ಬಿಗ್ ಬಾಸ್ ಶುರುವಾಗಿ ಒಂದು ವಾರವಾಗಿದೆ. ಮೊದಲನೇ ವಾರ ಗುರುಲಿಂಗ ಸ್ವಾಮಿಜೀ ಹೊರ ಬಂದಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಕಿಚ್ಚ ಸುದೀಪ್ ಮಾತುಕತೆ ಇಂಟರೆಸ್ಟಿಂಗ್ ಆಗಿತ್ತು. 

Yes or No ರೌಂಡ್ ನಲ್ಲಿ ಸುದೀಪ್, ಒಂದೇ ಹೆಸರಿನವರು ಇಬ್ಬಿಬ್ಬರು ಇರುವುದರಿಂದ ಐಡೆಂಟಿಟಿ ಕ್ರೈಸಿಸ್ ಸಮಸ್ಯೆ ಆಗಬಹುದು ಎನಿಸುತ್ತದೆಯಾ? ಎಂದು ಕೇಳುತ್ತಾರೆ. 

ಚಂದನ್​ ಶೆಟ್ಟಿ ಜತೆ ನಿವೇದಿತಾ ಗೌಡ ಎಂಗೇಜ್​ಮೆಂಟ್​

ಚೈತ್ರಾ ವಾಸುದೇವನ್ ಅಭಿಪ್ರಾಯವನ್ನು ಕೇಳಿದಾಗ, ನಾನು ಮಲಗಿದ್ದೆ. ಏನೋ ಗಲಾಟೆ ಕೇಳಿಸ್ತು. ಏನು ಅಂತ ನೋಡಿದಾಗ ಎಲ್ಲರೂ ಚೈತ್ರಾ- ಶೈನ್ ಲವ್ ಬಗ್ಗೆ ಮಾತಾಡ್ತಾ ಇದ್ರು. ನನಗೆ ಮದುವೆಯಾಗಿದೆ. ನನ್ನ ಗಂಡ ತುಂಬಾ ಪ್ರೀತಿ ಮಾಡ್ತಾರೆ. ಮನೆಯವರೆಲ್ಲಾ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರು ನನ್ನ ಹೆಸರನ್ನು ಶೈನ್ ಜೊತೆ ಕೇಳಿಸಿಕೊಂಡಾಗ ತಪ್ಪು ತಿಳಿಯುವ ಸಾಧ್ಯತೆ ಇರುತ್ತದೆ. ಐಡೆಂಟಿಟಿ ಕ್ರೈಸಿಸ್ ಆಗಬಹುದು ಎನಿಸುತ್ತದೆ ಎನ್ನುತ್ತಾರೆ. 

ಆಗ ಚೈತ್ರಾ ಕೊಟ್ಟೂರು ಸ್ವಲ್ಪ ಕಟುವಾಗಿ ಉತ್ತರ ಕೊಡುತ್ತಾರೆ.  'ನಮಗೇನು ಮನೆ ಮಠ ಇಲ್ವಾ? ಕುಟುಂಬ ಇಲ್ವಾ? ಅಣ್ಣ ತಮ್ಮ ಇಲ್ವಾ? ಜನ ನಮ್ಮನ್ನು ನೋಡಲ್ವಾ? ತಲೆಯಲ್ಲಿ ಬುದ್ದಿ ಇಲ್ವಾ? ಎಂದು ವಾಸುದೇವನ್ ಗೆ ಉತ್ತರಿಸುತ್ತಾರೆ. 

ದೊಡ್ಮನೆಯಲ್ಲಿ ಆ ದಿನಗಳ ಬಗ್ಗೆ ಮಾತನಾಡಿದ ಬೆಳಗೆರೆ ಹೇಳಿದ್ದಿಷ್ಟು!

ನನಗೂ ಸಮಾಜದಲ್ಲಿ ಬೆಲೆ ಇದೆ. ಹೆಸರಿದೆ. ನನ್ನ ಮಟ್ಟಿಗೆ ನಾನು ಸಭ್ಯಸ್ಥ ಹುಡುಗಿ. ಅದಕ್ಕಿಂತ ಹೆಚ್ಚಾಗಿ ನಾನೊಬ್ಬ ಬರಹಗಾರ್ತಿ. ಪ್ರತಿಕ್ಷಣ ನಾನು ಏನ್ ಮಾಡ್ತೀನಿ ಅನ್ನೋ ಅರಿವಿದೆ ಎಂದಾಗ ನಿಮಗೆ ಅರಿವಿದ್ದು ಶೈನ್ ಜೊತೆ ಲವ್ ಸಾಂಗ್ ಹಾಡ್ತಾ ಇದ್ರಾ ಎಂದು ವಾಸುದೇವನ್ ಕೇಳುತ್ತಾರೆ.  ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಆಗ ಸುದೀಪ್ ಮಧ್ಯೆ ಪ್ರವೇಶಿಸಿ ಒಬ್ಬರ ಮಾತನಾಡುವಾಗ ಇನ್ನೊಬ್ಬರು ಕೇಳಿಸಿಕೊಳ್ಳಬೇಕು. ಎಲ್ಲರಿಗೂ ಅಭಿಪ್ರಾಯ ಹೇಳುವ ಅಧಿಕಾರವಿದೆ ಎನ್ನುತ್ತಾರೆ.