರೊ ಗೌಡ, ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌, ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ ಅವರು ನಟಿಸುತ್ತಿದ್ದಾರೆ.