ಕನ್ನಡತಿಯ ಅಮ್ಮಮ್ಮ ಈಗ ಅಮೃತಧಾರೆಯ ಗೌತಮ್ ದಿವಾನ್ ತಾಯಿ ಭಾಗ್ಯ ದಿವಾನ್ !
ಕನ್ನಡತಿಯ ಅಮ್ಮಮ್ಮ ಈಗ ಗೌತಮ್ ದಿವಾನ್ ತಾಯಿ ಭಾಗ್ಯನೇ ಅಂತ ಈ ಸೀರಿಯಲ್ ವೀಕ್ಷಕರು ನಂಬಿದ್ದಾರೆ. ಆದರೆ ಸದ್ಯಕ್ಕೆ ಅವರು ಬೇರೆ ಥರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಮತ್ತೊಂದು ಪಾತ್ರ, ಹೊಸದೊಂದು ಪ್ರಯಾಣ' ಅಂತ 'ಕನ್ನಡತಿ' ಸೀರಿಯಲ್ ಅಮ್ಮಮ್ಮ ಖ್ಯಾತಿಯ ಚಿತ್ಕಳಾ ಬಿರಾದಾರ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಕನ್ನಡತಿಯ ಅಮ್ಮಮ್ಮ ಪಾತ್ರದ ಜೊತೆಗೆ ಕನೆಕ್ಟ್ ಆದ ಕನ್ನಡಿಗರು ಲಕ್ಷಾಂತರ ಮಂದಿ. 'ಕನ್ನಡತಿ' ಸೀರಿಯಲ್‌ನಿಂದ ಇವರು ಹೊರ ಬಂದ ಮೇಲೆ ಬಹಳ ಮಂದಿ 'ಯಾವಾಗ ಮತ್ತೆ ನಿಮ್ಮನ್ನು ನೋಡೋದು ಮೇಡಂ' ಅಂತ ಪದೇ ಪದೇ ಕೇಳ್ತಿದ್ರಂತೆ. ಅವರ ಆ ಪ್ರಶ್ನೆಗೆ ಉತ್ತರವಾಗಿ ಚಿತ್ಕಳಾ ಅವರು 'ಅಮೃತಧಾರೆ' ಸೀರಿಯಲ್ ಕಡೆ ಬೊಟ್ಟು ಮಾಡಿದ್ದಾರೆ. ಹೌದು ಈ ಸೀರಿಯಲ್‌ನಲ್ಲಿ ಬಹಳ ಮಹತ್ವದ ಪಾತ್ರದಲ್ಲಿ ಚಿತ್ಕಳಾ ಬಿರಾದಾರ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಸದ್ಯ ಅವರ ಪಾತ್ರ ಕರೆಕ್ಟಾಗಿ ರಿವೀಲ್ ಆಗಿಲ್ಲ. ಅವರನ್ನು ಬೇರೆ ರೂಪದಲ್ಲಿ ತೋರಿಸಲಾಗಿದೆ. ಆದರೆ ಇದಕ್ಕೆ ಪ್ಯಾರಲಲ್ ಆಗಿ ಗೌತಮ್ ತಾಯಿ, ತಂಗಿಯ ರೆಫರೆನ್ಸ್ ಬರುತ್ತ ಹೋಗುತ್ತೆ.
