ಕೈಗೆ ಬಂದ ತುತ್ತು ದೀಪಿಕಾ ಬಾಯಿಗೆ ಬರಲೇ ಇಲ್ಲ... ಎಸ್ಟೇಟೂ ತಪ್ಪೋಯ್ತು! ಮಗುವಿಗಾಗಿ ಶುರುವಾಗುತ್ತಾ ಜಟಾಪಟಿ?
ನಂದಗಿರಿ ಎಸ್ಟೇಟ್ ಪಡೆಯಬೇಕು ಎಂದು ಪ್ಲ್ಯಾನ್ ಮಾಡಿದ್ದ ದೀಪಿಕಾಗೆ ನಿರಾಸೆಯಾಗಿದೆ. ಇಲ್ಲಿಯೂ ಪ್ಲ್ಯಾನ್ ಠುಸ್ ಆಗಿದೆ. ಮುಂದೇನು?
ಏಕೋ ವಿಲನ್ ದೀಪಿಕಾ ಟೈಮ್ ಚೆನ್ನಾಗಿಲ್ಲ ಎನಿಸತ್ತೆ. ಗಂಡ ಅಭಿಯ ಕಿವಿ ಹಿಂಡಿ ಏನೇನೋ ಎಡವಟ್ಟು ಪ್ಲ್ಯಾನ್ ಮಾಡುತ್ತಿದ್ದರೂ ಅವ್ಯಾವುವೂ ವರ್ಕ್ಔಟೇ ಆಗ್ತಿಲ್ಲ. ಇದಾಗಲೇ ಸಾಕಷ್ಟು ವಿಷಕಾರಿ ಯೋಜನೆಗಳನ್ನು ರೂಪಿಸಿದ್ದಾಳೆ ದೀಪಿಕಾ. ಆದರೆ ಒಂದು ಮಟ್ಟಿಗೆ ಇದು ತುಳಸಿಗೆ ಟಾರ್ಚರ್ ಕೊಟ್ಟರೂ, ಕೊನೆಗೆ ತುಳಸಿಗೆ ಜಯವಾಗಿದೆ. ಅಭಿಯ ಹುಟ್ಟುಹಬ್ಬದ ಸಮಯದಲ್ಲಿ ಅಪ್ಪನ ಜೊತೆ ಪ್ಲ್ಯಾನ್ ಮಾಡಿ ಹೊರಗಡೆ ಹೋಗಲು ರೆಡಿಯಾಗಿದ್ದಳು. ವಿದೇಶದ ಟಿಕೆಟ್ ಮಾಡಿಸಿಕೊಟ್ಟಿದ್ದ ಅವಳಪ್ಪ. ಇದಕ್ಕೆ ಮನೆಯವರು ಎಲ್ಲರೂ ಒಪ್ಪಿಗೆ ಸೂಚಿಸಿದ್ದರು. ಆದರೆ ಅಭಿ ಮಾತ್ರ ತಾನು ತನ್ನ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಆಚರಿಸುವುದಾಗಿ ಹೇಳಿದ. ಇದಕ್ಕೆ ಒಪ್ಪಿಗೆ ಸೂಚಿಸದೇ ದೀಪಿಕಾಗೆ ಬೇರೆ ದಾರಿಯೇ ಇರಲಿಲ್ಲ. ಏಕೆಂದರೆ ಅವಳು ವಿಲನ್ ಎನ್ನುವ ಸತ್ಯ ಈ ಗಂಡನಿಗೆ ತಿಳಿದಿಲ್ಲದ್ದರಿಂದ ಎಲ್ಲರ ದೃಷ್ಟಿಯಲ್ಲಿಯೂ ಒಳ್ಳೆಯವಳಾಗಿಯೇ ಇರುವುದು ಅನಿವಾರ್ಯವಾಗಿದೆ ಇವಳಿಗೆ.
ಇದೀಗ ಅಭಿಯ ಅಮ್ಮ ಸುಮತಿ ಹೆಸರಿನಲ್ಲಿ ಇರುವ ನಂದಗಿರಿ ಎಸ್ಟೇಟ್ ಮೇಲೆ ಅವಳ ಕಣ್ಣು ಬಿದ್ದಿತ್ತು. ಹೇಗಾದರೂ ಮಾಡಿ ಅದನ್ನು ಅಭಿಯ ಹೆಸರಿಗೆ ಮಾಡಿಕೊಂಡು ಮನೆಯನ್ನು ಒಡೆಯುವ ಪ್ರಯತ್ನ ಮಾಡಿದ್ದಳು. ಇದೇ ಕಾರಣಕ್ಕೆ ಅಭಿಗೆ ಕಿವಿ ಚುಚ್ಚಿದ್ದಳು. ಅಭಿ ಮೊದಲಿಗೆ ಇದನ್ನು ಒಪ್ಪಿರಲಿಲ್ಲ. ಆದರೆ ತುಳಸಿಯ ಮಕ್ಕಳೂ ಇದೀಗ ಇದೇ ಮನೆಯವರಾಗಿರುವ ಹಿನ್ನೆಲೆಯಲ್ಲಿ, ಅವರೇನಾದರೂ ಪಾಲು ಕೇಳಿದರೆ ಏನುಮಾಡುತ್ತಿಯಾ ಎಂದು ದೀಪಿಕಾ ಕೇಳಿದಾಗ, ಅಭಿ ತಲೆ ತಿರುಗಿತ್ತು. ಇದೇ ಕಾರಣಕ್ಕೆ ನಂದಗಿರಿ ಎಸ್ಟೇಟ್ ತನ್ನ ಹೆಸರಿಗೆ ಮಾಡಿಸಿಕೊಳ್ಳುವ ಯೋಚನೆ ಹೊಳೆದಿತ್ತು. ಗಂಡ-ಹೆಂಡತಿ ಮಾತನಾಡುತ್ತಿರುವುದನ್ನು ಪೂರ್ಣಿ ಕೇಳಿಸಿಕೊಂಡು ಅದನ್ನು ಅತ್ತೆ ತುಳಸಿಗೆ ತಿಳಿಸಿದ್ದಳು.
