ತಂದೆ ವಿರುದ್ಧವಾಗಿ ನಿಂತು ದ್ವಿತಿಯ ಪಿಯುಸಿ ಮುಗಿಸಿ ಈಗ ಕೌನ್ ಬನೇಗ ಕರೋಡ್‌ಪತಿಯಲ್ಲಿ 14 ಕೋಟಿ ಗೆದ್ದಿರುವ  ಮಹಾರಾಷ್ಟ್ರದ ಮಹಿಳೆ.... 

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನೇತೃತ್ವದಲ್ಲಿ ಮೂಡಿ ಬರುವ ಕೌನ್ ಬನೇಗ ಕರೋಡ್‌ಪತಿ (Kaun Banega Crorepati 12) ಈಗ 14ನೇ ಸೀಸನ್‌ಗೆ ಕಾಲಿಟ್ಟಿದೆ. ಸಾಮಾನ್ಯರಲ್ಲಿ ಸಾಮಾನ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಚ್ಚನ್ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಲಕ್ಷಾಂತರ ರೂಪಾಯಿ ಗೆದ್ದಿದ್ದಾರೆ. ಆದರೆ ಇನ್ನೂ ಕೆಲವರು ಗೆಲುವು ನಮ್ಮದಾಗಿದ್ದರೂ ಚಿಂತೆ ಇಲ್ಲ ಬಚ್ಚನ್ ಜೊತೆಗೆ ಸಮಯ ಕಳೆದ ಕ್ಷಣ ಅದ್ಭುತ ಎಂದು ಹೇಳಿಕೊಳ್ಳುತ್ತಾರೆ. ಇತ್ತೀಚಿಗೆ ವಾಹಿನಿ ರಿಲೀಸ್ ಮಾಡಿರುವ ಪ್ರೋಮೋದಲ್ಲಿ ಮಹರಾಷ್ಟ್ರದ ಮಹಿಳೆಯೊಬ್ಬಳು 7.5 ಕೋಟಿ ರೂಪಾಯಿ ಪ್ರಶ್ನೆ ಎದುರಿಸುತ್ತಿದ್ದಾರೆ. 

ಮಹರಾಷ್ಟ್ರದ ಕಲ್ಹಾಪುರದ ಮಹಿಳೆ ಕವಿತಾ ಅವರಿಗೆ ಕೋಟಿ ರೂಪಾಯಿ ಗೆದ್ದು ಮುಂದಿನ ಹಂತದ ಪ್ರಶ್ನೆ ಉತ್ತರ ನೀಡಲು ಮುಂದಾಗಿದ್ದಾರೆ. 7.5 ಕೋಟಿ ರೂಪಾಯಿ ಪ್ರಶ್ನೆ ಎದುರಿಸಲಿದ್ದು ಬಚ್ಚನ್ ಶುಭಾಶಯಗಳನ್ನು ತಿಳಿಸಿದ್ದಾರೆ. 45 ವರ್ಷದ ಕವಿತಾ ತಮ್ಮ ವಿದ್ಯಾಭ್ಯಾಸದ ಬಗ್ಗೆ ಖಾಸಗಿ ವೆಬ್‌ಸೈಟ್‌ವೊಂದರಲ್ಲಿ ಮಾತನಾಡಿದ್ದಾರೆ. ಯಾಕೆ ತಮ್ಮ ತಂದೆ 10ನೇ ಕ್ಲಾಸ್‌ವರೆಗೂ ಪರೀಕ್ಷೆ ಬರೆಯಲು ಬಿಡಲಿಲ್ಲ ಮದುವೆ ಆದ ಮೇಲೆ 12ನೇ ಕ್ಲಾಸ್ ಪರೀಕ್ಷೆ ಬರೆದಿದ್ದು ಯಾಕೆ ಎಂದು ಹೇಳಿದ್ದಾರೆ.

