BBK9 ನಮ್ಮುಂದೆ ಶೋ ಆಫ್ ಹೆಂಡ್ತಿ ಮುಂದೆ ಮೀಟ್ರು ಆಫ್; ಆರ್ಯವರ್ಧನ್‌ಗೆ ಹೆಂಡ್ತಿ ಅಂದ್ರೆ ಭಯ?
ಆರ್ಯವರ್ಧನ್ ಗುರೂಜೀ ಕಾಲೆಳೆದ ಕಿಚ್ಚ ಸುದೀಪ್. ಫ್ಯಾಮಿಲಿ ಬಂದಿಕ್ಕೆ ಮೌನವಾಗಿದ್ದು ಯಾಕೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಗ್ ಬಾಸ್ ರಿಯಾಲಿಟಿ ಶೋ 70 ದಿನಗಳನ್ನು ಪೂರೈಸಿದೆ. ಮನೆಯಲ್ಲಿರುವ 11 ಸ್ಪರ್ಧಿಗಳಿಗೆ ತಮ್ಮ ಫ್ಯಾಮಿಲಿಯನ್ನು ಭೇಟಿ ಮಾಡುವ ಅವಕಾಶ ಕೊಟ್ಟಿದ್ದರು. ಈ ವೇಳೆ ಆರ್ಯವರ್ಧನ್ ಗುರೂಜೀ ವರ್ತಿಸಿದ ರೀತಿ ಕಂಡು ಮನೆ ಮಂದಿ ಆಶ್ಚರ್ಯ ಪಟ್ಟಿದ್ದಾರೆ. ಹೀಗಾಗಿ ವೀಕೆಂಡ್ ಮಾತುಕತೆಯಲ್ಲಿ ಕಿಚ್ಚ ಸುದೀಪ್ ಕಾಲೆಳೆದಿದ್ದಾರೆ.
ಸುದೀಪ್: 'ಹೆಂಡತಿ ಬಂದ್ರೆ ಎತ್ಕೊಂಡು ಮನೆಯಲ್ಲಿ ತಿರುಗಾಡುತ್ತೀನಿ ಅಂತ ಹೇಳುತ್ತಿದ್ದ ಆರ್ಯವರ್ಧನ್..ಫ್ಯಾಮಿಲಿ ಬಂದಾಗ ನಡೆದಿದ್ದೇ ಬೇರೆ. ರಾಜಣ್ಣ ಹೇಳಿದ ತರ ನಮ್ ಮುಂದೆ ಒಂದು ತರ ಶೋ ಆಫ್ ಹೆಂಡತಿ ಬಂದಾಗ ಮೀಟರ್ ಆಫ್ ಯಾಕೆ?
ಆರ್ಯವರ್ಧನ್: ನನ್ನ ಹೆಂಡತಿಗೆ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಜಾಗವನ್ನು ತೋರಿಸಿರುವೆ . ನನ್ನ ಹೆಂಡತಿ ಕಂಡ್ರೆ ನಾನು ತುಂಬಾ ಹೆದರಿಕೊಳ್ಳುತ್ತೀನಿ. ಹೆಂಡತಿ ಜೊತ ಗೌರವದಿಂದ ನಡೆದುಕೊಳ್ಳುತ್ತೀನಿ ಗೌರವದಿಂದ ನೋಡಿಕೊಳ್ಳುತ್ತೀನಿ. ತುಂಬಾ ಖುಷಿಯಾದರೆ ಮನೆಯಲ್ಲಿ ಕಾಲಿಗೆ ಬೀಳುತ್ತೀನಿ ಆದರೆ ಇಲ್ಲಿ ಹಾಗೆ ಅನಿಸಲಿಲ್ಲ ಮಗಳನ್ನು ಬಿಟ್ಟು ಬಂದಿದಕ್ಕೆ ದುಖಃ ಆಯ್ತು. ಈ ದುಖಃ ಹಂಚಿಕೊಂಡರೆ ಬೇಜಾರು ಆಗುತ್ತದೆ ಎಂದು ನೊಂದ್ಕೊಂಡು ಸುಮ್ಮನಾಗಿ ಬಿಟ್ಟೆ. ಜೆನರಲ್ ಆಗಿ ನಾನು ಮುಟ್ಟು ಮಾತನಾಡಿಸುವುದು ಬಹಳ ಕಡಿಮೆ ...ಇವ್ರು ಕೈ ಮುಟ್ಟಿ ಹೆಗಲೆ ಮೇಲೆ ಕೈ ಹಾಕಿ ಅಂತ ಹೇಳಿದಾಗ ನಾಚಿಕೆ ಜಾಸ್ತಿ ಆಯ್ತು ಸರ್
