ಇವ್ರೇನು ನಿಮ್ ಹೆಂಡ್ತಿನಾ, ಗರ್ಲ್ಫ್ರೆಂಡಾ...? ತನ್ವಿ ಪ್ರಶ್ನೆಗೆ ಸುಸ್ತು ಹೊಡೆದ ತಾಂಡವ್-ಶ್ರೇಷ್ಠಾ!
ಸದಾ ಅಪ್ಪನ ಜೊತೆಯೇ ಇರುವ ಶ್ರೇಷ್ಠಾಳ ಮೇಲೆ ತನ್ವಿಗೆ ಡೌಟ್ ಶುರುವಾಗಿದೆ. ಇವಳೇನು ನಿನ್ನ ಗರ್ಲ್ಫ್ರೆಂಡಾ ಎಂದು ಪ್ರಶ್ನಿಸಿದ್ದಾಳೆ. ಇದಕ್ಕೇನು ಉತ್ತರ ಕೊಡುತ್ತಾನೆ ತಾಂಡವ್?
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಾಪಿ ಹೊಡೆದ ಆರೋಪದ ಮೇಲೆ ತನ್ವಿ ಮತ್ತು ಭಾಗ್ಯಳನ್ನು ಡಿಬಾರ್ ಮಾಡಲಾಗಿದೆ. ಭಾಗ್ಯ ತನ್ನ ಮಗಳನ್ನು ನಿರಪರಾಧಿ ಎಂದು ಸಾಬೀತು ಮಾಡಿ ಪರೀಕ್ಷೆಗೆ ಕುಳ್ಳರಿಸುವ ಯೋಚನೆಯಲ್ಲಿದ್ದಾಳೆ. ಅದೇ ಇನ್ನೊಂದೆಡೆ, ಈ ಆರೋಪ ಬಂದಿರುವುದಕ್ಕೂ ಭಾಗ್ಯಳೇ ಕಾರಣ ಎಂದು ಹೇಳಿ ತಾಂಡವ್ ಪತ್ನಿಗೆ ಛೀಮಾರಿ ಹಾಕಿದ್ದಾನೆ. ಅತ್ತ ಮನೆಯವರೆಲ್ಲರೂ ಪರೀಕ್ಷೆಯಲ್ಲಿ ಡಿಬಾರ್ ಆಗಿರುವ ಬಗ್ಗೆ ಟೆನ್ಷನ್ನಲ್ಲಿ ಇದ್ದರೆ ಇತ್ತ ತಾಂಡವ್ ಮತ್ತು ಶ್ರೇಷ್ಠಾ ಐಸ್ಕ್ರೀಂ ತಿನ್ನಲು ಹೋಟೆಲ್ಗೆ ಬಂದಿದ್ದಾರೆ. ಜೊತೆಗೆ ತನ್ವಿಯನ್ನೂ ಕರೆದುಕೊಂಡು ಬಂದಿದ್ದಾರೆ. ತಾಂಡವ್ ಮಕ್ಕಳನ್ನು ನೋಡಿಕೊಳ್ಳುವುದು ಶ್ರೇಷ್ಠಾಗೆ ಈಗ ಅನಿವಾರ್ಯ. ಏಕೆಂದ್ರೆ ಅವಳಿಗೆ ತಾಂಡವ್ ಬೇಕಾಗಿದೆ. ಅದಕ್ಕಾಗಿ ತನ್ವಿಗೆ ಸಮಾಧಾನ ಮಾಡಲು ಯತ್ನಿಸುತ್ತಿದ್ದಾಳೆ.
