Asianet Suvarna News Asianet Suvarna News

ಚಪ್ಪಲಿ ಖರೀದಿಸಲು ಹೋಗಿ ಇಡೀ ಅಂಗಡಿನೇ ಖರೀದಿಸಿದ ನಿವೇದಿತಾ; ದುಡ್ಡಿಗೆ ಬೆಲೆನೇ ಇಲ್ವಾ ಎಂದ ನೆಟ್ಟಿಗರು

ವಿಂಟರ್ ಶಾಪಿಂಗ್? ಏನಿದು ಎಂದು ಜನರು ಯೋಚನೆ ಮಾಡುವಷ್ಟರಲ್ಲಿ ನಿವೇದಿತಾ ಗೌಡ ವಿಡಿಯೋ ವೈರಲ್

Kannada Niveditha Gowda shares winter shopping video vcs
Author
First Published Aug 29, 2022, 12:00 PM IST

ಸ್ಯಾಂಡಲ್‌ವುಡ್‌ ಬಾರ್ಲಿ ಡಾಲ್ ನಿವೇದಿತಾ ಗೌಡ ಸದ್ಯ ಗಿಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಿವೇದಿತಾ ಏನಾದರೂ ಡಿಫರೆಂಟ್ ಕಂಟೆನ್ಟ್‌ ನೀಡುವ ಮೂಲಕ ತಮ್ಮ ಫಾಲೋವರ್ಸ್‌ನ ಮನೋರಂಜಿಸುತ್ತಾರೆ. ಮಳೆ ಬರ್ತಿದೆ ಎಲ್ಲರೂ ಬೆಚ್ಚಗೆ ಮಲಗಬೇಕು ಎನ್ನುವ ಪ್ಲ್ಯಾನ್ ಮಾಡುತ್ತಿದ್ದರೆ ಇತ್ತ ನಿವೇದಿತಾ ಗೌಡ ವಿಂಟರ್ ಶಾಪಿಂಗ್ ಮಾಡಿದ್ದಾರೆ. 

ಹೌದು! ಚಳಿಗಾಲ ಶುರುವಾದರೆ ಸಾಕು ಎಲ್ಲರ ಮನೆಯಿಂದ ಕೊಡೆಗಳು, ಸ್ವೆಟರ್‌, ಜ್ಯಾಕೆಟ್‌ ಮತ್ತು ರೈನ್ ಕೋಟ್‌ ಹೊರ ಬರುತ್ತದೆ. ಕೆಲವರು ವರ್ಷ ವರ್ಷವೂ ವಿಂಟರ್ ಶಾಪಿಂಗ್ ಮಾಡಿ ಬೆಚ್ಚಗಿರುವ ಉಡುಪು ತೆಗೆಯುತ್ತಾರೆ. ಆದರೆ ನಿವೇದಿತಾ ಗೌಡ ವಿಂಟರ್ ಶಾಪಿಂಗ್ ಅಂತ ವಿಡಿಯೋ ಅಪ್ಲೋಡ್ ಮಾಡಿ ಬ್ಯಾಗ್ ಶಾಪಿಂಗ್ ಮಾಡಿದ್ದಾರೆ. 

