ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನಟ ಶಮಂತ್ ಬ್ರೋ ಗೌಡ ಅವರ ಮದುವೆಯಲ್ಲಿ ಭಾಗವಹಿಸಿದ್ದ ನಟಿ ಭೂಮಿಕಾ ರಮೇಶ್ ಅವರಿಗೆ ಮದುವೆಯ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಯಾವ ರೀತಿಯ ಹುಡುಗ ಬೇಕು ಎಂಬ ಪ್ರಶ್ನೆಗೆ, ಒಳ್ಳೆಯ ಹುಡುಗ ಸಿಕ್ಕರೆ ಸಾಕು ಎಂದು ಉತ್ತರಿಸಿದ್ದಾರೆ.

ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ಹಾಗೂ ಕಲರ್ಸ್​ ಕನ್ನಡ ಚಾನೆಲ್​ನ ನಂಬರ್​ 1 ಸೀರಿಯಲ್​ ಎನ್ನಿಸಿಕೊಂಡಿದ್ದ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಶಮಂತ್ ಬ್ರೋ ಗೌಡ ಅವರು ನಿನ್ನೆ ತಾವು ಪ್ರೀತಿಸಿದ್ದ ಹುಡುಗಿ ಮೇಘನಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಗೆ ಲಕ್ಷ್ಮೀ ಬಾರಮ್ಮ ತಂಡದ ಬಹುತೇಕ ಎಲ್ಲಾ ಸದಸ್ಯರು ಸೇರಿದಂತೆ ಕಿರುತೆರೆ ಕಲಾವಿದರು ಆಗಮಿಸಿ ನೂತನ ವಧು-ವರರನ್ನು ಆಶೀರ್ವದಿಸಿದರು. ಇದೇ ಸೀರಿಯಲ್​ನಲ್ಲಿ ಲಕ್ಷ್ಮೀ ಪಾತ್ರಧಾರಿಯಾಗಿದ್ದ ಭೂಮಿಕಾ ರಮೇಶ್ ಕೂಡ ಮದುವೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಮದುವೆಯ ಬಗ್ಗೆ ಪ್ರಶ್ನೆ ಮಾಡಲಾಗಿದೆ.

ಅಷ್ಟಕ್ಕೂ, ನಟಿ ಭೂಮಿಕಾ ಕನ್ನಡ ಸೀರಿಯಲ್, ತೆಲುಗು ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ಬ್ಯುಸಿ. ಇನ್ನೂ ಇಪ್ಪತ್ತೊಂದು ವರ್ಷ ವಯಸ್ಸಿನ ಈ ಪ್ರತಿಭಾವಂತ ನಟಿ ಭರತನಾಟ್ಯದಲ್ಲೂ ಎಕ್ಸ್‌ಪರ್ಟ್‌. 'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕಿ ಲಕ್ಷ್ಮಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಈಕೆ ಸದ್ಯ ಕೈತುಂಬ ಅವಕಾಶಗಳನ್ನು ಹಿಡಿದು ನಿಂತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಭೂಮಿಕಾ ರಮೇಶ್ ಕಳೆದ ವರ್ಷದ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟಿಸಬೇಕು ಎಂಬುದು ಈಕೆಯ ಬಹುದಿನದ ಕನಸಾಗಿತ್ತು. ಆಕೆಯ ಕನಸು ಕೂಡಾ ಇದೀಗ ನನಸಾಗಿದೆ. ನಾಗರಾಜ್‌ ಎಂ. ಜಿ ಗೌಡ ನಿರ್ದೇಶನದ 'ಡಿಸೆಂಬರ್ 24' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದಾರೆ ಭೂಮಿಕಾ ರಮೇಶ್. 

ಲಕ್ಷ್ಮೀ ಬಾರಮ್ಮ ಶೂಟಿಂಗ್​ ಸೆಟ್​ನಲ್ಲೇ ಕಣ್ಣಿನಿಂದ ರಕ್ತ ಸುರೀತು: ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ನಟಿ ಭೂಮಿಕಾ

ಇದೀಗ ಅವರಿಗೆ ಮದುವೆಯ ಬಗ್ಗೆ ಪ್ರಶ್ನೆ ಮಾಡಿದಾಗ, ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಕೇಳಿದಾಗ ನಟಿ, ನಾನು ಆ ಬಗ್ಗೆ ಏನೂ ಯೋಚನೆ ಮಾಡಲಿಲ್ಲ. ಸದ್ಯ ಆ ಬಗ್ಗೆ ಏನೂ ಕೇಳಬೇಡಿ. ಅದು ಆದಾಗ ಆಗತ್ತೆ. ನಾನು ಆ ಬಗ್ಗೆ ಯಾವುದೇ ರೀತಿಯ ಯೋಚನೆ ಮಾಡಲಿಲ್ಲ. ಕಾಲಕ್ಕೆ ತಕ್ಕಂತೆ ಅನ್​ಎಕ್ಸ್​ಪೆಡೆಡ್​ ಆಗಿ ಏನು ಬೇಕಾದರೂ ಆಗಬಹುದು. ನೋಡೋಣ, ಯಾವಾಗ ಏನು ಎಂದು ಹೇಳಲು ಆಗದು ಎನ್ನುತ್ತಲೇ ಹುಡುಗ ಒಳ್ಳೆಯವನಾದ್ದರೆ ಸಾಕು ಎಂದು ಹೇಳುವ ಮೂಲಕ ಅಲ್ಲಿಂದ ಹೊರಟು ಹೋಗಿದ್ದಾರೆ. ಇದರ ವಿಡಿಯೋ ಅನ್ನು ಯಶಸ್​ಟಾಕೀಸ್​ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿದೆ. 

