ದೊಡ್ಮನೆಯಲ್ಲಿ ‘ಆ ದಿನಗಳ’ ಬಗ್ಗೆ ಮಾತನಾಡಿದ ಬೆಳಗೆರೆ ಹೇಳಿದ್ದಿಷ್ಟು!

ಬಿಗ್ ಬಾಸ್ ಮನೆಯಲ್ಲಿ ಆ ದಿನಗಳ ಬಗ್ಗೆ ಮಾತನಾಡಿದ ಬೆಳಗೆರೆ/  ಎಂದೂ ಮರೆಯದ ಹಾಡು ಕಾರ್ಯಕ್ರಮದ ಮರು ನಿರ್ಮಾಣ/ ಶಂಕರ್ ನಾಗ್ ಬಗ್ಗೆ  ಮಾತನಾಡಿ ಗೌರವ ಸೂಚಿಸಿದ ಬೆಳಗೆರೆ

Bigg Boss 7 Endu mareyada haadu program recreated Ravi Belagere Anchor

ಬಿಗ್ ಬಾಸ್ ಮನೆಯಲ್ಲಿ ಭಾನುವಾರ ಸಂಗೀತ ಕಛೇರಿ. ರವಿ ಬೆಳಗೆರೆ ನಿರೂಪಣೆಯಲ್ಲಿ ಒಂದು ಕಾಲದ ಸೂಪರ್ ಹಿಟ್ ಕಾರ್ಯಕ್ರಮ ಎಂದೂ ಮರೆಯದ ಹಾಡು ಮರು ನಿರ್ಮಾಣವಾಯಿತು.

ಈ ವೇಳೆ ಬಿಗ್ ಬಾಸ್ ನೀಡಿದ 15 ಕನ್ನಡ ಚಿತ್ರಗೀತೆಗಳನ್ನು ಸ್ಪರ್ಧಿಗಳು ಹಾಡಿ ರಂಜಿಸಿದರು.  ಈ ವೇಳೆ ಆ ದಿನಗಳು ಚಿತ್ರದ ಸೂರ್ ಹಿಟ್ ಗೀತೆ ‘ಸಿಹಿ ಗಾಳಿ ಸಿಹಿ ಗಾಳಿ’ ಬಗ್ಗೆ ಮಾತು ಬಂತು. ಗೀತೆ ರಚನೆ ಮಾಡಿದ ಸುಮನಾ ಕಿತ್ತೂರು, ನಿರ್ದೇಶನ ಮಾಡಿದ ಕೆ.ಎಂ.ಚೈತನ್ಯ ಮತ್ತು ಸಂಗೀತ ನೀಡಿದ ಮಾಂತ್ರಿಕ ಇಳಯರಾಜ ಅವರಿಗೆ ಚಪ್ಪಾಳೆ ಸಲ್ಲಬೇಕು ಎಂದರು. ಅಲ್ಲದೇ ಇದಕ್ಕೆ ಚಿತ್ರಕಥೆ ಸಿದ್ಧಮಾಡಿಕೊಟ್ಟಿದ್ದು ಗಿರೀಶ್ ಕಾರ್ನಾಡರು ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದರು.

ಶಂಕರ್‌ನಾಗ್ ಅವರನ್ನು ಕೋತಿ ಎಂದು ಕರೆದ ನಟಿ ಯಾರು?

ಶೈನ್ ಶೆಟ್ಟಿ ಮತ್ತು ಚೈತ್ರಾ ವಾಸುದೇವನ್ ಗೀತೆಯನ್ನು ಹಾಡಿ ರಂಜಿಸಿದರು. ಶನಿವಾರ ವಾರದ ಕತೆ ಕಿಚ್ಚನ ಜತೆಯಲ್ಲಿ ಎಲಿಮಿನೇಶನ್ ನಡೆದಿರಲಿಲ್ಲ. ಚೈತ್ರಾ ಕೊಟ್ಟೂರು ಮತ್ತು ಸ್ವಾಮೀಜಿ ಅಂತಿಮವಾಗಿ ಇದ್ದರು. ಇಬ್ಬರಲ್ಲಿ ಯಾರನ್ನು ಹೊರ ಬರುತ್ತಾರೆ ಎಂಬ ಕುತೂಹಲವನ್ನು ಬಿಗ್ ಬಾಸ್ ಹಾಗೆ ಕಾಪಾಡಿಕೊಂಡು ಬಂದಿದ್ದಾರೆ.

2007ರಲ್ಲಿ ತೆರೆಕಂಡ ಆ ದಿನಗಳು ಚಿತ್ರ ಕರ್ನಾಟಕ ಭೂಗತ ಜಗ್ಗತಿನ ನೈಜ ಕತೆಯನ್ನು ಆಧರಿಸಿತ್ತು.  ಪ್ರೀತಿ ಉಳಿಸಿಕೊಳ್ಳಲು ನಾಯಕ ಎಂಥ ರಿಸ್ಕ್ ಮೈಮೇಲೆ ಎಳೆದುಕೊಳ್ಳುತ್ತಾನೆ ಎಂಬ ಕಥಾಹಂದರ ಜನಮನ್ನಣೆ ಗಳಿಸಿತ್ತು.

 

Latest Videos
Follow Us:
Download App:
  • android
  • ios