ʼಕರಿಮಣಿʼ ಧಾರಾವಾಹಿಯಲ್ಲಿ ಸಾಹಿತ್ಯ, ಕರ್ಣ ಒಂದಾಗ್ತಾರಾ? ಇಲ್ಲವಾ? ಎನ್ನೋದು ದೊಡ್ಡ ಪ್ರಶ್ನೆ ಆಗಿದ. ಇನ್ನೊಂದು ಕಡೆ ವೀಕ್ಷಕರು ಊಹಿಸದ ಟ್ವಿಸ್ಟ್ ಕೂಡ ಎದುರಾಗಿದೆ. ಮುಂದೆ ಏನಾಗಬಹುದು?
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಕರಿಮಣಿ’ ಧಾರಾವಾಹಿಯಲ್ಲಿ ಈಗ ಭರ್ಜರಿ ತಿರುವು. ಎಲ್ಲ ಸತ್ಯಗಳು ಒಂದೇ ಸಮನೆ ರಿವೀಲ್ ಆದ್ರೆ ವೀಕ್ಷಕರಿಗೆ ಹೋಳಿಗೆ ಊಟ ತಿಂದಹಾಗೆ ಅಲ್ವಾ? ಹೌದು, ಒಂದು ಕಡೆ ಕರ್ಣನ ಮದುವೆ, ಇನ್ನೊಂದು ಕಡೆ ಸಾಹಿತ್ಯ ಮದುವೆ ನಡೆಯುತ್ತಿದೆ. ತಾನು ಪ್ರೀತಿಸಿದ ಹುಡುಗಿ ಸಾಹಿತ್ಯಗೆ ಮದುವೆ ಆಗ್ತಿರೋ ವಿಷಯ ಇನ್ನೂ ಕರ್ಣಗೆ ಗೊತ್ತಾಗಿಲ್ಲ. ಆದರೆ ತಾಯಿಗೋಸ್ಕರ ಕರ್ಣ ಸಿಂಚನಾಳನ್ನು ಮದುವೆ ಆಗಲು ರೆಡಿ ಆಗಿದ್ದಾನೆ.
ಸಿಂಚನಾ ತಾಯಿಗೆ ತನ್ನ ಮಗಳು ರಾಜೇಂದ್ರ ಪ್ರಸಾದ್ ಕುಟುಂಬದ ಸೊಸೆ ಆಗಬೇಕು ಎಂಬ ಆಸೆ. ಸಿಂಚನಾಗೆ ಕರ್ಣನನ್ನು ಕಂಡ್ರೆ ತುಂಬ ಇಷ್ಟ. ಕರ್ಣನನ್ನು ಪಡೆದುಕೊಳ್ಳಬೇಕು ಎಂಬ ಆಸೆಯಲ್ಲಿ ಸಿಂಚನಾ ಸಿಕ್ಕಾಪಟ್ಟೆ ನಾಟಕ ಮಾಡಿದ್ದಾಳೆ. ಇದ್ಯಾವುದೂ ಕರ್ಣನಿಗೆ ಗೊತ್ತೇ ಇಲ್ಲ.
Karimani Serial: ಸಾಹಿತ್ಯ-ಕರ್ಣ ಮದುವೆ ಟೈಮ್‌ನಲ್ಲಿ ಸ್ಫೋಟಕ ಸತ್ಯ ಬಯಲು! ರೋಚಕ ಎಪಿಸೋಡ್ ಇದು!
ಸಾಹಿತ್ಯಗೆ ಜೂಜಿನ ಮದುವೆ!