ಜಾಣ ವೀಕ್ಷಕರು ಖಂಡಿತಾ ನಮ್ಮ ಅಮ್ಮಮ್ಮನೇ ಗೌತಮ್ ದಿವಾನ್ ಅಮ್ಮನ ಪಾತ್ರದಲ್ಲಿ ಬರುತ್ತಿದ್ದಾರೆ ಎಂದು ಸಂಭ್ರಮಿಸುತ್ತಿದ್ದಾರೆ. ಏಕೆಂದರೆ 'ಕನ್ನಡತಿ' ಸೀರಿಯಲ್‌ನಲ್ಲಿ ಅಮ್ಮಮ್ಮನಾಗಿ ಚಿತ್ಕಳಾ ಅವರ ನಟನೆ ನೋಡಿದವರೆಲ್ಲ ಅವರ ಕಂ ಬ್ಯಾಕ್‌ಗೆ ಎದುರು ನೋಡುತ್ತಿದ್ದಾರೆ. ಚಿತ್ಕಳಾ ಸಿನಿಮಾದಲ್ಲಿ ಹೆಚ್ಚೆಚ್ಚು ಜನಪ್ರಿಯರಾಗುತ್ತಿದ್ದ ಹಾಗೆ ಸೀರಿಯಲ್‌ನಲ್ಲಿ ಅವರು ಕಾಣಿಸಿಕೊಳ್ಳೋದು ಕಡಿಮೆ ಆಗಿತ್ತು. ಆದರೆ ಸದ್ಯ ಅವರು ಅಮೃತಧಾರೆ ಸೀರಿಯಲ್‌ನ 'ಭಾಗ್ಯ ದಿವಾನ್' ಪಾತ್ರದಲ್ಲಿ ಎಂಟ್ರಿ ಕೊಡೋದು ಬಹುತೇಕ ಖಚಿತವಾಗಿದೆ.
ಅಣ್ಣಯ್ಯ ಸೀರಿಯಲ್ : ಮೊಬೈಲ್, ವಿಂಡೋ ಶಾಪಿಂಗ್ ಅಂತ ತಂಗಿಯರ ಹಾದಿ ತಪ್ಪಿಸ್ತಿದ್ದಾಳಾ ಪಾರು?
ಸದ್ಯ ಮಾನ್ಯ ಎಂಬ ಪಾತ್ರದ ತಂಗಿ ಧನ್ಯಾ ಮೂಲಕ ಈ ಸೀರಿಯಲ್‌ನಲ್ಲಿ ಹೊಸತೊಂದು ಟ್ರ್ಯಾಕ್ ಶುರುವಾಗಿದೆ. ಅದರಲ್ಲಿ ಈ ಧನ್ಯಾ ತನ್ನ ಅಕ್ಕ ಮಾನ್ಯಳನ್ನು ವಿಲನ್ ಶಕುಂತಳಾ ಹೇಗೆ ಮಟ್ಟಹಾಕಿದ್ಲು ಎಂಬುದನ್ನು ಎಳೆಎಳೆಯಾಗಿ ತೆರೆಡಿಡ್ತಾ ಇದ್ದಾಳೆ. ದಿವಾನ್ ಫ್ಯಾಮಿಲಿಯಲ್ಲಿ ಉದ್ಯೋಗಿಯಾಗಿದ್ದ ಮಾನ್ಯ ದಿಟ್ಟ ಹೆಣ್ಣು ಮಗಳು. ಅವಳಿಗೆ ಶಕುಂತಳಾ ತನ್ನ ಹಾಗೂ ತನ್ನ ಮಕ್ಕಳ ಸುಖಕ್ಕಾಗಿ ಗೌತಮ್ ದಿವಾನ್ ಅವರನ್ನು ಬಲಿಪಶು ಮಾಡ್ತಿರೋ ವಿಚಾರ ಗೊತ್ತಾಗಿದೆ. ಅವಳು ಅದನ್ನು ವಿರೋಧಿಸಿ ಸತ್ಯವನ್ನ ಗೌತಮ್‌ಗೆ ಹೇಳಲು ಹೋಗಿದ್ದಾಳೆ. ಆದರೆ ಇದರ ಸುಳಿವು ಪತ್ತೆ ಮಾಡಿದ ಶಕುಂತಳಾ ಅವಳ ಕ್ಯಾರೆಕ್ಟರ್‌ಗೇ ಮಸಿ ಬಳಿದು ಅವಳನ್ನು ಮನೆಯಿಂದ ಹೊರ ಹಾಕಿದ್ದಾಳೆ.
