ಭೂಮಿಕಾಳ ಕೊಲೆಗೆ ಯತ್ನಿಸಿದ್ದ ಕೆಂಚ ಸುಪಾರಿ ಕೊಟ್ಟವನ ಸಾಕ್ಷ್ಯ ತರಲು ಹೋಗಿದ್ದಾನೆ. ಅವನನ್ನು ಹುಡುಕಿ ಭೂಮಿಕಾ೦-ಗೌತಮ್‌ ಹೊರಟಿದ್ದಾರೆ. ನೆಟ್ಟಿಗರು ಹೇಳ್ತಿರೋದೇನು? 

ಭೂಮಿಕಾ ಮತ್ತು ಗೌತಮ್‌ ಹನಿಮೂನ್‌ಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಭೂಮಿಕಾಳ ಕೊಲೆ ಪ್ರಯತ್ನ ನಡೆದಿತ್ತು. ಕೆಂಚ ಎಂಬಾತ ಆಕೆಯನ್ನು ಅಪಹರಿಸಿದ್ದ. ಕೊನೆಗೆ ಭೂಮಿಕಾಳನ್ನು ಡ್ರಮ್‌ನಲ್ಲಿ ಇಟ್ಟು ನೆಲದಡಿ ಹೂತು ಹಾಕಲಾಗಿತ್ತು. ಹರಸಾಹಸ ಪಟ್ಟ ಗೌತಮ್‌ ಕೊನೆಗೂ ಭೂಮಿಕಾಳನ್ನು ಉಳಿಸಿಕೊಳ್ಳಲು ಸಫಲನಾಗಿದ್ದ. ಕೊಲೆ ಪ್ರಯತ್ನದ ಆರೋಪದ ಮೇಲೆ ಕೆಂಚನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದರು. ಇದೀಗ ಕುತೂಹಲದ ಘಟ್ಟದಲ್ಲಿ ಕೆಂಚ ತನಗೆ ಸುಪಾರಿ ನೀಡಿದವರ ಬಗ್ಗೆ ಭೂಮಿಕಾಗೆ ಹೇಳಿದ್ದಾನೆ.

ಜೈದೇವ್‌ ತನ್ನ ಮೊಬೈಲ್‌ ಫೋನ್‌ ಮನೆಯಲ್ಲಿ ಬಿಟ್ಟು ಹೋದಾಗ ಜೈಲಿನಲ್ಲಿರುವ ಕೆಂಚನ ಫೋನ್‌ ಪದೇ ಪದೇ ಬರುತ್ತಿರುತ್ತದೆ. ಅದನ್ನು ನೋಡಿದ ಭೂಮಿಕಾ ಫೋನ್‌ ರಿಸೀವ್‌ ಮಾಡುತ್ತಾಳೆ. ಆಗ ಕೆಂಚ ಭೂಮಿಕಾ ಬಳಿ ಕ್ಷಮೆಯಾಚಿಸುತ್ತಾನೆ. ತನಗೆ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರುತ್ತಾನೆ. ಭೂಮಿಕಾ ಆತನನ್ನು ಬಿಡುಗಡೆಗೊಳಿಸುತ್ತಾಳೆ. ಕೊನೆಗೆ ಕೆಂಚನನ್ನು ಭೂಮಿಕಾ ಸಿಗುತ್ತಾಳೆ.ತನಗೆ ಕೊಲೆ ಮಾಡಲು ಹೇಳಿದ್ದು ಜೈದೇವ, ಆತ ಎರಡು ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದ. ನನ್ನಿಂದ ತಪ್ಪಾಯಿತು, ಕ್ಷಮೆ ನೀಡಿ ಎಂದು ಕೋರುತ್ತಾನೆ. 