ಮದುವೆಯ ಬಗ್ಗೆ ಈ ಹಿಂದೆ ಮಾತನಾಡಿದ್ದ ನಟಿ, ನನಗೆ ಫ್ಯಾಮಿಲಿ ತುಂಬಾ ಮುಖ್ಯ. ಆದ್ದರಿಂದ ನನ್ನ ಪತಿಯಾಗುವವನೂ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಅದು ಎಷ್ಟರಮಟ್ಟಿಗೆ ಎಂದರೆ,, ಯಾವುದೋ ಒಂದು ಸಂದರ್ಭದಲ್ಲಿ, ನಾನು ಅಥವಾ ಯಾರಾದರೂ ಒಂದು ಕಡೆ ನನ್ನ ಮತ್ತು ಅವನ ಅಮ್ಮನನ್ನು ನಿಲ್ಲಿಸಿಕೊಂಡು ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡು ಎಂದಾಗ, ಅವನ ಆಯ್ಕೆ ಅಮ್ಮ ಆಗಿರಬೇಕೇ ವಿನಾ ನಾನಲ್ಲ ಎಂದಿರುವ ನಟಿ ಅದಕ್ಕೆ ಕಾರಣವನ್ನೂ ನೋಡಿದ್ದರು. ಒಂದು ವೇಲೆ ಅವನಿಗೆ ಏನಾದ್ರೂ ನಾನು ಮುಖ್ಯ ಎನ್ನುವುದಾಗಿದ್ದರೆ ಖಂಡಿತಾ ಮುಂದೊಂದು ದಿನಾ ಅವನು ನನ್ನನ್ನೂ ಬಿಟ್ಟು ಬಿಡುತ್ತಾನೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ, ಮೊದಲಿನಿಂದಲೂ ಜೊತೆಗಿರುವ ಅಮ್ಮನನ್ನು ಬಿಟ್ಟು ಆಗ ನಡುವೆ ಕಟ್ಟಿಕೊಂಡಿರುವ ಹೆಂಡತಿಯ ಪರ ನಿಲ್ಲುತ್ತಾರೆ ಎಂದರೆ, ಭವಿಷ್ಯದಲ್ಲಿ ಆತ ಸಂದರ್ಭ ಬಂದರೆ ನನ್ನನ್ನೂ ಬಿಡುವುದಕ್ಕೆ ಹಿಂಜರಿಯುವುದಿಲ್ಲ. ಆದ್ದರಿಂದ ಮೊದಲು ಆತ ಅಪ್ಪ-ಅಮ್ಮನಿಗೆ ರಿಸ್​ಪೆಕ್ಟ್​ ಕೊಡಬೇಕು. ಫ್ಯಾಮಿಲಿ ಹುಡುಗ ಆಗಿರಬೇಕು. ಫ್ಯಾಮಿಲಿಗೆ ಸಮಯ ಕೊಡಬೇಕು. ಮುಂದೊಂದು ದಿನ ನನ್ನ ಅಪ್ಪ-ಅಮ್ಮನಿಗೆ ವಯಸ್ಸಾದಾಗ ಅವರನ್ನು ಮಕ್ಕಳ ರೀತಿ ನೋಡಿಕೊಳ್ಳಬೇಕಾದ ಸಮಯ ಬರುತ್ತದೆ. ಆಗ ನಾನು ನನ್ನ ಅಪ್ಪ-ಅಮ್ಮನಿಗೆ ತಾಯಿಯಾದರೆ ಆತ ತಂದೆ ಸ್ಥಾನ ಕೊಡುವವನಾಗಿರಬೇಕು ಎಂದಿದ್ದರು. 

ಮಾತು ಬಾರದ ಅರ್ಚಕ ನನಗೆ ನಾಣ್ಯ ತೋರಿಸಿದ್ರು, ಕಾರಣ ತಿಳಿದು ಶಾಕ್​ ಆಯ್ತು; ಘಟನೆ ನೆನೆದ ಲಕ್ಷ್ಮೀ ಬಾರಮ್ಮ ನಟಿ

View post on Instagram