ಧಾರಾವಾಹಿ ಪ್ರೇಮಿಗಳಿಗೆ ಶಾಕಿಂಗ್; ಮುಕ್ತಾಯವಾಗ್ತಿದೆ ಕಲರ್ಸ್ ಕನ್ನಡದ ಮತ್ತೊಂದು ಸೀರಿಯಲ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಣಿರಾಮ ಧಾರಾವಾಹಿ ಮುಕ್ತಾಯವಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಕನ್ನಡ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಒಂದಕ್ಕಿಂತ ಒಂದು ಧಾರಾವಾಹಿಗಳು ಸೂಪರ್ ಎನ್ನುವ ಹಾಗೆ ಪೈಪೋಟಿಗೆ ಬಿದ್ದು ಬಿತ್ತರವಾಗುತ್ತಿವೆ. ಅನೇಕ ಧಾರಾವಾಹಿಗಳು ಕುತೂಹಲ ಹೆಚ್ಚಿಸುತ್ತಾ, ಪ್ರೇಕ್ಷಕರ ಹೃದಯ ಗೆದ್ದರೆ ಇನ್ನು ಕೆಲವು ಸೀರಿಯಲ್‌ಗಳು ಟಿಆರ್‌ಪಿ ಇಲ್ಲದೆ ಒದ್ದಾಡುತ್ತಿವೆ. ಇದೇ ಕಾರಣಕ್ಕೆ ಅನೇಕ ಧಾರಾವಾಹಿಗಳು ವಿದಾಯ ಹೇಳುತ್ತಿವೆ ಹಾಗೆ ಅಷ್ಟೆ ಹೊಸ ಧಾರಾವಾಹಿಗಳು ಎಂಟ್ರಿ ಕೊಡುತ್ತಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನೇಕ ಧಾರಾವಾಹಿಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರ ಹೃದಯ ಗೆದ್ದಿವೆ. ಇದೀಗ ಕಲರ್ಸ್ ವಾಹಿನಿಯ ಪ್ರೇಕ್ಷಕರಿಗೆ ಒಂದು ಬೇಸರದ ಸುದ್ದಿ ಕೇಳಿ ಬಂದಿದೆ. ಅಭಿಮಾನಿಗಳ ಹೃದಯ ಗೆದ್ದಿರುವ ಗಿಣಿರಾಮ ಧಾರಾವಾಹಿ ಸಧ್ಯದಲ್ಲೇ ಮುಕ್ತಾಯವಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಣಿರಾಮ ಧಾರಾವಾಹಿ ಈಗಾಗಲೇ ಕ್ಲೈಮ್ಯಾಕ್ಸ್ ಹಂತ ತಲುಪಿದೆ ಸದ್ಯದಲ್ಲೇ ಅಂತ್ಯವಾಗುತ್ತಿದೆ ಎನ್ನಲಾಗಿದೆ. ಧಾರಾವಾಹಿಯಲ್ಲಿ ಸದ್ಯ ಚುನಾವಣೆ ನಡೆಯುತ್ತಿದೆ. ಚುನಾವಣೆಯ ಕಾವು ಜೋರಾಗಿದೆ. ಜೊತೆಗೆ ಹೊಸ ಪಾತ್ರದ ಎಂಟ್ರಿ ಕೊಡ ಆಗ್ತಿದೆ. ಇನ್ನೇನು ಕೊನೆ ಹಂತದ ಶೂಟಿಂಗ್‌ನಲ್ಲಿರುವ ಈ ಧಾರಾವಾಹಿ ಸದ್ಯದಲ್ಲೇ ಚಿತ್ರೀಕರಣ ಮುಗಿಸಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
‘ಅಂತರಪಟ’ ನಾಯಕನ ಪ್ರೋಮೋ ರಿಲೀಸ್ : ಆಕ್ಟಿಂಗ್‌ಗೂ ನೇಹಾ ಗೌಡ ಪತಿ ಸೈ
ಈ ಧಾರಾವಾಹಿ ಸದ್ಯ ಸಂಜೆ 5.30ಕ್ಕೆ ಪ್ರಸಾರವಾಗುತ್ತಿದೆ. ಕಲರ್ಸ್ ವಾಹಿನಿಯಲ್ಲಿ ಹೊಸ ಧಾರಾವಾಹಿಗಳು ಎಂಟ್ರಿ ಕೊಡುತ್ತಿವೆ. ಈಗಾಗಲೇ ಅಂತರಪಟ ಎನ್ನುವ ಧಾರಾವಾಹಿ ಬರ್ತಿರುವ ಬಗ್ಗೆ ವಾಹಿನಿ ಪ್ರೋಮೋ ರಿಲೀಸ್ ಮಾಡುವ ಮೂಲಕ ಅಧಿಕೃತಗೊಳಿಸಿದೆ. ಅಂತರಪಟ ಧಾರಾವಾಹಿಗಾಗಿ ಉಳಿದ ಧಾರಾವಹಿಗಳ ಸಮಯ ಕೂಡ ಬದಲಾಗಿದೆ. 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ ಏಪ್ರಿಲ್ 24ರಿಂದ 10.30ಕ್ಕೆ ಪ್ರಸಾರವಾಗುತ್ತಿದೆ. ಹೊಸ ಧಾರಾವಾಹಿಯ ಕಾರಣ ಗಿಣಿರಾಮ ಧಾರಾವಾಹಿಗೆ ಅಂತ್ಯಹಾಡಲಾಗ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಧಾರಾವಾಹಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಭಾಗ್ಯಲಕ್ಷ್ಮೀ ಸೀರಿಯಲ್ ನಟ ತಾಂಡವ್ ರಿಯಲ್ ಪತ್ನಿ ಖ್ಯಾತ ನಟಿ ಅನ್ನೋದು ಗೊತ್ತಾ?
ಗಿಣಿರಾಮ ಧಾರಾವಾಹಿಯಲ್ಲಿ ಶಿವರಾಮ ಹಾಗೂ ಮಹತಿ ಮತ್ತು ಆಯಿ ಸಾಹೇಬರ ಬದುಕಿನ ಸುತ್ತ ಸುತ್ತುತ್ತಿರುವ ಧಾರಾವಾಹಿ ಇದಾಗಿದೆ. ಧಾರಾವಾಹಿಯ ನಾಯಕ ಶಿವರಾಮ ಪಾತ್ರದಲ್ಲಿ ರಿತ್ವಿಕ್ ಮಾತಾಡ್ ಕಾಣಿಸಿಕೊಂಡಿದ್ದಾರೆ. ಮಹತಿಯಾಗಿ ನಯನಾ ಮಿಂಚಿದ್ದಾರೆ. ಈ ಹಿಂದೆ ಕೂಡ ಗಿಣಿರಾಮ ಧಾರಾವಾಹಿ ಮುಕ್ತಾಯವಾಗಲಿದೆ ಎನ್ನುವ ಸುದ್ದಿ ಹಬ್ಬಿತ್ತು ಆದರೆ ವದಂತಿಯನ್ನು ತಳ್ಳಿ ಹಾಕಿದ್ದರು ನಾಯಕ ರಿತ್ವಿಕ್. ಈ ಬಾರಿ ನಿಜಕ್ಕೂ ಮುಕ್ತಾಯ ಹಾಡ್ತಿದ್ಯಾ ಅಥವಾ ಇದು ಕೂಡ ಕೇವಲ ವದಂತಿನಾ ಎಂದು ಧಾರಾವಾಹಿ ತಂಡವೇ ಪ್ರತಿಕ್ರಿಯಿಸಬೇಕಿದೆ.