ಕೌನ್ ಬನೇಗ ಕರೋಡ್‌ಪತಿ; ಸೀಸನ್ 1 ರಿಂದ 13ರ ವರೆಗೂ ಅಮಿತಾಭ್ ಪಡೆದ ಸಂಭಾವನೆಯ ಸಂಪೂರ್ಣ ಮಾಹಿತಿ ಬಹಿರಂಗ

ಬಿಗ್ ಬಿ ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್ ಪತಿ ಶೋಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಮೂಲಗಳಿಂದ ತಿಳಿದುಬಂದಿದೆ. ಅಮಿತಾಬ್ ಕೌನ್ ಬನೇಗಾ ಕರೋಡ್ ಪತಿ ನಡೆಸಿಕೊಡಲು ಇದುವರೆಗೂ ಪಡೆದ ಸಂಭಾವನೆಯ ಸಂಪೂರ್ಣ ವಿವರ ಲಭ್ಯವಾಗಿದೆ.  ಮೊದಲ ಸೀಸನ್ ನಿಂದ ಸದ್ಯ ಪ್ರಸಾರಕ್ಕೆ ಸಿದ್ಧವಾಗುತ್ತಿರುವ ಸೀಸನ್ 14ರ ವರೆಗೂ ಅಮಿತಾಭ್ ಪಡೆದ ಸಭಾವನೆಯ ಸಂಪೂರ್ಣ ವಿವರ ಇಲ್ಲಿದೆ. 

amitabh bachchan salary for kaun banega crorepati from season 1 to 13 sgk

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ರಿಯಾಲಿಟಿ ಶೋ ಮತ್ತೆ ಪ್ರಾರಂಭವಾಗುತ್ತಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಸದ್ಯದಲ್ಲೇ ಅಮಿತಾಬ್ ಕೌನ್ ಬನೇಗಾ ಕರೋಡ್ ಪತಿ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನುವ ಮಾತು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಅಂದಹಾಗೆ ಅಮಿತಾಭ್ ಇದೀಗ 14ನೇ ಸೀಸನ್ ಗೆ ರೆಡಿಯಾಗುತ್ತಿದ್ದಾರೆ. ಕೌನ್ ಬನೇಗ ಕರೋಡ್ ಪತಿ ಯಶಸ್ವಿಯಾಗಿ 13 ಸೀಸನ್ ಗಳನ್ನು ಪೂರೈಸಿದೆ. ಒಂದು ಸೀಸನ್ ಬಿಟ್ಟರೇ ಉಳಿದೆಲ್ಲ ಸೀಸನ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೇ ನಡೆಸಿಕೊಟ್ಟಿರುವುದು ಅವರ ಹೆಗ್ಗಳಿಕೆ. ಅಂದಹಾಗೆ ಕೌನ್ ಬನೇಗ ಕರೌಡ್ ಪತಿ 2000 ಜುಲೈ 3ರಂದು ಪ್ರಾರಂಭವಾಯಿತು. ರಾತ್ರಿ 9ಗಂಟೆಗೆ ಪ್ರಸಾರವಾಗುತ್ತಿದ್ದ ಈ ಶೋ ಭಾರತೀಯ ಕಿರುತೆರೆ ಲೋಕದಲ್ಲಿ ಸಂಚನ ಸೃಷ್ಟಿಮಾಡಿತ್ತು. ಅಲ್ಲಿಂದ ಅಮಿತಾಭ್ ಕಿರುತೆರೆ ಪ್ರೇಕ್ಷಕರ ಮನೆಮಾತಾದರು. ಈ ಶೋ ಇಷ್ಟು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣಲು ಬಹುಮುಖ್ಯವಾದ ಕಾರಣ ಅಮಿತಾಬ್ ಎಂದರೆ ತಪ್ಪಾಗಲ್ಲ.   

ಅಮಿತಾಭ್ ನಡೆಸಿಕೊಡುವ ಈ ಶೋ ಪ್ರತಿಮನೆಯ ಒಂದು ಅವಿಭಾಜ್ಯ ಅಂಗವಾಗಿದೆ. ಕಳೆದ ವರ್ಷ 2021 ಡಿಸೆಂಬರ್ ನಲ್ಲಿ 13ನೇ ಸೀಸನ್ ಮುಕ್ತಾಯವಾಗಿದೆ. ಇದೀಗ 14ನೇ ಸೀಸನ್ ಯಾವಾಗ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಈ ಶೋ ಪ್ರಾರಂಭವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಬರೋಬ್ಬರಿ 22 ವರ್ಷಗಳಿಂದ ಕೌನ್ ಬನೇಗ ಕರೌಡ್ ಪತಿ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ.  

