ಕೈಯಿಂದ ಬಣ್ಣ ಹಚ್ಚದಂತೆ ಸೀತಾ ಆಣೆ ಮಾಡಿದ್ರೆ ರಾಮ್ ಸುಮ್ಮನಿರ್ತಾನಾ? ಕೆನ್ನೆಗೆ ಕೆನ್ನೆ ಸೋಕಿದಾಗ...
ಕೈಯಿಂದ ಬಣ್ಣ ಹಚ್ಚದಂತೆ ಸೀತಾ ಆಣೆ ಮಾಡಿದ್ರೆ ರಾಮ್ ಸುಮ್ಮನಿರ್ತಾನಾ? ಹೋಳಿ ಹಬ್ಬದ ಸಂಭ್ರಮವನ್ನು ಆತ ಇಮ್ಮಡಿಗೊಳಿಸಿದ್ದು ಹೇಗೆ ಗೊತ್ತಾ?
ಸೀತಾರಾಮ ಸೀರಿಯಲ್ನಲ್ಲಿಯೂ ಹೋಳಿ ಹಬ್ಬ ಭರ್ಜರಿಯಾಗಿ ನಡೆಯುತ್ತಿದೆ. ಅದೇ ಇನ್ನೊಂದೆಡೆ ಸೀತಾ ಮತ್ತು ರಾಮ್ ಲವ್ಸ್ಟೋರಿಯೂ ಶುರುವಾಗಿದೆ. ಈ ಜೋಡಿಯ ಹೋಳಿ ಹಬ್ಬ ಇನ್ನೊಂದು ಹಂತ ತಲುಪಿದೆ. ಸೀತಾಳ ಜೊತೆ ರಾಮ್ ಹೋಳಿ ಹಬ್ಬ ಆಚರಿಸಲು ಬಣ್ಣ ಹಿಡಿದು ಬಂದರೆ, ಆಕೆ ಆಣೆ ಮಾಡಿಬಿಟ್ಟಿದ್ದಾಳೆ. ನೀವು ಕೈಯಿಂದ ಬಣ್ಣ ಹಚ್ಚಬಾರದು ಎಂದು ಹೇಳಿದ್ದಾಳೆ. ಈಗಷ್ಟೇ ಲವ್ ಶುರುಮಾಡಿಕೊಂಡಿರೋ ರಾಮ್ ಹಾಗೆ ಸುಮ್ಮನೇ ಇರ್ತಾನಾ? ಇತ್ತ ಸೀತಾಳ ಮಾತೂ ಮುರಿಯಬಾರದು, ಅತ್ತ ಆಕೆಯ ಬಣ್ಣನೂ ಹಚ್ಚಬೇಕು. ಅದಕ್ಕಾಗಿಯೇ ಆತ ಒಂದು ಪ್ಲ್ಯಾನ್ ಮಾಡಿಬಿಟ್ಟ. ತನ್ನ ಕೆನ್ನೆಗೆ ಮೊದಲು ಬಣ್ಣ ಹಚ್ಚಿಕೊಂಡ. ಇದನ್ನು ನೋಡಿ ಸೀತಾ ನಕ್ಕಳು. ನಾನು ಬಣ್ಣ ಹಚ್ಚುವುದು ಬೇಡ ಎಂದು ಹೇಳಿದ್ದಕ್ಕೆ ನೀವೇ ಹಚ್ಕೊಂಡು ಬಿಟ್ರಾ ಎಂದು ಕೇಳಿದಳು. ಆದರೆ ರಾಮ್ ಪ್ಲ್ಯಾನೇ ಬೇರೆ.
ಆತ ತನ್ನ ಬಣ್ಣ ಹಚ್ಚಿದ ಕೆನ್ನೆಯನ್ನು ಸೀತಾಳ ಕೆನ್ನೆಗೆ ತಾಗಿಸಿ ಅವಳಿಗೆ ಬಣ್ಣ ಹಚ್ಚಿದ. ಎಷ್ಟೆಂದರೂ ಸೀತಾ ಕೈಯಿಂದ ಬಣ್ಣ ಹಚ್ಚಬೇಡಿ ಎಂದು ಪ್ರಾಮಿಸ್ ಮಾಡಿದ್ಲಲ್ಲಾ, ಅದಕ್ಕಾಗಿ ಕೆನ್ನೆಯಿಂದಲೇ ಬಣ್ಣ ಹಚ್ಚಿದ. ಇಬ್ಬರ ನಡುವೆ ಪ್ರೀತಿಯ ಧಾರೆ ಸುರಿಯಿತು. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಇಬ್ಬರ ಲವ್ಸ್ಟೋರಿಗೆ ಯಾರ ಕಣ್ಣೂ ಬೀಳದಿರಲಪ್ಪ ಎನ್ನುತ್ತಿದ್ದಾರೆ ಅಭಿಮಾನಿಗಳು.