ಕಾರ್ಯಕ್ರಮಕ್ಕೆ ತಯಾರಿ ಆಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿದಾಗ 'ನನ್ನ ಪುತ್ರ ವಿವೇಕ್‌ಗೆ ನಾನು ಮನೆಯಲ್ಲಿ ಪಾಠ ಮಾಡುತ್ತಿದ್ದೆ ಕೆಜಿ ಕ್ಲಾಸ್‌ನಿಂದ 8ನೇ ಕ್ಲಾಸ್‌ವರೆಗೂ ಪಾಠ ಮಾಡಿರುವೆ. ಪಾಠ ಮಾಡುವುದರ ಜೊತೆನೆ ನಾನು ತಯಾರಿ ಮಾಡಿಕೊಳ್ಳುತ್ತಿರುವೆ ಏಕೆಂದರೆ ಕೌನ್ ಬನೇಗ ಕರೋಡ್‌ಪತಿಯಲ್ಲಿ ಭಾಗಿಯಾಗುವುದು ನನ್ನ ಕನಸು. ಶೋ ಶುರು ಆದಾಗಿನಿಂದಲ್ಲೂ ನಾನು ಭಾಗಿಯಾಗಬೇಕು ಎಂದು ಆಸೆ ಪಟ್ಟೆ' ಎಂದು ಕವಿತಾ ಮಾತನಾಡಿದ್ದಾರೆ.

'ನನ್ನ ಮಗನಿಗೆ ಪಾಠ ಮಾಡುವುದರ ಜೊತೆಗೆ ನಾನು ಪಾಠ ಓದಿಕೊಂಡು ಬರೆದುಕೊಳ್ಳುತ್ತಿದ್ದೆ ಏಕೆಂದರೆ ಒಂದು ದಿನ ಇದರಿಂದ ನನಗೆ ಸಹಾಯ ಆಗುತ್ತದೆ ಎಂದು ಗೊತ್ತಿತ್ತು. ಮನೆ ಕೆಲಸಗಳನ್ನು ಮಾಡಿದ ನಂತರ ಸಮಯ ಸಿಕ್ಕರೆ ನಾನು ಮೊದಲು ಓದಲು ಶುರು ಮಾಡುತ್ತಿದ್ದೆ ಅದರಲ್ಲೂ ಕರೆಂಟ್ ಅಫೇರ್ ಓದಿ ಜ್ಞಾನ ಹೆಚ್ಚಿಸಿಕೊಳ್ಳುತ್ತಿದ್ದೆ. ಹೌಸ್‌ವೈಫ್‌ಗಳಿಗೆ ಓದಲು ಸಮಯ ಸಿಗುವುದು ಕಷ್ಟ ಇದೆಲ್ಲಾ multitasking ಅನಿಸುತ್ತದೆ ನನ್ನ ಮಗ ಮತ್ತು ಅತ್ತೆ-ಮಾವ ಮನೆಯಲ್ಲಿದ್ದಾರೆ. ಬಹುಷ ಇದೆಲ್ಲಾ ನನಗೆ ಟೈಮ್ ಮ್ಯಾನೇಜ್‌ಮೆಂಟ್‌ ಅಂದ್ರೆ ಏನೆಂದು ಹೇಳಿಕೊಟ್ಟಿದೆ. ಈಗ ನನಗೆ ಹೊರಗಡೆ ಹೋಗಿ ಸಮಯ ವ್ಯರ್ಥ ಮಾಡುವುದಕ್ಕೆ ಇಷ್ಟವಿಲ್ಲ' ಎಂದಿದ್ದಾರೆ.

ಕೌನ್ ಬನೇಗ ಕರೋಡ್‌ಪತಿ; ಸೀಸನ್ 1 ರಿಂದ 13ರ ವರೆಗೂ ಅಮಿತಾಭ್ ಪಡೆದ ಸಂಭಾವನೆಯ ಸಂಪೂರ್ಣ ಮಾಹಿತಿ ಬಹಿರಂಗ

ಕವಿತಾ ತಮ್ಮ ಕನಸಿನ ಹಾಟ್‌ಸೀಟ್‌ ಮೇಲೆ ಕೂರಲು 21 ವರ್ಷ 10 ತಿಂಗಳು ತೆಗೆದುಕೊಂಡಿದ್ದಾರೆ. ಅಮ್ಮನ ಹುಚ್ಚುತನ ನೋಡಿ ಮಗ ಕೌನ್ ಬನೇಗ ಕರೋಡ್‌ಪತಿಯಿಂದ ಕರೆ ಬಂದಿದೆ ಎಂದು ಪ್ರ್ಯಾಂಕ್ ಮಾಡುತ್ತಿದ್ದನಂತೆ. 

