ಕರಿಮಣಿ ಧಾರಾವಾಹಿಯಲ್ಲಿ ಕರ್ಣ-ಸಾಹಿತ್ಯರ ಮದುವೆ ಸಂಕಷ್ಟದಲ್ಲಿದೆ. ಚಿಕ್ಕಪ್ಪನ ಜೂಜಿನಿಂದ ಸಾಹಿತ್ಯಳಿಗೆ ರಿಷಿ ಜೊತೆ ಮದುವೆ ನಿಶ್ಚಯವಾಗಿದೆ. ಕರ್ಣನಿಗೆ ಸಿಂಚನಾಳೊಂದಿಗೆ ಮದುವೆ. ಆದರೆ ಇಬ್ಬರ ನಡುವಿನ ಪ್ರೀತಿಯ ಹಾಡು ಜನಪ್ರಿಯವಾಗಿದ್ದು, ಅಭಿಮಾನಿಗಳು ಕರ್ಣ-ಸಾಹಿತ್ಯ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕರಿಮಣಿ. ಈ ಧಾರಾವಾಹಿಯ ನಾಯಕ ಮತ್ತು ನಾಯಕಿಯಾದ ಕರ್ಣ ಮತ್ತು ಸಾಹಿತ್ಯ ಬಾಳಿನಲ್ಲಿ ನಡೆಯುವ ಪ್ರೀತಿಯ ಹೋರಾಟವೇ ಕರಿಮಣಿಯ ಕಥೆ. ಸದ್ಯ ಧಾರಾವಾಹಿಯಲ್ಲಿ (Karimani Serial) ಕರ್ಣ ಮತ್ತು ಸಾಹಿತ್ಯ ಇಬ್ಬರ ಮದುವೆ ಕೂಡ ನಡೆಯುತ್ತಿದೆ. ಕರ್ಣನ ಮದುವೆ ಸಿಂಚನ ಜೊತೆ ನಡೆದರೆ, ಸಾಹಿತ್ಯ ಮದುವೆ ರಿಷಿ ಜೊತೆ ನಡೆಯಲಿದೆ. ಆದರೆ ಈ ವಿಷ್ಯ ಸ್ವತಃ ಸಾಹಿತ್ಯಳಿಗೆ ಗೊತ್ತಿಲ್ಲ. ಇದಕ್ಕೆ ಕಾರಣ, ಚಿಕ್ಕಪ್ಪ ಸಾಹಿತ್ಯಳನ್ನು ಜೂಜಿನಲ್ಲಿಟ್ಟು ಸೋತು ಬಂದಿದ್ದ.
ಕಲರ್ಸ್ ಕನ್ನಡದ ಬದಲಾವಣೆಯ ಯುಗ... ಧಾರಾವಾಹಿಗಳಲ್ಲಿ ಇನ್ಮುಂದೆ ಬರೀ ಟ್ವಿಸ್ಟ್…
ಇನ್ನೊಂದು ಕಡೆ ಅಮ್ಮನ ಮಾತಿಗೆ ಒಪ್ಪಿಗೆ ನೀಡಿ ಸಿಂಚನಾಳನ್ನು ಮದುವೆಯಾಗುತ್ತಿದ್ದಾನೆ ಕರ್ಣ. ಆದಾರೆ ಆತನಿಗೆ ಸಾಹಿತ್ಯಳ ಜೊತೆಗೆ ಕಳೆದ ಮಧುರ ಕ್ಷಣಗಳೆಲ್ಲಾ ಒಂದೊಂದಾಗಿ ನೆನಪಾಗುತ್ತಿದೆ. ಸಾಹಿತ್ಯಳನ್ನು ಬಿಟ್ಟು ಬದುಕೋ ಶಕ್ತಿ ಇಲ್ಲದ ಕರ್ಣ, ಸಿಂಚನಾ ಜೊತೆ ಮದುವೆಯಾಗುತ್ತಾನ? ಅಥವಾ ಸಾಹಿತ್ಯ ಮದುವೆ ರಿಷಿ ಜೊತೆಗೆ ಎಂದು ಗೊತ್ತಾದ ಮೇಲೆ ಅದನ್ನು