Asianet Suvarna News Asianet Suvarna News

ಬೆಂಕಿ ಬಿರುಗಾಳಿ ಕುಸುಮಾ ಮುಂದೆ ಥಂಡಾ ಆದ ತಾಂಡವಮೂರ್ತಿ! ಈ ಸಲ ಕಿಚ್ಚನ ಚಪ್ಪಾಳೆ ಕುಸುಮಾಗೆ ಅಂತಿದ್ದಾರೆ ಫ್ಯಾನ್ಸ್

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಬಿರುಗಾಳಿ ಥರ ಬಂದಿರೋ ಕುಸುಮಾ ಎದುರು ಥರ ಥರ ನಡುಗ್ತಿದ್ದಾನೆ ತಾಂಡವ್. ಮನೇನ ಸೊಸೆ ಭಾಗ್ಯ ಹೆಸರಿಗೆ ಮಾಡಿಸಿಕೊಳ್ತಾಳ ಈ ಪವರ್‌ಫುಲ್ ಅತ್ತೆ?

Kusuma firing her son Tandav in Bhagyalakshmi serial bni
Author
First Published Dec 28, 2023, 12:22 PM IST

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಕುಸುಮಾ ತಾಂಡವ್ ಮತ್ತೆ ಮುಖಾಮುಖಿ ಆಗಿದ್ದಾರೆ. ತಾಯಿ ತನ್ನ ಬಳಿ ಕ್ಷಮೆ ಕೇಳಲಿಕ್ಕೆ ಬಂದಿರ್ತಾಳೆ ಅನ್ನೋ ಭ್ರಮೆಯಲ್ಲಿದ್ದ ತಾಂಡವ್‌ಗೆ ಅಮ್ಮನ ಹೊಸ ನಡೆ ದಿಗಿಲು ಹುಟ್ಟಿಸಿದೆ. ಕುಸುಮಾಳ ಈ ದಿಟ್ಟ ನಿಲುವನ್ನು ವೀಕ್ಷಕರು ಹಾಡಿ ಹೊಗಳ್ತಿದ್ದಾರೆ. ಯಾವ ರೇಂಜಿಂಗೆ ಖುಷಿ ಆಗಿದ್ದಾರೆ ಅಂದರೆ 'ಈ ಸಲದ ಕಿಚ್ಚನ ಚಪ್ಪಾಳೆ ಕುಸುಮಾಗೆ' ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇದು ಈ ಪಾತ್ರದ ಬಗ್ಗೆ ಅವರಿಗಿರುವ ಅಭಿಮಾನವನ್ನು ತೋರಿಸುತ್ತೆ. ಈ ಸೀರಿಯಲ್ ಹೀರೋಯಿನ್ ಭಾಗ್ಯ ಅಲ್ಲ, ಕುಸುಮಾ ಎಂದು ಬೆಂಕಿ ಇಮೋಜಿ ಹಾಕಿದ್ದಾರೆ ಅಭಿಮಾನಿಯೊಬ್ಬರು. ಇನ್ನೊಬ್ರು 'ಹಾಕ್ರೋ ಸ್ಪೆಪ್ಪು' ಅಂತ ಜೋಶ್ ತುಂಬಿದ್ದಾರೆ. ಇನ್ನೊಬ್ರು ಇದನ್ನೇ ಇಟ್ಕೊಂಡು 'ರಾಮಾಚಾರಿ' ಸೀರಿಯಲ್ ಡೈರೆಕ್ಟರ್ ರಾಮ್‌ಜೀಗೆ, 'ರಾಮ್‌ಜೀ ನೋಡಿ ಕಲೀರಿ. ನಿಮ್ ಸೀರಿಯಲ್‌ ಅತ್ತೆ ಜಾನಕಿ ಯಾವತ್ತೂ ಅಳ್ತಾ ಇರ್ತಾರೆ, ಈ ಅತ್ತೆ ನೋಡಿ ಹೇಗೆ ಸ್ಟ್ರಾಂಗ್ ಇದ್ದಾರೆ' ಅಂದಿದ್ದಾರೆ. ಒಟ್ಟಾರೆ ಕುಸುಮಾ ದಿಟ್ಟತನಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