ಇವ್ರೇನು ನಿಮ್ ಹೆಂಡ್ತಿನಾ, ಗರ್ಲ್ಫ್ರೆಂಡಾ...? ತನ್ವಿ ಪ್ರಶ್ನೆಗೆ ಸುಸ್ತು ಹೊಡೆದ ತಾಂಡವ್-ಶ್ರೇಷ್ಠಾ!
ಮನೆಯ ಆಸ್ತಿ ಒಡೆಯುವುದು ತುಳಸಿಗೆ ಇಷ್ಟವಿಲ್ಲ. ಮನೆಯ ರಕ್ಷಣೆಗೆ ನಿಂತವಳು ಅವಳು. ಇದೇ ಕಾರಣಕ್ಕೆ ಲಾಯರ್ ಜೊತೆ ಮಾತನಾಡಿದಳು. ಇದೇ ಸಮಯಕ್ಕೆ ವಕೀಲರು ಅಲ್ಲಿಗೆ ಬಂದು, ಅದು ನಿನ್ನ ತಾಯಿಯ ಆಸ್ತಿ ಆಗಿರುವ ಕಾರಣ, ಯಾವುದೇ ಕಾರಣಕ್ಕೂ ತುಳಸಿಯ ಮಕ್ಕಳಿಗೆ ಹೋಗುವುದಿಲ್ಲ. ಈ ಮನೆಯಲ್ಲಿ ಹುಟ್ಟುವ ಮೊದಲ ಮಗುವಿಗೆ ಅದರ ಆಸ್ತಿ ಹೋಗುತ್ತದೆ ಎಂದರು. ಅಷ್ಟಕ್ಕೂ ಅಭಿಗೆ ಆ ಆಸ್ತಿಯೇನೂ ಬೇಕಾಗಿರಲಿಲ್ಲ. ತುಳಸಿಯ ಮಕ್ಕಳಿಗೆ ಹೋಗುವುದಿಲ್ಲ ಎಂದು ಕೇಳಿ ಸಮಾಧಾನವಾಯ್ತು. ಏಕೆಂದರೆ ಆತನಿಗೆ ಪತ್ನಿಯ ಕುತಂತ್ರವೂ ಗೊತ್ತಿಲ್ಲವಲ್ಲ. ಆದರೆ ಈಗಲೂ ದೀಪಿಕಾ ಪ್ಲ್ಯಾನ್ ಟುಸ್ ಆಯಿತು. ಆಸ್ತಿ ಭಾಗ ಮಾಡಿ ಮನೆಯಲ್ಲಿ ಕಲಹ ಸೃಷ್ಟಿಸಲು ನೋಡಿದ್ದ ಅವಳಿಗೆ ಶಾಕ್ ಆಯಿತು. ಈಗ ಏನಿದ್ದರೂ ಮೊದಲ ಮಗುವಿನ ಆಸ್ತಿ ಎಂದಾಗಿದೆ.
ಮುಂದೇನು? ಮನೆಯಲ್ಲಿ ದೀಪಿಕಾ ಅಥವಾ ಪೂರ್ಣಿ... ಇಬ್ಬರಲ್ಲಿ ಒಬ್ಬರಿಗೆ ಮಗು ಮೊದಲಿಗೆ ಹುಟ್ಟುತ್ತದೆಯೋ ಅವರ ಹೆಸರಿಗೆ ಆಸ್ತಿ ಹೋಗುತ್ತದೆ ಅಂತಾಯ್ತು. ಇದೀಗ ಮಗುವಿಗಾಗಿ ಪೈಪೋಟಿ ಯಾರದ್ದು ಎಂಬುದನ್ನುನೋಡಬೇಕು. ಈಗಾಗಲೇ ಪೂರ್ಣಿಗೆ ಮಗು ಹುಟ್ಟಬಾರದು ಎಂದು ಗರ್ಭಪಾತವಾಗುವ ಔಷಧವನ್ನು ಕೊಟ್ಟು ಅತ್ತೆ ಶಾರ್ವರಿ ಸಕ್ಸಸ್ ಆಗಿದ್ದಾಳೆ. ಪೂರ್ಣಿಗೆ ಮಗು ಬೇಕಿದೆ, ಈಗ ತಾನೆ ಮದ್ವೆಯಾಗಿರೋ ದೀಪಿಕಾ ಅಂತೂ ಖಂಡಿತವಾಗಿಯೂ ಇಷ್ಟು ಬೇಗ ಮಗುವಿಗೆ ಒಪ್ಪಲಾರಳು. ಆದರೆ ಮಗುವಿಗಾಗಿ ಮುಂದೇನಾಗುತ್ತದೆ ಎನ್ನುವುದು ಈಗಿರುವ ಕುತೂಹಲ.
ಕೈಯಿಂದ ಬಣ್ಣ ಹಚ್ಚದಂತೆ ಸೀತಾ ಆಣೆ ಮಾಡಿದ್ರೆ ರಾಮ್ ಸುಮ್ಮನಿರ್ತಾನಾ? ಕೆನ್ನೆಗೆ ಕೆನ್ನೆ ಸೋಕಿದಾಗ...