BBK9 ಆರ್ಯವರ್ಧನ್ ಗುರೂಜೀ ಗೂಗ್ಲಿ ಮಾಡ್ತಿರೋದು ಯಾರಿಗೂ ಗೊತ್ತಾಗುತ್ತಿಲ್ವಾ?

ಬಿಬಿ ಮನೆಯಲ್ಲಿ ಸೇಫ್‌ ಗೇಮ್‌ ಆಡುತ್ತಿರುವುದು ಯಾರು? ಟಿ20 ಕಪ್‌ ಜೊತೆ ಕಂಪೇರ್ ಮಾಡಿ ಸ್ಪರ್ಧಿಗಳು ಮಾತನಾಡಿದ್ದಾರೆ. 

Colors Kannada Bigg boss 9 contestants talk about Aryavardhan safe game vcs

ಬಿಗ್ ಬಾಸ್ ಸೀಸನ್ 1 ಓಟಿಟಿಯಿಂದ ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟಿರುವ ಆರ್ಯವರ್ಧನ್ ತುಂಬಾನೇ ಕೂಲ್ ಅಗಿ ಪ್ರತಿಯೊಬ್ಬ ಸ್ಪರ್ಧಿ ಜೊತೆಗೂ ಚೆನ್ನಾಗಿ ಸಂಬಂಧ ಹೊಂದಿಸಿಕೊಂಡು ಗೇಮ್ ಆಡುತ್ತಿರುವುದು ಯಾರೆಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾಗ ಸದಸ್ಯರು ಆರ್ಯವರ್ಧನ್ ಹೆಸರನ್ನು ಆಯ್ಕೆ ಮಾಡಿದ್ದಾರೆ. ಈ ವಿಚಾರವನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳದೆ ಕೂಲ್ ಆಗಿ ಆರ್ಯವರ್ಧನ್ ನಗುತ್ತಾರೆ.

T20 ಕಪ್‌ನಲ್ಲಿ ಭಾರತ ಅದ್ಭುತವಾಗ ಆಟವಾಡುತ್ತಿರುವ ಕಾರಣ ಕಿಚ್ಚ ಸುದೀಪ್‌ ಬಿಗ್ ಬಾಸ್‌ ಮನೆಯಲ್ಲಿ  T20 ನಡೆದರೆ ಅದ್ಭುತವಾಗಿ ಆಟ ಆಡುವುದು ಯಾರು? ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಬಹುತೇಕರು ಆರ್ಯವರ್ಧನ್‌ ಆಯ್ಕೆ ಮಾಡಿದ್ದಾರೆ.

'ದಿನಕ್ಕೆರಡು ರೀತಿ ಗೆಟಪ್ ಹಾಕಿಕೊಂಡು ವೀಕ್ಷಕರಿಗೆ ಮನೋರಂಜನೆ ನೀಡುತ್ತಿರುವುದು ಅರುಣ್ ಸಾಗರ್. ಎಲ್ಲರೂ ಟಾಸ್ಕ್‌ನ ಒಂದು ರೀತಿಯಲ್ಲಿ ಕಂಡರೆ ಅರುಣ್ ಸಾಗರ್ ಮತ್ತೊಂದು ರೀತಿಯಲ್ಲಿ ನೋಡುತ್ತಾರೆ. ಜಗಳ ಮಾಡ್ತಾರೆ ಜನರನ್ನು ನಗಿಸುತ್ತಾರೆ ಗೇಮ್ ಆಟುತ್ತಾರೆ' ಎಂದು ರಾಕೇಶ್ ಅಡಿಗೆ  ಹೇಳುತ್ತಾರೆ. ಅದಿಕ್ಕೆ ಸುದೀಪ್ 'ಈ ಮನೆಯಲ್ಲಿ ಪ್ಲೇಯರ್ ಆಗಬೇಕಿತ್ತು ಅದರೆ ಅಂಪೈರ್ ಆಗಿದ್ದಾರೆ ಯಾರು?' ಎಂದು ಮರು ಪ್ರಶ್ನೆ ಮಾಡುತ್ತಾರೆ. 

