ಬೆಂಗಳೂರು(ಮಾ.  02)  ಬಿಗ್ ಬಾಸ್ ಮನೆಯಲ್ಲಿ ಎರಡನೇ ದಿನ ಟ್ವಿಸ್ಟ್  ಮೇಲೆ ಟ್ವಿಸ್ಟ್ ಸಿಕ್ಕಿದೆ. ನಾಮಿನೇಶನ್ ಅದಲು ಬದಲು ಆಗಿದೆ. 

ನಿಧಿ ಸುಬ್ಬಯ್ಯ ಮಾತನಾಡುತ್ತ ರಾಕಿಂಗ್ ಸ್ಟಾರ್ ಯಶ್ ಅವರ ಕತೆಯೊಂದನ್ನು ಬಿಚ್ಚಿಟ್ಟರು.  ಯಶ್ ನಮ್ಮ ಮನೆಗೆ ಪಟಾಕಿ ಎಸೆದಿದ್ದರು ಎಂಬುದನ್ನು ಹೇಳಿದರು. ಇಂದು ನಮ್ಮ ಅಮ್ಮ ಸುಟ್ಟುಹೋದ ಕರ್ಟನ್ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು

ಪ್ರಶಾಂತ್ ಸಂಬರಗಿ ಸಹ ಎರಡನೇ ದಿನ ಮಿಂಚಿಂಗ್.  ಟೀ ಮಾಡಿವುದು ಹೇಗೆ ಎಂಬುದನ್ನು ಸಂಬರಗಿ ಹೇಳಿಕೊಡುತ್ತಾ ಹೋದರು . ಹಾಲನ್ನು ಹೆಪ್ಪು ಹಾಕಿ ಮೊಸರು ಮಾಡಬಹುದು.. ಹಾಲಿಗೆ ಒಂದು ಹನಿ ನಿಂಬೆ ರಸ ಸೇರಿಸಿದರೆ ಸಾಕು ಎಂಬ ಸಂಶೋಧನೆಯನ್ನು ಮುಂದಿಟ್ಟರು.  ಇಷ್ಟೆ ಅಲ್ಲದೆ ಸಾಮಾಜಿಕ ಕೆಲಸ ಎನ್ನುತ್ತಾ ಬೆಂಗಳೂರಿನಲ್ಲಿ ಶ್ವಾನ ಪ್ರಿಯರು ತಮ್ಮ ಶ್ವಾನಗಳನ್ನು ರಸ್ತೆಯಲ್ಲಿ ತೆಗೆದುಕೊಂಡು ಬರುತ್ತಾರೆ. ಆ ಶ್ವಾನಗಳು ಕಂಡಕಂಡಲ್ಲಿ ಮಲವಿಸರ್ಜನೆ ಮಾಡುತ್ತವೆ. ಅವುಗಳಿಂದ ರೋಗ ಬರುತ್ತದೆ ಎಂಬ ವಿಶ್ಲೇಷಣೆಯನ್ನು ನೀಡಿ ಇದಕ್ಕೆ ಪರಿಹಾರ ಬೇಕು ಎಂದು ಒತ್ತಾಯಿಸಿದರು.

ನನ್ನ ಹೆಂಡತಿ ಮಾಡುವ ಊಟ ತಿಂದು ಹತ್ತು-ಹದಿನೈದು ಜನ ಸತ್ತು ಹೋಗಿದ್ದಾರೆ ಎಂದು ಶಂಕರ್ ಅಶ್ವಥ್ ಶಾಕ್ ನೀಡಿದರು. ಆಮೇಲೆ ಅದಕ್ಕೆ ವಿವರಣೆ ನೀಡಿದರು. ವ್ಯಕ್ತಿಯ ಕೊನೆಕಾಲದಲ್ಲಿ, ವೃದ್ಧಾಪ್ಯದಲ್ಲಿ  ಊಟ ನೀಡಿದ್ದೇವೆ. ಪುಣ್ಯದ ಕೆಲಸ ಮಾಡಿದ್ದೇವೆ  ಎಂದರು.