'ಕಾರ್ಯಕ್ರಮಕ್ಕೆ ರಿಜಿಸ್ಟರ್ ಮಾಡಿದ ಕ್ಷಣದಿಂದ ಹಾಟ್‌ ಸೀಟ್‌ ಸ್ವೀಕರಿಸುವ ಕ್ಷಣದವರೆಗೂ ಏನೂ ಸುಲಭವಿರಲಿಲ್ಲ. ಅದೆಷ್ಟೋ ಸಲ ರಿಜಿಸ್ಟರ್ ಮಾಡಿಸಿದ್ದರೂ ಕರೆ ಬಂದಿರಲಿಲ್ಲ. ಕರೆ ಬಂದರೂ Procedureಗೆ ಕರೆ ಬರುತ್ತಿರಲಿಲ್ಲ ಆಡಿಷನ್‌ಗೆ ಕರೆ ಮಾಡುತ್ತಿದ್ದರು. ಇನ್ನೂ Interview ದೂರದ ಮಾತು. ಈ ಹಾಟ್‌ಸೀಟ್‌ ಮೇಲೆ ಕೂರಲು ನಾನು ಒಂದೊಂದೇ ಹಂತ ಪಾಸ್ ಮಾಡಿ ಪಾಸ್ ಮಾಡಿ ಬಂದಿರುವ. ಸಮಯ ಹಿಡಿದಿದೆ' ಎಂದು ಕವಿತಾ ಹೇಳಿದ್ದಾರೆ.

Kaun Banega Crorepati: 2000 ರು.ನೋಟಲ್ಲಿ ಚಿಪ್‌: ಕೆಬಿಸಿಯಲ್ಲಿ ಬಚ್ಚನ್‌ ಅರಿವು

'ಅತಿವಾಸ್ತವಿಕವಾದ ಕ್ಷಣ. ಬಚ್ಚನ್ ಸರ್‌ನ ಭೇಟಿ ಮಾಡಿದ ಕ್ಷಣ ಮರೆಯುವುದಿಲ್ಲ. ಅವರ ಜೊತೆ ನನ್ನ ಪ್ರತಿಯೊಂದು ಮಾತುಗಳನ್ನು ಮರೆಯುವುದಿಲ್ಲ. ನಾನು ಹಾಟ್‌ಸೀಟ್‌ಗೆ ಆಯ್ಕೆ ಆದ ಕ್ಷಣ ಮತ್ತು 1 ಕೋಟಿ ಗೆದ್ದಿರುವೆ ಎಂದು ಬಚ್ಚನ್ ಸರ್ ಹೇಳಿದ ಮಾತು ಈಗಲೂ ಕಿವಿಯಲಿದೆ. ಈ ಕಾರ್ಯಕ್ರಮದಲ್ಲಿ ನಾನು ಗೆಲ್ಲುವ ಹಣವನ್ನು ನನ್ನ ಮಗ ವಿದ್ಯಾಭ್ಯಾಸಕ್ಕೆ ಇಡುವೆ. ನಮ್ಮ ದೇಶಕ್ಕೆ ಹೆಮ್ಮೆ ಇರಬೇಕು. ಹಾಗೆ ನಾನು ದೇಶ ಸುತ್ತಬೇಕು ಭಾರತದ ಬ್ಯೂಟಿ ಎಂಜಾಯ್ ಮಾಡಬೇಕು' ಎಂದು ಮಾತನಾಡಿದ್ದಾರೆ.