ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಪ್ರಸಿದ್ಧ ಧಾರಾವಾಹಿ 'ಬ್ರಹ್ಮಗಂ'ಟು' ದಿನೆ ದಿನೇ ಜನರ ಗಮನ ಸೆಳೆಯುತ್ತಿದೆ. ಪತಿಗೆ ಪ್ರೋತ್ಸಾಹ ನೀಡುತ್ತಿರುವ ಪತ್ನಿ ಗೀತಾ, ಕಬಡ್ಡಿಯಲ್ಲಿ ಹೆಸರು ಮಾಡಲೇಬೇಕೆಂದು ಪಣ ತೊಟ್ಟರುವ ಲಕ್ಕಿ ನಡುವೆ ಸಂಜನಾ ಏನು ಮಾಡುತ್ತಿದ್ದಾರೆ?

ಸಂಜನಾ ಎಂಟ್ರಿ:
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಸಂಜನಾ ಈಗ ಮತ್ತೊಮ್ಮೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದುವೇ ಸೋನಾಲಿ ಎಂಬ ಪಾತ್ರದ ಮೂಲಕ. ಧಾರಾವಾಹಿಯಲ್ಲಿ ಸೋನಾಲಿ ಪ್ರಖ್ಯಾತ ನಟಿಯೊಬ್ಬರನ್ನು ಹೋಲುವ ಪಾತ್ರವೆನ್ನಲಾಗಿದೆ.  ಲಕ್ಕಿ ಹಾಗೂ ಸೋನಾಲಿ ಇಬ್ಬರಿಗೂ ಮೋಸ್ಟ್ ಡಿಸೈರೇಬಲ್ ಪ್ರಶಸ್ತಿ ಸಿಗಲಿದ್ದು, ಇಬ್ಬರೂ ಒಟ್ಟಾಗಿ ಸ್ವೀಕರಿಸಿದ್ದಾರೆ. ಧಾರಾವಾಹಿಯಲ್ಲಿ ಸೋನಾಲಿ ಪಾತ್ರ ಮುಂದುವರಿಯುತ್ತೋ, ಇಲ್ಲವೋ ಎಂದು ಕಾದು ನೋಡಬೇಕಿದೆ. 

ಮೊದಲ ಬೇಬಿ ನಿರೀಕ್ಷೆಯಲ್ಲಿ ನಟಿ ಅಮೃತಾ ರಾವ್

'ಕುಲವಧು' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸಂಜನಾ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಕೆಲವು ವರ್ಷಗಳಿಂದೆ ಬ್ರೇಕ್‌ ತೆಗೆದುಕೊಂಡು, ಬ್ರೈಡಲ್ ಹಾಗೂ ವೆಸ್ಟ್ರನ್‌ ಲುಕ್‌ ಉಡುಪುಗಳಲ್ಲಿ ಫೋಟೋ ಶೂಟ್ ಮಾಡಿಸಿ ಅಪ್ಲೋಡ್ ಮಾಡುತ್ತಿರುತ್ತಾರೆ.

ಶ್ರುತಿ ನಾಯ್ಡು ತಮ್ಮ ಪ್ರತಿಯೊಂದೂ ಧಾರಾವಾಹಿಯಲ್ಲೂ ಜನರಿಗೆ ಏನಾದರೂ ವಿಶೇಷ ವಿವರವನ್ನು ತಿಳಿಸಲು ಪ್ರಯತ್ನಿಸಿರುತ್ತಾರೆ. ಈ ಧಾರಾವಾಹಿಯಲ್ಲಿ ಆರ್‌ಜೆ ಪ್ರಪಂಚ ಹೇಗಿರುತ್ತದೆ, ಸದಾ ಕಿತ್ತಾಡುವ ಅತ್ತೆ-ಸೊಸೆ ಫ್ರೆಂಡ್ಸ್‌ ಆದರೆ ಹೇಗಿರುತ್ತದೆ, ಗಂಡ-ಹೆಂಡತಿ ಇಬ್ಬರ ಕನಸುಗಳನ್ನು ಅರ್ಥ ಮಾಡಿಕೊಂಡು, ಸಾಥ್ ನೀಡುವುದು ಹೇಗೆ ಎಂದು ತೋರಿಸಲಾಗಿದೆ. ಒಟ್ಟಿನಲ್ಲಿ ಸಂಜನಾ ಚಿದಾನಂದ್‌ನನ್ನು ಮತ್ತೆ ಆನ್‌  ಸ್ಕ್ರೀನ್ ನೋಡಿ ವೀಕ್ಷಕರು ಖುಷಿ ಪಟ್ಟಿದ್ದಾರೆ.

ಜನ ಮೆಚ್ಚಿದ ಕನ್ನಡತಿ ರಂಜಿನ ರಾಘವನ್