ತನ್ವಿಯ ಇಷ್ಟದ ಐಸ್ಕ್ರೀಂ ಕೊಡಿಸಿ ಅವಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ನೋಡಿದ್ದಾಳೆ. ಮೊದಲೇ ಡಿಬಾರ್ ಆಗಿರೋ ಕೋಪದಲ್ಲಿ ಇರುವ ತನ್ವಿಗೆ ಸಿಕ್ಕಾಪಟ್ಟೆ ಸಿಟ್ಟುಬಂದಿದೆ. ಐಸ್ಕ್ರೀಂ ತೆಗೆದು ಶ್ರೇಷ್ಠಾಳ ಮೈಗೆ ಚೆಲ್ಲಿದ್ದಾಳೆ. ಅಲ್ಲಿ ಇದ್ದವರು ಎಲ್ಲರೂ ಇವರನ್ನು ನೋಡುತ್ತಿದ್ದಾರೆ. ಶ್ರೇಷ್ಠಾ ಮತ್ತು ತಾಂಡವ್ಗೆ ಅವಮಾನವಾಗಿದೆ. ತಾಂಡವ್ ಕೂಡ ಮಗಳು ತನ್ವಿಗೆ ಬೈದಿದ್ದಾನೆ. ಇದನ್ನು ಕೇಳಿ ಸಿಟ್ಟಿನಲ್ಲಿ ಇರುವ ತನ್ವಿ, ಇವರ್ಯಾರು ಪ್ರತಿಸಲ ನಿಮ್ಮ ಜೊತೆ ಇರುತ್ತಾರೆ, ನಾನು ಡಿಬಾರ್ ಆಗಿರೋ ವಿಷ್ಯ ಇವರಿಗೆ ಹೇಗೆ ಗೊತ್ತಾಯ್ತು? ನಿಮ್ಮ ಆಫೀಸ್ನಲ್ಲಿ ಎಷ್ಟೊಂದು ಜನರು ಇರುವಾಗ, ಇವರುಮಾತ್ರ ಯಾಕೆ ಬರ್ತಾರೆ ಎಂದೆಲ್ಲಾ ಪ್ರಶ್ನಿಸುತ್ತಾಳೆ. ತಾಂಡವ್ ಬೈಯಲು ಮುಂದಾದಾಗ, ಇವಳೇನು ನಿಮ್ಮ ಹೆಂಡ್ತಿನಾ ಇಲ್ವಾ ಗರ್ಲ್ಫ್ರೆಂಡಾ ಎಂದು ಕೇಳಿದಾಗ ಇಬ್ಬರೂ ಶಾಕ್ ಆಗುತ್ತಾರೆ. ತಾಂಡವ್ ಈಗ ಏನು ಉತ್ತರ ಕೊಡುತ್ತಾನೋ ಕಾದು ನೋಡಬೇಕಿದೆ.
ಹೆಣ್ಣು ಹೆಚ್ಚು ಸಹಿಸಿಕೊಂಡ್ರೆ ಹೀಗೇ ಆಗೋದಮ್ಮಾ... ದಿಟ್ಟೆಯಾಗು ಇಲ್ಲವೇ ಬಲಿಯಾಗು: ಸಹನಾಗೆ ನೆಟ್ಟಿಗರ ಬುದ್ಧಿಮಾತು
ಅಷ್ಟಕ್ಕೂ, ಭಾಗ್ಯ ಮತ್ತು ಮಗಳು ತನ್ವಿ ಎಸ್ಎಸ್ಎಲ್ಸಿ ಪರೀಕ್ಷೆಯ ಬರೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರ ಡೆಸ್ಕ್, ಡಸ್ಟ್ಬಿನ್ ಮೇಲೆ ಗಣಿತದ ಫಾರ್ಮುಲಾ ಬರೆಯಲಾಗಿತ್ತು. ಇದನ್ನು ನೋಡಿದ ಟೀಚರ್ ಇಬ್ಬರನ್ನೂ ಪರೀಕ್ಷೆಯಿಂದ ಡಿಬಾರ್ ಮಾಡಿದ್ದಾರೆ. ತಾವು ಕಾಪಿ ಬರೆದಿಲ್ಲ, ತಾವು ಹೀಗೆಲ್ಲಾ ಮಾಡುವುದಿಲ್ಲ ಎಂದು ಹೇಳಿದರೂ ಕೇಳದೇ ಇಬ್ಬರನ್ನೂ ಡಿಬಾರ್ ಮಾಡಲಾಗಿದೆ. ಈ ಬಾರಿ ಪರೀಕ್ಷೆಯನ್ನು ಚೆನ್ನಾಗಿ ಬರೆಯಬೇಕು ಎಂದುಕೊಂಡ ತನ್ವಿ ಇದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಇನ್ನು ಭಾಗ್ಯಳ ಮಾತಂತೂ ಹೇಳುವುದೇ ಬೇಡ... ಅವಳು ಚೆನ್ನಾಗಿ ತಯಾರಿ ನಡೆಸಿದ್ದಾಳೆ. ಆದರೆ ಕಾಪಿ ಬರೆದು ಇಟ್ಟಿದ್ದರಿಂದ ಇಬ್ಬರನ್ನೂ ಡಿಬಾರ್ ಮಾಡಲಾಗಿದ್ದು, ಪರೀಕ್ಷೆ ಬರೆಯುವುದರಿಂದ ತಡೆ ಹಿಡಿಯಲಾಗಿದೆ.
