Asianet Suvarna News Asianet Suvarna News

ಗಣೇಶ ಹಬ್ಬಕ್ಕೆ ಗೌರಿಯಾದ ಕನ್ನಡತಿ ಭುವಿ! ರಂಜನಿ ಸಿಂಗಾರಕ್ಕೆ ಫ್ಯಾನ್ಸ್ ಫಿದಾ

ಇಂದು ಗೌರಿ ಹಬ್ಬದ ಖುಷಿ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಒಂದೊಂದು ಕಡೆ ಒಂದೊಂದು ಕಥೆ ಇದೆ. ಈ ಸಲ 'ಕನ್ನಡತಿ' ಸೀರಿಯಲ್ ಜೋಡಿ ಭುವಿ ಮತ್ತು ಹರ್ಷನಿಗೆ ಮೊದಲ ಗೌರಿ ಗಣೇಶ ಹಬ್ಬ. ಇದಕ್ಕಾಗಿ ಭುವಿ ಹೆಂಗೆ ರೆಡಿ ಆಗಿದ್ದಾರೆ, ನೋಡಿ!

 

Kannadathi serial actress Ranjini Raghvans festival look
Author
First Published Aug 30, 2022, 2:46 PM IST

ಭುವನೇಶ್ವರಿ ಅನ್ನೋದು ಕನ್ನಡ ತಾಯಿಯ ಹೆಸರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ 'ಕನ್ನಡತಿ'ಯ ನಾಯಕಿಗೂ ಇದೇ ಹೆಸರು. ಶುದ್ಧ ಕನ್ನಡದಲ್ಲಿ ಮಾತನಾಡುತ್ತಾ ಸರಳತೆ, ಅರ್ಥಪೂರ್ಣ ಬದುಕಿನ ಮಾದರಿ ಹೆಣ್ಣಿನಂತಿರುವ ಭುವಿ ಇದೀಗ ಗೌರಿ ಗಣೇಶ ಹಬ್ಬಕ್ಕೆ ಸಾಕ್ಷಾತ್ ಗೌರಿಯ ಹಾಗೇ ಕಂಗೊಳಿಸುತ್ತಿದ್ದಾಳೆ. ಇದರಲ್ಲಿ ಭುವಿ ಲಕ್ಷಣವಾಗಿ ಅಲಂಕರಿಸಿಕೊಂಡು ನಿಂತಿರೋದನ್ನು ಕನ್ನಡತಿ ಅಭಿಮಾನಿಗಳು ಬೆರಗಿನಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಕನ್ನಡತಿಯ ಅಲಂಕಾರ ಕಂಡು ಬಹಳಷ್ಟು ಮಂದಿ 'ನಿಮ್ಮ ಈ ಅಲಂಕಾರ ನಮಗೆ ಅಚ್ಚುಮೆಚ್ಚು' ಅಂದಿದ್ದಾರೆ. ಇನ್ನೂ ಕೆಲವ್ರು, 'ಏನ್ ಸಖತ್ತಾಗಿ ಕಾಣ್ತಿದ್ದೀರಿ ಭುವಿ ಟೀಚರ್' ಅಂತ ಹರ್ಷನ ಸ್ಟೈಲಲ್ಲಿ ಕಾಲೆಳೆದಿದ್ದಾರೆ. ಅತೀ ಅದ್ದೂರಿತನ ಮಾಡದೇ, ಸಿಂಪಲ್ಲಾಗಿಯೇ ಸಖತ್ತಾಗಿ ಕಾಣುವ, ಬಹಳ ಚೆನ್ನಾಗಿ ನಟಿಸುವ ರಂಜನಿ ರಾಘವನ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರಿಗೆಲ್ಲ ರಂಜನಿ ಅವರ ಈ ಹಬ್ಬದ ಸಿಂಗಾರ ಬಹಳ ಇಷ್ಟವಾಗಿದೆ. ಹೆಚ್ಚಿನವರು ರಂಜನಿ ಅವರ ಹಬ್ಬದ ಅಲಂಕಾರದ ಫೋಟೋ ಮತ್ತು ರೀಲ್ಸ್‌ಅನ್ನು ಹೊಗಳಿದ್ದಾರೆ. ಇದನ್ನೆಲ್ಲ ರಂಜನಿ ಅವರೂ ಬಹಳ ಎನ್‌ಜಾಯ್ ಮಾಡುತ್ತಿರುವಂತಿದೆ.

