ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಈ ಧಾರಾವಾಹಿಗಳ ಟಿಆರ್‌ಪಿಯಲ್ಲಿ ಈ ವಾರ ಸಾಕಷ್ಟು ಏರಿಳಿತ ಇದೆ. ಹಾಗಾದರೆ ಈ ವಾರದ ನಂ 1 ಸೀರಿಯಲ್ ಯಾವುದು?
ಈ ವಾರದ ಕನ್ನಡ ಧಾರಾವಾಹಿಗಳ ಟಿಆರ್‌ಪಿ ಹೊರಗಡೆ ಬಂದಿದೆ. ಸೀರಿಯಲ್‌ಗಳ ಟಿಆರ್‌ಪಿ ನೋಡಿದರೆ ಸಿಕ್ಕಾಪಟ್ಟೆ ಪೈಪೋಟಿ ಇರೋದು ಎದ್ದು ಕಾಣುತ್ತಿದೆ. ಇಷ್ಟುದಿನ ಟಾಪ್ ಐದು ಧಾರಾವಾಹಿಗಳಿಂದ ಹೊರಗಡೆ ಇದ್ದ ಧಾರಾವಾಹಿಯೊಂದು ನಂ 1 ಆಗಿದೆ. ಇನ್ನೊಂದು ಕಡೆ ಧಾರಾವಾಹಿಗಳ ಟಿಆರ್‌ಪಿಯಲ್ಲಿ ಸಣ್ಣಮಟ್ಟದ ವ್ಯತ್ಯಾಸ ಕಾಣ್ತಿದೆ. ಹಾಗಾದರೆ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ? ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ?
ʼಅಮೃತಧಾರೆʼ ಧಾರಾವಾಹಿ
ʼಅಮೃತಧಾರೆʼ ಧಾರಾವಾಹಿಗೆ ಒಟ್ಟೂ 8 ಟಿಆರ್‌ಪಿ ಸಿಕ್ಕಿದೆ. ಈ ಹಿಂದೆ ಈ ಸೀರಿಯಲ್ ಕೆಲ ವಾರಗಳಿಂದ ನಂ 1 ಸ್ಥಾನ ಪಡೆದಿತ್ತು. ಆದರೆ ಈ ವಾರ ಸ್ವಲ್ಪ ವೀಕ್ಷಣೆ ಕಡಿಮೆ ಆಗಿದೆ. ರಾಜೇಶ್ ನಟರಂಗ, ಛಾಯಾ ಸಿಂಗ್, ವನಿತಾ ವಾಸು, ಚಿತ್ಕಳಾ ಬಿರಾದಾರ್, ಕೃಷ್ಣಮೂರ್ತಿ ಕವತ್ತಾರ್ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಭೂಮಿಕಾ ಹಾಗೂ ಗೌತಮ್ ಅವರು ಸ್ವಲ್ಪ ವಯಸ್ಸಾದ ಮೇಲೆ ಮದುವೆ ಆಗ್ತಾರೆ. ಈ ಬಗ್ಗೆ ಕಥೆ ಸಾಗುತ್ತಿದೆ. ಈ ಧಾರಾವಾಹಿಯಲ್ಲಿ ಸಾಕಷ್ಟು ಟ್ರ್ಯಾಕ್‌ಗಳು ಓಡುತ್ತಿವೆ.
Ninagagi Serial ನಟ ಬಾಲಗೆ ಪತ್ರ ಬರೆದ ಪ್ರೇಕ್ಷಕ; ಕನ್ನಡ ಕಿರುತೆರೆಯಲ್ಲಿ ಅಪರೂಪದ ಕ್ಷಣ!
