ಅಣ್ಣಯ್ಯ ಸೀರಿಯಲ್ : ಮೊಬೈಲ್, ವಿಂಡೋ ಶಾಪಿಂಗ್ ಅಂತ ತಂಗಿಯರ ಹಾದಿ ತಪ್ಪಿಸ್ತಿದ್ದಾಳಾ ಪಾರು?
ಅಣ್ಣಯ್ಯ ಸೀರಿಯಲ್‌ನಲ್ಲಿ ಮನೇಲಿ ಫುಲ್ ಪಾರು ಹವಾ ಶುರುವಾಗಿದೆ. ಮೊಬೈಲ್, ಶಾಪಿಂಗ್, ಸಿನಿಮಾ ಅನ್ನೋ ನೆವದಲ್ಲಿ ತಂಗೀರ ಹಾದಿ ತಪ್ಪಿಸ್ತಿದ್ದಾಳಾ ಪಾರು..
ಅಣ್ಣಯ್ಯ ಸೀರಿಯಲ್‌ನಲ್ಲಿ ಶಿವಣ್ಣನ ಮನೆಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ತಂಗಿಯರ ಪಾಲಿಗೆ ಮಮತಾಮಯಿ ಆಗಿರುವ ಜೊತೆಗೆ ಶಿಸ್ತಿನ ಸಿಪಾಯಿಯೂ ಆಗಿದ್ದ ಅಣ್ಣಯ್ಯ ಇದೀಗ ಶಿಸ್ತಿನ ಸಿಪಾಯಿತನದಿಂದ ರಿಟೈರ್ಡ್ ಆಗೋ ಸೂಚನೆ ಸಿಕ್ಕಿದೆ. ಕಾರಣ ಪಾರು. ಅಣ್ಣನ ಮಾತನ್ನೇ ಶಿರಸಾ ಪಾಲಿಸುತ್ತಾ ಶಿಸ್ತಿನ ಸಿಪಾಯಿಗಳಂತಿದ್ದ ತಂಗಿಯರಿಗೆ ಅತ್ತಿಗೆ ಬಂದಿದ್ದು ಸ್ವಾತಂತ್ರ್ಯದ ಗಾಳಿ ಬೀಸಿ ಬಂದ ಹಾಗಾಗಿದೆ. ಅಣ್ಣನ ವೀಕ್‌ನೆಸ್ ಅನ್ನು ತಿಳಿದಿರುವ ತಂಗಿಯರು ಅತ್ತಿಗೆ ಜೊತೆ ಸೇರಿ ಅದನ್ನು ಲೇವಡಿ ಮಾಡೋ ಲೆವೆಲ್‌ಗೆ ಕಿಲಾಡಿಗಳಾಗಿದ್ದಾರೆ. ಅಣ್ಣಯ್ಯ ಮನೆಯಲ್ಲಿ ಇಲ್ಲದಿರುವ ಸಂದರ್ಭದಲ್ಲಿ ಮಾತ್ರ ತಂಗಿಯರು ಟಿವಿ ನೋಡುತ್ತಾ ಇರುತ್ತಾರೆ. ಅಷ್ಟೇ ಅಲ್ಲ ಅವನು ಇಲ್ಲದ ಸಮಯದಲ್ಲಿ ಮಾತ್ರ ಮೊಬೈಲ್ ಬಳಕೆ ಮಾಡುತ್ತಾರೆ. ಇದೆಲ್ಲವನ್ನೂ ಪಾರು ಮನೆಯಲ್ಲೇ ಇರುವುದರಿಂದ ಕಂಡುಕೊಂಡಿರುತ್ತಾಳೆ. ಶ್ರೀಮಂತರ ಮನೆಯಲ್ಲಿ, ಅದೇ ರೀತಿ ತನ್ನ ಎಜುಕೇಶನ್ ಸಲುವಾಗಿ ಸಿಟಿಯಲ್ಲಿದ್ದ ಅವಳಿಗೆ ಇಷ್ಟೆಷ್ಟ ನಿಯಮಗಳನ್ನು ಪಾಲಿಸುತ್ತಾ ಇವರು ಬದುಕುತ್ತಿರುವುದು ಸರಿ ಅಲ್ಲ ಎಂದು ಅನಿಸುತ್ತದೆ.