ತಡೆಯುತ್ತಾನ? ತನ್ನ ಚಿಕ್ಕಪ್ಪ ತನ್ನನ್ನು ರಿಷಿ ಜೊತೆ ಜೂಜಲ್ಲಿ ಸೋತು, ಆತನಿಗೆ ತನ್ನನ್ನು ಮದುವೆ ಮಾಡಿ ಕೊಡುತ್ತಿದ್ದಾನೆ ಎಂದು ಗೊತ್ತಾದರೆ ಸಾಹಿತ್ಯ ಸ್ಥಿತಿ ಹೇಗಾಗಬೇಡ. ಇಷ್ಟೇಲ್ಲಾ ಸಮಸ್ಯೆಗಳ ಮಧ್ಯೆ ಇದೀಗ ಸಾಹಿತ್ಯ ಮತ್ತು ಕರ್ಣರ ಡುಯೆಟ್ ಹಾಡು ಸದ್ದು, ಮಾಡುತ್ತಿದೆ. ಸಿನಿಮಾ ರೇಂಜಲ್ಲಿ ತೆಗೆದಿರುವಂತಹ ಈ ಹಾಡಿನಂತೆ ಸಾಹಿತ್ಯ ಮತ್ತು ಕರ್ಣ (Karna and Sahitya) ಒಂದಾಗಲಿ ಎನ್ನುತ್ತಿದ್ದಾರೆ ಅಭಿಮಾನಿಗಳು.
ಕೈ ತುಂಬಾ ಸಂಬಳ ಸಿಗೋ ಕೆಲಸ ಬಿಟ್ಟು ಸೀರಿಯಲ್ ಒಪ್ಪಿದ್ದಕ್ಕೆ 'ಕರಿಮಣಿ' ನಟಿ ಸ್ಪಂದನಾ ಮನೆಯಲ್ಲಿ ಗರಂ!
ಕಡಲ ಕಿನಾರೆಯಲ್ಲಿ ಕರ್ಣ - ಸಾಹಿತ್ಯ ಜೋಡಿಯ ರೊಮ್ಯಾಂಟಿಕ್ ಸಾಂಗ್ (Romantic song) ಚಿತ್ರೀಕರಿಸಲಾಗಿದೆ. ಸಂಜಿತ್ ಹೆಗ್ಡೆ ಹಾಡಿರುವ ‘ಏನಂದರೂನು ಹಾಗೆ ನೀ ನಂಗೆ ಅಲ್ಲವಾ’ ಹಾಡಿಗೆ ಕರ್ಣ ಹಾಗೂ ಸಾಹಿತ್ಯ ಡುಯೆಟ್ ಹಾಡಿದ್ದಾರೆ. ಸಿನಿಮಾದ ಹಾಡಿನ ಚಿತ್ರೀಕರಣದಂತೆ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಇದು ಕರ್ಣ ಕನಸು ಕಾಣುವ ಹಾಡಾಗಿದೆ. ಹಾಡಿನ ಪ್ರೊಮೊ ಬಿಡುಗಡೆಯಾಗಿದ್ದು, ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಆದಷ್ಟು ಬೇಗ ಸಾಹಿತ್ಯನ ಒಪ್ಪಿಸಿ ಮದುವೆಯಾಗು ಕರ್ಣ ಅಂತಿದ್ದಾರೆ, ದೃಷ್ಟಿ ತೇಗಿಬೇಕು ಮುದ್ದಾದ ಚಂದದ ಕರ್ಣ ಸಾಹಿತ್ಯ ಜೋಡಿಗೆ, ಮೂವಿ ನೋಡಿದ ಹಾಗೆ ಆಗಿದೆ, ಸಖತ್ ಆಗಿದೆ ವಿಡೀಯೋ ಎಂದೆಲ್ಲಾ ಜನ ಕಾಮೆಂಟ್ ಮಾಡಿದ್ದಾರೆ.
