ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಕರಿಮಣಿʼ ಧಾರಾವಾಹಿಯಲ್ಲಿ ರೋಚಕ ಎಪಿಸೋಡ್ ಪ್ರಸಾರ ಆಗುತ್ತಿದೆ. ಈ ಮದುವೆ ಸಂಭ್ರಮದಲ್ಲಿ ಸ್ಫೋಟಕ ವಿಷಯಗಳು ಬಯಲಾಗಿದೆ.
‘ಕರಿಮಣಿ’ ಧಾರಾವಾಹಿಯಲ್ಲಿ ಸಾಹಿತ್ಯ ಹಾಗೂ ಕರ್ಣ ಮದುವೆ ಆಗತ್ತಾ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಕಳೆದ ಒಂದು ವಾರದಿಂದ ಇವರ ಮದುವೆ ಕುರಿತ ಎಪಿಸೋಡ್ ಪ್ರಸಾರ ಆಗುತ್ತಿದೆ. ಕರ್ಣನ ಸೋದರತ್ತೆ ಮಾಡಿದ ಪ್ಲ್ಯಾನ್‌ನಿಂದ ಸಾಹಿತ್ಯ ಹಾಗೂ ಕರ್ಣ ದೂರ ಆಗುವ ಹಾಗೆ ಆಗಿದೆ. ಈಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಸ್ಪೋಟಕ ವಿಷಯಗಳು ರಿವೀಲ್ ಆಗಿವೆ.
ಕರ್ಣ, ಸಾಹಿತ್ಯ ಬೇರೆ ಆಗ್ತಾರಾ?
ಕರ್ಣ ಸಾಹಿತ್ಯಳನ್ನು ಪ್ರೀತಿ ಮಾಡುತ್ತಿದ್ದಾನೆ. ಈ ವಿಷಯ ಈಗ ಎಲ್ಲರಿಗೂ ಗೊತ್ತಾಗಿದೆ. ನಾನು ಕರ್ಣನನ್ನು ಪ್ರೀತಿ ಮಾಡುತ್ತಿದ್ದೇನೆ, ಅವನು ನನಗೆ ಬೇಕು ಅಂತ ಸಿಂಚನಾ ಸಾಹಿತ್ಯಳಿಗೆ ಹೇಳಿದ್ದಳು. ಇದಕ್ಕಾಗಿ ಸಾಹಿತ್ಯ ಕರ್ಣನ ಬಳಿ ನಾಟಕ ಮಾಡಿದ್ದಳು. ಒಟ್ಟಿನಲ್ಲಿ ಇವರಿಬ್ಬರು ದೂರ ಆಗ್ತಾರಾ? ಇಲ್ಲವಾ ಎನ್ನೋದು ಕಾದು ನೋಡಬೇಕಿದೆ.
ಕಡಲ ತೀರದಲ್ಲಿ ಕರ್ಣ- ಸಾಹಿತ್ಯ ರೊಮ್ಯಾನ್ಸ್… ಹಾಡಿಗೆ ಮನಸೋತ ಕರಿಮಣಿ ವೀಕ್ಷಕರು
ಸಿಂಚನಾ ತಾಯಿಯ ನಾಟಕ!
ಇನ್ನೊಂದು ಕಡೆ ಕರ್ಣನ ಸೋದರತ್ತೆ ಮಹಾ ಕುತಂತ್ರಿ. ತನ್ನ ಮಗಳು ಸಿಂಚನಾ ಕರ್ಣನ ಪತ್ನಿಯಾಗಬೇಕು ಅಂತ ಅವಳು ಸಾಕಷ್ಟು ನಾಟಕ ಮಾಡಿದ್ದಳು. ಕರ್ಣನ ಮನೆಯವರು ಸಾಹಿತ್ಯಳನ್ನು ಹೊಗಳೋದು ಅವಳಿಗೆ ಇಷ್ಟವೇ ಇಲ್ಲ. ಈಗಾಗಲೇ ಸಾಕಷ್ಟು ಬಾರಿ ಅವಳು ಸಾಹಿತ್ಯಳಿಗೆ ತೊಂದರೆ ಕೊಟ್ಟಿದ್ದಾಳೆ, ಅವಮಾನ ಮಾಡಿದ್ದಾಳೆ, ನಿಂದಿಸಿದ್ದಾಳೆ. ಇನ್ನು ಓರ್ವ ಕಳ್ಳನಿಗೆ ಸ್ವಾಮೀಜಿ ವೇಷ ಹಾಕಿಸಿ ಕರ್ಣನ ತಾಯಿ ಬಳಿ “ಸಾಹಿತ್ಯಳನ್ನು ಮದುವೆಯಾದರೆ ಕರ್ಣ ಸಾಯುತ್ತಾನೆ” ಎಂದು ಸುಳ್ಳು ಹೇಳಿಸಿದ್ದಳು. ಇದನ್ನೇ ನಂಬಿಕೊಂಡು ಸಿಂಚನಾ, ಕರ್ಣನ ಮದುವೆ ಮಾಡಿಸಬೇಕು ಅಂತ ತಾಯಿ ಪಟ್ಟುಹಿಡಿದಿದ್ದಾಳೆ.
ಸಾಹಿತ್ಯಗೆ ಇನ್ನೊಂದು ಮದುವೆ!
