2006ರಲ್ಲಿ ವಿಹಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಅಮೃತಾ ರಾವ್‌ ಹಾಗೂ ಆರ್‌ಜೆ ಅನ್ಮೋಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  ಅಧಿಕೃತವಾಗಿ ಈ ಬಗ್ಗೆ ಎಲ್ಲಿಯೂ ರಿವೀಲ್ ಮಾಡಿಲ್ಲವಾದರೂ ಸೋಷಿಯಲ್ ಮೀಡಿಯಾದಲ್ಲಿ ಅವರಿಬ್ಬರ ಫೋಟೋ ವೈರಲ್ ಆಗುತ್ತಿದೆ.

ವೈಟ್‌ ಆಂಡ್‌ ವೈಟ್‌ನಲ್ಲಿ ಕಾಣಿಸಿಕೊಂಡ ಅಮೃತಾ ತಮ್ಮ ಬೇಬಿ ಬಂಪ್‌ ಅನ್ನು ಫ್ಲಾಂಟ್ ಮಾಡುತ್ತಿದ್ದಾರೆ. ಪಕ್ಕದಲ್ಲಿರುವ ಪತಿ ಅನ್ಮೋಲ್ ಹ್ಯಾಪಿ ಫೇಸ್‌ನಲ್ಲಿ ನಿಂತಿದ್ದಾರೆ.  7 ವರ್ಷಗಳ ಕಾಲ ಪ್ರೀತಿಸಿ 2016ರಲ್ಲಿ ವೈವಾಹಿಕ ಜೀವನಕ್ಕೆ ಈ ಜೋಡಿ ಕಾಲಿಟ್ಟಿತ್ತು. ಸಿನಿಮಾಗಳಲ್ಲಿ ಫ್ಲಾಪ್ ಕಂಡ ನಂತರ ಅಮೃತಾ ಬಣ್ಣದ ಲೋಕದಿಂದ ದೂರು ಉಳಿದು, ನಮ್ಮ ವೈಯಕ್ತಿಕ ಜೀವನದ ಕಡೆ ಗಮನ ಕೊಟ್ಟರು.

ಮಾಲ್ಡೀವ್ಸ್ ನಲ್ಲಿ ಬಾಯ್‌ಫ್ರೆಂಡ್ ಜೊತೆ ತಾಪ್ಸೀ

ಅಮೃತಾ ಆಪ್ತರೊಬ್ಬರು ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ. ಅಮೃತಾ ಲಾಕ್‌ಡೌನ್‌ಗೂ ಮುನ್ನವೇ ಗರ್ಭಿಣಿಯಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದಾರೆ ಎಂದಿದ್ದಾರೆ. ಅನ್ಮೋಲ್ ಹಾಗೂ ಅಮೃತಾ ತುಂಬಾನೇ ಪ್ರೈವೆಟ್ ವ್ಯಕ್ತಿಗಳಾಗಿರುವ ಕಾರಣ ತಮ್ಮ ಪರ್ಸನಲ್ ಲೈಫ್‌ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿ ಕೊಳ್ಳುವುದಿಲ್ಲ. 

ಇನ್ನು ಚಿತ್ರರಂಗದಿಂದ ದೂರವೇ ಉಳಿದ ಅಮೃತಾ ರಾವ್, ಎರಡು ವರ್ಷಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ.  ಗಾಯಕಿ ಆಗಬೇಕೆಂಬುದು ಅವರ ಕನಸಂತೆ.  ಸೈಕಾಲಜಿ ಪದವೀಧರೆ ಆಗಿರುವ ಅಮೃತಾ, ಮಾಡಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ 'Parents to be' ಆದಷ್ಟು ಬೇಗ ಗುಡ್‌ ನ್ಯೂಸ್ ಕೊಡಲಿ ಎಂದು ನೆಟ್ಟಿಗರು ಆಶಿಸಿದ್ದಾರೆ.

ನಟಿ ಕಾಜಲ್ ಅಗರ್ವಾಲ್ ನಿಶ್ಚಿತಾರ್ಥದ ಫೋಟೋಸ್ ವೈರಲ್