- Home
- Entertainment
- Sandalwood
- Vijayalakshmi Darshan: ವಿಜಯಲಕ್ಷ್ಮೀ ದರ್ಶನ್‌ಗೆ ಇಷ್ಟು ಲಕ್ಷುರಿ ಲೈಫ್ ಇದ್ಯಾ? ಸತ್ಯಾ ಸತ್ಯತೆ ಬೇರೆ ಇದೆ!
Vijayalakshmi Darshan: ವಿಜಯಲಕ್ಷ್ಮೀ ದರ್ಶನ್‌ಗೆ ಇಷ್ಟು ಲಕ್ಷುರಿ ಲೈಫ್ ಇದ್ಯಾ? ಸತ್ಯಾ ಸತ್ಯತೆ ಬೇರೆ ಇದೆ!
Vijayalakshmi Darshan News: ಇಂದು ಎಲ್ಲರ ಕೈಯಲ್ಲೂ ಮೊಬೈಲ್ ಇರುತ್ತದೆ, ಸಿಸಿಟಿವಿ ಕ್ಯಾಮರಾ ಕೂಡ ಇರುತ್ತದೆ. ಅದರಲ್ಲಿಯೂ ಸೆಲೆಬ್ರಿಟಿಗಳ ಚಲನವಲನ ಕೂಡ ಸಂಪೂರ್ಣ ರೆಕಾರ್ಡ್ ಆಗುವುದು. ಈಗ ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಲಕ್ಷುರಿ ಲೈಫ್ ಬಗ್ಗೆ ಪ್ರಶ್ನೆ ಎದ್ದಿದೆ.

ಅನಗತ್ಯ ವಿವಾದ ಮಾಡ್ತಾರೆ
ಸೆಲೆಬ್ರಿಟಿಗಳು ಪಬ್ಲಿಕ್ ಅಲ್ಲಿ ಕಾಣಿಸಿಕೊಂಡಾಗ, ಅವರು ಧರಿಸಿದ ಬ್ಯಾಗ್, ಶೂ ಅಥವಾ ಚಪ್ಪಲಿಗಳ ಬೆಲೆ ಎಷ್ಟು ಎಂದು ತಿಳಿಯಲು ಜನರು ಗೂಗಲ್ ಲೆನ್ಸ್‌ನಂತಹ ಸರ್ಚ್ ಇಂಜಿನ್ ಬಳಸುತ್ತಿದ್ದಾರೆ. ಇದರಿಂದ ಕೇವಲ ಮಾಹಿತಿ ಸಿಕ್ಕಿದ್ದರೆ ಓಕೆ, ಆದರೆ ಅನಗತ್ಯ ವಿವಾದ ಶುರು ಆಗುವುದು.
ಗೂಗಲ್ ಸರ್ಚ್ ಮಾಡ್ತಾರೆ
ಸೆಲೆಬ್ರಿಟಿಗಳು ಧರಿಸುವ ಬ್ರ್ಯಾಂಡೆಡ್ ಡ್ರೆಸ್, ಶೂ, ಬ್ಯಾಗ್, ಸರ, ಓಲೆ, ವಾಚ್, ಬೆಲ್ಟ್‌ಗಳ ಫೋಟೋವನ್ನು ಗೂಗಲ್‌ನಲ್ಲಿ ಹಾಕಿ ಸರ್ಚ್ ಮಾಡುತ್ತಾರೆ. ಆಗ ಅವುಗಳ ಅಂದಾಜು ಬೆಲೆ ಸಿಗುತ್ತದೆ. ಆದರೆ ಅವು ನಿಖರವಾದ ಬೆಲೆ ಆಗಿರೋದಿಲ್ಲ. ಅವೆಲ್ಲವೂ ಡಿಸೈನರ್ ಬಟ್ಟೆ ಆಗಿದ್ದು, ಒಮ್ಮೊಮ್ಮೆ ಬೆಲೆ ಬದಲಾವಣೆ ಆಗೋದುಂಟು.
ಎಐ (AI) ಬಳಕೆ, ಎಡಿಟಿಂಗ್ ಹಾವಳಿ
ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಅಥವಾ Artificial Intelligence (AI) ಬಳಸಿ ಫೋಟೋ, ವಿಡಿಯೋ ಎಡಿಟ್ ಮಾಡಲಾಗ್ತಿದೆ. ಒರಿಜಿನಲ್ ಅಥವಾ ಎಐ ಎಂದು ಹೇಳೋಕೆ ಕಷ್ಟ ಆಗುವುದು, ಅಷ್ಟರಮಟ್ಟಿಗೆ ಎಡಿಟ್ ಮಾಡಲಾಗುತ್ತದೆ. ಬ್ಯಾಗ್ ಅಥವಾ ಶೂಗಳ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಿ, ಜನರಲ್ಲಿ ದ್ವೇಷ ಅಥವಾ ಅಸಮಾಧಾನ ಮೂಡಿಸಲಾಗುತ್ತೆ
ವಿಜಯಲಕ್ಷ್ಮೀ ದರ್ಶನ್ ಫೋಟೋದ ಸತ್ಯಾಸತ್ಯತೆ
ವಿಜಯಲಕ್ಷ್ಮೀ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಈಗ ಅವರ ಫೋಟೋಗಳನ್ನು ಎಡಿಟ್ ಮಾಡಿ, "ಇವರು ಇಷ್ಟು ಬೆಲೆಯ ಬ್ಯಾಗ್ ಬಳಸುತ್ತಿದ್ದಾರೆ, ಬೆಲ್ಟ್ ಹಾಕಿದ್ದಾರೆ, ಡ್ರೆಸ್ ಹಾಕಿದ್ದಾರೆ, ಲಕ್ಷುರಿ ಲೈಫ್" ಎಂದು ಸುದ್ದಿ ಹಬ್ಬಿಸಲಾಗ್ತಿದೆ.
ವೀಕ್ಷಕರು ಏನು ಮಾಡಬೇಕು?
ಈ ರೀತಿ ತಪ್ಪು ಮಾಹಿತಿ ಕೊಟ್ಟು ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವಂತೆ, ಅಶ್ಲೀಲ ಕಾಮೆಂಟ್ ಬರುವಂತೆ ಮಾಡುತ್ತಾರೆ. ಹೀಗಾಗಿ ಕೆಲ ಫೇಜ್ ಪೇಜ್‌ಗಳು ನೀಡುವ ಸುದ್ದಿಯನ್ನು ಕಣ್ಮುಚ್ಚಿ ನಂಬಬೇಡಿ. ಎಐ ಎಡಿಟೆಡ್ ಫೋಟೋಗಳ ಬಗ್ಗೆ ಜಾಗೃತರಾಗಿರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