Colors Kannada Bigg boss 9 contestants talk about Aryavardhan safe game vcs

ಅರುಣ್ ಸಾಗರ್ ಮಾತುಗಳು:

'ಆರ್ಯವರ್ಧನ್ ಪ್ರಕಾರ ಅಂಪೈರ್ ನಾನು ಅದರೆ ನನ್ನ ಪ್ರಕಾರ ಅದು ಆರ್ಯವರ್ಧನ್ ಆಗಬೇಕು.  ಹಳೆ ಕಾಲದಲ್ಲಿ ಗೂಗ್ಲಿ ಬೌಲಿಂಗ್ ಮಾಡುತ್ತಿದ್ದರು ಆ ರೀತಿ ಮಾಡುತ್ತಾರೆ. ಎಡಗಡೆ ಬಿಡ್ತೀನಿ ಅಂದ್ರೆ ಬಲಗಡೆ ಬಿಡುತ್ತಾರೆ. ಅರ್ಯವರ್ಧನ್‌ ಮಾತುಗಳನ್ನು ಚೆನ್ನಾಗಿ ಆಡುತ್ತಾರೆ. ಕ್ಯಾಪ್ಟನ್‌ ಟಾಸ್ಕ್‌ ಡ್ರಾ ಮ್ಯಾಚ್ ಆದ ಕಾರಣ ಜನರು ವೋಟ್ ಮಾಡಬೇಕಿತ್ತು ಆಗ ಆರ್ಯವರ್ಧನ್‌ ಮೊದಲು ರಾಜಣ್ಣ ಅವರ ಬಗ್ಗೆ ಮಾತನಾಡಿದ್ದರು. ನೀವು ತುಂಬಾ ಒಳ್ಳೆಯವರು ಕೆಲಸ ಚೆನ್ನಾಗಿ ಮಾಡುತ್ತೀರಿ ಎಲ್ಲಾ ಓಕೆ ಆದರೆ ನಾನು ವೋಟ್ ಕೊಡುವುದು ಮಾತ್ರ ಪ್ರಶಾಂತ್‌ಗೆ ಅಂದುಬಿಟ್ಟರು. ಯಾರ ಬಗ್ಗೆನೋ ಹೇಳುತ್ತಾರೆ ಯಾರಿಗೋ ಹೋಗುತ್ತಾರೆ. ಹೀಗಾಗಿ ಆರ್ಯವರ್ಧನ್ ಆಲ್‌ ರೌಂಡರ್' 

ರಚಿತಾನ ತಬ್ಬಿಕೊಳ್ಳಬೇಕು ಎಂದ ಗುರೂಜಿ: ಆರ್ಯವರ್ಧನ್ ಗುರೂಜಿ ಮಾತಿಗೆ ಜನ ಶಾಕ್!

ರೂಪೇಶ್ ಶೆಟ್ಟಿ:

'ಕೊನೆ ಬಾಲಿಗೆ 6 ಹೊಡೆಯುವುದು ಅಂದ್ರೆ ರೂಪೇಶ್ ರಾಜಣ್ಣ. ಅದರೆ ರಾಜಣ್ಣ ಕೀಪರ್‌ಗೆ ಹೊಡೆಯುತ್ತಾರಾ? ಅಂಪೈರ್ ಗೆ ಹೊಡೆಯುತ್ತಾರೆ ಅಥವಾ ಬಾಲ್‌ಗೆ ಹೊಡೆಯುತ್ತಾರೆ ಅನ್ನೋದು ಕೊನೆ ಕ್ಷಣದಲ್ಲಿ ಹೇಳಬೇಕು' 

ರೂಪೇಶ್ ರಾಜಣ್ಣ:

