ಡ್ರೋನ್ ಪ್ರತಾಪ್ ರನ್ನರ್ ಅಪ್‌ಗೆ ಅರ್ಹರಿದ್ದರೆ ಎಂಬ ಫ್ಯಾನ್ ಪ್ರಶ್ನೆಗೆ ಸುದೀಪ್ ಹೀಗೊಂದು ಜಾಣ ಉತ್ತರ!
ಡ್ರೋನ್ ಪ್ರತಾಪ್ ಬಿಗ್‌ಬಾಸ್ ರನ್ನರ್ ಅಪ್ ಸ್ಥಾನಕ್ಕೆ ಅರ್ಹರಿದ್ದರೆ ಎಂಬ ಅಭಿಮಾನಿಯ ಪ್ರಶ್ನೆಗೆ ಕಿಚ್ಚ ಸುದೀಪ್ ಹೇಳಿದ್ದೇನು ಕೇಳಿ...
ಬಿಗ್‌ಬಾಸ್ ಕನ್ನಡ ಸೀಸನ್ ಏಳನೇ ಆವೃತ್ತಿ ಮುಗಿದಿದ್ದರೂ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಲೇ ಇದೆ. ತಮ್ಮ ಇಷ್ಟದ ಸ್ಪರ್ಧಿಗಳು ಟ್ರೋಫಿ ಗೆಲ್ಲಲಿಲ್ಲ ಎನ್ನುವುದು ಬಹುತೇಕ ಮಂದಿಯ ಆರೋಪವಾಗಿದ್ದರೆ, ಈಗ ಗೆದ್ದಿರುವ ಹಾಗೂ ರನ್ನರ್ ಅಪ್ ಆಗಿರುವ ಸ್ಪರ್ಧಿಗಳ ಬಗ್ಗೆ ಆಕ್ರೋಶ, ಅಸಮಾಧಾನ ಹೊರಹಾಕುವವರ ವರ್ಗ ಇನ್ನೊಂದೆಡೆ. ಅದರಲ್ಲಿಯೂ ಹೆಚ್ಚಾಗಿ ಇದೀಗ ಭಾರಿ ಚರ್ಚೆಗೆ ಒಳಗಾಗುತ್ತಿರುವ ಹೆಸರು ಡ್ರೋನ್ ಪ್ರತಾಪ್ ಅವರದ್ದು. ಸಂಗೀತಾ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಪ್ರಚಾರ ನಡೆದಂತೆಯೇ, ಡ್ರೋನ್ ಪ್ರತಾಪ್ ಪರವಾಗಿಯೂ ಭರ್ಜರಿಯಾಗಿಯೇ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದರು. ಇದೀಗ ಕಾರ್ತಿಕ್ ಅವರು ವಿನ್ನರ್ ಆಗಿ, ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಅವರು ಕ್ರಮವಾಗಿ ಮೊದಲ ಮತ್ತು ಎರಡನೆಯ ರನ್ನರ್ಸ್ ಆಗಿದ್ದಾರೆ.
ಇದೀಗ ಡ್ರೋನ್ ಪ್ರತಾಪ್ ಅವರು ಮೊದಲ ರನ್ನರ್ ಅಪ್ ಆಗಿರುವ ಬಗ್ಗೆ ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಅಷ್ಟಕ್ಕೂ ಡ್ರೋನ್ ಪ್ರತಾಪ್ ಬಿಗ್‌ಬಾಸ್ ಮನೆಗೆ ಕಾಲಿಡಲು ಕಾರಣವೇ ಕಾಂಟ್ರವರ್ಸಿಯಲ್ಲಿ ಹೆಸರು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಕೆಲ ವರ್ಷಗಳ ಹಿಂದೆ ಈ ಯುವಕನ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್. ಡ್ರೋನ್ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡಿದ್ದ ಪ್ರತಾಪ್ ಬಿಗ್‌ಬಾಸ್‌ನಲ್ಲಿ ಪ್ರತ್ಯಕ್ಷ ಆಗಿ ಭಾರಿ ಅಭಿಮಾನಿಗಳನ್ನೂ ಗಳಿಸಿದರು. ಜೊತೆಗೆ ಅಚ್ಚರಿ ಎನ್ನುವಂತೆ ರನ್ನರ್ ಅಪ್ ಕೂಡ ಆದರು.