ಇದೀಗ ಅಕ್ಕನ ನ್ಯಾಯಕ್ಕಾಗಿ ಹೋರಾಡುವ ಮಾನ್ಯ ತಂಗಿ ಧನ್ಯಾ ನೇರ ಶಕುಂತಳಾ ಅಡ್ಡಕ್ಕೇ ಬಂದು ಮಾನ್ಯಳಿಗಾದ ಅನ್ಯಾಯದ ವಿರುದ್ಧ ದನಿ ಎತ್ತೋ ಜೊತೆಗೆ ಗೌತಮ್ ದಿವಾನ್ ತಾಯಿ ಭಾಗ್ಯ ಹಾಗೂ ತಂಗಿ ಇನ್ನೂ ಬದುಕಿದ್ದಾರೆ ಅನ್ನೋ ಸತ್ಯವನ್ನು ಬಯಲು ಮಾಡಿದ್ದಾಳೆ.
ರಾತ್ರಿ ಬೆಳಗಾಗುವುದರೊಳಗೆ ಒಳ್ಳೆಯವನಾದ ತಾಂಡವ್? ನಮಗೆ ಹುಚ್ಚು ಹಿಡೀತಿದೆ ಅಂತಿದ್ದಾರೆ ನೆಟ್ಟಿಗರು!
ಇನ್ನೊಂದು ಕಡೆ ಗೌತಮ್ ಗೆಳೆಯ ಆನಂದ್ ಮನೆಗೆ ಅವನ ಪತ್ನಿ ಅಪರ್ಣಾ ಮೂಲಕ ಒಬ್ಬ ಹೊಸ ಪಾತ್ರ ಎಂಟ್ರಿ ಆಗಿದೆ. ಅದು ಮನೆಕೆಲಸದ ಸುಧಾ ರೂಪದಲ್ಲಿ. ಆದರೆ ಅವಳು ಮನೆಕೆಲಸದವಳಲ್ಲ. ಗೌತಮ್ ಫ್ಯಾಮಿಲಿಗೆ ಸೇರಿದವಳು ಅನ್ನೋದು ಗೊತ್ತಾಗ್ತಿದೆ. ಇನ್ನೂ ಸೂಕ್ಷ್ಮವಾಗಿ ನೋಡಿದರೆ ಅವಳೇ ಗೌತಮ್ ತಂಗಿ ಇರಬೇಕು ಅನ್ನೋದು ಗೊತ್ತಾಗಿದೆ. ಮತ್ತೊಂದು ಕಡೆ ಅವಳ ಮನೆಯಲ್ಲಿ ಒಬ್ಬ ವಯಸ್ಸಾದ ಹೆಂಗಸು ಅನಾರೋಗ್ಯದಿಂದ ಬಳಲುತ್ತಿರುವುದು ಕಾಣುತ್ತದೆ. ಆಕೆಯ ಇವಳ ಅಮ್ಮ. ಆದರೆ ಇವರ ಹಿಂದೆ ರಹಸ್ಯವೊಂದು ಅಡಗಿ ಕುಳಿತ ಹಾಗಿದೆ. ಸೋ ಸೂಕ್ಷ್ಮವಾಗಿ ಗ್ರಹಿಸುವ ವೀಕ್ಷಕರು ಇವಳೇ ಗೌತಮ್ ದಿವಾನ್ ತಾಯಿ ಭಾಗ್ಯ, ಸುಧಾ ವೇಷದಲ್ಲಿರುವವಳು ಗೌತಮ್‌ನ ಒಡಹುಟ್ಟಿದ ಸೋದರಿ ಅನ್ನೋದನ್ನು ಗೆಸ್ ಮಾಡಿದ್ದಾರೆ.
ಸೋ ಮುಂದೆ ಭಾಗ್ಯ ಪಾತ್ರದಲ್ಲಿ ಅಮ್ಮಮ್ಮ ಖ್ಯಾತಿಯ ಚಿತ್ಕಳಾ ಬಿರಾದಾರ್ ಎಂಟ್ರಿ ಎಲ್ಲ ಕಾತರದಿಂದ ಕಾಯುತ್ತಿದ್ದಾರೆ.