ರಂಜನಿ ಇಲ್ಲಿ ಉಟ್ಟಿರುವ ಸೀರೆ ಎಳೆ ನಿಂಬೆಯ ಬಣ್ಣದ್ದು. ಆ ಬಣ್ಣವೇ ರಿಚ್(Rich) ಆಗಿರುವ ಕಾರಣ ಈ ಸೀರೆಯ ಮೇಲೆ ಬೇರ್ಯಾವ ಡಿಸೈನ್‌ಗಳೂ ಇಲ್ಲದಂತೆ ಕಾಣುತ್ತೆ. ಆದರೆ ಗೋಲ್ಡನ್ ಕಲರ್ ಚೆಕ್ಸ್ ಇದೆ. ಇದು ಸೀರೆಯ ರಿಚ್‌ನೆಸ್ ಹೆಚ್ಚಿಸಿದೆ. ಬಾರ್ಡರ್ ಸೀರೆಯ ಬಣ್ಣದ ಜೊತೆಗೇ ಸೇರಿ ಹೋದಂತೆ ಕಂಡರೂ ಅಂಚಿನ ಬಂಗಾರದ ಬಣ್ಣ ಆ ಸೀರೆಯ ಚಂದವನ್ನು ಹೆಚ್ಚಿಸಿದೆ. ಈ ಸೀರೆಯ ರಿಚ್‌ನಸ್ ಎದ್ದು ಕಾಣೋದು ಇದಕ್ಕೆ ರಂಜನಿ ಹಾಕಿಕೊಂಡಿರುವ ಕಾಂಬಿನೇಶನ್ ಬ್ಲೌಸ್‌ನಲ್ಲಿ. ಅರೆ, ನಸು ಗ್ರೀನ್‌ಗೆ ಪರ್ಪಲ್ ಕಲರ್ ಬ್ಲೌಸ್ ಇಷ್ಟು ಚೆನ್ನಾಗಿ ಮ್ಯಾಚ್ ಆಗುತ್ತಾ ಅಂಥ ಸೀರೆ ಪ್ರಿಯರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋ ಹಾಗಿದೆ ಈ ಸೀರೆ ಬ್ಲೌಸ್ ಕಾಂಬಿನೇಶನ್. ಎಳೆ ಹಸಿರು ಮತ್ತು ಕಡು ನೇರಳೆ ಬಣ್ಣದ ಈ ಕಾಂಬಿನೇಶನ್ ಹೊಸತು. ರಂಜನಿ ಅವರ ಮೈ ಬಣ್ಣಕ್ಕೆ ಸಖತ್ತಾಗಿ ಹೊಂದಿಕೆ ಆಗ್ತಿದೆ. ಸೀರೆ ಪ್ಲೇನ್ ಆಗಿರುವ ಕಾರಣ ಬ್ಲೌಸ್‌ನ ಡಿಸೈನ್ ಸಖತ್ ರಿಚ್ ಆಗಿದೆ. ಬೋಟ್‌ ನೆಕ್ ವಿನ್ಯಾಸ ಇರುವ ಬ್ಲೌಸ್ ನ ಬೆನ್ನಿನ ಭಾಗದ ಡಿಸೈನ್‌ ಚೆನ್ನಾಗಿದೆ. ಬ್ಯಾಕ್ ಸೈಡ್ ವಿಭಿನ್ನ ಶೇಪ್ ನ ಕಟ್ ಇದೆ. ಅದಕ್ಕೆ ಬಟನ್ ಬಂದಿದೆ. ಬ್ಲೌಸಿನ ತೋಳಿನ ವಿನ್ಯಾಸ ನೋಡಿದರೆ ತುದಿಗೆ ಗೋಲ್ಡನ್ ಕಲರ್‌ನಲ್ಲಿ ಪೈಪಿಂಗ್ ಮಾಡಿದ್ದಾರೆ. ಅರ್ಧ ತೋಳಿನ ತುದಿಯಲ್ಲಿ ಸ್ಟೋನ್‌ ಡಿಸೈನ್‌ನಲ್ಲಿ ಹೂವು, ಬಳ್ಳಿಗಳು ಅರಳಿ ನಿಂತಿವೆ.

ಕಲರ್ಸ್‌ ಕನ್ನಡದಲ್ಲಿ ಕಲರ್‌ಫುಲ್‌ ಹಬ್ಬ: ಉತ್ತರ ಕೊಟ್ಟ ದುಬಾರಿ ಸೀರೆ ಗೆಲ್ಲಿ!

