ವಂಶಿಕಾ ಆಯ್ತು, ಇದೀಗ ರಿತೂ ಸಿಂಗ್; ಡ್ರಾಮಾ ಜ್ಯೂನಿಯರ್ಸ್‌ನ ನೇಪಾಳಿ ಚಿನಕುರುಳಿ

ಡ್ರಾಮಾ ಜ್ಯೂನಿಯರ್ಸ್ ಗೆ ರಿತೂ ಸಿಂಗ್ ಅನ್ನೋ ಪುಟ್ಟ ಹುಡುಗಿಯ ಎಂಟ್ರಿ ಆಗಿದೆ. ಪಟ ಪಟನೆ ಅರಳು ಹುರಿದಂತೆ ಕನ್ನಡ ಮಾತಾಡೋ ಈ ನೇಪಾಳಿ ಪೋರಿ ರವಿಚಂದ್ರನ್ ಡೈಲಾಗ್ ಹೇಳೋ ಮೂಲಕ ಕನ್ನಡಿಗರ ಮನಗೆದ್ದಿದ್ದಾಳೆ.

 

cute and talentful Ritu Singh attracts judges in drama juniors

ರೀತೂ ಸಿಂಗ್ ಮೂಲ ಊರು ನೇಪಾಳದ ಒಂದು ಊರು. ಆದರೆ ಈ ಪುಟಾಣಿ ಇದೀಗ ಹವಾ ಎಬ್ಬಿಸುತ್ತಿರೋದು ಡ್ರಾಮಾ ಜ್ಯೂನಿಯರ್ಸ್‌ನಲ್ಲಿ. ಈಗಾಗಲೇ ಕಿರುತೆರೆಯಲ್ಲಿ ತನ್ನ ಪ್ರತಿಭೆ ತೋರಿಸಿ ಮನೆ ಮಾತಾಗಿರುವ ವಂಶಿಕಾ ಬಳಿಕ ಈ ಪೋರಿ ಸದ್ದು ಮಾಡ್ತಿದ್ದಾಳೆ. ಬಾಯಿ ತೆರೆದರೆ ರವಿಚಂದ್ರನ್ ಡೈಲಾಗ್ ಹೇಳೋ ಈಕೆ ಕನ್ನಡವನ್ನೂ ಅರಳು ಹುರಿದಂತೆ ಮಾತಾಡಬಲ್ಲಳು. ನೇಪಾಳದ ಹುಡುಗಿ ಕನ್ನಡದ ಅಷ್ಟು ಚಂದ ಅದ್ಹೇಗೆ ಮಾತಾಡ್ತಾಳೆ, ಕನ್ನಡವನ್ನೇನೋ ನೆರೆ ಹೊರೆಯವರಿಂದ ಕಲೀಬಹುದು, ಆದರೆ ಸಿನಿಮಾ ಡೈಲಾಗ್, ಅದರಲ್ಲೂ ರವಿಚಂದ್ರನ್ ಸಿನಿಮಾ ಡೈಲಾಗ್ ಹೊಡೆಯೋದು ಅದ್ಹೇಗೆ ಸಾಧ್ಯ ಅಂತ ಪ್ರೇಕ್ಷಕರೆಲ್ಲ ಮೂಗಿನ ಮೇಲೆ ಬೆರಳಿಡೋ ಹಾಗೆ ಮಾಡಿರೋದು ಇವಳ ತಾಕತ್ತು. ಸದ್ಯಕ್ಕೀಗ ವಂಶಿಕಾ ಬಳಿಕ ಇವಳೇ ಕಿರುತೆರೆಯಲ್ಲಿ ರಂಜಿಸುತ್ತಿರುವ ಪುಟಾಣಿ. ಜೀ ಕನ್ನಡದ ಡ್ರಾಮಾ ಜ್ಯೂನಿಯರ್ಸ್ ವೇದಿಕೆ ಈ ಪುಟಾಣಿಯ ಪ್ರತಿಭಾ ಪ್ರದರ್ಶನಕ್ಕೆ ಸಾಕ್ಷಿ ಆಗುತ್ತಿದೆ. ಆ ಮೂಲಕ ಲಕ್ಷಾಂತರ ಪ್ರೇಕ್ಷಕರ ಮನಸ್ಸನ್ನು ಇವಳು ಗೆದ್ದಿದ್ದಾಳೆ. 