ಜೂಜಿನಲ್ಲಿ ಸಾಹಿತ್ಯಳನ್ನು ಅವಳ ಚಿಕ್ಕಪ್ಪ ಅಡವಿಟ್ಟಿದ್ದನು. ಅಡವಿಟ್ಟು ಸೋತಿದ್ದಕ್ಕೆ ರೌಡಿ ಜೊತೆಗೆ ಸಾಹಿತ್ಯ ಮದುವೆ ಮಾಡಿಸಲು ಮುಂದಾಗಿದ್ದಾನೆ. ಮದುವೆ ಮಾಡಿಸುತ್ತಿರುವ ವಿಷಯ ಇನ್ನೂ ಕರ್ಣನ ಕಿವಿಗೆ ಬಿದ್ದಿಲ್ಲ.
ಸತ್ಯದ ಸ್ಪೋಟ
ಮನೆಗೆ ಬಂದ ಕಳ್ಳ ಸ್ವಾಮೀಜಿ ಸಾಹಿತ್ಯ, ಕರ್ಣ ಒಂದಾದರೆ ದುರಂತ ಆಗುತ್ತದೆ, ಕರ್ಣ ಸಾಯುತ್ತಾನೆ ಅಂತ ಸುಳ್ಳು ಹೇಳಿದ್ದನು. ಈ ವಿಷಯ ಈಗ ಪಾಪಮ್ಮಳ ಕಿವಿಗೆ ಬಿದ್ದಿದೆ. ಆ ಸ್ವಾಮೀಜಿ ಹಾಗೂ ಕರ್ಣನ ಅತ್ತೆ ಮಾತಾಡ್ತಿರೋದು ಪಾಪಮ್ಮಗೆ ಕೇಳಿಸ್ತು. ಇದನ್ನು ಅವಳು ಕರ್ಣನ ಬಳಿ ಹೇಳುವ ಪ್ರಯತ್ನ ಮಾಡಿದ್ದಳು. ಆದರೆ ಕರ್ಣನ ಅತ್ತೆ ಪಾಪಮ್ಮಳ ಬಾಯಿ ಮುಚ್ಚಿಸಿ ಕಿಡ್ನ್ಯಾಪ್ ಮಾಡಿಸಿದ್ದಾಳೆ. ಪಾಪಮ್ಮ ಏನಾದರೂ ಕರ್ಣನಿಗೆ ಹೇಳಿದರೆ ಅತ್ತೆಯ ಬಂಡವಾಳ ಬಯಲಾಗುತ್ತದೆ.
ಕೈ ತುಂಬಾ ಸಂಬಳ ಸಿಗೋ ಕೆಲಸ ಬಿಟ್ಟು ಸೀರಿಯಲ್ ಒಪ್ಪಿದ್ದಕ್ಕೆ 'ಕರಿಮಣಿ' ನಟಿ ಸ್ಪಂದನಾ ಮನೆಯಲ್ಲಿ ಗರಂ!
ಸಿಂಚನಾ ಡ್ರಾಮಾ ಬಯಲಾಯ್ತು!
ಸಿಂಚನಾ ಕೂಡ ಸಾಹಿತ್ಯ ಬಳಿ ನಾಟಕ ಮಾಡಿದ್ದಳು, ಬ್ಲ್ಯಾಕ್‌ಮೇಲ್ ಮಾಡಿದ್ದಳು. ತಾನು ನಾಟಕ ಮಾಡಿರುವ ವಿಷಯವನ್ನು ಸಿಂಚನಾ ತನ್ನ ಸ್ನೇಹಿತರ ಬಳಿ ಹೇಳಿದ್ದಳು. ಈ ವಿಷಯ ಕರ್ಣನ ತಮ್ಮನ ಕಿವಿಗೆ ಬಿದ್ದಿದೆ. ಈಗ ಅವನು ಕರ್ಣನಿಗೆ ಹೇಳಿದರೆ ಈ ಮದುವೆ ಮುರಿದಂತೆ.
ಮುಂದೆ ಏನಾಗುವುದು?
ಸಿಂಚನಾ ಹಾಗೂ ಅವಳ ತಾಯಿ ಪ್ಲ್ಯಾನ್ ಹಾಳಾಗೋದು ಪಕ್ಕಾ. ಇವರು ಎಷ್ಟೇ ಕುತಂತ್ರ ಮಾಡಿದರೂ ಕೂಡ ಸಾಹಿತ್ಯ-ಕರ್ಣ ಮದುವೆ ಆಗೋದಂತೂ ತಪ್ಪಿಸೋಕೆ ಆಗೋದಿಲ್ಲ. ಕರ್ಣ-ಸಾಹಿತ್ಯ ಗ್ಯಾರಂಟಿ ಮದುವೆ ಆಗ್ತಾರೆ. ಇನ್ನೊಂದು ಕಡೆ ಈ ಮದುವೆ ಮುಗಿದಮೇಲೆ ಸಿಂಚನಾ ಕರ್ಣನನ್ನು ಪಡೆದುಕೊಳ್ಳಲು ಪ್ಲ್ಯಾನ್ ಮಾಡುತ್ತಾಳೆ. ಒಟ್ಟಿನಲ್ಲಿ ಕರ್ಣ-ಸಾಹಿತ್ಯ ಮದುವೆ ಆಗೋದು ಕಷ್ಟ ಇದೆ. ಒಂದಷ್ಟು ಸವಾಲುಗಳನ್ನು ಎದುರಿಸಿದ ನಂತರದಲ್ಲಿ ಇವರಿಬ್ಬರು ಒಂದಾಗೋದು ಪಕ್ಕಾ ಎನ್ನಬಹುದು. ನಿಮಗೆ ಏನು ಅನಿಸುತ್ತದೆ? ಈ ಧಾರಾವಾಹಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ…
