ಕರ್ಣ ಸೀರಿಯಲ್ ಭವ್ಯಾ ಗೌಡಾಗೆ ಬಂಪರ್ ಅವಕಾಶ ಸಿಕ್ಕಿದೆ. ಇಷ್ಟು ದಿನ ಕಿರುತೆರೆ, ರಿಯಾಲಿಟಿ ಶೋನಲ್ಲಿ ಮಿಂಚಿದ್ದ ನಟಿ ಭವ್ಯಾಗೆ ಈಗ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಭವ್ಯಾ ಗೌಡ ಸಿನಿಮಾ ಮಾಡ್ತಿದ್ದಾರೆ.
ಗೀತಾ ಖ್ಯಾತಿಯ ಭವ್ಯಾ ಗೌಡ (Bhavya Gowda) ಈಗ ನಿಧಿಯಾಗಿ ಕರ್ಣ ಸೀರಿಯಲ್ ನಲ್ಲಿ ಮಿಂಚುತ್ತಿದ್ದಾರೆ. ಕಿರುತೆರೆಯಲ್ಲಿ ಮಿಂಚುತ್ತಿರುವ ಭವ್ಯಾ ಗೌಡ ಅವರಿಗೆ ಈಗ ಹಿರಿತೆರೆಯಲ್ಲಿ ಮಿಂಚುವ ಅವಕಾಶ ಸಿಕ್ಕಿದೆ. ಇದೇ ಮೊದಲ ಬಾರಿ ಭವ್ಯಾ ಗೌಡ ಸಿನಿಮಾ ಮಾಡ್ತಿದ್ದಾರೆ. ತಮ್ಮ ಮೊದಲ ಸಿನಿಮಾ ಬಗ್ಗೆ ಭವ್ಯಾ ಗೌಡ ಫ್ಯಾನ್ಸ್ ಗೆ ಮಾಹಿತಿ ನೀಡಿದ್ದಾಗಿದೆ. ಭವ್ಯಾ ಅವ್ರನ್ನು ನಿಧಿಯಾಗಿ ಮೆಚ್ಚಿಕೊಂಡಿರುವ ಫ್ಯಾನ್ಸ್, ದೊಡ್ಡ ಪರದೆ ಮೇಲೆ ತಮ್ಮಿಷ್ಟದ ನಟಿಯನ್ನು ನೋಡಲು ಕಾತರರಾಗಿದ್ದಾರೆ.
ಮೊದಲ ಬಾರಿ ಹಿರಿತೆರೆಗೆ ಭವ್ಯಾ ಗೌಡ :
ಭವ್ಯಾ ಗೌಡ, ಸೀರಿಯಲ್ ಮೂಲಕವೇ ಮನೆ ಮಗಳಾದವರು. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಗೀತಾ ಸೀರಿಯಲ್ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದವರು ಭವ್ಯಾ ಗೌಡ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದ ಭವ್ಯಾ ಗೌಡ, ಗೀತಾ ಸೀರಿಯಲ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಧನುಷ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಭವ್ಯಾ ಗೌಡ ಲಕ್ ಬದಲಿಸಿದ್ದು ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ. ಸೀರಿಯಲ್ ಮುಗಿತಿದ್ದಂತೆ ಬಿಗ್ ಬಾಸ್ ಕನ್ನಡ 11ರ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ಅವಕಾಶ ಭವ್ಯಾ ಗೌಡಾಗೆ ಸಿಕ್ಕಿತ್ತು.
Bigg Boss ವಿಷ್ಯ, Kiccha Sudeep ವಿರುದ್ಧ ದೂರು ನೀಡಿದವ್ರ ಹಿಂದಿದೆ ಕ್ರಿಮಿನಲ್ ಹಿಸ್ಟರಿ; ನಲಪ್ಪಾಡ್ ಎಚ್ಚರಿಕೆ
ಸಿಕ್ಕ ಅವಕಾಶವನ್ನು ಅದ್ಭುತವಾಗಿ ನಿಭಾಯಿಸಿದ್ದ ಭವ್ಯಾ ಗೌಡ, ಟಾಪ್ ನಾಲ್ಕನೇ ಸ್ಥಾನ ಗಿಟ್ಟಿಸಿಕೊಳ್ಳಲು ಯಶಸರ್ವಿಯಾಗಿದ್ರು. ಸ್ವಲ್ಪದರಲ್ಲಿಯೇ ಟ್ರೋಫಿ ಕೈತಪ್ಪಿದ್ರೂ ಫ್ಯಾನ್ ಫಾಲೋವರ್ಸ್ ಸಂಖ್ಯೆ ಸಿಕ್ಕಾಪಟ್ಟೆ ಏರಿಕೆ ಆಗಿತ್ತು. ತ್ರಿವಿಕ್ರಮ್ ಹಾಗೂ ಭವ್ಯಾ ಜೋಡಿಯನ್ನು ಮೆಚ್ಚಿಕೊಂಡಿದ್ದ ಬಿಗ್ ಬಾಸ್ ವೀಕ್ಷಕರು ನಂತ್ರ ಭವ್ಯಾ ಯಾವ ಸೀರಿಯಲ್ ನಲ್ಲಿ ಕಾಣಿಸಿಕೊಳ್ತಾರೆ ಎನ್ನುವ ಕುತೂಹಲದಲ್ಲಿದ್ದರು.
