ಭೂಮಿಕಾ ರಮೇಶ್ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಜನಪ್ರಿಯ ನಟಿ. ದೆವ್ವದ ಪಾತ್ರದಿಂದ ಅವರು ಖ್ಯಾತಿ ಗಳಿಸಿದ್ದಾರೆ. ತೆಲುಗು ಧಾರಾವಾಹಿಯಲ್ಲೂ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಧರ್ಮಸ್ಥಳದಲ್ಲಿ ಮಾತನಾಡುವ ಶಕ್ತಿ ಇಲ್ಲದ ಅರ್ಚಕರೊಬ್ಬರು ತಮ್ಮನ್ನು ಗುರುತಿಸಿದ ಪ್ರೀತಿಯನ್ನು ಅವರು ಹಂಚಿಕೊಂಡಿದ್ದಾರೆ. ಭೂಮಿಕಾ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಭರತನಾಟ್ಯದಲ್ಲೂ ಪರಿಣಿತರಾಗಿರುವ ಅವರು 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಲಕ್ಷ್ಮೀ ಬಾರಮ್ಮ ಲಕ್ಷ್ಮೀ ಸೀರಿಯಲ್​ ಪ್ರೇಮಿಗಳ ಅಚ್ಚುಮೆಚ್ಚಿನ ನಟಿ. ಇವರ ನಿಜವಾದ ಹೆಸರು ಭೂಮಿಕಾ ರಮೇಶ್​. ಅದರಲ್ಲಿಯೂ ದೆವ್ವ ಮೈಮೇಲೆ ಬರುವ ಪಾತ್ರದ ಮೂಲಕ ಆ್ಯಕ್ಟಿಂಗ್​ನಲ್ಲಿ ಎಲ್ಲರ ಮನಸೂರೆಗೊಂಡಿದ್ದಾರೆ. ಇತ್ತ ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿ ದೆವ್ವ ಬಮದರೆ ಅತ್ತ, ತೆಲುಗಿನಲ್ಲಿ ಅವರು ನಟಿಸುತ್ತಿರುವ 'ಮೇಘ ಸಂದೇಸಂ' ಸೀರಿಯಲ್‌ನಲ್ಲೂ ದೆವ್ವ ಬಂದಿದೆ. ಒಟ್ಟಿನಲ್ಲಿ ದೆವ್ವದ ಪಾತ್ರದಿಂದ ಸಕತ್​ ಫೇಮಸ್​ ಆಗ್ತಿರೋ ನಟಿ ಭೂಮಿಕಾ ರಮೇಶ್​. ಭೂಮಿಕಾ ಮೈಮೇಲೆ ದೆವ್ವ ಬಂದರೆ ಟಿಆರ್​ಪಿ ಜಾಸ್ತಿ ಬರುತ್ತದೆ ಎನ್ನುವ ಹಿಂದಿನ ತಂತ್ರವೂ ಇದ್ದಿರಲಿಕ್ಕೆ ಸಾಕು. ಒಟ್ಟಿನಲ್ಲಿ ಲಕ್ಷ್ಮೀ ಬಾರಮ್ಮ ನಟಿ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಇದೀಗ ಅವರು, ಮಾತು ಬಾರದ ಅರ್ಚಕರೊಬ್ಬರು ತಮ್ಮನ್ನು ಗುರುತಿಸಿದ ಬಗೆಯನ್ನು ಹೇಳುವ ಮೂಲಕ, ಜನರು ತಮಗೆ ತೋರಿಸುತ್ತಿರುವ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

 ಸುದ್ದಿಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಭೂಮಿಕಾ ಅವರು, 'ನಾನು ಧರ್ಮಸ್ಥಳಕ್ಕೋ ಎಲ್ಲೋ ಹೋದಾಗ ನಡೆದ ಘಟನೆ ಇದು. ನನ್ನ ಅಪ್ಪ-ಅಮ್ಮನ ಜೊತೆ ಹೋಗಿದ್ದೆ. ಅಲ್ಲಿದ್ದ ಅರ್ಚಕರೊಬ್ಬರಿಗೆ ಮಾತು ಬರುತ್ತಿರಲಿಲ್ಲ. ಅವರು ನನ್ನನ್ನು ನೋಡಿ ಟಿ.ವಿಯಲ್ಲಿ ನೋಡಿದ್ದೆ ಎನ್ನುವ ರೀತಿಯಲ್ಲಿ ಆ್ಯಕ್ಷನ್​ ಮಾಡಿ ತೋರಿಸಿದರು. ಅದು ನನಗೆ ಗೊತ್ತಾಯಿತು, ಹೌದು ಎನ್ನುವಂತೆ ತಲೆಯಾಡಿಸಿ ಸುಮ್ಮನಾದೆ. ಆದರೆ ಆ ಬಳಿಕ ಅವರು ಅವರ ಪೂಜೆಯ ತಟ್ಟೆಯಲ್ಲಿದ್ದ ಕಾಯಿನ್​ ತೋರಿಸಲು ಶುರು ಮಾಡಿದರು. ಅದನ್ನು ನಾನು ಗಮನಿಸಿರಲಿಲ್ಲ. ಕೊನೆಗೆ ನನ್ನ ಅಪ್ಪ-ಅಮ್ಮ ನೋಡಿ ಅವರು ಏನೋ ಹೇಳುತ್ತಿದ್ದಾರೆ ನೋಡು ಎಂದರು. ನಾನು ನೋಡಿದಾಗ ಅವರು ಏನು ಹೇಳಲು ಟ್ರೈ ಮಾಡುತ್ತಾ ಇದ್ದಾರೆ ಎನ್ನುವುದು ಗೊತ್ತಾಗಲಿಲ್ಲ. ಕಾಯಿನ್​ಗೂ ನನಗೂ ಏನೂ ಸಂಬಂಧ ಎನ್ನುವುದು ತಿಳಿಯಲಿಲ್ಲ. ಕೊನೆಗೆ ಟಿವಿಯನ್ನು ತೋರಿಸಿ, ನಂತರ ಕಾಯಿನ್​ ತೋರಿಸಿದಾಗಲೇ ಅವರು ಲಕ್ಷ್ಮೀ ಬಾರಮ್ಮ ಸೀರಿಯಲ್​ ಬಗ್ಗೆ ಹೇಳ್ತಾ ಇದ್ದಾರೆ ಎನ್ನುವುದು ತಿಳಿಯಿತು. ಇಷ್ಟು ಪ್ರೀತಿ ತೋರಿಸುವುದು ನೋಡಿ ಖುಷಿಯಾಯಿತು ಎಂದಿದ್ದಾರೆ ಭೂಮಿಕಾ.