ʼಅಣ್ಣಯ್ಯʼ ಧಾರಾವಾಹಿ
ʼಅಣ್ಣಯ್ಯʼ ಧಾರಾವಾಹಿಗೆ 8.21 ಟಿಆರ್‌ಪಿ ಸಿಕ್ಕಿದೆ. ಕೆಲ ವಾರಗಳಿಂದ ಈ ಧಾರಾವಾಹಿಯ ಎಪಿಸೋಡ್‌ಗಳು ರೋಚಕವಾಗಿ ಪ್ರಸಾರ ಆಗುತ್ತಿದ್ದು, ವೀಕ್ಷಕರಿಗೂ ಇಷ್ಟ ಆಗುತ್ತಿದೆ. ಪರಿಸ್ಥಿತಿಗೆ ಕಟ್ಟುಬಿದ್ದು ಶಿವು ಹಾಗೂ ಪಾರು ಮದುವೆ ಆಗುತ್ತಾರೆ. ಇನ್ಮುಂದೆ ಈ ಜೋಡಿ ಒಟ್ಟಿಗೆ ಸಂಸಾರ ಮಾಡುತ್ತಾರಾ? ತನ್ನ ದುಷ್ಟ ತಂದೆಯ ವಿರುದ್ಧ ಪಾರು ಹೋರಾಡ್ತಾಳಾ ಎಂದು ಕಾದು ನೋಡಬೇಕಿದೆ. ನಿಶಾ ರವಿಕೃಷ್ಣನ್, ವಿಕಾಶ್ ಉತ್ತಯ್ಯ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ʼಲಕ್ಷ್ಮೀ ನಿವಾಸʼ ಧಾರಾವಾಹಿ
ʼಲಕ್ಷ್ಮೀ ನಿವಾಸʼ ಧಾರಾವಾಹಿಗೆ 8.3 ಟಿಆರ್‌ಪಿ ಸಿಕ್ಕಿದೆ. ಕೆಲ ವಾರಗಳಿಂದ ಈ ಸೀರಿಯಲ್ ಟಿಆರ್‌ಪಿಯಲ್ಲಿ ಟಾಪ್ 1 ಸ್ಥಾನದಲ್ಲಿತ್ತು. ಈಗ ಇನ್ನೊಂದು ಧಾರಾವಾಹಿಯ ಅಬ್ಬರದಿಂದ ಈ ಸೀರಿಯಲ್ ಈ ಬಾರಿ ಎರಡನೇ ಸ್ಥಾನ ಪಡೆದಿದೆ. ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗ ಇದ್ದು, ಇನ್ನೊಂದು ಕಡೆ ಈ ಸೀರಿಯಲ್ ವಾರದಲ್ಲಿ ಐದು ದಿನಗಳ ಕಾಲ, ನಿತ್ಯವೂ ಒಂದು ಗಂಟೆಗಳ ಕಾಲ ಪ್ರಸಾರ ಆಗಲಿದೆ.
25ನೇ ವಯಸ್ಸಿಗೆ ಮನೆ ಕಟ್ಟಿ ಗೃಹ ಪ್ರವೇಶ ಮಾಡಿದ ʼಕಥೆಯೊಂದು ಶುರುವಾಗಿದೆʼ ನಟಿ ಅಕ್ಷತಾ ದೇಶಪಾಂಡೆ; Photos ಇಲ್ಲಿವೆ!
ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿ
ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಗೆ ಈ ಬಾರಿ 9.52 ಟಿಆರ್‌ಪಿ ಸಿಕ್ಕಿದೆ. ಸುಬ್ಬು, ಶ್ರಾವಣಿ ಮದುವೆ ಎಪಿಸೋಡ್ ನಡೆಯವುದು. ಇದರಿಂದಲೇ ಈ ಸೀರಿಯಲ್ ಟಿಆರ್‌ಪಿ ಹೆಚ್ಚಾಗಿದೆ. ಆಸಿಯಾ ಫಿರ್‌ದೋಸ್, ಅಮೋಘ್ ಅವರು ನಟಿಸುತ್ತಿದ್ದಾರೆ.
ʼನಾನಿನ್ನ ಬಿಡಲಾರೆʼ ಧಾರಾವಾಹಿ ಪ್ರಸಾರ ಆಗಿ ಮೊದಲ ವಾರಕ್ಕೆ 7.8 ಟಿಆರ್‌ಪಿ ಸಿಕ್ಕಿದೆ. ಇದು ಒಳ್ಳೆಯ ಆರಂಭ ಎನ್ನಬಹುದು.
ʼಭಾಗ್ಯಲಕ್ಷ್ಮೀ ಧಾರಾವಾಹಿʼ ಧಾರಾವಾಹಿಗೆ 5.1 ಟಿಆರ್‌ಪಿ ಸಿಕ್ಕಿದೆ. ಈ ಹಿಂದೆ ಇನ್ನಷ್ಟು ಟಿಆರ್‌ಪಿ ಪಡೆದಿದ್ದ ಈ ಸೀರಿಯಲ್ ಈಗ ಕಡಿಮೆ ಟಿಆರ್‌ಪಿ ಪಡೆದಿದೆ ಎಂದು ಹೇಳಬಹುದು. ಸುಷ್ಮಾ ಕೆ ರಾವ್, ಸುದರ್ಶನ್ ರಂಗಪ್ರಸಾದ್, ಪದ್ಮಜಾ ರಾವ್ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಗೆ 5.2 ಟಿಆರ್‌ಪಿ ಸಿಕ್ಕಿದೆ. ʼಭಾಗ್ಯಲಕ್ಷ್ಮೀʼ ಹಾಗೂ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಗಳ ಟಿಆರ್‌ಪಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಮುಂದಿನ ದಿನಗಳಲ್ಲಿ ಈ ಸೀರಿಯಲ್ ಎಪಿಸೋಡ್ ಹೇಗೆ ಬರಲಿದೆ ಎಂದು ಕಾದು ನೋಡಬೇಕಿದೆ.
ರಿತ್ವಿಕ್ ಮಾತಾಡ್ ನಟನೆಯ ʼನಿನಗಾಗಿʼ ಧಾರಾವಾಹಿಗೆ 5.3 ಟಿಆರ್‌ಪಿ ಸಿಕ್ಕಿದೆ.