ಪ್ರಕಾಶ್ ರಾಜ್@59: ದಕ್ಷಿಣದ ಅತ್ಯಂತ ವಿವಾದಾತ್ಮಕ ನಟ ಎನಿಸಿಕೊಳ್ತಿರುವುದಕ್ಕೆ ಇವೆಲ್ಲಾ ಸಾಕ್ಷಿಯಾದವಾ?
ಸೀತಾ-ರಾಮರ ಲವ್ ಸ್ಟೋರಿ ಏನೋ ಶುರುವಾಗಿಬಿಟ್ಟಿದೆ. ಆದರೆ ಸೀತಾಳಿಗೆ ತನ್ನ ಹಿಂದಿನ ಕಥೆಯ ಚಿಂತೆ. ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಹೇಳಲು ಹೋದಾಗ ರಾಮ್ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್ನಲ್ಲಿ ಬಿದ್ದಿದ್ದಾರೆ. ರಾಮ್ ಅಂತೂ ಸೀತಾಳ ಹೆಸರನ್ನು ತನ್ನ ಬೆಡ್ರೂಮ್ನಲ್ಲಿ ದೊಡ್ಡದಾಗಿ ಹಾಕಿಕೊಂಡಿದ್ದಾನೆ. ರಾತ್ರಿ ಇಬ್ಬರಿಗೂ ನಿದ್ದೆ ಬರುತ್ತಿಲ್ಲ. ಹೊಸದಾಗಿ ಲವ್ ಸ್ಟೋರಿ ಶುರುವಾಗಿರುವ ಕಾರಣ, ಗುಸುಗುಸು ಪಿಸುಪಿಸು ಮಾತು ಶುರುವಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದಾರೆ. ಆದರೆ...?
ಹೌದು. ಈ ಪ್ರೀತಿಯ ನಡುವೆಯೇ ಸೀತಾಗೆ ಹಿಂದಿನ ಕಥೆಯ ಬಗ್ಗೆ ಟೆನ್ಷನ್ ಶುರುವಾಗಿದೆ. ನಾನು ಇದನ್ನು ಮುಚ್ಚಿಡಬಾರದು ಎಂದುಕೊಂಡಿದ್ದಾಳೆ. ಸಂಪೂರ್ಣ ಕಥೆ ಕೇಳಿದ ಮೇಲೆ ರಾಮ್ ನನ್ನನ್ನು ಒಪ್ಪಿಕೊಳ್ತಾನಾ ಎನ್ನುವುದೂ ಆಕೆಗೆ ಸಂದೇಹ ಶುರುವಾಗಿದೆ. ಅಷ್ಟಕ್ಕೂ ಸೀತಾಳ ಹಿಂದಿನ ಕಥೆಯೇನು? ಅವಳದ್ದು ನಿಜವಾಗಿಯೂ ಮದ್ವೆಯಾಗಿದ್ಯಾ? ಗಂಡ ಬಿಟ್ಟಿದ್ದಾಳಾ ಅಥ್ವಾ ಗಂಡನೇ ಇಲ್ವಾ? ಸಿಹಿ ಸೀತಾಳ ಸ್ವಂತ ಮಗಳು ಹೌದಾ? ಎಷ್ಟೊಂದು ಪ್ರಶ್ನೆಗಳು ವೀಕ್ಷರನ್ನು ಕಾಡುತ್ತಿವೆ. ಇದರ ಮಧ್ಯೆಯೇ, ಕೆಲ ಎಪಿಸೋಡ್ ಹಿಂದೆ ಬೈಕ್ನಲ್ಲಿ ಬಂದಾತನೊಬ್ಬ ಸಿಹಿಯನ್ನು ಕಿಡ್ನಾಪ್ ಮಾಡಿದ್ದ. ಸೀತಾಳ ಮೇಲೆ ದಾಳಿ ಮಾಡಲು ನೋಡಿದ್ದ. ರಾಮ್ನನ್ನು ಇರಿದಿದ್ದ. ಹಾಗಿದ್ದರೆ ಅವನಿಗೂ ಸೀತಾಗೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಸೀತಾರಾಮ ಸೀರಿಯಲ್ ಫ್ಯಾನ್ಗಳನ್ನು ಕಾಡುತ್ತಿದೆ.
ಇವ್ರೇನು ನಿಮ್ ಹೆಂಡ್ತಿನಾ, ಗರ್ಲ್ಫ್ರೆಂಡಾ...? ತನ್ವಿ ಪ್ರಶ್ನೆಗೆ ಸುಸ್ತು ಹೊಡೆದ ತಾಂಡವ್-ಶ್ರೇಷ್ಠಾ!