ತನ್ನ ಚಿಕ್ಕಪ್ಪ ಜೂಜಿನಲ್ಲಿ ಸೋತಿದ್ದು, ರಿಚ್ಚಿ ಜೊತೆ ಮದುವೆ ಮಾಡಿಸ್ತಿರೋ ವಿಷಯ ಕೂಡ ಸಾಹಿತ್ಯಗೆ ಗೊತ್ತಿಲ್ಲ. ತಾನು ಮದುವೆಯಾಗುವ ಹುಡುಗ ಯಾರು ಎನ್ನೋದು ಕೂಡ ಸಾಹಿತ್ಯಗೆ ಗೊತ್ತಿಲ್ಲ. ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಸಾಹಿತ್ಯ ಚಿಕ್ಕಪ್ಪ ಈ ಮದುವೆ ಮಾಡಿಸ್ತಿದ್ದಾನೆ. ಯಾರೂ ಕೂಡ ಈ ಮದುವೆಯನ್ನು ತಡೆಯುವ ಪ್ರಯತ್ನ ಮಾಡ್ತಿಲ್ಲ.
ಸಿಂಚನಾ ಕುತಂತ್ರ!
ಸಾಹಿತ್ಯ ಕರ್ಣನಿಂದ ದೂರ ಆಗಬೇಕು ಅಂತ ಸಿಂಚನಾ ಒಂದಷ್ಟು ನಾಟಕ ಮಾಡಿದ್ದಳು. “ನೀನು ಕರ್ಣನಿಂದ ದೂರ ಆದರೆ ಮಾತ್ರ ನಾನು ಅವನನ್ನು ಮದುವೆ ಆಗೋಕೆ ಸಾಧ್ಯ. ಕರ್ಣ ಸಿಕ್ಕಿಲ್ಲ ಅಂದ್ರೆ ನಾನು ಸಾಯ್ತೀನಿ” ಅಂತ ಸಿಂಚನಾ ಧಮ್ಕಿ ಹಾಕಿದ್ದಳು. ಕರ್ಣ ತನ್ನನ್ನು ದ್ವೇಷಿಸುವ ಹಾಗೆ ಆಗಲಿ ಅಂತ ಸಾಹಿತ್ಯ ಅವನ ಮುಂದೆ ಒಂದಿಷ್ಟು ದ್ವೇಷದ ಭಾಷಣ ಮಾಡಿದ್ದಳು. ಒಟ್ಟಿನಲ್ಲಿ ಕರ್ಣ-ಸಾಹಿತ್ಯ ದೂರ ಆಗೋಕೆ ಸಿಂಚು ಕಾರಣ!
ಕಲರ್ಸ್ ಕನ್ನಡದ ಬದಲಾವಣೆಯ ಯುಗ... ಧಾರಾವಾಹಿಗಳಲ್ಲಿ ಇನ್ಮುಂದೆ ಬರೀ ಟ್ವಿಸ್ಟ್…
ಸತ್ಯ ಹೇಳಿದ ಸಿಂಚು!
ಈ ಸಿಂಚನಾ ಮದುವೆಗೆ ರೆಡಿ ಆಗಿದ್ದಾಳೆ. ಸಿಂಚನಾ ಕಂಡ್ರೆ ಕರ್ಣನಿಗೆ ಇಷ್ಟ ಇಲ್ಲ, ಮುಂದೆಯೂ ಪ್ರೀತಿ ಹುಟ್ಟೋದಿಲ್ಲ ಅಂತ ಅವಳಿಗೆ ರಾಜೇಂದ್ರ ಪ್ರಸಾದ್ ಮನದಟ್ಟು ಮಾಡಿಸಿದ್ದಾನೆ. ಇದರಿಂದಾಗಿ ಅವಳು ಮದುವೆ ಮಂಟಪದಲ್ಲಿ ಕರ್ಣನಿಗೆ ಸತ್ಯ ಹೇಳಿದ್ದಾರೆ.