ಮನೆಯವರ ನಡುವಿನ ಬಾಂಧವ್ಯ ಹೆಚ್ಚು ಮಾಡಲು ಪ್ರಶಸ್ತಿಗಳ ವಿವರಣೆ ಸುತ್ತನ್ನು ನೀಡಲಾಗಿತ್ತು. ಶುಭಾ ಪೂಂಜಾ, ಗೀತಾ ಭಟ್, ನಿರ್ಮಲಾ, ಅರವಿಂದ್, ಗಾಯಕ ವಿಶ್ವನಾಥ್, ನಿಧಿ ಸುಬ್ಬಯ್ಯ ತಮಗೆ ಸಿಕ್ಕ ಅವಾರ್ಡ್ ಮತ್ತು ಅದರ ಜತೆಗಿರುವ ನೆನಪುಗಳನ್ನು  ಹಂಚಿಕೊಂಡರು.

ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಿದ್ದಾರೆ?

ಬಿಗ್ ಬಾಸ್  ಟ್ವಿಸ್ಟ್ ಒಂದನ್ನು ಮುಂದೆ ಇಟ್ಟರು.  ನಾಮಿನೇಶನ್ ಆದವರು ಅದನ್ನು ಬೇರೆಯವರಿಗೆ ವರ್ಗಾಯಿಸಬಹುದು ಎಂದು ಹೇಳಿದರು. ಪ್ರಶಾಂತ್ ಸಂಬರಗಿ ತಮ್ಮ ಎದುರಾಳಿಯನ್ನಾಗಿ ವಿಶ್ವನಾಥ್ ಆಯ್ಕೆ ಮಾಡಿಕೊಂಡು ಬಲೂನು ಒಡೆಯುವ ಸ್ಪರ್ಧೆಯಲ್ಲಿ ಗೆದ್ದು ನಾಮಿನೇಶನ್ ನಿಂದ ಬಚಾವಾದರು. ಹಾಗಾಗಿ ಈ ಬಾರಿ ಗಾಯಕ ವಿಶ್ವನಾಥ್ ಅವರ ಜಾಗದಲ್ಲಿ ನಾಮಿನೇಟ್ ಆದರು.

ಲ್ಯಾಗ್ ಮಂಜು ತಮ್ಮ ಎದುರಾಳಿಯನ್ನಾಗಿ  ವೈನ್ ಸ್ಟೋರ್ ರಘು ಅವರನ್ನು ಆಯ್ಕೆ ಮಾಡಿಕೊಂಡರು. ಇಲ್ಲಿಯೂ ಸಹ ಐಸ್ ಕ್ರೀಮ್ ಗೇಮ್ ನಲ್ಲಿ ಗೆದ್ದ ಮಂಜು ರಘು ಅವರನ್ನು ನಾಮಿನೇಶನ್ ಬಲೆಗೆ ಕೆಡವಿದರು. ಇದರ ನಡುವೆ ಮೈಕ್ ಬದಲಾಯಿಸಿಕೊಂಡು ದಿವ್ಯಾ ಮತ್ತು ಮಂಜನ ನಡುವೆ ಮದುವೆಯೂ ನಡೆದುಹೋಯಿತು.  

ಪ್ರಶಾಂತ್ ಸಂಬರಗಿ ವಿರುದ್ಧ ಮನೆಯಲ್ಲಿ ಆಗಾಗ ಮಾತುಗಳು ಕೇಳಿಬಂದವು. ಡಾಮಿನೇಟ್ ಮಾಡುತ್ತಿದ್ದಾರೆ ಎಂದು ದಿವ್ಯಾ ಸುರೇಶ್ ದೂರಿದರು. ಇದಕ್ಕೆ ನೀವು ಅವರನ್ನು ನೆಲ್ಗೆಟ್ ಮಾಡಿ ಎಂದು ಮನೆಯವರ ಸಲಹೆ ಬಂತಿತು.