ಅಷ್ಟಕ್ಕೂ ಸೀರಿಯಲ್‌ನಲ್ಲಿ ಏನಾಯ್ತು ಅಂದರೆ ಮನೆ ಬಿಟ್ಟು ಹೋದ ತಾಂಡವ್ ಮನೆ ಲೋನ್ ಕಟ್ಟೋದಕ್ಕೂ ನಿರಾಕರಿಸ್ತಾನೆ. ಭಾಗ್ಯನೇ ಕಟ್ಲಿ, ಆಗ ಬುದ್ಧಿ ಬರುತ್ತೆ ಎಂದು ತನ್ನ ಎಂದಿನ ಪೊಳ್ಳು ಸೊಕ್ಕು ತೋರಿಸುತ್ತಾನೆ. ಅತೀ ಒಳ್ಳೆ ಮನಸ್ಸಿನ ಭಾಗ್ಯ ಒಡವೆ ಅಡ ಇಟ್ಟು ಲೋನ್ ಕಟ್ಟಲು ಮುಂದಾಗುತ್ತಾಳೆ. ಈ ವಿಚಾರ ಕುಸುಮಾಗೆ ಹೇಳಿದರೆ ಅಮ್ಮ ಮಗನ ನಡುವೆ ಇನ್ನಷ್ಟು ಅಂತರ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಅತ್ತೆ ಬಳಿ ಏನೂ ಹೇಳದೆ ಎಲ್ಲವನ್ನೂ ಮುಚ್ಚಿಡುತ್ತಾಳೆ. ಅತ್ತೆ ಎಲ್ಲಾ ವಿಚಾರ ತಿಳಿದು ಅವರಿಗೆ ಹೃದಯಾಘಾತವಾದಂತೆ ಭಾಗ್ಯಾ ಕನಸು ಕಾಣುತ್ತಾಳೆ. ಅದೇ ಭಯದಲ್ಲಿ ಜೋರಾಗಿ ಅರಚುತ್ತಾಳೆ.

ಸೀತಾರಾಮ ಸೀರಿಯಲ್‌: ಡಿಡಿಎಲ್‌ಜೆ ಸೀನ್ ರೀಕ್ರಿಯೇಟ್ ಆಗುತ್ತಾ? ಕಾತುರದಿಂದ ಕಾಯ್ತಿದ್ದಾರೆ ವೀಕ್ಷಕರು

ಭಾಗ್ಯಾ ಅರಚಿದ್ದನ್ನು ಕೇಳಿ ಎಲ್ಲರೂ ಗಾಬರಿಯಿಂದ ರೂಮ್‌ಗೆ ಬರುತ್ತಾರೆ. ಏಕೆ ಅರಚಿದ್ದು ಎಂದು ಕೇಳಿದಾಗ ಭಾಗ್ಯಾ ಉತ್ತರ ಹೇಳಲು ತಡಬಡಾಯಿಸುತ್ತಾಳೆ. ಭಾಗ್ಯಾ ಗಾಬರಿಯಿಂದ ಮಾತನಾಡುವುದನ್ನು ನೋಡಿ ಕುಸುಮಾಗೆ ಅನುಮಾನ ಉಂಟಾಗುತ್ತದೆ. ಇದರ ಹಿಂದೆಯೇ ಭಾಗ್ಯಾ ಆತುರಾತುರವಾಗಿ, ಅತ್ತೆ ಬ್ಯಾಂಕ್‌ ಲಾಕರ್‌ನಲ್ಲಿ ಒಡವೆ ಇಟ್ಟಿದ್ದೇನೆ, ಅದನ್ನು ತೆಗೆದುಕೊಂಡು ಬರುತ್ತೇನೆ ಎನ್ನುತ್ತಾಳೆ. ಇದನ್ನೂ ಕೇಳಿ ಕುಸುಮಾಗೆ ಗಾಬರಿ ಆಗುತ್ತದೆ. ಒಡವೆಗಳನ್ನು ಲಾಕರ್‌ನಲ್ಲಿಟ್ಟಿದ್ದೀಯ? ಏಕೆ? ಎಂದು ಕೇಳುತ್ತಾಳೆ. ಹೌದು, ನಾವು ದಿನಾ ಬಳಸುವ ಒಡವೆಗಳು ಮನೆಯಲ್ಲೇ ಇವೆ, ಬೇರೆಯದ್ದೆಲ್ಲಾ ಬ್ಯಾಂಕಿನಲ್ಲಿ ಇಟ್ಟಿದ್ದೇನೆ ಎನ್ನುತ್ತಾಳೆ.

ಭಾಗ್ಯಾ ಮಾತುಗಳನ್ನು ಕೇಳಿ ಇವಳು ಹೀಗೇಕೆ ವರ್ತಿಸುತ್ತಿದ್ಧಾಳೆ ಅಂತ ಕುಸುಮಾ, ಸುನಂದಾ, ಪೂಜಾ ಎಲ್ಲರೂ ಕನ್ಫ್ಯೂಸ್ ಆಗುತ್ತಾರೆ. ಸರಿ ನೀನು ಬ್ಯಾಂಕಿಗೆ ಹೋಗಿ ಬಾ, ಅದಕ್ಕೂ ಮುನ್ನ ನನಗೆ ಒಂದು ಕಪ್‌ ಕಾಫಿ ಮಾಡಿಕೊಟ್ಟು ಹೋಗು ಎಂದು ಕುಸುಮಾ ಹೇಳುತ್ತಾಳೆ. ಭಾಗ್ಯಾ ಸರಿ ಎಂದು ತಲೆ ಆಡಿಸಿ ಅತ್ತೆಗೆ ಕಾಫಿ ಮಾಡಿಟ್ಟು, ಬ್ಯಾಗ್‌ ಹಿಡಿದು ಒಡವೆ ತರಲು ಹೋಗುತ್ತಾಳೆ. ಅವಳನ್ನು ತಡೆಯುವ ಕುಸುಮಾ , ಈಗ ಸಮಯ ಎಷ್ಟು ಎಂದು ಕೇಳುತ್ತಾಳೆ. ಈಗ 7 ಗಂಟೆ ಎನ್ನುತ್ತಾಳೆ ಭಾಗ್ಯಾ. ಹೌದು 7 ಗಂಟೆ, ಈ ಸಮಯದಲ್ಲಿ ಯಾವ ಬ್ಯಾಂಕ್‌ ತೆರೆದಿರುತ್ತದೆ, ಯಾವಾಗಿಂದ ನಿನ್ನ‌ ಅತ್ತೆಗೆ ಸುಳ್ಳು ಹೇಳೋದು ಕಲಿತೆ? ನೀನು ನನ್ನಿಂದ ಏನೋ ಮುಚ್ಚಿಡುತ್ತಿದ್ದೀಯ, ಈಗ ನಿಜ ಹೇಳದಿದ್ದರೆ ನನ್ನ ಮೇಲೆ ಆಣೆ ಎಂದು ಕುಸುಮಾ, ಭಾಗ್ಯಾ ಕೈಯ್ಯನ್ನು ತಲೆ ಮೇಲೆ ಇರಿಸಿಕೊಳ್ಳುತ್ತಾಳೆ.