ರೀಲ್ ಬಿಟ್ಟ ವಿವಾದದ ಬೆನ್ನಲ್ಲೇ ಮತ್ತೊಂದು ಆರೋಪದಲ್ಲಿ ಪ್ರತಾಪ್! ಡ್ರೋನ್ ನೀಡ್ತೇನೆಂದು 35 ಲಕ್ಷ ಟೋಪಿ?
ಇದರ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಡೀ ರಾಜ್ಯವನ್ನು ಯಾಮಾರಿಸಿದ ವ್ಯಕ್ತಿ ಇಷ್ಟು ದೊಡ್ಡ ಶೋನಲ್ಲಿ ರನ್ನಪ್ ಆಗಿದ್ದಾರೆ. ಇದಕ್ಕೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ Ask kichcha ಸೆಷನ್ ನಡೆಸುತ್ತಿದ್ದು, ಅದರಲ್ಲಿ ಅಭಿಮಾನಿಗಳು ಹಲವಾರು ವಿಷಯಗಳನ್ನು ಕೇಳುತ್ತಾರೆ. ಇದೀಗ ಡ್ರೋನ್ ಪ್ರತಾಪ್ ಕುರಿತು ಅವರಿಗೆ ಪ್ರಶ್ನಿಸಲಾಗಿದೆ. ನಿಮಗೆ ಗೊತ್ತು ಪ್ರತಾಪ್ ಟಾಪ್-2 ಸ್ಥಾನಕ್ಕೇರಲು ಅರ್ಹ ಅಲ್ಲ ಎಂದು. ಫಿನಾಲೆ ವೇದಿಕೆಯಲ್ಲಿ ಫೇಕ್‌ನೆಸ್ ನೀವು ಡಿಕೋಡ್ ಮಾಡಿದ್ದಿರಿ ಕೂಡ. ಆದರೂ ನೀವು ನಿರೂಪಕನಾಗಿ ಅದನ್ನೆಲ್ಲಾ ಹೇಗೆ ನಿಭಾಯಿಸಿದಿರಿ, ಅದು ಹೇಗೆ ಅಷ್ಟು ಕೂಲ್ ಆಗಿ ಇದ್ರಿ? ಎಂದು ಕೇಳಿದ್ದಾರೆ.
ಅದಕ್ಕೆ ಕಿಚ್ಚ ಸುದೀಪ್ ಅಡ್ಡಗೋಡೆಯ ಮೇಲೆ ದೀಪ ಇಟ್ಟವರಂತೆ ಉತ್ತರಿಸಿದ್ದಾರೆ. ನೇರವಾಗಿ ಈ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಾಪ್ ಟಾಪ್ 2ಗೆ ಬಂದಿದ್ದಾರೆ, ಅವರನ್ನು ಪ್ರಶಂಸಿಸದಿರುವುದು ತಪ್ಪಾಗುತ್ತದೆ ಎಂದಷ್ಟೇ ಹೇಳಿದ್ದಾರೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆಯಾಗುತ್ತಿದೆ. ನಿಜಕ್ಕೂ ಡ್ರೋನ್ ಪ್ರತಾಪ್ ಮೊದಲ ರನ್ನರ್ ಅಪ್ ಆಗುವಷ್ಟು ಅರ್ಹರಾಗಿದ್ದರೆ? ಉಳಿದ ಸ್ಪರ್ಧಿಗಳಿಗಿಂತ ಇವರು ಇಷ್ಟು ಅರ್ಹರೆ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.
ಮಾನನಷ್ಟ ಮೊಕದ್ದಮೆ ಕೇಸ್ ಬೆನ್ನಲ್ಲೇ, ಬಿಗ್ ಬಾಸ್ ಜೈಲು ಪಾಲಾದ ಡ್ರೋನ್ ಪ್ರತಾಪ್! ಫ್ಯಾನ್ಸ್ ಶಾಕ್...