17 ಸ್ಪರ್ಧಿಗಳು ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದು ಆಯ್ತು. ಎಲ್ಲರೂ ಮೊದಲ ದಿನ ಬೆಳಗ್ಗೆ 9.30kdks ಎದ್ದು ತಮ್ಮ  ಲಗೇಜ್‌ಗಳನ್ನು ಅನ್‌ಪ್ಯಾಕ್‌ ಮಾಡುತ್ತಿದ್ದಾರೆ. ಗಾಳಿಪಟ ಚಿತ್ರದ ಹಾಡು ಬರುತ್ತಿದ್ದಂತೆ ಮನೆಯ ಪ್ರತಿ ಸ್ಪರ್ಧಿಯೂ ಹೆಜ್ಜೆ ಹಾಕುತ್ತಾ, ದಿನ ಆರಂಭಿಸಿದ್ದಾರೆ. ಈ ಗ್ಯಾಪ್‌ನಲ್ಲಿ ಲ್ಯಾಗ್‌ ಮಂಜು ಹಾಗೂ ದಿವ್ಯಾ ನಡುವೆ ಕುಚು ಕುಚು ಶುರವಾದಂತೆ ಭಾಸವಾಗಿದೆ.

ಅಪ್ಪ ಬಿಟ್ಟೋದ ಬೇಜಾರಿಲ್ಲ, ತೋರಿಸಿದ್ದ ಪ್ರೀತಿಯೇ ದೊಡ್ಡ ಸುಳ್ಳು; ಬಿಗ್ ಬಾಸ್‌ ಸ್ಪರ್ಧಿ ದಿವ್ಯಾ ಕಣ್ಣೀರು!

ಹೌದು! ಲ್ಯಾಗ್ ಮಂಜು ಸ್ವಲ್ಪ ಫ್ರೆಂಡ್ಲಿ ಆಗಿರೋ ಕಲಾವಿದ, ಕಾಮಿಡಿ ಮಾಡುತ್ತಾ ಎಲ್ಲರಿಗೂ ಸಹಾಯ ಮಾಡುತ್ತಾ ಮನೆಯಲ್ಲಿರುವ ಪ್ರತಿಸ್ಪರ್ಧಿಗಳ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಗ ತಮ್ಮ ಬಟ್ಟೆಗಳನ್ನು ಮಡಚಿಡುವಾಗ 'ಕೇಳಿ ಪ್ರೇಮಿಗಳೇ' ಎಂದು ಹಾಡೇಳಲು ಶುರು ಮಾಡಿದ್ದರು. ತಕ್ಷಣವೇ ಲ್ಯಾಗ್ ಮಂಜು ಎಂಟ್ರಿ ಕೊಟ್ಟು 'ಏನ್ ಬೇಕು ಅಂದರೂ ಕೇಳಿ. ನಿಮಗೊಸ್ಕರ ಏನ್‌ ಬೇಕಿದ್ದರೂ ಮಾಡೋಕೆ ನಾನು ರೆಡಿ,' ಎಂದು ಹೇಳಿದ್ದಾರೆ. ತಮಾಷೆ ನೋಡಲು ದಿವ್ಯಾ ಮಂಜುಗೆ ಬಟ್ಟೆ ಮಡಿಚಿಡಲು ಒಂದು ಟಾಪ್‌ ನೋಡುತ್ತಾರೆ, ಅದು ಏನೆಂದು ತಿಳಿಯದೆ ಮಂಜು 'ಇದು ಬ್ಲೌಸ್‌ ಆ?' ಎಂದು ಹೇಳಿ ಗೊಂದಲದಲ್ಲಿ ಸಿಲುಕುತ್ತಾರೆ.  

ಈ ಘಟನೆಯಿಂದ ದಿವ್ಯಾ ಹಾಗೂ ಲ್ಯಾಗ್ ಮಂಜು ಆತ್ಮೀಯರಾಗುತ್ತಾರೆ. ದಿವ್ಯಾ ನೀವು ಏನೇ ಹೇಳಿದರೂ ನಾನು ಮಾಡಲು ರೆಡಿ ಎನ್ನುತ್ತಾರೆ ಮಂಜು. ಅದರಲ್ಲೂ ಮಂಜು 8 ವರ್ಷದಿಂದ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿಚಾರ ಕೇಳಿ ದಿವ್ಯಾ ಶಾಕ್ ಆದರು. 'ನಾನು ಸಬ್ಜೆಕ್ಟ್‌ ಬಗ್ಗೆ ಇಟ್ಟಿರುವ ಗೌರವ ಇದು. 8 ವರ್ಷ ಅದೇ ಪೇಪರ್ ಬರೆಯಬೇಕು ಅಂದ್ರೆ ಸುಮ್ಮನೇ ನಾ?' ಎಂದು ಹೇಳಿ ಅಲ್ಲಿಯೂ ಮಂಜು ಕಾಮಿಡಿ ಮಾಡಿದ್ದರು.

ಮೊದಲ ದಿನವೇ ಯಾರಿಗೆಲ್ಲ ನಾಮಿನೇಶನ್ ಶಾಕ್, ದಿವ್ಯಾ ಎತ್ತಿಕೊಂಡ ಸಂಬರಗಿ! 

ಒಟ್ಟಿನಲ್ಲಿ ಮನೆಯಿಂದ ಹೊರ ಹೋಗಲು ನಿರ್ಮಲಾ, ನಿಧಿ ಸುಬ್ಬಯ್ಯ, ಧನು ಶ್ರೀ, ಲ್ಯಾಗ್ ಮಂಜು, ಪ್ರಶಾಂತ್ ನಾಮಿನೇಟ್ ಆಗಿದ್ದಾರೆ. ಇನ್ನು ಈ ವಾರದಲ್ಲಿ ಯಾವ ರೀತಿ ಟ್ವಿಸ್ಟ್‌ ಎದುರಾಗಲಿದೆ ಎಂದು ಕಾದು ನೋಡಬೇಕಿದೆ