ರೀತೂ ಸದ್ಯಕ್ಕೆ ನೆಲೆಸಿರೋದು ಮೈಸೂರಿನಲ್ಲಿ. ಅಲ್ಲಿಯೇ ಶಾಲೆಗೂ ಹೋಗ್ತಾಳೆ. ಈಗ ಯುಕೆಜಿ ಓದುತ್ತಿರುವ ನಾಲ್ಕೂವರೆ ವರ್ಷದ ಮಗು. ಮನೆ ಮಾತು ನೇಪಾಳಿ. ಹಿಂದಿಯೂ ಮಾತಾಡೋದಿದೆ. ಉಳಿದಂತೆ ಮೈಸೂರಲ್ಲಿ ಕನ್ನಡ ಕಮಾಲ್ ಬಗ್ಗೆ ಹೇಳ್ಬೇಕಾ, ಆಸುಪಾಸಲ್ಲೆಲ್ಲ ಕನ್ನಡ ಮಾತಾಡೋ ಫ್ರೆಂಡ್ಸ್ ಇದ್ದಾರೆ. ಹೀಗಾಗಿ ತನ್ನೂರು ನೇಪಾಳದ ಹಳ್ಳಿಯಾದರೂ ಅಪ್ಪಟ ಕನ್ನಡದ ಮೈಸೂರು ಪರಿಸರದಲ್ಲಿ ಕನ್ನಡ ಕಲಿತು ರವಿಚಂದ್ರನ್ ಡೈಲಾಗ್ ಹೇಳೋ ಮಟ್ಟಿಗೆ ಈ ಪುಟಾಣಿ ಪ್ರತಿಭೆ ಮೆರೆದಿದ್ದಾಳೆ. ರವಿಚಂದ್ರನ್ ಡೈಲಾಗ್ ಬಿಟ್ಟರೆ ಇವಳಿಗೆ ಸಮೋಸಾ ತಿನ್ನೋದು ಬಹಳ ಇಷ್ಟವಂತೆ. ಅದು ಬಿಟ್ಟರೆ ಪಿಜ್ಜಾ, ಬರ್ಗರ್ ಅಂದರೆ ಸಖತ್ ಟೇಸ್ಟಿ ಇರುತ್ತೆ ಅಂತ ದೊಡ್ಡ ಕಣ್ಣು ಮಾಡಿ ಹೇಳ್ತಾಳೆ ಈ ಪುಟಾಣಿ. ಇನ್ನೂ ಹೆಚ್ಚು ಮಾತಾಡಿಸಿದರೆ ಪಿಜ್ಜಾ ಮಾಡೋದೂ ತನಗೊತ್ತು, ಈರುಳ್ಳಿ, ಟೊಮ್ಯಾಟೋ ಎಲ್ಲ ಹಾಕಿ ಮಾಡಿಕೊಡ್ತೀನಿ ಅಂತಲೂ ಹೇಳ್ತಾಳೆ. 