ಅಂದಹಾಗೆ ಕೌನ್ ಬನೇಗಾ ಕರೋಡ್ ಪತಿ ಸೀಸನ್ 2 ಶಾರುಖ್ ಖಾನ್ ಹೋಸ್ಟ್ ಮಾಡಿದ್ದರು. ಆ ಒಂದು ಸೀಸನ್ ಬಿಟ್ಟರೆ ಮಿಕ್ಕೆಲ್ಲ ಸೀಸನ್ ಅಮಿತಾಭ್ ನಡೆಸಿಕೊಟ್ಟಿದ್ದಾರೆ. ಅಮಿತಾಬ್ ಕೌನ್ ಬನೇಗಾ ಕರೋಡ್ ಪತಿ ರಿಯಾಲಿಟಿ ಶೋ ನಡೆಸಿಕೊಡಲು ಅಮಿತಾಬ್ ಪಡೆಯುತ್ತಿದ್ದ ಸಂಭಾವನೆ ವಿಚಾರ ಚರ್ಚೆಯಾಗುತ್ತಿದೆ. ಬಿಗ್ ಬಿ ಈ ಶೋಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಮೂಲಗಳಿಂದ ತಿಳಿದುಬಂದಿದೆ. ಅಮಿತಾಬ್ ಕೌನ್ ಬನೇಗಾ ಕರೋಡ್ ಪತಿ ನಡೆಸಿಕೊಡಲು ಇದುವರೆಗೂ ಪಡೆದ ಸಂಭಾವನೆಯ ಸಂಪೂರ್ಣ ವಿವರ ಲಭ್ಯವಾಗಿದೆ.  ಮೊದಲ ಸೀಸನ್ ನಿಂದ ಸದ್ಯ ಪ್ರಸಾರಕ್ಕೆ ಸಿದ್ಧವಾಗುತ್ತಿರುವ ಸೀಸನ್ 14ರ ವರೆಗೂ ಅಮಿತಾಭ್ ಪಡೆದ ಸಭಾವನೆಯ ಸಂಪೂರ್ಣ ವಿವರ ಇಲ್ಲಿದೆ. 

ವಯಸ್ಸಾಯ್ತು, ಇನ್ನೂ ಕೆಲ್ಸ ಮಾಡೋದೇತಕ್ಕೆ?: ಬಾಲಕನ ಪ್ರಶ್ನೆಗೆ ಬಿಗ್ ಬಿ ಶಾಕ್!

ಮೊದಲ ಸೀಸನ್ - ಒಂದು ಎಪಿಸೋಡ್‌ಗೆ 25 ಲಕ್ಷ ರೂಪಾಯಿ

ಎರಡು- ನಾಲ್ಕುನೇ ಸೀಸನ್ - ಬಹಿರಂಗ ಪಡಿಸಿಲ್ಲ

ಐದನೇ ಸೀಸನ್ - ಒಂದು ಎಪಿಸೋಡ್‌ಗೆ 1 ಕೋಟಿ ರೂಪಾಯಿ  

ಆರನೇ ಸೀಸನ್ - ಒಂದು ಎಪಿಸೋಡ್‌ಗೆ 1.5 ಕೋಟಿ ರೂಪಾಯಿ  

ಏಳನೇ ಸೀಸನ್ - 1.5 - 2 ಕೋಟಿ ರೂಪಾಯಿ
 
ಎಂಟನೇ ಸೀಸನ್ - 2 ಕೋಟಿ ರೂಪಾಯಿ

ಒಂಬತ್ತನೇ ಸೀಸನ್ - 2.6 ಕೋಟಿ ರೂಪಾಯಿ

ಹತ್ತನೇ ಸೀಸನ್ - 3 ಕೋಟಿ ರೂಪಾಯಿ

ಹನ್ನೊಂದನೇ ಸೀಸನ್ - 3.5 ಕೋಟಿ ರೂಪಾಯಿ

ಹನ್ನೆರಡನೇ ಸೀಸನ್-  3.5 ಕೋಟಿ ರೂಪಾಯಿ 

ಹದಿಮೂರನೇ ಸೀಸನ್-  3.5 ಕೋಟಿ ರೂಪಾಯಿ 

ಸದ್ಯ ಕೇಳಿಬರುತ್ತಿರುವ ವರದಿಗಳ ಪ್ರಕಾರ ಅಮಿತಾಭ್ ಬಚ್ಚನ್ ಕೌನ್ ಬನೇಗಾ ಕರೋಡ್‌ಪತಿಯ ಮುಂಬರುವ ಸೀಸನ್ 14ಕ್ಕೆ ಬರೊಬ್ಬರಿ 4-5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಶೋಲೆಯ ಗಬ್ಬರ್‌ಸಿಂಗ್‌ಗೆ ನಿಜ ಜೀವನದಲ್ಲಿ ರಕ್ತ ಕೊಟ್ಟು ಪ್ರಾಣ ಉಳಿಸಿದ್ದ ಅಮಿತಾಬ್‌ ಬಚ್ಚನ್‌

ಅಮಿತಾಭ್ ಬಚ್ಚನ್ ಅವರ ಮುಂದಿನ ಸಿನಿಮಾಗಳು 

ಸಿನಿಮಾ ವಿಚಾರಕ್ಕೆ ಬರುವುದಾರೆ ಬಿಗ್ ಬಿ ಮುಂದಿನ ಅಯಾನ್ ಮುಖರ್ಜಿಯವರ 'ಬ್ರಹ್ಮಾಸ್ತ್ರ'ದಲ್ಲಿ ಕಾಣಿಸಿಕೊಂಡಿದ್ದಾರೆ. ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಈ ಸಿನಿಮಾ ಸೆಪ್ಟೆಂಬರ್ 9ರಂದು ರಿಲೀಸ್ ಆಗುತ್ತಿದೆ. ಇನ್ನು ಅವರು 'ಗುಡ್‌ಬೈ', 'ಪ್ರಾಜೆಕ್ಟ್ ಕೆ', 'ದಿ ಇಂಟರ್ನ್' ಮತ್ತು 'ಉಂಚೈ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 
 

Latest Videos
Follow Us:
Download App:
  • android
  • ios