- Home
- Sports
- Cricket
- ಮಹಿಳೆ ಜೊತೆ ಫ್ಲರ್ಟ್ ಮಾಡಿದ Sania Mirza ಮಾಜಿ ಪತಿ; 3ನೇ ಮದುವೆ ಮುರಿದಿದ್ರೆ ಸಾಕು ಎಂದ ನೆಟ್ಟಿಗರು
ಮಹಿಳೆ ಜೊತೆ ಫ್ಲರ್ಟ್ ಮಾಡಿದ Sania Mirza ಮಾಜಿ ಪತಿ; 3ನೇ ಮದುವೆ ಮುರಿದಿದ್ರೆ ಸಾಕು ಎಂದ ನೆಟ್ಟಿಗರು
ಸಾನಿಯಾ ಮಿರ್ಜಾ ಮಾಜಿ ಪತಿ ಶೋಯೆಬ್ ಮಲಿಕ್ ಅವರು ಫೆಬ್ರವರಿ 26ರಂದು ಪಾಕಿಸ್ತಾನಿ ನಟಿಯ ಜೊತೆ 4ನೇ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಆ ನಟಿ ಬೇರೆ ಹುಡುಗನ ಜೊತೆ ಮದುವೆ ಆದರು. ಈಗ ಮಹಿಳೆ ಜೊತೆ ಫ್ಲರ್ಟ್ ಮಾಡಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಮೂರನೇ ಮದುವೆ ಮುರಿದು ಬೀಳೋ ಚಾನ್ಸ್
ಸೋಶಿಯಲ್ ಮೀಡಿಯಾದಲ್ಲಿ ಭಾರತ ಹಾಗೂ ಪಾಕಿಸ್ತಾನದ ಜನರು ಈ ಬಗ್ಗೆ ಚರ್ಚೆ ಮಾಡಿದ್ದರು. ಈಗ ಫ್ಲರ್ಟ್ ಮಾಡಿರೋ ವಿಡಿಯೋ ನೋಡಿ ಮೂರನೇ ಮದುವೆ ಮುರಿದು ಬೀಳೋ ಚಾನ್ಸ್ ಇದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಫೋನ್‌ನಲ್ಲಿ ಮದುವೆ
2002ರಲ್ಲಿ ಹೈದರಾಬಾದ್ ಮೂಲದ ಟೀಚರ್ ಆಯೇಷಾ ಸಿದ್ಧಿಕಿ ಅವರನ್ನು ಮದುವೆ ಆಗಿದ್ದರು. ಮಲಿಕ್ ಅವರಿಗೆ ವಯಸ್ಸು 20 ಇದ್ದಾಗಲೇ ಫೋನ್‌ನಲ್ಲಿ ಮದುವೆ ಆಗಿತ್ತು. 2004, 2010ರಲ್ಲಿ ಈ ವಿಚಾರ ದೊಡ್ಡ ವಿವಾದ ಎಬ್ಬಿಸಿತ್ತು. ಆಯೇಷಾ ಅವರು ನಾನು ಶೋಯೆಬ್‌ರನ್ನು ಮದುವೆ ಆಗಿದ್ದೀನಿ ಎಂದು ಹಠ ಹಿಡಿದಿದ್ದರು. ಈ ವಿವಾದದ ಮಧ್ಯೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮದುವೆ ಆಗಿದ್ದರು.
ಮಗ ಹುಟ್ಟಿದ
ನಾನು ಆಯೇಷಾರನ್ನು ಮದುವೆ ಆಗಿಲ್ಲ ಎಂದು ಶೋಯೆಬ್ ವಾದ ಮಾಡಿದ್ದರು. ಇದು ಕಾನೂನು ಸಮಸ್ಯೆ ಆಗಿತ್ತು. 2010ರಲ್ಲಿ ಡಿವೋರ್ಸ್ ಕೂಡ ಆಗಿತ್ತು. ಈ ಡಿವೋರ್ಸ್ ಸಿಕ್ಕಿ ಐದು ದಿನಕ್ಕೆ ಸಾನಿಯಾ ಮಿರ್ಜಾ ಅವರು ಶೋಯೆಬ್ ಖಾನ್‌ರನ್ನು ಮದುವೆಯಾಗಿದ್ದರು. ರಾಜಕೀಯ ವಿವಾದ, ದೇಶದ ವಿಚಾರವಾಗಿ ಸಮಸ್ಯೆಗಳ ಮಧ್ಯೆ ಸಾನಿಯಾ ಹಾಗೂ ಶೋಯೆಬ್ ಅವರು 2018ರಲ್ಲಿ ಮಗನನ್ನು ಪಡೆದರು.
ಫ್ಲರ್ಟ್ ಮಾಡಿದ್ದಾರೆ
ಈ ಜೋಡಿ 2023ರಲ್ಲಿ ಡಿವೋರ್ಸ್ ಪಡೆದರು, 2024ರಲ್ಲಿ ಡಿವೋರ್ಸ್ ಪಡೆದ ಬಳಿಕ, ಸನಾ ಜಾವೇದ್ ಜೊತೆ ಶೋಯೆಬ್ ಮೂರನೇ ಮದುವೆಯಾದರು. ಶೋಯೆಬ್ ಅವರು har lamha purjosh ಎನ್ನುವ ಟಿವಿ ಶೋನಲ್ಲಿ ಮಹಿಳೆಯೋರ್ವರ ಜೊತೆ ಫ್ಲರ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ಡಿವೋರ್ಸ್ ಆಗದಿದ್ರೆ ಸಾಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