ಈ ವಿಷಯ ತಾಂಡವ್ಗೆ ಗೊತ್ತಾಗಿದೆ. ಈ ಸಮಯದಲ್ಲಿ ತಾಂಡವ್ ಶ್ರೇಷ್ಠಾಳ ಮನೆಯಲ್ಲಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ತಾಂಡವ್ಗೆ ಭಾಗ್ಯಳ ಮೇಲೆ ಕೋಪ ಉಕ್ಕಿಬಂದಿದೆ. ತನ್ವಿ ಕಾಪಿ ಮಾಡಿದ್ದಾಳೆ ಎಂದು ನಂಬಿರೋ ಈತ, ಇದಕ್ಕೆಲ್ಲಾ ಭಾಗ್ಯಳೇ ಕಾರಣ ಎಂದಿದ್ದಾನೆ. ಅಲ್ಲಿಂದ ಹೊರಡಲು ರೆಡಿಯಾಗುವಷ್ಟರಲ್ಲಿ ಶ್ರೇಷ್ಠಾ ಅವನನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆದರೆ ಮಗಳು ಕಷ್ಟದಲ್ಲಿ ಇರುವಾಗ ಅವನು ಹೋಗದಿದ್ದರೆ ಹೇಗೆ? ಪರೀಕ್ಷಾ ಕೊಠಡಿ ಸಮೀಪ ಬಂದಿದ್ದಾನೆ. ಅದಾಗಲೇ ಅಮ್ಮ-ಮಗಳನ್ನು ಪರೀಕ್ಷಾ ಕೊಠಡಿಯಿಂದ ಹೊರಕ್ಕೆ ಹಾಕಲಾಗಿತ್ತು. ಅಪ್ಪನನ್ನು ನೋಡಿ ತನ್ವಿ ಕಣ್ಣೀರು ಹಾಕಿದ್ದಾಳೆ. ನಾನು ಕಾಪಿ ಮಾಡಲಿಲ್ಲ. ಇವೆಲ್ಲಾ ಹೇಗೆ ಆಯಿತು ಎಂದು ತಿಳಿದಿಲ್ಲ ಎಂದಿದ್ದಾಳೆ. ಆದರೆ ಆಗಲೂ ಪತ್ನಿಯ ಮೇಲೆ ಕಿಡಿ ಕಾರಿರುವ ತಾಂಡವ್, ಭಾಗ್ಯಳನ್ನು ಚೆನ್ನಾಗಿ ಬೈದಿದ್ದಾನೆ. ಹೇಗಾದರೂ ಮಾಡಿ ಮಗಳಿಗೆ ಪರೀಕ್ಷೆ ಬರೆಸಲೇಬೇಕು ಎನ್ನುವ ಪಣ ತೊಟ್ಟಿದ್ದಾಳೆ ಭಾಗ್ಯ. ಮುಂದೇನಾಗುತ್ತದೆ ಎಂದು ನೋಡಬೇಕಿದೆ.
ಪ್ರಕಾಶ್ ರಾಜ್@59: ದಕ್ಷಿಣದ ಅತ್ಯಂತ ವಿವಾದಾತ್ಮಕ ನಟ ಎನಿಸಿಕೊಳ್ತಿರುವುದಕ್ಕೆ ಇವೆಲ್ಲಾ ಸಾಕ್ಷಿಯಾದವಾ?