ನಟಿ ನಿಧಿ ಸುಬ್ಬಯ್ಯ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಸ್ವಾರಸ್ಯಕರ ಸಂಗತಿಗಳು ದಿನಕಳೆದಂತೆ ಹೊರ ಬರುತ್ತವೆ. ಇದೀಗ ನಟಿ ತಮ್ಮ ಹಳೆಯ ದಿನಗಳಿಂದ ಇಂಟ್ರೆಸ್ಟಿಂಗ್ ವಿಚಾರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಮೈಸೂರಿನಲ್ಲಿ ಅಜ್ಜಿ, ತಾತನ ಜೊತೆ ಇದ್ದರು ನಿಧಿ. ಮೇಲಿನ ಫ್ಲೋರ್‌ನಲ್ಲಿ ನಿಧಿ ವಾಸಿಸುತ್ತಿದ್ದರೆ, ಕೆಳಗಡೆ ತಾತ ಇದ್ದರು. ಏನೋ ಇನ್ಸಿಡೆಂಟ್ ನಡೆದು ಅದೊಂದು ದಿನ ನಿಧಿ ಮನೆಗೆ ಕೆಲವು ಬೈಕ್ಸ್ ಬಂದಿತ್ತು.

BBK8: ಮೊದಲ ದಿನವೇ ದಿವ್ಯಾ ಸುರೇಶ್ ಪ್ರೀತಿಯ ಬಲೆಗೆ ಬಿದ್ದ ಲ್ಯಾಗ್ ಮಂಜು!

ರಾತ್ರಿ ವೇಳೆ 4 ಬೈಕ್‌ನಲ್ಲಿ ಎಂಟು ಜನ ಬಂದಿದ್ದರು. ನಿಧಿ ಅವರು ಕೆಳಗಿನ ಫ್ಲೋರ್‌ನಲ್ಲಿರುತ್ತಾರೆಂದು ಅಲ್ಲೇ ಮಾಲೆ ಪಟಾಕಿ ಎಸೆದಿದ್ದರು. ನಡುರಾತ್ರಿ ದೊಡ್ಡ ಸದ್ದಿನಲ್ಲಿ ಒಡೆದಿತ್ತು ಪಟಾಕಿ.

ಎದ್ದು ನೋಡಿದರೆ ನಾಲ್ಕು ಬೈಕ್‌ಗಳು ಪಾಸಾಗುವುದು ಕಂಡಿತು ಅಷ್ಟೇ. ನಂತರ ಪೊಲೀಸ್ ಸ್ಟೇಷನ್‌ಗೆ ಕಂಪ್ಲೇಂಟ್ ಕೊಟ್ಟಿದ್ದೂ ಆಯಿತಂತೆ. ಅಂದ ಹಾಗೆ ಇದನ್ನು ಮಾಡಿದ್ಯಾರು ಗೊತ್ತಾ..?

'ನನ್ನ ಹೆಂಡತಿ ಕೈಯೂಟ ತಿಂದ ಹದಿನೈದು ಜನ ಸತ್ತೋಗಿದ್ದಾರೆ'

ಎಲ್ಲರೂ ನಿಧಿ ಸ್ಟೋರಿಯನ್ನು ಇಂಟ್ರೆಸ್ಟಿಂಗ್‌ನಲ್ಲಿ ಕೇಳುವಾಗ ಪಟಾಕಿ ಎಸೆದವರು ನಟ ಎಂದರು ನಿಧಿ. ಇದು ಇನ್ನಷ್ಟು ಕುತೂಹಲ ವಿಚಾರ. ಆಗ ಪಟಾಕಿ ಎಸೆದಾತ ಯಶ್ ಎಂದಿದ್ದಾರೆ ನಿಧಿ. ಇದು ಎಲ್ಲರಿಗೂ ಅಚ್ಚರಿಯ ಮತ್ತು ಹೊಸ ವಿಚಾರ.. ನಮಗೂ.. ಅಲ್ವಾ..?