ಸುದೀಪ್: 5 ನಿಮಿಷ ಬಿಟ್ಟು ನಿಮ್ಮ ಮಗಳು ಬಂದಿದ್ದಾರೆ ತಾನೆ ಅದಾದ ಮೇಲೂ ಹಾಗೆ ಇದ್ರಿ ಹೆಂಡ್ತಿ ಮಾತನಾಡಿಸುವುದು ಏನೂ ಇಲ್ಲ
ಆರ್ಯವರ್ಧನ್: ಅವರೇ ಮಾತನಾಡಿಸಲಿ ಅಂತ ಸುಮ್ಮನಿದ್ದೆ ಸರ್ ನಮ್ಮ ಮನೆಯವರು ಏನೂ ಹೇಳುವುದಿಲ್ಲ ಸರ್
ಸುದೀಪ್: ಹಾಗಿದ್ರೆ ನಮ್ಮ ಲೈನ್ ಕರೆಕ್ಟ್ ಇದೆ. ರಾಜಣ್ಣ ಅವರು ಹೇಳಿದ್ದು ಅವರು ಬರುವುದಕ್ಕೂ ಮುಂದೆ ಶೋ ಆಫ್ ಬಂದ ಮೇಲೆ ಮೀಟರ್ ಆಫ್
ಆರ್ಯವರ್ಧನ್: ಹೌದು ಸರ್
BBK9 ಕತ್ತೆತ್ತದೆ ಆಮೆ ತರ ಸ್ವಿಮ್ಮಿಂಗ್ ಮಾಡ್ತೀನಿ; ಆರ್ಯವರ್ಧನ್ ಹಾರ್ಟ್ ಚೆನ್ನಾಗಿರಲು ಇದೇ ಕಾರಣ
ಸುದೀಪ್: ಎಲ್ಲರ ತಲೆ ಬಂದಿದ್ದು ಏನಂದ್ರೆ ಟಾಸ್ಕ್‌ಲ್ಲಿ ಮಾತ್ರವಲ್ಲ ಈ ವಿಚಾರದಲ್ಲೂ ದೋಸೆ ತಿರುಗಿಸಿ ಹಾಕುತ್ತಾರೆ. ನಿಮ್ಮ ಪ್ರಕಾರ ನಿಮ್ಮ ಮಗಳು ಯಾರ ಜೊತೆ ಜಾಸ್ತಿ ಮಾತನಾಡಿದ್ದು?
ಆರ್ಯವರ್ಧನ್: ಅಮೂಲ್ಯ ಅಥವಾ ಅನುಪಮಾ ಜೊತೆ ಹೆಚ್ಚಿಗೆ ಮಾತನಾಡುತ್ತಿದ್ದಳು ಅನಿಸುತ್ತದೆ.
ಸುದೀಪ್: ಅವ್ರು ಈ ಕಡೆ ಬಂದ ಮೇಲೆ ಕನ್ಫೆಷನ್ ರೂಮ್‌ನಲ್ಲಿ ಕುಳಿತುಕೊಂಡು ಹರಟೆ ಹೊಡೆದಿದ್ದು ಬಿಗ್ ಬಾಸ್ ಜೊತೆ ಜಾಸ್ತಿ. ಎಷ್ಟು ಹೊತ್ತು ಮಾತನಾಡಿದ್ದಾರೆ ಅಂದ್ರೆ ಅಲ್ಲಿ AC ಕಡಿಮೆ ಮಾಡಿ ಅಂತ ಬಿಗ್ ಬಾಸ್‌ಗೆ ಬೈದ್ರು ...ಎಲ್ಲನೂ ಮಾಡ್ಕೊಂಡು ಹೋಗಿದ್ದಾರೆ ಆದರೆ ಜಾಸ್ತಿ ಟೈಂ ಮಾತನಾಡಿದ್ದು ಬಿಗ್ ಬಾಸ್ ಜೊತೆ.
BBK9 ಆರ್ಯವರ್ಧನ್ ಗುರೂಜೀ ಗೂಗ್ಲಿ ಮಾಡ್ತಿರೋದು ಯಾರಿಗೂ ಗೊತ್ತಾಗುತ್ತಿಲ್ವಾ?
ಆರ್ಯವರ್ಧನ್: ಇಲ್ಲಿ ಮಗಳು ಏನೂ ಮಾತನಾಡಲಿಲ್ಲ ಹೆದರಿಕೊಂಡಿದ್ದಳು ಅನಿಸುತ್ತದೆ. ಭಯ ಪಡುತ್ತಿದ್ದಳು ಅದಿಕ್ಕೆ ಸುಮ್ಮನಾದೆ.
ಸುದೀಪ್: ನೀವು ಫ್ಯಾಮಿಲಿನ ಕಂಫರ್ಟ್ ಮಾಡಲಿಲ್ಲ ಸ್ವಾಮಿ. ಹೆಂಡತಿ ಭಯದಲ್ಲಿ. ಬಾಯಿ ಬಿಟ್ಟರೆ ನೀವು ಇಷ್ಟು ದಿನ ಹೇಳಿರುವುದು ಎಲ್ಲಿ ಲೀಕ್ ಆಗುತ್ತೆ ಅಂತ. ಹೆಂಡತಿ ಬಂದಾಗ ಅವರನನು ಮನೆಗೆ ಕಳುಹಿಸುವುದರಲ್ಲಿ ಇದ್ರಿ ನೀವು .