ಜೊತೆಗೆ ಅಣ್ಣಯ್ಯನಿಗೆ ಇವರು ಟಿವಿ ನೋಡುವ ಅಥವಾ ಮೊಬೈಲ್ ಬಳಕೆ ಮಾಡುವ ಯಾವ ವಿಷಯಗಳೂ ತಿಳಿದಿರುವುದಿಲ್ಲ. ಆದರೆ ಮಡಿಕೆಯಲ್ಲಿ ಮೊಬೈಲ್ ರಿಂಗ್ ಆದ ತಕ್ಷಣ ಅವನಿಗೆ ಗೊತ್ತಾಗುತ್ತದೆ. ಹೋಗಿ ಮೊಬೈಲ್ ಇರುವ ಜಾಗವನ್ನು ಹುಡುಕಿ ನೋಡುತ್ತಾನೆ. ನೋಡಿದಾಗ ಮೊಬೈಲ್ ಸಿಗುತ್ತದೆ. ಆ ನಂತರದಲ್ಲಿ ಎಲ್ಲರನ್ನೂ ಕರೆದು ಒಟ್ಟಿಗೆ ಸಾಲಾಗಿ ನಿಲ್ಲಿಸಿ ಬೈಯ್ಯಲು ಆರಂಭಿಸುತ್ತಾನೆ. ಇದು ಪಾರುಗೆ ಇಷ್ಟ ಆಗುವುದಿಲ್ಲ. ಅವಳು ತಂಗಿಯರ ಪರ ವಹಿಸಿ ಮಾತನಾಡುತ್ತಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಟ್ವಿಸ್ಟ್… ಬದಲಾದ ಲಕ್ಷ್ಮೀ, ಈವಾಗಲಾದ್ರೂ ಕಾವೇರಿ ಆಟಕ್ಕೆ ಬೀಳುತ್ತಾ ಬ್ರೇಕ್!
'ಯಾಕೆ ಮಾವ ಅವರು ಮೊಬೈಲ್ ಬಳಕೆ ಮಾಡ್ಬಾರ್ದಾ? ಈಗ ಜಗತ್ತು ಎಷ್ಟೊಂದು ಮುಂದುವರೆದಿದೆ. ಆದ್ರೆ ನೀನು ಮಾತ್ರ ಇವರನ್ನು ಕೂಡಾಕಿದೀಯಾ. ಪ್ರಪಂಚ ನೋಡೋಕೆ ಬಿಡ್ತಾ ಇಲ್ಲ. ನೀನು ಮಾಡ್ತಾ ಇರೋದು ಸರಿಯಲ್ಲ' ಎಂದು ಹೇಳುತ್ತಾಳೆ. ಆಗ ಅಣ್ಣಯ್ಯನಿಗೆ ಪಾರು ಹೇಳುತ್ತಿರುವುದು ಸ್ವಲ್ಪ ಮಟ್ಟಿಗೆ ಸರಿ ಅನಿಸಿದರೂ ಪೂರ್ತಿಯಾಗಿ ಒಪ್ಪಿಕೊಳ್ಳುವುದಿಲ್ಲ. ನಂತರ ನಿನ್ನ ತಂಗಿಯರು ಇದುವರೆಗೂ ಯಾವ ತಪ್ಪನ್ನೂ ಮಾಡಿಲ್ಲ. ಎಷ್ಟು ಒಳ್ಳೆಯವರು ಅಂತವರಿಗೆ ನೀನು ಈ ರೀತಿ ಶಿಕ್ಷೆ ಕೊಡೋದು ಸರಿನಾ? ಎಂದು ಪ್ರಶ್ನೆ ಮಾಡುತ್ತಾಳೆ.