ಕಲರ್ಸ್ ಕನ್ನಡ ಬಿಟ್ಟು ಜೀನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಭವ್ಯಾ ಗೌಡ, ಕರ್ಣ ಸೀರಿಯಲ್ ನಿಧಿಯಾಗಿ ಈಗ ಪ್ರಸಿದ್ಧಿ ಪಡೆದಿದ್ದಾರೆ. ಕರ್ಣ ಸೀರಿಯಲ್ ನಲ್ಲಿ ಕರ್ಣ ಹಾಗೂ ನಿಧಿ ಜೋಡಿಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡಿಯಾಗಿದೆ. ಸದ್ಯ ಭವ್ಯಾ ಗೌಡ ಸಖತ್ ಬ್ಯುಸಿ. ಒಂದ್ಕಡೆ ಕರ್ಣ ಸೀರಿಯಲ್ ಆದ್ರೆ ಇನ್ನೊಂದು ಕಡೆ ಡಾನ್ಸ್ ಕರ್ನಾಟಕ ಡಾನ್ಸ್ ನಲ್ಲೂ ಭವ್ಯ ಹವಾ ಹೆಚ್ಚಿದೆ. ಭವ್ಯಾ ಗೌಡ ಡಾನ್ಸ್ ಗೆ ಎಲ್ಲ ಜಡ್ಜ್ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಬರೀ ಭವ್ಯಾ ಡಾನ್ಸ್ ಮಾತ್ರವಲ್ಲ ಅವರ ಕಾನ್ಫಿಡೆನ್ಸ್ ಶಿವಣ್ಣ ಅವರಿಗೆ ಇಷ್ಟವಾಗಿದೆ. ಈ ಎಲ್ಲದರ ಮಧ್ಯೆ ಭವ್ಯಾ ಈಗ ಸಿನಿಮಾ ಕೂಡ ಮಾಡ್ತಿದ್ದಾರೆ.
BBK 12: ರಕ್ಷಿತಾ-ಗಿಲ್ಲಿ ನಟ ಸೇರಿದ್ರೆ ಸುನಾಮಿ; ಅಶ್ವಿನಿ ಗೌಡ ಮುಂದೆ ಗೆದ್ದು ಬೀಗಿದ ಅಣ್ಣ-ತಂಗಿ
ಭವ್ಯಾ ಗೌಡಗೆ ದುನಿಯಾ ವಿಜಿ ನಿರ್ದೇಶನದ ಲ್ಯಾಂಡ್ ಲಾರ್ಡ್ (landlord )ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ಈ ಸಿನಿಮಾದಲ್ಲಿ ದುನಿಯಾ ವಿಜಿ ಮಗಳು ರಿತನ್ಯಾ ಕೂಡ ನಟಿಸುತ್ತಿದ್ದಾರೆ. ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ದುನಿಯಾ ವಿಜಿ, ರಚಿತಾ ರಾಮ್, ಉಮಾಶ್ರೀ ಜೊತೆ 50ಕ್ಕೂ ಹೆಚ್ಚು ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಚಿತ್ರ ಮುಂದಿನ ವರ್ಷ ಜನವರಿ 23 ರಂದು ತೆರೆಗೆ ಬರಲಿದೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನಸ್ಸು ಗೆದ್ದಿದೆ. ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿ ಸಿನಿಮಾ ಬಗ್ಗೆ ಭವ್ಯಾ ಗೌಡ ಮಾಹಿತಿ ನೀಡಿದ್ದಾರೆ. ಇದು ಫ್ಯಾನ್ಸ್ ಖುಷಿ ಡಬಲ್ ಮಾಡಿದೆ. ಬೆಳ್ಳಿ ಪರದೆ ಮೇಲೆ ನಿಮ್ಮನ್ನು ನೋಡಲು ಕಾಯ್ತೇವೆ ಅಂತ ಫ್ಯಾನ್ಸ್ ಕಮೆಂಟ್ ಕೂಡ ಮಾಡಿದ್ದಾರೆ. ಸಿನಿಮಾದಲ್ಲಿ ಭವ್ಯಾ ಗೌಡ ಯಾವ ರೋಲ್ ಮಾಡ್ತಿದ್ದಾರೆ ಅನ್ನೋದನ್ನು ಫ್ಯಾನ್ಸ್ ಕಾದು ನೋಡ್ಬೇಕಿದೆ.