Kannada Niveditha Gowda shares winter shopping video vcs

'ಎಲ್ಲರಿಗೂ ನಾನು ನನ್ನ ವಿಂಟರ್ ಕಲೆಕ್ಷನ್ ತೋರಿಸುತ್ತೀನಿ. ನಾನು ಇತ್ತೀಚಿಗೆ ಶಾಂಪಿಂಗ್ ಮಾಡಿರುವುದು ಇದೆಲ್ಲಾ. ಶಾಪಿಂಗ್ ಹೋಗಬೇಕು ಅನೋ ಪ್ಲ್ಯಾನ್ ಇರಲಿಲ್ಲ ಆದರೆ ಬೋರ್ ಆಗುತ್ತಿತ್ತು ಅಂತ ಹೋದೆ. ಇದ್ದಕ್ಕಿದ್ದಂತೆ ನೆನಪಾಯ್ತು ನನ್ನ ಹೊಸ ಕೆಂಪು ಬಣ್ಣದ ಡ್ರೆಸ್‌ಗೆ  ಕೆಂಪು ಬಣ್ಣದ ಹೀಲ್ಸ್‌ ಬೇಕು ಅಂತ. ಎರಡು ಅಂಗಡಿಗೆ  ಹೋಗಿದೆ ಏನ್ ನೋಡಿದ್ದರೂ ಹೊಸ ಹೊಸ ಕಲೆಕ್ಷನ್‌ಗಳು. ಇದು ತಗೋಳೋಣ ಅದು ತಗೋಳೋಣ ಅಂತ ಎಲ್ಲಾ ತಗೋಂಡೆ. ಬಟ್ಟೆ ಅಷ್ಟು ಇಷ್ಟ ಆಗುತ್ತಿಲ್ಲ ಅಂತ ಹ್ಯಾಂಡ್‌ಬ್ಯಾಗ್‌ಗಳನ್ನು ಹೆಚ್ಚಿಗೆ ಶಾಪಿಂಗ್ ಮಾಡಿದೆ'ಎಂದು ನಿವೇದಿತಾ ಗೌಡ ವಿಡಿಯೋ ಆರಂಭಿಸಿದ್ದಾರೆ. 

ಚಂದನ್ ಶೆಟ್ಟಿಗೆ ಎರಬಿರ್ರಿ ಬೈದಿರುವ ನಿವೇದಿತಾ ಗೌಡ ವಿಡಿಯೋ ವೈರಲ್!

'ನಾನು ಎಷ್ಟೇ ಹೇರ್‌ ಕ್ಲಿಪ್‌ ತೆಗೆದುಕೊಂಡರೂ ಎಲ್ಲೋ ಮಿಸ್ ಆಗುತ್ತೆ. ನಿನ್ನೆ ಮನೆಯಲ್ಲಿ ನಾನು ಹೇರ್‌ಕ್ಲಿಪ್ ಕಳೆದುಕೊಂಡೆ. ರಾತ್ರಿ 12 ಗಂಟೆಗೆ ನಮ್ಮ ಪಕ್ಕದ ಮನೆಯವರಿಂದ ತೆಗೆದುಕೊಂಡು ಬಂದೆ. ಅಡುಗೆ ಮನೆಯಲ್ಲಿ ಅವರು ಹಾಲು ಬಿಸಿ ಮಾಡುತ್ತಿರುವುದು ಕಾಣಿಸಿತ್ತು ತಕ್ಷಣ ಹೋಗಿ ಕ್ಲಿಪ್‌ ಕೇಳಿದೆ. ಈ ರೀತಿ ಮತ್ತೆ ಆಗಬಾರದು ಅಂತ ನಾನು ಹೊಸ ಕ್ಲಿಪ್‌ ತಂದೆ' ಎಂದು ಹೇಳಿದ್ದಾರೆ.

'ನಾನು ಕೆಂಪು ಬಣ್ಣದ ಹೀಲ್ಸ್‌ ಖರೀದಿಸಲು ಹೋದೆ ಆದರೆ ಅದು ಬಿಟ್ಟು ಎಲ್ಲಾ ತೆಗೆದುಕೊಂಡು ಬಂದೆ. ಈಗ ಮತ್ತೊಂದು ದಿನ ಕೆಂಪು ಹೀಲ್ಸ್‌ ತರಲು ಹೋಗಬೇಕು ಆಗ ಮತ್ತೆ ಎಷ್ಟು ಶಾಪಿಂಗ್ ಮಾಡ್ತೀನಿ ನನಗೆ ಗೊತ್ತಿಲ್ಲ. ನಾನು ಈ ವಿಡಿಯೋದಲ್ಲಿ ತೋರಿಸಿದ ಇಷ್ಟು ಬ್ಯಾಗ್ ಮತ್ತು ಡ್ರೆಸ್‌ಗಳು ಯಾವುದು ತುಂಬಾ ಇಷ್ಟ ಆಯ್ತು ಅಂತ ನೀವು ನನಗೆ ಹೇಳಿ ಕಾಮೆಂಟ್ ಮಾಡಿ' ಎಂದಿದ್ದಾರೆ ನಿವೇದಿತಾ ಗೌಡ.

 

Follow Us:
Download App:
  • android
  • ios