'ಹಾಳಾಗೋದೆ’ ಕೇಳಿ ಚಂದನ್‌ ಶೆಟ್ಟಿಗೆ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದೇನು? ಆ ದಿನಗಳ ನೆನೆದ ಗಾಯಕ

ಜೈದೇವನ ಹೆಸರು ಕೇಳಿ ಭೂಮಿಕಾಗೆ ಶಾಕ್‌ ಆಗುತ್ತದೆ. ಆದರೆ ಜೈದೇವ ಕೊಲೆಗೆ ಸುಪಾರಿ ಕೊಡುವಷ್ಟು ಕೆಟ್ಟವನಲ್ಲ, ನೀನು ಸುಳ್ಳು ಹೇಳುತ್ತಿದ್ದಿಯಾ ಎನ್ನುತ್ತಾಳೆ. ಅದಕ್ಕೆ ಕೆಂಚ, ನಾನು ಎಲ್ಲಾ ಸಾಕ್ಷ್ಯಾಧಾರಗಳನ್ನು ತಂದು ಕೊಡುತ್ತೇನೆ. ಆಗ ನೀವು ನಂಬುತ್ತೀರಿ ಎಂದು ಜೈದೇವನ ಹೆಸರು ಹೇಳಿ ಹೋಗುತ್ತಾನೆ. ಈ ವಿಷಯವನ್ನು ಭೂಮಿಕಾ ಗೌತಮ್‌ಗೆ ಹೇಳುತ್ತಾಳೆ. ಆದರೆ ಆಕೆ ಜೈದೇವನ ಹೆಸರು ಹೇಳುವುದಿಲ್ಲ. ನಿಮ್ಮವರೇ ಯಾರೋ ಕೊಲೆಗೆ ಪ್ರಯತ್ನಿಸಿದ್ದು ಎಂದು ಕೆಂಚ ಹೇಳಿರುವುದಾಗಿ ಹೇಳುತ್ತಾಳೆ. ಸಾಕ್ಷ್ಯಾಧಾರ ನೀಡುವುದಾಗಿ ಕೆಂಚ ಹೇಳಿದ್ದಾನೆ. ಅವನ ಬಳಿ ಹೋಗಬೇಕು ಎಂದು ಹೇಳಿದಾಗ ಇಬ್ಬರೂ ಕೆಂಚನ ಬಳಿ ತೆರಳುತ್ತಾರೆ.

ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಆದರೆ ಅಲ್ಲಿ ನಿಮಗೆ ಕೆಂಚ ಸಿಗುವುದಿಲ್ಲ. ಅವನು ಇದಾಗಲೇ ಶೆಡ್‌ಗೆ ಶಿಫ್ಟ್‌ ಆಗಿದ್ದಾನೆ ಎಂದು ಸೀರಿಯಲ್‌ ಪ್ರೇಮಿಗಳು ಹೇಳ್ತಿದ್ದಾರೆ! ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರು ಕೊಲೆ ಕೇಸ್‌ನಲ್ಲಿ ಸಿಲುಕಿಕೊಂಡ ಬಳಿಕ ಶೆಡ್‌ ಅನ್ನುವ ಮೀಮ್ಸ್‌ಗಳು ಹೆಚ್ಚಾಗಿ ಓಡಾಡುತ್ತಿವೆ. ಕೊಲೆಯಾದ ರೇಣುಕಾಸ್ವಾಮಿ ಅವರನ್ನು ಶೆಡ್‌ನಲ್ಲಿಯೇ ಇಟ್ಟು ಚಿತ್ರಹಿಂಸೆ ಕೊಟ್ಟು ಸಾಯಿಸಲಾಗಿದೆ ಎನ್ನುವ ಆರೋಪ ಇರುವ ಹಿನ್ನೆಲೆಯಲ್ಲಿ, ಈ ಸೀರಿಯಲ್‌ಗೂ ಅದನ್ನೇ ಹೇಳ್ತಿದ್ದಾರೆ ನೆಟ್ಟಿಗರು. ಕೆಂಚನನ್ನು ಶೆಡ್‌ಗೆ ಶಿಫ್ಟ್‌ ಮಾಡಲಾಗಿದ ಅಂತಿದ್ದಾರೆ! 

ಕೋಳಿಯ ಅಪ್ಪ ಯಾರು? ರಾಮ್‌, ಸಿಹಿಗೆ ಸೀತಾ ಪ್ರಶ್ನೆ- ಉತ್ತರ ಕೇಳಿ ಫ್ಯಾನ್ಸ್‌ ಸುಸ್ತು!