'ಆರ್ಯವರ್ಧನ್‌ ಅವರೇ ಗೂಗ್ಲಿ ಬಾಲ್.  ಅಂಪೈರ್ ಗೆ ಎಡಗಡೆಯಿಂದ ಬಾಲ್ ಹಾಕ್ತೀನಿ ಅಂತಾರೆ ಅವರ ಮಾತು ನಂಬಿ ಎಡಗಡೆ ನೋಡುತ್ತಿದ್ದರೆ ಬಾಲ್ ಬಲಗಡೆಯಿಂದ ಬರುತ್ತದೆ. ಆರ್ಯವರ್ಧನ್ ಒಬ್ಬರ ಜೊತೆ ಒಂದು ಹೇಳುತ್ತಾರೆ ಅದೇ ವಿಚಾರವನ್ನು ಮತ್ತೊಬ್ಬರ ಬಳಿ ಬಂದು ಮತ್ತೊಂದು ರೀತಿಯಲ್ಲಿ ಹೇಳುತ್ತಾರೆ ಹೀಗಾಗಿ ಆರ್ಯವರ್ಧನ್ ಮಾತುಗಳನ್ನು ಯಾವ ರೀತಿ ತೆಗೆದುಕೊಳ್ಳಬೇಕು ಅನ್ನೋ ಗೊಂದಲ ಸೃಷ್ಟಿ ಆಗುತ್ತೆ. ಸರಿ ಆರ್ಯವರ್ಧನ್ ಮಾತು ನಂಬಬಹುದು ಅನ್ನೋಷ್ಟರಲ್ಲಿ ಅವರೇ ಮತ್ತೊಂದು ದಿಕ್ಕಿಗೆ ಹೋಗುತ್ತಾರೆ. ಹೀಗಾಗಿ ಗೂಗ್ಲಿ ಬೌಲರ್ ಆಯವರ್ಧನ್ ಅವರೇ. ಆರ್ಯವರ್ಧನ್ ಅವರಿಗೆ ಗೂಗ್ಲಿ ಮಾಡುತ್ತಿರುವುದು ಗೊತ್ತಿದೆ ಆದರೆ ಎದುರಿಗೆ ಇರುವವರಿಗೆ ನಾನು ಮಾಡುತ್ತಿಲ್ಲ ಅನ್ನೋ ರೀತಿಯಲ್ಲಿ ಗೊಂದಲ ಸೃಷ್ಟಿ ಮಾಡಿ ಗೂಗ್ಲಿ ಮಾಡುತ್ತಾರೆ'

BBK9; ಅನ್ನ ಹಾಕೋಕೆ ಯೋಗ್ಯತೆ ಇಲ್ಲ, ಪುರಾಣ ಮಾತಾಡ್ತಾರೆ, ಸ್ಪರ್ಧಿಗಳ ವಿರುದ್ಧ ಸಿಡಿದೆದ್ದ ಆರ್ಯವರ್ಧನ್

ಅಮೂಲ್ಯ ಗೌಡ:

'ಈ ಮನೆಯಲ್ಲಿ ಆರ್ಯವರ್ಧನ್‌ಗೆ  ಕಾಂಪಿಟೇಷನ್ ಕೊಡಲು ಯಾರಿಂದಲ್ಲೂ ಸಾಧ್ಯವಿಲ್ಲ. ಎಲ್ಲಿ ಹೇಗೆ ಇರಬೇಕು ಬ್ಯಾಟ್ ಮಾಡುವವರು ಇಲ್ಲದ ಸಮಯದಲ್ಲಿ ಬಾಲ್ ಹಾಕುತ್ತಾರೆ. ಆ ಮೇಲೆ ಬ್ಯಾಟ್ ಮಾಡುವವರು ಬಂದಾಗ ನಿನಗೆ ಹಾಕಿದಲ್ಲ ಮತ್ತೊಬ್ಬರಿಗೆ ಎನ್ನುತ್ತಾರೆ'

ದಿವ್ಯಾ ಉರುಡುಗ:

'ಕಿಚನ್ ಡಿಪಾರ್ಟ್‌ಮೆಂಟ್‌ನಲ್ಲಿ ನಾನು ಕೆಲಸ ಮಾಡುತ್ತಿರುವುದಕ್ಕೆ ಆರ್ಯವರ್ಧನ್ ಅವರು ನಾನು ಹೇಗೆ ಗೂಗ್ಲಿ ಮಾಡಬೇಕು ಎಂದು ಪಾಠ ಮಾಡುತ್ತಾರೆ. ಎಷ್ಟರ ಮಟ್ಟಕ್ಕೆ ಗೂಗ್ಲಿ ಮಾಡುತ್ತಾರೆ ಅಂದ್ರೆ ರಾತ್ರಿ ಊಟ ಸಮಯದಲ್ಲಿ  ಮಾತು ಬದಲಾಯಿಸುತ್ತಾರೆ. 

Latest Videos
Follow Us:
Download App:
  • android
  • ios