‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‌ ಮದುವೆ ಆಗೋಕೆ ಸಾಗರಿ ರೆಡಿ ಆಗಿದ್ದಾಳೆ. ಲಕ್ಷ್ಮೀ ಬೈದ್ರೂ ಸಾಗರಿ ಮಾತು ಕೇಳೋಕೆ ರೆಡಿ ಇಲ್ಲ.  

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‌ ಮದುವೆಯಾಗಲು ಸಾಗರಿ ಆಗಮಿಸಿದ್ದಾಳೆ. ಇನ್ನು ಎರಡು ದಿನದಲ್ಲಿ ವೈಷ್ಣವ್‌, ಸಾಗರಿ ನಿಶ್ಚಿತಾರ್ಥ ಆಗಲಿದೆ. ವಿಧಿ ಸಂಸಾರ ಸರಿ ಮಾಡಬೇಕು ಅಂತ ವೈಷ್ಣವ್‌, ಲಕ್ಷ್ಮೀ ಪ್ರಯತ್ನ ಮಾಡುತ್ತಿದ್ದರೆ, ಕಾವೇರಿ ತನ್ನ ಮಗನ ಸಂಸಾರ ಒಡೆಯಲು ನೋಡುತ್ತಿದ್ದಾಳೆ. 

ಸಾಗರಿ-ವೈಷ್ಣವ್‌ ಮದುವೆ ಆಗತ್ತಾ?
ವೈಷ್ಣವ್‌, ಲಕ್ಷ್ಮೀ ಜೊತೆಯಾಗಿ ವಿಧಿ ಮನೆಗೆ ಹೊರಟಿದ್ದರು. ಇವರಿಬ್ಬರನ್ನು ಕಾವೇರಿ ತಡೆದು ನಿಲ್ಲಿಸಲು ಪ್ರಯತ್ನಪಟ್ಟಿದ್ದಳು. ಆಗ ವೈಷ್ಣವ್‌ ಮದುವೆಯಾಗುವ ಹುಡುಗಿ ಸಾಗರಿ ಎಂಟ್ರಿಯಾಗಿದೆ. ಸಾಗರಿ ನೋಡಿ ಲಕ್ಷ್ಮೀ ಉರಿದುಬಿದ್ದಿದ್ದಾಳೆ. 

ಅಬ್ಬಾ! 'ಲಕ್ಷ್ಮೀ ಬಾರಮ್ಮ' ಕೀರ್ತಿಯ ಅದ್ಭುತ ನೃತ್ಯಕ್ಕೆ ಬೆರಗಾದ ಫ್ಯಾನ್ಸ್​: ಬಿಗ್​ಬಾಸ್​​ ಕಿಶನ್​ ಜೊತೆ ಮೋಡಿ!

ಹೊಸ ನಾಟಕ ಶುರು ಮಾಡಿದ ಕಾವೇರಿ! 
ವೈಷ್ಣವ್‌ ಇನ್ನೇನು ಮನೆಯಿಂದ ಹೊರಡಬೇಕು. ವಿಧಿ ತನ್ನ ಜೀವನ ಸರಿ ಹೋಗತ್ತೆ, ಅಣ್ಣ-ಅತ್ತಿಗೆ ಬರ್ತಾರೆ ಅಂತ ಕಾದು ಕೂತಿದ್ದಳು. ಇನ್ನೊಂದು ಕಡೆ ಮಗಳನ್ನು ಬುಟ್ಟಿಗೆ ಹಾಕಿಕೊಳ್ಳಬೇಕು ಅಂತ ಕಾವೇರಿ ಇನ್ನೊಂದು ನಾಟಕ ಶುರು ಮಾಡಿದಳು. ವಿಧಿಯ ಮದುವೆಯ ಬಗ್ಗೆ ಕಾವೇರಿ ತಲೆಕೆಡಿಸಿಕೊಂಡಿಲ್ಲ. ಮಗಳ ಗುಟ್ಟಿನ ಮದುವೆ ಬಗ್ಗೆ ಅವಳು ನಾಟಕ ಮಾಡಿದ್ದಾಳೆ.