ಉಯಿ ಅಮ್ಮಾ.. ಎಂದು ಚಿಂದಿ ಉಡಾಯಿಸಿದ ಶ್ರೀರಸ್ತು ಶುಭಮಸ್ತು ಬೆಡಗಿಯರು: ಡಾನ್ಸ್‌ ನೋಡಿ ಫ್ಯಾನ್ಸ್‌ ಸುಸ್ತು!


ಇನ್ನು ನಟಿ ಭೂಮಿಕಾ ಕುರಿತು ಹೇಳುವುದಾದರೆ, ಅವರು ಕನ್ನಡ ಸೀರಿಯಲ್, ತೆಲುಗು ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ಬ್ಯುಸಿ. ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಿನ ಈ ಪ್ರತಿಭಾವಂತ ನಟಿ ಭರತನಾಟ್ಯದಲ್ಲೂ ಎಕ್ಸ್‌ಪರ್ಟ್‌. 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಈಕೆ ಸದ್ಯ ಕೈತುಂಬ ಅವಕಾಶಗಳನ್ನು ಹಿಡಿದು ನಿಂತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭೂಮಿಕಾ ರಮೇಶ್ ಕಳೆದ ವರ್ಷದ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟಿಸಬೇಕು ಎಂಬುದು ಈಕೆಯ ಬಹುದಿನದ ಕನಸಾಗಿತ್ತು. ಆಕೆಯ ಕನಸು ಕೂಡಾ ಇದೀಗ ನನಸಾಗಿದೆ. ನಾಗರಾಜ್‌ ಎಂ. ಜಿ ಗೌಡ ನಿರ್ದೇಶನದ 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದಾರೆ ಭೂಮಿಕಾ ರಮೇಶ್.

ಜೊತೆಗೆ ತೆಲುಗಿನ 'ಮೇಘಸಂದೇಶಂ' ಧಾರಾವಾಹಿಯಲ್ಲಿ ನಾಯಕಿ ಭೂಮಿಯಾಗಿ ಕಾಣಿಸಿಕೊಳ್ಳುವ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟಿರುವ ಭೂಮಿಕಾ ರಮೇಶ್ ಅಲ್ಲೂ ನಟನಾ ಛಾಪನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಸೀರಿಯಲ್ ಜೊತೆಗೆ ತೆಲುಗು ಸೀರಿಯಲ್‌ನಲ್ಲಿ ಬಣ್ಣ ಹಚ್ಚುತ್ತಿರುವ ಭೂಮಿಕಾ ಅವರ ಕಿರುತೆರೆ ಪಯಣ ಶುರುವಾಗಿದ್ದು ರಿಯಾಲಿಟಿ ಶೋ ಮೂಲಕ. ಮೊದಲ ಬಾರಿಗೆ ತೆಲುಗು ರಿಯಾಲಿಟ ಶೋವಿನಲ್ಲಿ ಕಾಣಿಸಿಕೊಂಡಾಗ ಈಕೆ ಕೇವಲ ನಾಲ್ಕನೇ ತರಗತಿಯ ವಿದ್ಯಾರ್ಥಿನಿ. ಮುಂದೆ ತೆಲುಗಿನ ಮಗದೊಂದು ರಿಯಾಲಿಟಿ ಶೋ 'ಸೈ ಅಂಟೆ ಸೈ' ಶೋವಿನಲ್ಲಿ ಮಿಂಚಿದ ಈಕೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಮೂಲಕ. ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದಾಗ ಪಾಶ್ಚಾತ್ಯ ನೃತ್ಯವನ್ನು ಕಲಿತಿದ್ದ ಭೂಮಿಕಾ ರಮೇಶ್ ನಂತರವಷ್ಟೇ ಭರತನಾಟ್ಯ ನೃತ್ಯವನ್ನು ಕಲಿಯಲಾರಂಭಿಸಿದರು. ಇದೀಗ ಸೀನಿಯರ್ ಮುಗಿಸಿ ವಿದ್ವತ್ತಿನ ಹಂತವನ್ನು ಕಲಿಯುತ್ತಿರುವ ಭೂಮಿಕಾ ರಮೇಶ್ ಅವರು ತಾವು ಅಂದುಕೊಂಡಂತೆ ಬಣ್ಣದ ಬದುಕಿನಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.

ರಿಯಲ್​ ಲೈಫ್​ ಲವ್​ ಬಗ್ಗೆ ಕೊನೆಗೂ ಗುಟ್ಟು ಬಿಚ್ಚಿಟ್ಟ ಅಣ್ಣಯ್ಯ: ಲವರ್​ ವಿಷ್ಯ ಕೇಳಿ ಅಭಿಮಾನಿಗಳಿಗೆ ಶಾಕ್​!