ಬಿಹಾರದ ಎಮ್ಮೆ, ಮೇಕೆ ಜೊತೆ ಕಾಣಿಸಿಕೊಂಡ ಡಾ.ಬ್ರೋ: ಫೋಟೋ ನೋಡಿ ಕುಣಿದಾಡಿದ ಫ್ಯಾನ್ಸ್‌

ಭಾಗ್ಯಾಗೆ ಬೇರೆ ವಿಧಿಯಿಲ್ಲ, ಎಲ್ಲಾ ವಿಚಾರವನ್ನೂ ಅತ್ತೆಗೆ ಹೇಳುತ್ತಾಳೆ. ಮಗನ ಬಗ್ಗೆ ಕೇಳಿ ಕುಸುಮಾಗೆ ಬೇಸರವಾಗುತ್ತದೆ. ನಿಜ ಹೇಳಿದರೆ ನಿಮ್ಮಿಬ್ಬರ ನಡುವಿನ ಅಂತರ ಮತ್ತೆ ಹೆಚ್ಚಾಗುತ್ತದೆ ಅಂತ ಹೇಳಲಿಲ್ಲ ಕ್ಷಮಿಸಿ ಎಂದು ಭಾಗ್ಯಾ ವಿಷಯ ಮುಚ್ಚಿಟ್ಟಿದ್ದಕ್ಕೆ ಅತ್ತೆ ಬಳಿ ಕ್ಷಮೆ ಕೇಳುತ್ತಾಳೆ. ಎಲ್ಲಾ ವಿಚಾರ ತಿಳಿದ ನಂತರ ಕುಸುಮಾ, ಗಂಡನಿಗೆ ಫೋನ್‌ ಮಾಡಿ ಕೊಡುವಂತೆ ಭಾಗ್ಯಾಗೆ ಹೇಳುತ್ತಾಳೆ. ಇತ್ತ ಶ್ರೇಷ್ಠಾ ಮನೆಯಲ್ಲಿ ಸುಂದರಿಗೆ ಫುಡ್‌ ಆರ್ಡರ್‌ ಮಾಡಿಕೊಂಡು ಆಕೆಯ ಕಾಟ ತಾಳಲಾರದೆ ಒದ್ದಾಡುವ ತಾಂಡವ್‌ ಅಮ್ಮನ ಕಾಲ್‌ ನೋಡುತ್ತಿದ್ದಂತೆ ಗೊಂದಲದಿಂದಲೇ ಫೋನ್‌ ರಿಸೀವ್‌ ಮಾಡುತ್ತಾನೆ.

ತಾಯಿ ಕಾಲ್ ಮಾಡಿ ಭೇಟಿ ಮಾಡ್ಬೇಕು ಅಂದಿದ್ದು ತನ್ನ ಬಳಿ ಕ್ಷಮೆ ಕೇಳೋದಕ್ಕೆ ಅಂದಕೊಂಡಿದ್ದ ತಾಂಡವ್‌ಗೆ ಸಖತ್ತಾಗಿ ಬುದ್ಧಿ ಕಲಿಸಿದ್ದಾಳೆ ಕುಸುಮಾ. 'ಮನೆ ಲೋನ್‌ ಅನ್ನು ಭಾಗ್ಯ ಕಟ್ಟುತ್ತಾಳೆ. ನೀನು ಮನೆಯನ್ನು ಅವಳ ಹೆಸರಿಗೆ ಬರೆದುಕೊಡು' ಎಂದು ಪೇಪರ್ ಪೆನ್ನು ಮುಂದಿಡುತ್ತಾಳೆ. ಅಮ್ಮನ ಹೊಸ ಅವತಾರ ನೋಡಿ ತಾಂಡವ್ ಥಂಡಾ ಆಗ್ತಾನೆ!

 

Follow Us:
Download App:
  • android
  • ios