Kavya Gowda: ಕನ್ನಡ ಕಿರುತೆರೆಯ ನಟಿ ಕಾವ್ಯಾ ಗೌಡ, ಮನೆ ಜಗಳ ಬೀದಿಗೆ ಬಂದಿದ್ದು, ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ದೂರು-ಪ್ರತಿದೂರುಗಳು ದಾಖಲಾಗಿವೆ. ಈ ಮಧ್ಯೆ, ನಟಿ ಕಾವ್ಯಾ ಗೌಡ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗುತ್ತಿದೆ. 

ಕಾವ್ಯಾ ಗೌಡ ಮನೆ ಜಗಳ

ರಾಧಾ ರಮಣ ಖ್ಯಾತಿಯ ನಟಿ ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್‌ ಮೇಲೆ , ಸೋಮಶೇಖರ್ ಅಣ್ಣ, ಅತ್ತಿಗೆ, ಅತ್ತಿಗೆಯ ತಂದೆ ಹಾಗೂ ತಂಗಿ ಹಲ್ಲೆ ನಡೆಸಿದ್ದಾರೆ. ಸೋಮಶೇಖರ್ ಮೇಲೆ ಚಾಕುವಿನಿಂದ ದಾಳಿಯಾಗಿದೆ, ಅ*ತ್ಯಾಚಾ*ರ ಹಾಗೂ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಕಾವ್ಯಾ ಸೋಮಶೇಖರ್ ದೂರು ದಾಖಲಿಸಿದ್ದು, ಮನೆ ಜಗಳ ಬೀದಿಗೆ ಬಂದು ಎಲ್ಲೆಡೆ ಸುದ್ದಿಯಾಗಿದೆ.

ದೂರು ಪ್ರತಿದೂರು ದಾಖಲು

ಕಾವ್ಯಾ ದೂರಿಗೆ ವಾರಗಿತ್ತಿ ಪ್ರೇಮಾ ಪ್ರತಿದೂರು ದಾಖಲಿಸಿದ್ದು, ಕಾವ್ಯ ನನ್ನ ಮೇಲೆ ದಾಳಿ ನಡೆಸಿದ್ದು, ನನ್ನ ಮಾಂಗಲ್ಯವನ್ನು ಕಿತ್ತು ತೆಗೆದಿದ್ದಾರೆ, ಅವರೇ ನಮಗೆ ಅ*ತ್ಯಾಚಾ*ರ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ದೂರು ಪ್ರತಿದೂರುಗಳನ್ನು ಸದ್ಯ ಪೊಲೀಸರು ಪರೀಶಿಲನೆ ನಡೆಸುತ್ತಿದ್ದಾರೆ. ಈ ಮಧ್ಯೆ ಕಾವ್ಯಾ ಗೌಡ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅವರ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಏನಿದೆ?

ಕಾವ್ಯಾ ಗೌಡ ಪೋಸ್ಟ್ ನಲ್ಲಿ ಏನಿದೆ?

ಆಸ್ತಿ ವಿಷಯದಲ್ಲಿ ನಡೆದಿರುವ ಕಲಹ ಇದೀಗ ದೊಡ್ಡಮಟ್ಟದಲ್ಲಿ ಸಾಗುತ್ತಿದ್ದು, ಈ ಹಿನ್ನೆಲೆಯಲಿ ಕಾವ್ಯಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ “ನಾನು ಮೌನವಾಗಿದ್ದೇನೆ ಅಂದರೆ ಭಯದಿಂದಲ್ಲ, ಕಾಲದ ಮೇಲಿನ ನಂಬಿಕೆಯಿಂದ. ಇಂದು ಅಲ್ಲದಿದ್ದರೂ ನಾಳೆ ಕಾಲವೇ ಸತ್ಯವನ್ನು ಹೊರತರುತ್ತದೆ. ಇಂದು ನನ್ನ ಮಾತು ಕೇಳಿಸದಿದ್ದರೂ, ಪರವಾಗಿಲ್ಲ. ನಾಳೆ ಕಾಲವೇ ನನ್ನ ಪರವಾಗಿ ಮಾತನಾಡುತ್ತದೆ. ನೋವು ಸಹಿಸಿಕೊಂಡೆ, ಮೌನ ಆಯ್ಕೆ ಮಾಡಿಕೊಂಡೆ ,ಕಾರಣ ಕಾಲಕ್ಕೆ ನ್ಯಾಯ ಕೊಡಲು ಸಮಯ ಬೇಕು. ಕಾಲ ಕಷ್ಟ ಕೊಟ್ಟರು ಭಯ ಇಲ್ಲ. ಇಂದು ನನ್ನ ನೋವು ಅರ್ಥವಾಗದಿದ್ದರೂ, ನಾಳೆ ಕಾಲವೇ ಎಲ್ಲವನ್ನು ಹೇಳುತ್ತದೆ ಮಹಾಕಾಳೇಶ್ವರನ ನನ್ನ ಜೊತೆ ಇದ್ದಾನೆ. ಓಂ ಸಾಯಿ ರಾಮ್ ಎಂದು ಕಾವ್ಯಾ ಗೌಡ ಬರೆದುಕೊಂಡಿದ್ದಾರೆ.

ತಮ್ಮ ನಡೆಗೆ ಸಮರ್ಥನೆ ಕೊಟ್ಟರಾ ಕಾವ್ಯಾ ಗೌಡ?

ಕಾವ್ಯಾ ಗೌಡ ಅವರ ಈ ಪೋಸ್ಟ್ ಗೆ ಕಾರಣ ಪ್ರೇಮಾ ಅವರು ಮಾದ್ಯಮದ ಮುಂದೆ ನೀಡಿರುವ ಹೇಳಿಕೆ ಇದೀಗ ವೈರಲ್ ಆಗಿದ್ದು, ಹೆಚ್ಚಿನ ಜನರು ಪ್ರೇಮಾ ಪರವಾಗಿ ಮಾತನಾಡಿ, ಮದುವೆಯಾದ ಬಳಿಕ ಲಕ್ಸುರಿ ಜೀವನಕ್ಕಾಗಿ ಕಾವ್ಯಾ ಗೌಡ ಅವರ ಜೀವನದಲ್ಲಿ ಆಗಿರುವಂತಹ ಬದಲಾವಣೆಯಿಂದಾಗಿ ಕಾವ್ಯಾ ಮೇಲೆಯೇ ಜನ ಬೊಟ್ಟು ಮಾಡುತ್ತಿದ್ದಾರೆ. ಹಾಗಾಗಿ ಕಾವ್ಯಾ ಗೌಡ, ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಾವು ತಪ್ಪು ಮಾಡಿಲ್ಲ. ತಪ್ಪು ಮಾಡಿದವರಿಗೆ ಶೀಘ್ರದಲ್ಲೇ ಶಿಕ್ಷೆಯಾಗಲಿದೆ ಎಂದು ಹೇಳಿರುವಂತಿದೆ.