“ನನಗೆ ನೀನು ಅಂದ್ರೆ ಇಷ್ಟ. ನಿನ್ನನ್ನು ಪಡೆಯೋಕೆ ನಾನು ಕುತಂತ್ರ ಮಾಡಿದೆ. ಸಾಹಿತ್ಯ ನಿನ್ನನ್ನು ದ್ವೇಷಿಸುವಷ್ಟು ಕೆಟ್ಟವಳು ಅಲ್ಲ. ಅವಳ ಮನಸ್ಸಿನಲ್ಲಿ ನಿನ್ನ ಬಗ್ಗೆ ಯಾವ ದ್ವೇಷವೂ ಇಲ್ಲ. ನನ್ನ ಒತ್ತಾಯಕ್ಕೆ ಅವಳು ಅಂದು ಆ ರೀತಿ ನಿನ್ನ ಹತ್ರ ಮಾತಾಡಿದಳು. ನಾನು ಸಾಯಬಾರದು ಅಂತ ಅವಳು ಸುಳ್ಳು ಹೇಳಿದಳು” ಎಂದು ಸಿಂಚನಾ, ಕರ್ಣನಿಗೆ ಹೇಳಿದ್ದಾಳೆ. ಈ ಮಾತು ಕೇಳಿ ಕರ್ಣ ಶಾಕ್ ಆಗಿದ್ದಾನೆ.
ಕೈ ತುಂಬಾ ಸಂಬಳ ಸಿಗೋ ಕೆಲಸ ಬಿಟ್ಟು ಸೀರಿಯಲ್ ಒಪ್ಪಿದ್ದಕ್ಕೆ 'ಕರಿಮಣಿ' ನಟಿ ಸ್ಪಂದನಾ ಮನೆಯಲ್ಲಿ ಗರಂ!
ಮುಂದೆ ಏನಾಗುವುದು?
ಸಾಹಿತ್ಯ ಮದುವೆ ನಡೆಯುತ್ತಿದ್ದ ಜಾಗಕ್ಕೆ ಕರ್ಣ ಎಂಟ್ರಿ ಆಗುತ್ತದೆ. ಅಲ್ಲಿ ರಿಚ್ಚಿಗೂ, ಕರ್ಣನಿಗೂ ಜಗಳ ನಡೆದು, ಹೊಡೆದಾಟ ಆಗಲೂಬಹುದು. ಜೂಜಿನಲ್ಲಿ ತನ್ನನ್ನು ಅಡವಿಟ್ಟು ಮದುವೆ ಮಂಟಪಕ್ಕೆ ಕರೆತಂದ ಚಿಕ್ಕಪ್ಪನ ಬಗ್ಗೆಯೂ ಸಾಹಿತ್ಯಗೆ ಗೊತ್ತಾಗಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕವಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಕರ್ಣ ಫೈಟ್ ಮಾಡುವ ವಿಡಿಯೋ ಭಾರೀ ವೈರಲ್ ಆಗ್ತಿದೆ. ಒಟ್ಟಿನಲ್ಲಿ ʼಕರಿಮಣಿʼ ಧಾರಾವಾಹಿಯಲ್ಲಿ ವೀಕ್ಷಕರು ಊಹಿಸಿದ ಟ್ವಿಸ್ಟ್ ಸಿಕ್ಕಿದೆ. ಸೀರಿಯಲ್ ಎಳಿತಾರೆ ಎನ್ನುವ ದೂರಿನ ಮಧ್ಯೆ, ವೀಕ್ಷಕರಿಗೂ ಊಹಿಸದ ಟ್ವಿಸ್ಟ್ ಸಿಕ್ಕಿದೆ. ಹಾಗಾದರೆ ಮುಂದೆ ಏನಾಗಬಹುದು? ನಿಮ್ಮ ಅಭಿಪ್ರಾಯ ತಿಳಿಸಿ.
ಅಂದಹಾಗೆ ಈ ಧಾರಾವಾಹಿಯಲ್ಲಿ ಸಾಹಿತ್ಯ ಪಾತ್ರದಲ್ಲಿ ಸ್ಪಂದನಾ ಸೋಮಣ್ಣ ಅವರು ನಟಿಸುತ್ತಿದ್ದಾರೆ.