ಅದನ್ನು ಕೇಳಿದ ನಂತರ ಶಿವುಗೆ ಹೌದಲ್ಲ ಎಂದು ಅನಿಸುತ್ತದೆ. ತನ್ನ ತಂಗಿಯರು ಒಳ್ಳೆಯವರು ಎನ್ನೋದು ಅವನಿಗೆ ಮೊದಲಿನಿಂದಲೇ ತಿಳಿದಿದ್ದರೂ ಯಾರಾದರೂ ಹೇಳಿದರೆ ಅವನು ಇನ್ನಷ್ಟು ಭಾವುಕನಾಗುತ್ತಾನೆ. ಅದೇ ರೀತಿ ಈಗಲೂ ಆಗಿದೆ. ನಂತರ ತನ್ನ ತಂಗಿಯರ ಹತ್ತಿರ ಹೋಗಿ ಕ್ಷಮೆ ಕೇಳುತ್ತಾನೆ. 'ಈ ದಡ್ಡನಿಗೆ ಇದೆಲ್ಲ ಅರ್ಥಾನೇ ಆಗಿಲ್ಲ. ಒಬ್ಬೊಬ್ಬರಿಗೂ ಒಂದೊಂದು ಮೊಬೈಲ್ ಕೊಡಸ್ತೀನಿ ನಾನು' ಎಂದು ಹೇಳುತ್ತಾನೆ. ಆಗ ದೊಡ್ಡ ತಂಗಿ ರತ್ನ ಹೇಳುತ್ತಾಳೆ 'ಇಲ್ಲ ಅಣ್ಣ ನಮಗೆ ಅದರ ಅವಶ್ಯಕತೆ ಇಲ್ಲ. ಇದೊಂದು ಮೊಬೈಲ್ ಸಾಕು' ಎನ್ನುತ್ತಾಳೆ.
ತನಗಿರುವ ಸ್ವಾತಂತ್ರ್ಯ ತನ್ನ ನಾದಿನಿಯರಿಗೂ ಬೇಕು ಅಂತ ಪಾರು ಅವರ ಪರವಾಗಿ ನಿಲ್ಲುತ್ತಿದ್ದಾಳೆ.
ನಿಮ್ಗೆ ಖುಷಿಯಾಗೋದಾದ್ರೆ ಸಾಯಿಸಿಬಿಡಿ... ಇಷ್ಟು ಹಿಂಸೆ ಕೊಡ್ಬೇಡಿ... ನಿರ್ದೇಶಕರ ವಿರುದ್ಧ ನೆಟ್ಟಿಗರು ಗರಂ
ಇಲ್ಲೀವರೆಗೆ ಓಕೆ. ಸ್ವಾಭಿಮಾನ, ಸ್ವಾತಂತ್ರ್ಯ ಎಲ್ಲ ಸರಿ. ಆದರೆ ಈಗ ಮಾಡ್ತಿರೋದು ಮಾತ್ರ ಸರಿಯಿಲ್ಲ ಅಂತಿದ್ದಾರೆ ವೀಕ್ಷಕರು.
ಏಕೆಂದರೆ ಪಾರು ತಂಗಿಯರನ್ನೆಲ್ಲ ಕಟ್ಟಿಕೊಂಡು ಸುತ್ತಾಟಕ್ಕೆ ಹೊರಟಿದ್ದಾಳೆ. ಶಾಪಿಂಗ್ ಮಾಡಿಕೊಂಡು, ಸಿನಿಮಾ ನೋಡಿ ಹೊಟೇಲ್ ಊಟ ಮಾಡಿ ಬರೋ ಪ್ಲಾನ್ ಅವಳದ್ದು. ಇದಕ್ಕೆ ಅವಳು ಹಣವನ್ನೂ ಕೇಳ್ತಿದ್ದಾಳೆ. ಅವಳ ಈ ನಡೆ ನೋಡಿದ್ರೆ ಶುರುವಲ್ಲಿ ನ್ಯಾಯಯುತವಾಗಿ ಬೇಕಾದ್ದನ್ನೇ ಪಾರು ಮಾಡಿದ್ದಾಳೆ. ಆದರೆ ಈಗ ನಿಧಾನಕ್ಕೆ ಐಷಾರಾಮಿತನದತ್ತ ತಂಗಿಯರನ್ನು ಕರೆದುಕೊಂಡು ಹೋಗ್ತಿರೋ ಹಾಗಿದೆ. ಇದು ಹೀಗೆ ಮುಂದುವರಿದರೆ ಒಂದು ಪ್ರಾವಿಶನ್ ಸ್ಟೋರ್ ಇಟ್ಕೊಂಡಿರೋ ಅಣ್ಣಯ್ಯನಿಂದ ಇವರ ಆಸೆಯನ್ನೆಲ್ಲ ಪೂರೈಸೋದಕ್ಕಾಗುತ್ತಾ ಅನ್ನೋದು ವೀಕ್ಷಕರ ಪ್ರಶ್ನೆ.