ಬಾಡಿಗೆ ಕಟ್ಟಲಿಕ್ಕಾಗದೇ ಬಾಂಬೆ ಬಿಟ್ಟು ಬೆಂಗಳೂರಿಗೆ ಬಂದವಳೀಗ ಸೀರಿಯಲ್ ನಾಯಕಿ

ಈ ಪುಟ್ಟ ಹುಡುಗಿಯ ಕ್ಯೂಟ್ ಮಾತುಗಳಿಗೆ 'ಡ್ರಾಮಾ ಜ್ಯೂನಿಯರ್ಸ್' ನ ಜಡ್ಜಸ್ ಸಹ ಫಿದಾ ಆಗಿದ್ದಾರೆ. ತೀರ್ಪುಗಾರರಲ್ಲಿ ಒಬ್ಬರಾಗಿರುವ ರವಿಚಂದ್ರನ್ ಅವರಿಗೆ ಇವಳನ್ನು ಕಂಡರೆ ಮುದ್ದು. ಹೆಚ್ಚಾಗಿ ತನ್ನ ತೊಡೆ ಮೇಲೆ ಕೂರಿಸಿಕೊಂಡಿರ್ತಾರೆ. ಇವಳಿಗೂ ಅವರ ಕಾಲ ಮೇಲೆ ಕೂತಿರೋದು ಖುಷಿ. ಅವರೊಂದು ಸೀಕ್ರೆಟ್‌ಅನ್ನು ಇವಳಿಗೆ ಹೇಳಿದ್ದಾರಂತೆ. ಅದೇನು ಸೀಕ್ರೆಟ್ ಅಂತ ಕೇಳಿದ್ರೆ ಜಪ್ಪಯ್ಯಾ ಅಂದ್ರೂ ಬಾಯಿ ಬಿಡಲ್ಲ ರೀತೂ. 'ಅದು ಸೀಕ್ರೆಟ್. ಅದನ್ನು ಹೇಳಿದ್ರೆ ಸೀಕ್ರೆಟ್ ಹೆಂಗಾಗುತ್ತೆ?' ಅಂತ ಮರು ಪ್ರಶ್ನೆ ಮಾಡ್ತಾಳೆ. ಏನೇ ಮಾಡಿದ್ರೂ ಹೇಳೋದಿಲ್ಲ ಅಂತ ಕೂತ್ರೆ ಇವಳಿಂದ ಆ ವಿಚಾರ ಬಾಯಿ ಬಿಡಿಸೋದು ಕಷ್ಟ. 

ಇವಳಿಗೆ ಆಕ್ಟಿಂಗ್ ಬಿಟ್ಟರೆ ಹಾಡು ಹೇಳೋದೂ ಇಷ್ಟವಂತೆ. ಚಂದದ ಹಾಡೊಂದನ್ನು ಹೇಳಿಯೂ ತೋರಿಸ್ತಾಳೆ. ಹೀಗೆ ತನ್ನ ತೊದಲು ಮಾತು, ಮುದ್ದಾದ ಡೈಲಾಗ್‌ಗಳ ಮೂಲಕ ಈ ಪೋರಿ ಮನೆ ಮಾತಾಗುವ ಸೂಚನೆ ಕೊಡ್ತಿದ್ದಾಳೆ. ಹಾಗೆ ನೋಡಿದರೆ ಕನ್ನಡ ಕಿರುತೆರೆಯಲ್ಲಿ ಈಗ ಮಕ್ಕಳ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. 'ನಮ್ಮಮ್ಮ ಸೂಪರ್ ಸ್ಟಾರ್' ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು, ಈಗ 'ಗಿಜ್ಜಿ ಗಿಲಿ ಗಿಲಿ' ಕಾರ್ಯಕ್ರಮದ ಮೂಲಕ ರಂಜಿಸುತ್ತಿರುವ ವಂಶಿಕಾ ಸದ್ಯಕ್ಕೆ ಕಿರುತೆರೆ ಸ್ಟಾರೇ ಆಗಿ ಬಿಟ್ಟಿದ್ದಾಳೆ. ಅವಳಂತೇ ಜೋರ್ ಜೋರಾಗಿ ಡೈಲಾಗ್ ಹೊಡೆಯೋ ರೀತೂ ತಾನೂ ಜನಪ್ರಿಯತೆಯ ಸ್ಪರ್ಧೆಯಲ್ಲಿದ್ದಾಳೆ. ಮಕ್ಕಳು ಈ ಥರ ಜನಪ್ರಿಯತೆ ಪಡೆಯೋದ್ರಿಂದ ಅವರ ಭವಿಷ್ಯ ಹಾಳಾಗುತ್ತೆ ಅನ್ನೋ ದೂರಿನ ನಡುವೆಯೂ ಮಕ್ಕಳ ಪಾಪ್ಯುಲಾರಿಟಿಯಂತೂ ಕಡಿಮೆ ಆಗೋ ಸೂಚನೆ ಕಾಣ್ತಾ ಇಲ್ಲ. 

ಕನ್ನಡತಿ ರಂಜನಿ ರಾಘವನ್ ಲಂಗ ದಾವಣಿ ಡ್ಯಾನ್ಸ್ ಈಗ ವೈರಲ್!
 

 

Latest Videos
Follow Us:
Download App:
  • android
  • ios