ಇಂಥಾ ಸೀರೆ ಉಟ್ಟಾಗ ಹೆಚ್ಚಿನವರು ಕತ್ತಿಗೆ ಜ್ಯುವೆಲ್ಲರಿ ಹಾಕ್ಕೊಳ್ಳೋದಿಲ್ಲ. ಆದರೆ ಈ ಸೀರೆ ಪ್ಲೇನ್ ಲುಕ್‌ನಲ್ಲಿರುವ ಕಾರಣ ಇದಕ್ಕೆ ನೆಕ್ ಪೀಸ್ ಹಾಕಿದ್ರೂ ಚಂದ ಕಾಣುತ್ತೆ. ಚಿನ್ನ ಮತ್ತು ಮುತ್ತು ಬೆರೆತ ಪದಕ ಇರುವ ಟೆಂಪಲ್ ಜ್ಯುವೆಲ್ಲರಿಯ ಡಿಸೈನ್ ಈ ಸೀರೆಗೆ ಹೊಂದಿಕೆ ಆಗುತ್ತೆ. ಕೈಗೆ ಬ್ಲೌಸ್‌ನ ಬಣ್ಣ ಅಂದರೆ ನೇರಳೆ ಬಣ್ಣದ ಬಳೆ ಜೊತೆಗೆ ಚಿನ್ನದ ಬಣ್ಣದ ಬಳೆ ತೊಟ್ಟುಕೊಂಡಿದ್ದಾರೆ. ಈ ಸೀರೆಯ ಲುಕ್‌ ಅನ್ನು ನಿಜಕ್ಕೂ ಹೆಚ್ಚಿಸಿರೋದು ನಡುಪಟ್ಟಿ. ಪ್ಲೇನ್ ಡಿಸೈನ್‌ನ ಒಂದಿಂಚು ಅಗಲದ ಈ ನಡುಪಟ್ಟಿ ಎಲಿಗೆನ್ಸ್ ಲುಕ್ ನೀಡುತ್ತಿದೆ. ಕಿವಿಗೆ ಅರ್ಧ ಚಂದ್ರಾಕೃತಿಯ ಹ್ಯಾಂಗಿಂಗ್ ಇದೆ. ಇದು ಬೆಂಡೋಲೆ ಜೊತೆಗೇ ಬಂದಿದೆ. ಸಖತ್ತಾಗಿರುವ ಉತ್ತರ ಕರ್ನಾಟಕ ಸ್ಟೈಲಿನ ಮೂಗುಬೊಟ್ಟನ್ನು ಹಾಕಿದ್ದಾರೆ. ಇದು ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಈ ಸೀರೆಯಲ್ಲಿ ಬ್ಲೌಸ್ ಡಿಸೈನ್ ಚೆನ್ನಾಗಿರುವ ಕಾರಣ ಕೂದಲನ್ನು ಮೇಲೆತ್ತಿ ತುರುಬು ಕಟ್ಟಿದ್ದಾರೆ. ಹೀಗಾಗಿ ಬ್ಲೌಸ್ ಡಿಸೈನ್ ಕೂದಲಿಂದ ಮುಚ್ಚಿಹೋಗಿಲ್ಲ.

ಡಿಸೈನಿಂಗ್ ದೃಷ್ಟಿಯಿಂದ ನೋಡೋದಕ್ಕಿಂತಲೂ ಇದು ರಂಜನಿಗೆ ಹೊಂದುತ್ತಾ ಇಲ್ವಾ ಅಂತ ನೋಡಿದ್ರೆ ಅವರು ಈ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣ್ತಿದ್ದಾರೆ. ಯಾವ ಲೆವಲ್‌ಗೆ ಸುಂದರಿ ಅಂದರೆ ಸಾಕ್ಷಾತ್ ಗೌರಿಯನ್ನು ನೋಡಿದಂಗೇ ಆಗುತ್ತೆ ಅಂತ ಅವರ ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.

ಚಪ್ಪಲಿ ಖರೀದಿಸಲು ಹೋಗಿ ಇಡೀ ಅಂಗಡಿನೇ ಖರೀದಿಸಿದ ನಿವೇದಿತಾ; ದುಡ್ಡಿಗೆ ಬೆಲೆನೇ ಇಲ್ವಾ ಎಂದ ನೆಟ್ಟಿಗರು

Follow Us:
Download App:
  • android
  • ios