ಸಾಗರಿ ಯಾರು?
ʼಸೀತಾ ವಲ್ಲಭʼ, ಇತ್ತೀಚೆಗೆ ʼಸೀತಾರಾಮʼ ಧಾರಾವಾಹಿಯಲ್ಲಿ ನಟಿಸಿದ್ದ ಚಂದನಾ ಮಹಾಲಿಂಗಯ್ಯ ಅವರು ಸಾಗರಿ ಪಾತ್ರ ಮಾಡುತ್ತಿದ್ದಾರೆ. ವೈಷ್ಣವ್‌ಗೆ ಮದುವೆಯಾಗಿದೆ, ಹೆಂಡ್ತಿ ಇದ್ದಾಳೆ ಅಂತ ಗೊತ್ತಿದ್ರೂ ಅವಳು ಕಾವೇರಿ ಮನೆಗೆ ಬಂದಿದ್ದಾಳೆ. ಕಾವೇರಿ-ಸಾಗರಿ ಇಬ್ಬರೂ ದುಷ್ಟರೇ. ಇವರಿಬ್ಬರು ಸೇರಿಕೊಂಡು ಇನ್ನೇನು ಮಾಡ್ತಾರೋ ಏನೋ! ಡಿವೋರ್ಸ್‌ ಆಗದೆ ಮತ್ತೆ ಮದುವೆ ಆಗೋಕೆ ಹೇಗೆ ಸಾಧ್ಯ ಎನ್ನೋದು ಅರ್ಥ ಆಗದಂತಾಗಿದೆ.

ವೈಷ್ಣವ್‌ ಬಾಯಿ ಬಿಚ್ಚುತ್ತಾನಾ? 
ಆಗಾಗ ಬಾಯಿ ತೆಗೆಯುವ ವೈಷ್ಣವ್‌ ನಿಜಕ್ಕೂ ಈಗ ಮತ್ತೊಂದು ಹುಡುಗಿಯನ್ನು ಮದುವೆ ಆಗ್ತಾನಾ? ಸಾಗರಿಯನ್ನು ಮದುವೆ ಆಗೋದಿಲ್ಲ ಅಂತ ಬಾಯಿಬಿಟ್ಟು ಹೇಳ್ತಾನಾ? ಲಕ್ಷ್ಮೀ ಕಂಡ್ರೆ ಇಷ್ಟ, ಲಕ್ಷ್ಮೀ ನನ್ನ ಹೆಂಡ್ತಿ ಅಂತ ಹೇಳುವ ವೈಷ್ಣವ್‌ ಈಗ ಏನು ಮಾಡ್ತಾನೆ ಎಂಬ ಪ್ರಶ್ನೆಯೂ ಇದೆ.

ಲಕ್ಷ್ಮೀ ಬಾರಮ್ಮ ಶೂಟಿಂಗ್​ ಸೆಟ್​ನಲ್ಲೇ ಕಣ್ಣಿನಿಂದ ರಕ್ತ ಸುರೀತು: ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ನಟಿ ಭೂಮಿಕಾ

ಪಾತ್ರಧಾರಿಗಳು
ವೈಷ್ಣವ್‌ ಪಾತ್ರದಲ್ಲಿ ನಟ ಶಮಂತ್‌ ಬ್ರೊ ಗೌಡ, ಲಕ್ಷ್ಮೀ ಪಾತ್ರದಲ್ಲಿ ನಟಿ ಭೂಮಿಕಾ ರಮೇಶ್‌, ಕಾವೇರಿ ಪಾತ್ರದಲ್ಲಿ ನಟಿ ಸುಷ್ಮಾ ನಾಣಯ್ಯ ಅವರು ನಟಿಸುತ್ತಿದ್ದಾರೆ. ಇನ್ನು ವಿಧಿ ಪಾತ್ರದಲ್ಲಿ ಲಾವಣ್ಯಾ ಹೀರೆಮಠ, ಸುಪ್ರೀತಾ ಪಾತ್ರದಲ್ಲಿ ರಜನಿ ಪ್ರವೀಣ್‌ ನಟಿಸುತ್ತಿದ್ದಾರೆ.